Homeಮುಖಪುಟರಸ ಗೊಬ್ಬರ ದರ ಏರಿಕೆ: ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ರೈತರು

ರಸ ಗೊಬ್ಬರ ದರ ಏರಿಕೆ: ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ರೈತರು

- Advertisement -
- Advertisement -

ನೆಲ ಹದ ಮಾಡುವ ಮಳೆಯ ನಿರಿಕ್ಷೆಯಲ್ಲಿರುವ ರೈತರಿಗೆ ಈ ಸಾಂಕ್ರಾಮಿಕದ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೊಡ್ಡ ಹೊಡೆತ ನೀಡಿದೆ. ರಸ ಗೊಬ್ಬರ ದರಗಳನ್ನು ಏರಿಸುವ ಮೂಲಕ ಅದು ರೈತರನ್ನು ‘ಕೊಲ್ಲಲು’ ಹೊರಟಿದೆಯಾ ಎಂಬ ಪ್ರಶ್ನೆ ಕೇಳಿ ಬರುತ್ತಿವೆ.

ಶೇ. 45-58 ರವೆರೆಗೆ ಇಫ್ಕೋ ಗೊಬ್ಬರದ ದರಗಳನ್ನು ಏರಿಸಿದೆ. ಅಂದರೆ 50 ಕೆಜಿ ಡಿಎಪಿ ಬೆಲೆ 1200 ಇದ್ದುದ್ದು ಏಕಾಏಕಿ 1900 ರೂ ಆಗಿದೆ. ಇದು ದೇಶದ ಕೃಷಿ ವ್ಯವಸ್ಥೆಯನ್ನು ಜರ್ಜರಿತಗೊಳಿಸಲಿದೆ. ಈ ಕುರಿತು ರಾಜ್ಯದ ವಿವಿಧ ಭಾಗಗಳ ರೈತರು, ಕೃಷಿತಜ್ಞರನ್ನು  ನಾನುಗೌರಿ.ಕಾಂ ಮಾತನಾಡಿಸಿತು.

‘ಈ ಸಲ ಗೊಬ್ಬರ ತೆಗೆದುಕೊಳ್ಳಾಕೂ ಮೊದ್ಲು, ಎಣ್ಣಿ (ಕ್ರಿಮಿನಾಶಕ) ತಗೋಳ್ಳೊದೇ ವಾಸಿ’ ಎಂದರು ಸಿಂಧನೂರು ತಾಲೂಕಿನ ಮಾಟೂರಿನ ಯುವ ರೈತ ಬಸನಗೌಡ ಸಂಜಿ.
‘ಅಲ್ರಿ, ಡಿಎಪಿ ಗೊಬ್ಬರದ 50 ಕೆಜಿ ಚಿಲಕ್ಕ 1,900 ರೂ ಅಂತೆ. ಅಂದ್ರ ಈ ಸಲ ಎರಡು ಎಕರೆ ಭತ್ತದ ಬೆಳಗೆ 5-6 ಸಾವಿರ ಹೆಚ್ಚುವರಿ ರೊಕ್ಕ ಹಾಕ್ಬೇಕು. ಅದ್ಯಾವುದೋ ತಾಂತ್ರಿಕ ನೆಪದಲ್ಲಿ ನಮ್ಮ ಕಡೆ ಬೆಳೆದ ಭತ್ತಕ್ಕೆ ಸರಿಯಾದ ಎಂಎಸ್‌ಪಿನೂ ಕೊಡ್ತಾ ಇಲ್ಲ. ಪಂಜಾಬಿನ ರೈತರಂತೆ ನಾವು ಕೂಡ ಸಂಘಟಿತರಾಗುವ ಸಂದರ್ಭವಿದು’ ಎಂದು ಬಸನಗೌಡ ಹೇಳಿದರು.

‘ಈಗೀಗ ನಮಗೆ ಗೊತ್ತಾಗುತ್ತಿದೆ, ಯೋಗೇಂದ್ರ ಯಾದವ್, ದೇವಿಂದರ್ ಸಿಂಗ್ ಹೇಳುವ ಸತ್ಯಗಳು. ಇವೆಲ್ಲ ನಮ್ಮ ರೈತರಿಗೆ ತಲುಪಲು ನಿಮ್ಮಂತಹ ಮೀಡಿಯಾ ಕನ್ನಡದಲ್ಲಿ ಇನ್ನಷ್ಟು ವಿವರ ಕೊಡಬೇಕು’ ಎಂದರಲ್ಲದೇ, ‘ಭೂರಹಿತರು ಲೀಸ್‌ನಲ್ಲಿ ಒಂದೋ-ಎರಡು ಎಕರೆ ಜಮೀನಿನಿನಲ್ಲಿ ಬೆಳೆದು ಬದುಕು ಕಟ್ಟಕೊಳ್ತಾ ಇದ್ದರು. ಈ ಸಲ ಅವರು ಈ ಅಪಾಯದ ಕೃಷಿ ಮಾಡಂಗಿಲ್ಲ. ಮತ್ತೆ ಗುಳೆ ಹೋಗ್ತಾರೆ ಅಷ್ಟೇ’ ಎಂದು ಆ ಭಾಗದ ವಾಸ್ತವ ಚಿತ್ರಣವನ್ನು ನಮ್ಮ ಮುಂದೆ ಇಟ್ಟರು.

‘ಕಳೆದ ವರ್ಷ ಎಲ್ಲ ಕ್ಷೇತ್ರಗಳೂ ಮುಗ್ಗಟ್ಟಿನಲ್ಲಿದ್ದಾಗ, ಈ ದೇಶದ ಜಿಡಿಪಿಗೆ ಹೆಚ್ಚಿನ ನೆರವು ನಿಡಿದ್ದು ಕೃಷಿ. ಅದು ಎಲ್ಲಾ ಸಂಕಷ್ಟಗಳ ನಡುವೆಯೂ ಈ ದೇಶಕ್ಕೆ ಅನ್ನ ನಿಡಿದೆ. ಈಗ ಗೊಬ್ಬರದ ದರ ಹೆಚ್ಚಿಸಿ ಕೃಷಿ ಕ್ಷೇತ್ರವನ್ನೆ ನಾಶ ಮಾಡಲು ಹೊರಟಿದೆ ಮೋದಿ ಸರ್ಕಾರ’ ಎಂದು ಹಿಂದೆ ಹಲವು ದಶಕಗಳ ಕಾಲ ಕೃಷಿ ಮಾಡಿದ ಲೇಖಕ ಕೆ.ಪಿ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಇದೇ ತರಹದ ಅಭಿಪ್ರಾಯ ವ್ಯಕ್ತಪಡಿಸಿದ ಕೃಷಿ ತಜ್ಞ ಪ್ರಕಾಶ ಕಮ್ಮರಡಿ, ‘ನಾಟಿ, ಬಿತ್ತನೆ ಮಾಡುವ ಈ ಸಂದರ್ಭದಲ್ಲಿ ಇವರು ಗೊಬ್ಬರದ ದರ ಜಾಸ್ತಿ ಮಾಡಿ ರೈತರನ್ನು ಕೊಲ್ಲಲು ಹೊರಟಿದ್ದಾರೆ. ಈ ಸಂದರ್ಭದಲ್ಲಿ ರೈತರು ಹೇಗೋ ಬೀಜದ ತಯಾರಿ ಮಾಡಿಕೊಂಡಿದ್ದಾರೆ. ಆದರೆ 1,900 ರೂಪಾಯಿ ಕೊಟ್ಟು 50ಕೆಜಿಯ ಡಿಎಪಿ ಪಡೆಯಲು ಆಗುತ್ತದಾ? ನಮ್ಮ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಕಳೆದ ಸಾಲಿನ ಶೇ.30ರಷ್ಟು ಕೃಷಿ ಉತ್ಪನ್ನ ಮಾರಾಟವಾಗಿಯೇ ಇಲ್ಲ. ಅದರಲ್ಲಿ ಶೇ. 18ರಷ್ಟು ಹಾಳಾಗಿ ಹೋಗಿದೆ. ರೈತರ ಬಳಿ ಹಣವಿಲ್ಲ. ಚುನಾವಣೆಗಳ ನಂತರ ಈ ಸರ್ಕಾರ ಕ್ರೂರವಾಗಿ ರೈತರ ಮೇಲೆ ಆಕ್ರಮಣ ಮಾಡಿದೆ’ ಎಂದರು.

