Homeಕರ್ನಾಟಕ’ಅನ್ನಭಾಗ್ಯ ಕೊಟ್ಟವರು ನಾವು, ಸಾವಿನ ಭಾಗ್ಯ ಕೊಟ್ಟವರು ನೀವು’-ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

’ಅನ್ನಭಾಗ್ಯ ಕೊಟ್ಟವರು ನಾವು, ಸಾವಿನ ಭಾಗ್ಯ ಕೊಟ್ಟವರು ನೀವು’-ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

- Advertisement -
- Advertisement -

ಪೌರಾಡಳಿತ ಇಲಾಖೆ ಇಂದಿರಾ ಕ್ಯಾಟೀನ್‌ಗಳಲ್ಲಿ ಉಚಿತ ಆಹಾರ ಒದಗಿಸಲು ನಿರ್ಧಾರ ಮಾಡಿದ್ದು, ಬಿ.ಎಸ್.ಯಡಿಯೂರಪ್ಪ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಈಗ ರಾಜ್ಯ ಕಾಂಗ್ರೆಸ್ ಮತ್ತು ರಾಜ್ಯ ಬಿಜೆಪಿ ನಡುವೆ ಕೆಸರೆರಚಾರಕ್ಕೆ ಕಾರಣವಾಗಿದೆ.

ಟ್ವಿಟ್ಟರ್ ವಾರ್‌ ನಡೆಸುತ್ತಿರುವ ಎರಡು ಪಕ್ಷಗಳು, ನಾನು ಅಕ್ಕಿ ಕೊಟ್ಟೆ, ಇಂದಿರಾ ಕ್ಯಾಂಟೀನ್ ಕೊಟ್ಟೆ ಎನ್ನುವ ಕಾಂಗ್ರೆಸ್, ಪಿತ್ರಾರ್ಜಿತ ಆಸ್ತಿಯಲ್ಲಿ ಕೊಟ್ಟಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ. ಇದಕ್ಕೆ ಉತ್ತರಿಸಿರುವ ಕಾಂಗ್ರೆಸ್,  “ಹೃದಯ ಹೀನ ರಾಜ್ಯ ಬಿಜೆಪಿ ಸರ್ಕಾರ, ಸಂಕಷ್ಟದಲ್ಲಿರುವ ಜನತೆಗೆ ರೇಷನ್ ಕಿಟ್ ಕೊಡಿ, ಪ್ಯಾಕೇಜ್ ನೀಡಿ ಎಂದರೆ ನೋಟ್ ಪ್ರಿಂಟ್ ಮಾಡ್ತಿಲ್ಲ ಎನ್ನುವ ನೀವು ಕಾಂಗ್ರೆಸ್‌ನ ಜನಪರ ನೆರವಿನ ಬಗ್ಗೆ ಕೊಂಕು ತೆಗೆಯುವ ಯೋಗ್ಯತೆ ನಿಮಗಿದೆಯೇ..? ಎಂದು ಪ್ರಶ್ನಿಸಿದೆ.

ಜೊತೆಗೆ “ಅನ್ನಭಾಗ್ಯ ಕೊಟ್ಟವರು ನಾವು, ಸಾವಿನ ಭಾಗ್ಯ ಕೊಟ್ಟವರು ನೀವು, ಅಕ್ಕಿ ಕೇಳಿದ ಜನತೆಗೆ ಹೋಗಿ ಸಾಯ್ರಿ ಎಂದವರು ನೀವು” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಸರ್ಕಾರ ಜನರ ಮೇಲೆ ದರ್ಪ ಪ್ರದರ್ಶಿಸುವುದು ಬಿಟ್ಟು ಪರಿಹಾರ ನೀಡಲಿ- ಎಚ್.ಡಿ.ಕುಮಾರಸ್ವಾಮಿ

 

ಲಸಿಕಾ ಅಭಿಯಾನ ಹೇಗೆ ನಡೆಯಲಿದೆ ಎಂಬ ಬಗ್ಗೆ ಬ್ಲೂ ಪ್ರಿಂಟ್ ನೀಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಸುಧಾಕರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದ್ದರು. ಇದಕ್ಕೂ ಬಿಜೆಪಿ ಘಟಕ ಆಕ್ಷೇಪ ವ್ಯಕ್ತಪಡಿಸಿತ್ತು.

ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, “ಆಕ್ಸಿಜನ್, ICU, ರೆಮಿಡಿಸಿವಿರ್, ಬೆಡ್, ಚಿಕಿತ್ಸೆ ಕೊಡಲಾಗದೆ ಜನರನ್ನು ಹಾದಿ ಬೀದಿಯಲ್ಲಿ ಕೊಲ್ಲುತ್ತಿರುವ ರಾಜ್ಯ ಬಿಜೆಪಿ, ಲಸಿಕೆ ವೈಫಲ್ಯದ ಬಗ್ಗೆ ಹೈಕೋರ್ಟ್ ತಪರಾಕಿ ಕೊಟ್ಟಿದ್ದು ಸಾಲಲಿಲ್ಲವೇ? ಬ್ಲೂ ಪ್ರಿಂಟ್ ಕೊಡಿ ಎಂದ ಹೈಕೋರ್ಟಿಗೂ ಇದೇ ಮಾತು ಹೇಳಬಲ್ಲಿರಾ?” ಲಜ್ಜೆ ಬಿಟ್ಟರುವ ನಿಮ್ಮ ವಿರುದ್ಧ ಜನ ಏಳುವ ಕಾಲ ದೂರವಿಲ್ಲ” ಎಂದು ಕಾಂಗ್ರೆಸ್ ಹೇಳಿದೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ನಲ್ಲಿ 14 ದಿನ ಉಚಿತ ಆಹಾರ ನೀಡಲು ಪೌರಾಡಳಿತ ಇಲಾಖೆ ನಿರ್ಧಾರ

ನಾವು ಅನ್ನಭಾಗ್ಯ ನೀಡಿದ್ದೇವೆ. ನೀವು ಸಾವಿನ ಭಾಗ್ಯ, ಸ್ಮಶಾನ ಭಾಗ್ಯ ನೀಡಿದ್ದೀರಾ ಎಂದು ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದೆ.

“ಹೌದು ನಾವು ಅನ್ನ ಭಾಗ್ಯದಲ್ಲಿ ಅಕ್ಕಿ ಕೊಟ್ಟೆವು, ಇಂದಿರಾ ಕ್ಯಾಂಟೀನ್‌ನಲ್ಲಿ ಅನ್ನ ಕೊಟ್ಟೆವು. ನೀವು ಕೊಟ್ಟಿದ್ದು ಸಾವಿನ ಭಾಗ್ಯ, ಸ್ಮಶಾನ ಭಾಗ್ಯ. ನಿಮ್ಮ ಆಡಳಿತದಲ್ಲಿ ಜನರ ಬದುಕು ಹಸನಾಗುವುದಿರಲಿ ಸತ್ತರೂ ಸಂಸ್ಕಾರವಿಲ್ಲದಂತಾಗಿದೆ. ಜನ ಕ್ಯಾಕರಿಸಿ ಉಗಿಯುತ್ತಿದ್ದಾರೆ ಸ್ವಲ್ಪ ಆಚೆ ನೋಡಿ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇಂದಿರಾ ಕ್ಯಾಂಟೀನ್ ವಿಷಯವಾಗಿ ಹಲವು ಬಾರಿ ಕಿತ್ತಾಟ ನಡೆದಿದೆ. ಇಂದಿರಾ ಕ್ಯಾಂಟೀನ್‌ಗೆ ಅನುದಾನ ಕಡಿತ ಮಾಡಲಾಗಿದೆ. ಅವುಗಳನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಈಗ ಲಾಕ್‌ಡೌನ್ ಸಮಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ವಿಚಾರ ಮುನ್ನಲೆಗೆ ಬಂದಿದೆ.


ಇದನ್ನೂ ಓದಿ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಪ್ರಣಾಳಿಕೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ಕೂಡ ಬಳಸಿಲ್ಲ: ಓವೈಸಿ ವಾಗ್ಧಾಳಿ

0
ಬಿಜೆಪಿ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ 'ಅಲ್ಪಸಂಖ್ಯಾತರು' ಎಂಬ ಪದವನ್ನು ಕೂಡ ಬಳಸಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಮುಸ್ಲಿಮರನ್ನು ಅಂಚಿಗೆ ತಳ್ಳಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ...