Homeಮುಖಪುಟರೈತರಿಗೆ ಸಾಲ ನೀಡಲು SBI ಜೊತೆ ಕೈಜೋಡಿಸಿದ ಅದಾನಿ ಕ್ಯಾಪಿಟಲ್

ರೈತರಿಗೆ ಸಾಲ ನೀಡಲು SBI ಜೊತೆ ಕೈಜೋಡಿಸಿದ ಅದಾನಿ ಕ್ಯಾಪಿಟಲ್

ಆಸ್ಟ್ರೇಲಿಯಾದಲ್ಲಿ ಅದಾನಿಯ ಕಲ್ಲಿದ್ದಲು ಗಣಿಗಾರಿಕೆ ವಿರುದ್ಧ ದೊಡ್ಡ ಹೋರಾಟ ನಡೆಯುತ್ತಿದೆ. ಅದಾನಿಗೆ ಎಸ್‌ಬಿಐ ಸಾಲ ಕೊಡಬಾರದು ಎಂದು ಜನರು ಪ್ರತಿಭಟಿಸುತ್ತಿದ್ದಾರೆ. ಆದರೆ ಅದೇ ಎಸ್‌ಬಿಐ ಜೊತೆಸೇರಿ ರೈತರಿಗೆ ಸಾಲ ನೀಡಲು ಅದಾನಿ ಕ್ಯಾಪಿಟಲ್ ಮುಂದಾಗಿದೆ.

- Advertisement -
- Advertisement -

ರೈತರಿಗೆ ಟ್ಯ್ರಾಕ್ಟರ್ ಮತ್ತು ಕೃಷಿ ಉಪಕರಣಗಳ ಖರೀದಿಗೆ ಸಹ ಸಾಲ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI) ಇತ್ತೀಚೆಗೆ ಅದಾನಿ ಗ್ರೂಪ್‌ನ NBFC ಅಂಗವಾದ ಅದಾನಿ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಕುರಿತು SBI ನೀಡಿರುವ ಪ್ರಕಟಣೆಯಲ್ಲಿ, ‘ಈ ಪಾಲುದಾರಿಕೆಯ ಮೂಲಕ, ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು, ಕೃಷಿ ಯಾಂತ್ರೀಕರಣದ ಅಳವಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇಶದ ಒಳನಾಡಿನ ರೈತ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು, ಸಾಲದ ಹರಿವನ್ನು ಹೆಚ್ಚಿಸಲು, ಕೃಷಿ ಯಾಂತ್ರಿಕರಣ, ರೈತ ಉತ್ಪಾದಕ ಸಂಸ್ಥೆಗಳು ಇತ್ಯಾದಿಗಳಿಗೆ ಹಣಕಾಸು ಒದಗಿಸಲು ಅನೇಕ NBFC ಗಳೊಂದಿಗೆ ಸಹಕಾರಿ ಸಾಲ ನೀಡುವ ಅವಕಾಶಗಳನ್ನು SBI ಸಕ್ರಿಯವಾಗಿ ಎದುರು ನೋಡುತ್ತಿದೆ’ ಎಂದು ತಿಳಿಸಿದೆ.

SBI ಅಧ್ಯಕ್ಷ ದಿನೇಶ್ ಖಾರಾ, ‘‘ಸಹ ಸಾಲ’ ಕಾರ್ಯಕ್ರಮದ ಅಡಿಯಲ್ಲಿ ಅದಾನಿ ಕ್ಯಾಪಿಟಲ್‌ನೊಂದಿಗೆ ಸಹಭಾಗಿತ್ವವನ್ನು ಹೊಂದಲು ನಾವು ಸಂತೋಷಪಡುತ್ತೇವೆ’ ಎಂದು ಹೇಳಿದ್ದಾರೆ.

‘SBI ಗ್ರಾಹಕರ ನೆಲೆಯನ್ನು ವಿಸ್ತರಿಸಲು ಮತ್ತು ದೇಶದ ಹಿಂದುಳಿದ ಕೃಷಿ ವಿಭಾಗಗಳೊಂದಿಗೆ ಸಂಪರ್ಕ ಸಾಧಿಸಲು ಈ ಪಾಲುದಾರಿಕೆಯು ಸಹಾಯ ಮಾಡುತ್ತದೆ. ಭಾರತದ ಕೃಷಿ ಆರ್ಥಿಕತೆಯ ಬೆಳವಣಿಗೆಗೆ ಇದು ಮತ್ತಷ್ಟು ಕೊಡುಗೆ ನೀಡುತ್ತದೆ. ದೂರದ ಪ್ರದೇಶಗಳಲ್ಲಿನ ಗ್ರಾಹಕರನ್ನು ತಲುಪಲು ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ನಾವು ಎನ್ಬಿಎಫ್ಸಿಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸುತ್ತೇವೆ’ ಎಂದು ತಿಳಿಸಿದ್ದಾರೆ.