ಮಂಡ್ಯದ ಎಲೆಚಾಕನಹಳ್ಳಿಯ ಸಣ್ಣ ರೈತ ವೈ.ಜೆ. ಸ್ವಾಮಿ ಮಾತನಾಡಿ, ‘ಮುಕ್ಕಾಲು ಎಕರೆಯಲ್ಲಿ ಚೊಟ್ ಪೈರು (ಬೀನ್ಸ್ ತರಹದ ತರಕಾರಿ) ಹಾಕಿದ್ದೇವೆ. ಈಗ ಕೆಜಿಗೆ 15 ರೂ ದರ ಇದೆ. ಆದರೆ ಡಿಎಪಿ ದರ ಹೆಚಾಗಿದ್ದರಿಂದ ಮತ್ತೆ ಗೊಬ್ಬರ ಹಾಕಿದರೆ ನಾವು ಮಾಡಿದ ಖರ್ಚು ಸಹ ನಮ್ಮ ಕೈಗೆ ಸಿಗಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಒಣ ಬೇಸಾಯದವರ ಕಷ್ಟ ಕೇಳುವಂತಿಲ್ಲ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಣ್ಣ ರೈತ ಮಲ್ಲಪ್ಪ ಅವರು, ನಮ್ಮ ಎದುರು ಕೃಷಿ ಸಂಕಷ್ಟದ ಇನ್ನೊಂದು ಆಯಾಮವನ್ನು ಮುಂದೆ ಇಟ್ಟರು. ‘ಹಳ್ಳಿಕಡೆ ಜಮೀನ್ದಾರರು ಬೀಜ, ಗೊಬ್ಬರ ಅಂಗಡಿ ಇಟ್ಟಾರು. ಮೊದ್ಲ ಅಪರಾತಪರಾ ರೇಟು ಹಾಕಿ, ಬಡ್ಡಿ ವಸೂಲಿ ಮಾಡ್ತಾ ಇದ್ದರು. ಈಗ ಗೊಬ್ಬರ ರೇಟು ಜಾಸ್ತಿ ಆದ ಮ್ಯಾಗ ಅವರ ಕಂತ್ರಿಗಿರಿ ಇನ್ನಾಕಿಷ್ಟ ಹೆಚ್ಚಾಗುತ್ತ. ಇಲ್ಲಿ ನಾವು ಮಳಿ ನಂಬಿ ಹೊಲ ಮಾಡೋ ಮಂದಿ. ಎರಡೆಕೆಗೆ ಗೊಬ್ಬರ ಖರ್ಚು 5-6 ಸಾವಿರ ಹೆಚಾದ್ರ, ಸಣ್ಣಪುಟ್ಟ ಹೊಲ ಹೊಂದಿರೋ ಮಂದಿ ಹೊಲ ಲಾವಣಿ ಹಾಕಿ ಎಲ್ಲೇರ ದುಡಿಯಾಕ್ ಹೋಗಬೇಕಾಗುತ್ತದೆ’ ಎಂದು ಮಲ್ಲಪ್ಪ ತಿಳಿಸಿದರು.