ಅದಾನಿ ಕ್ಯಾಪಿಟಲ್‌ನ ಎಂಡಿ ಮತ್ತು ಸಿಇಒ ಗೌರವ್ ಗುಪ್ತಾ, ‘ಭಾರತದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಆರ್ಥಿಕ ಸಾಲವನ್ನು ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. SBI ಜೊತೆಗಿನ ನಮ್ಮ ಪಾಲುದಾರಿಕೆಯು ಬ್ಯಾಂಕ್ ಸೌಲಭ್ಯಗಳನ್ನು ಹೊಂದಿಲ್ಲದ ಹಾಗೂ ಹಿಂದುಳಿದ ಭಾರತೀಯ ರೈತರನ್ನು ಗುರಿಯಾಗಿಸುವುದಾಗಿದೆ. ನಮ್ಮ ಗುರಿಯು, ಈ ಪಾಲುದಾರಿಕೆಯ ಮೂಲಕ ಕೃಷಿ ಯಾಂತ್ರಿಕರಣಕ್ಕೆ ಕೊಡುಗೆ ನೀಡುವುದು ಮತ್ತು ಕೃಷಿ ವಿಭಾಗದ ಉತ್ಪಾದಕತೆ ಹಾಗೂ ಆದಾಯವನ್ನು ಸುಧಾರಿಸುವಲ್ಲಿ ಪಾತ್ರವಹಿಸುವುದಾಗಿದೆ’ ಎಂದು ವಿವರಿಸಿದ್ದಾರೆ.

ಒಟ್ಟಿನಲ್ಲಿ ಅದಾನಿ ಕಂಪನಿ ಕೃಷಿ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದನ್ನು ಈ ಒಪ್ಪಂದ ಬಹಿರಂಗಪಡಿಸುತ್ತದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಏಕಸ್ವಾಮ್ಯ ಸಾಧಿಸುತ್ತಿರುವ ಅದು ಏಷ್ಯಾದ ನಂಬರ್ ಶ್ರೀಮಂತ ಕಂಪನಿ ಎನಿಸಿದೆ. ಕೃಷಿ ಕಾಯ್ದೆಗಳು ಜಾರಿಯಾದ ನಂತರ ದೇಶಾದ್ಯಂತ ರೈತರು ಅಂಬಾನಿ-ಅದಾನಿ ಕಂಪನಿಗಳನ್ನು ಬಾಯ್ಕಾಟ್ ಮಾಡುವಂತೆ ಕರೆ ನೀಡಿದ್ದರು. ಆಸ್ಟ್ರೇಲಿಯಾದಲ್ಲಿ ಅದಾನಿಯ ಕಲ್ಲಿದ್ದಲು ಗಣಿಗಾರಿಕೆ ವಿರುದ್ಧ ದೊಡ್ಡ ಹೋರಾಟ ನಡೆಯುತ್ತಿದೆ. ಅದಾನಿಗೆ ಎಸ್‌ಬಿಐ ಸಾಲ ಕೊಡಬಾರದು ಎಂದು ಜನರು ಪ್ರತಿಭಟಿಸುತ್ತಿದ್ದಾರೆ. ಆದರೆ ಅದೇ ಎಸ್‌ಬಿಐ ಜೊತೆಸೇರಿ ರೈತರಿಗೆ ಸಾಲ ನೀಡಲು ಅದಾನಿ ಕ್ಯಾಪಿಟಲ್ ಮುಂದಾಗಿದೆ. ಇದಕ್ಕೆ ರೈತರ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ: ಪಂಜಾಬ್: ಖಾಸಗಿ ಮಂಡಿಗಳಲ್ಲಿ ಕಡಿಮೆ ದರಕ್ಕೆ ಹತ್ತಿ ಮಾರಲು ಒತ್ತಾಯ – ರೈತರ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅದಾನಿಗೆ ಎಸ್‌ಬಿಐ ಸಾಲ ಕೊಡಬಾರದು ಎಂದು ಜನರು ಪ್ರತಿಭಟಿಸುತ್ತಿದ್ದಾರೆ. ಆದರೆ ಅದೇ ಎಸ್‌ಬಿಐ ಜೊತೆಸೇರಿ ರೈತರಿಗೆ ಸಾಲ ನೀಡಲು ಅದಾನಿ ಕ್ಯಾಪಿಟಲ್ ಮುಂದಾಗಿದೆ. ಇದಕ್ಕೆ ರೈತರ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ಕಾದು ನೋಡಬೇಕಿದೆ.

  2. ಒಟ್ಟಿನಲ್ಲಿ ಅದಾನಿ ಕಂಪನಿ ಕೃಷಿ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದನ್ನು ಈ ಒಪ್ಪಂದ ಬಹಿರಂಗಪಡಿಸುತ್ತದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಏಕಸ್ವಾಮ್ಯ ಸಾಧಿಸುತ್ತಿರುವ ಅದು ಏಷ್ಯಾದ ನಂಬರ್ ಶ್ರೀಮಂತ ಕಂಪನಿ ಎನಿಸಿದೆ. ಕೃಷಿ ಕಾಯ್ದೆಗಳು ಜಾರಿಯಾದ ನಂತರ ದೇಶಾದ್ಯಂತ ರೈತರು ಅಂಬಾನಿ-ಅದಾನಿ ಕಂಪನಿಗಳನ್ನು ಬಾಯ್ಕಾಟ್ ಮಾಡುವಂತೆ ಕರೆ ನೀಡಿದ್ದರು.

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...