‘ಒಂದು ಕೈಗಾರಿಕೆಗೆ ಮೊದಲ ವರ್ಷ ಉಚಿತ ಅಥವಾ ರಿಯಾಯತಿ ದರದಲ್ಲಿ ನೀರು, ವಿದ್ಯುತ್ ಕೊಡುವ ಸರ್ಕಾರ, ಈಗ ರೈತರಿಗೆ ಸಬ್ಸಿಡಿಯಲ್ಲಿ ಗೊಬ್ಬರ ನೀಡಬೇಕು. ನಾಲ್ಕು ತಿಂಗಳಷ್ಟೇ, ಅವರು ಅದರ ಹತ್ತು ಪಟ್ಟು ವಾಪಾಸ್ ನೀಡುತ್ತಾರೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಗ್ರಾಮೀಣ ಭಾಗ ಉಳಿದಿದ್ದೇ ರೈತರ ಉತ್ಪನ್ನಗಳಿಂದ. ಹಾಗೆಯೇ ನಗರದವರಿಗೂ ಆಹಾರಧಾನ್ಯ ಸಹಜ ಬೆಲೆಯಲ್ಲಿ ಸಿಕ್ಕಿದ್ದು ರೈತರ ಪರಿಶ್ರಮದಿಂದ. ಸರ್ಕಾರ ಕೃಷಿಯನ್ನೇ ನಾಶ ಮಾಡಲು ಹೊರಟಂತಿದೆ’ ಎಂದು ಕೆ.ಪಿ. ಸುರೇಶ್ ಹೇಳುತ್ತಾರೆ.

ಗೊಬ್ಬರದ ಬೆಲೆ ಏರಿಕೆಗೆ ಕಾರಣವೇನು?: ಶಿವಸುಂದರ್

ಈ ಗೊಬ್ಬರದ ರಾಜಕೀಯ ಕುರಿತು ರಾಜಕೀಯ ಚಿಂತಕ ಶಿವಸುಂದರ್ ಅಭಿಪ್ರಾಯಗಳು ಹೀಗಿವೆ:

ಇದು ಗೊಬ್ಬರ ಕಂಪನಿಗಳು ದಿಢೀರನೆ ತೆಗೆದುಕೊಂಡ ತೀರ್ಮಾನವಲ್ಲ. ಬದಲಿಗೆ ಗೊಬ್ಬರ ಸಬ್ಸಿಡಿಯನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ರೈತವಿರೋಧಿ ನೀತಿಗಳ ತಾರ್ಕಿಕ ಪರಿಣಾಮವೇ ಆಗಿದೆ. ಈ ಗೊಬ್ಬರ ಸಬ್ಸಿಡಿ ಹಿಂತೆಗೆತ ಯೋಜನೆ 1992ರ ಭೋಸ್ಲೆ ಸಮಿತಿಯ ಪರಿಣಾಮವಾಗಿ ಪ್ರಾರಂಭವಾಗಿದ್ದು, ಈಗಿನ ಮೋದಿ ಸರ್ಕಾರದಲ್ಲಿ ತೀವ್ರ ಆಕ್ರಮಣಕಾರಿ ಸ್ವರೂಪವನ್ನು ಪಡೆಯುತ್ತಿದೆ….

1991ರ ತನಕ ಭಾರತ ಸರ್ಕಾರದ ಗೊಬ್ಬರ ನೀತಿಗಳು ಪ್ರಧಾನವಾಗಿ ಗೊಬ್ಬರ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ಅದನ್ನು ಅಗ್ಗದ ದರದಲ್ಲಿ ರೈತಾಪಿಗೆ ತಲುಪಿಸುವ ಬಗ್ಗೆ ಗಮನ ಕೇಂದ್ರೀಕರಿಸಿದ್ದವು. ಹೀಗಾಗಿಯೇ 1977ರಲ್ಲಿ ರಸಗೊಬ್ಬರ ಬೆಲೆ ನಿಯಂತ್ರಣ ಮತ್ತು ಸರಬರಾಜು ನಿಯಮಗಳು ಜಾರಿಗೆ ಬಂದವು. ಅದರಡಿಯಲ್ಲಿ ಸರ್ಕಾರವೇ ಮೊದಲು ಯೂರಿಯಾ ಮತ್ತು ಆ ನಂತರ ಎಲ್ಲಾ ಬಗೆಯ ರಸಗೊಬ್ಬರಗಳಿಗೂ ಮಾರಾಟ ಬೆಲೆಯನ್ನು ನಿಗದಿ ಮಾಡಿತು. ಅದಕ್ಕೇ ಮೀರಿ ಆಗುತ್ತಿದ್ದ ಉತ್ಪಾದನಾ ವಚ್ಚವನ್ನು ನೇರವಾಗಿ ಗೊಬ್ಬರ ಕಂಪನಿಗಳಿಗೆ ಪಾವತಿ ಮಾಡುತ್ತಿತ್ತು. ಹೀಗಾಗಿ 1990ರ ದಶಕದವರೆಗೂ ಎಲ್ಲಾ ಗೊಬ್ಬರಗಳೂ ಯೂರಿಯಾದಷ್ಟೇ ಬೆಲೆಗೆ ಮಾರಾಟವಾಗುತ್ತಿದ್ದವು.

ಆದರೆ 1991ರಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಗಳು ಜಾರಿಗೆ ಬಂದ ನಂತರ ಜನರ ಕಲ್ಯಾಣಕ್ಕಾಗಿ ಮಾಡುತ್ತಿದ್ದ ವೆಚ್ಚಗಳನ್ನು ಕಡಿಮೆ ಮಾಡಿ ಆ ಸಂಪನ್ಮೂಲವನ್ನು ಉದ್ದಿಮೆಗಳ ಲಾಭವನ್ನು ಹೆಚ್ಚಿಸಲು ಬೇಕಾದ ಮೂಲಭೂತ ಸೌಕರ್ಯವನ್ನು ಹೆಚ್ಚಿಸುವುದು ಆರ್ಥಿಕ ತತ್ವವಾಯಿತು.

ಅದರ ಭಾಗವಾಗಿಯೇ ಗೊಬ್ಬರ ನೀತಿಯೂ ಬದಲಾಗಿ, ಗೊಬ್ಬರಕ್ಕೆ ಕೊಡುತ್ತಿದ್ದ ಸಬ್ಸಿಡಿ ಹೊರೆಯನ್ನು ಹಾಗೂ ಆಮದು ಮಾಡಿಕೊಳ್ಳುತ್ತಿರುವುದರಿಂದ ಹೆಚ್ಚುತ್ತಿರುವ ವಿದೇಶಿ ವಿನಿಮಯ ಹೊರೆಯನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂಬುದೇ 1991ರ ನಂತರದ ಎಲ್ಲಾ ಸರ್ಕಾರಗಳ ಪ್ರಮುಖ ಲಕ್ಷ್ಯವಾಯಿತು. ಅದರ ಭಾಗವಾಗಿ 1992ರಲ್ಲಿ ಯೂರಿಯಾವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಗೊಬ್ಬರಗಳಿಗೆ ಕೊಡುತ್ತಿದ್ದ ಸಬ್ಸಿಡಿಯನ್ನು ಪಾಕ್ಷಿಕವಾಗಿ ಹಿಂತೆಗೆದುಕೊಳ್ಳಲಾಯಿತು. ಹೀಗಾಗಿ ಯೂರಿಯವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಗೊಬ್ಬರಗಳ ಬೆಲೆ ಹಲವು ಪಟ್ಟು ಏರಿಕೆಯಾಯಿತು. ಸಹಜವಾಗಿಯೇ ಇದರಿಂದ ಯೂರಿಯೇತರ ಗೊಬ್ಬರಗಳ ಬಳಕೆ ಹಾಗೂ ಉತ್ಪಾದನೆಯೂ ಕುಂಠಿತವಾಯಿತು.


ಇದನ್ನೂ ಓದಿ; ಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...