Homeಮುಖಪುಟನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ನಿರ್ಭಯ ಹಂತಕರನ್ನು ನೇಣಿಗೇರಿಸುವಾಗ ನೆನಪಾದಳು ‘ಧರ್ಮಸ್ಥಳದ ನಿರ್ಭಯ’

ಧರ್ಮಸ್ಥಳದ ನಿರ್ಭಯಳಿಗೆ ನ್ಯಾಯ ಸಿಗುವುದು ಸುಲಭವಲ್ಲ!! ನ್ಯಾಯ ದೇವತೆಯನ್ನೇ ಗಲಿಬಿಲಿಗೊಳಿಸುವ ಪವಾಡ ಶಕ್ತಿ ಧರ್ಮಸ್ಥಳದ ಧರ್ಮ-ದೇವರ ಯಜಮಾನರಿಗಿದೆಯೆಂದೇ ಕರಾವಳಿಗರು ಮಾತನಾಡಿಕೊಳ್ಳುತ್ತಿದ್ದಾರೆ.

- Advertisement -
- Advertisement -

ಭರತಖಂಡವನ್ನೇ ಅಖಂಡವಾಗಿ ಬೆಚ್ಚಿಬೀಳಿಸಿದ ನಿರ್ಭಯಾ ಪ್ರಕರಣದ ಪಾತಕಿಗಳನ್ನು ಗಲ್ಲಿಗೇರಿಸಲಾಗಿದೆ. ಅಮಾಯಕ ಹುಡುಗಿಯ ಮೇಲೆ ಬರ್ಬರ ಲೈಂಗಿಕ ದಾಳಿ ನಡೆಸಿ ಕೊಂದು ಹಾಕಿದ್ದ ಪಾತಕಿಗಳು ಪ್ರಭಾವಿಗಳಾಗಿರಲಿಲ್ಲ, ಅಧಿಕಾರಸ್ಥರ ವಂಶಜರೂ ಆಗಿರಲಿಲ್ಲ. ಬಹುಷಃ ಈ ಕಾರಣದಿಂದಲೇ ಸದರಿ ರೇಪ್ ಅಂಡ್ ಮರ್ಡರ್ ಕೇಸ್‌ನ ತನಿಖೆಯಲ್ಲಿ ದೊಡ್ಡ ಅಡ್ಡಿ ಎದುರಾಗಿರಲಿಲ್ಲ. ಅಂತಿಮವಾಗಿ ನ್ಯಾಯಾಲಯಗಳೂ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಿದವು. ಅದು ಮೊನ್ನೆ ಜಾರಿಯೂ ಆಯಿತು. ಈ ಹೊತ್ತಲ್ಲಿ ನಿರ್ಭಯಳಷ್ಟೇ ಕ್ರೂರವಾಗಿ ಅತ್ಯಾಚಾರ ಹತ್ಯೆಗೀಡಾದ ದಕ್ಷಿಣ ಕನ್ನಡದ ಧರ್ಮಸ್ಥಳದ ’ನಿರ್ಭಯ’ ಗೌಡ ಎಂಬ ಪಾಪದ ವಿದ್ಯಾರ್ಥಿನಿ ಕರಾವಳಿಗರಿಗೆ ನೆನಪಾಗುತ್ತಿದ್ದಾಳೆ!!

’ನಿರ್ಭಯಳನ್ನು ಅತ್ಯಾಚಾರವೆಸಗಿ ಸಾಯಿಸಿರುವ ಸಂಶಯ ದೇವದೂತ ಪ್ರಭಾವಳಿಯ ಪರಿವಾರದ ಮೇಲಿದೆ. ಈ ಕುಟುಂಬದ ಯಜಮಾನ ಸಾಕ್ಷಾತ್ ರಾಷ್ಟ್ರಪತಿ, ಪ್ರಧಾನಿಯಾದಿಯಾಗಿ ಸರ್ಕಾರಗಳ ನಡೆಸುವ ಅಷ್ಟೂ ಅಧಿಕಾರಸ್ಥರನ್ನು ಕ್ಷಣಮಾತ್ರದಲ್ಲಿ ಸಂಪರ್ಕಿಸಬಹುದ ಸರ್ವಶಕ್ತ!! ಹೀಗಾಗಿಯೇ ನ್ಯಾಯದೇವತೆ ಎಂಬ ಪ್ರತೀತಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ನಡೆದ ಪಾತಕ ಪ್ರಕರಣ ನ್ಯಾಯದ ಪರಿಧಿಗೆ ಒಳಪಡುತ್ತಲೇ ಇಲ್ಲವೆಂಬ ಚರ್ಚೆ ಇವತ್ತಿಗೂ ನಡೆಯುತ್ತಿದೆ!!. ಕಾಲೇಜಿನಿಂದ ಮನೆಗೆ ಹೋಗುವಾಗ ಉಜಿರೆ-ಧರ್ಮಸ್ಥಳ ಹೆದ್ದಾರಿಯಲ್ಲಿ ಹಾಡುಹಗಲೇ ಅಪಹರಿಸಲ್ಪಟ್ಟ ಹುಡುಗಿ ಕಣ್ಮರೆಯಾದ ಕ್ಷಣದಿಂದಲೇ ತನಿಖೆಯ ದಿಕ್ಕುತಪ್ಪಿಸುವ ವ್ಯವಸ್ಥಿತ ಸ್ಕೆಚ್ ಒಂದು ಕಾರ್ಯಾಚರಣೆ ನಾಜೂಕಾಗಿ ನಡೆಯುತ್ತಲೇ ಇದೆ. ಈ ಪ್ರಕರಣಕ್ಕೆ ನ್ಯಾಯ ಸಿಗುವ ಸಾಧ್ಯತೆ ದಿನಕಳೆದಂತೆ ಕಮ್ಮಿಯಾಗುತ್ತಲೇ ಇದೆ.

ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ-ಕೊಲೆ ನಡೆದಿದ್ದು 2012ರ ಡಿಸೆಂಬರ್ 16ರಂದು ಅದಕ್ಕೂ ಎರಡು ಕಾಲು ತಿಂಗಳು ಮೊದಲು ಅಂದರೆ 2012 ಅಕ್ಟೋಬರ್ 8ರಂದು ಧರ್ಮಸ್ಥಳದ ನಿರ್ಭಯಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ಆಕೆಯ ಮನೆ ಹತ್ತಿರ ಕಾಡಿನಲ್ಲಿ ಎಸೆಯಲಾಗಿತ್ತು. ಆಕೆ ಕಾಣೆಯಾದಾಗ ರಾತ್ರಿಯಿಡೀ ಹುಡುಕಾಡಿದ ಕಾಡಿನಲ್ಲೆ ಬೆಳಿಗ್ಗೆ ಅತ್ಯಾಚಾರಗೊಂಡಿದ್ದ ದೇಹ ಕಂಡುಬಂದಿತ್ತು. ಆಕೆಯ ಮರ್ಮಾಂಗಕ್ಕೆ ಮಣ್ಣು ಹಾಕಿ ವೀರ್ಯ ಪರೀಕ್ಷೆ ವಿಫಲಗೊಳಿಸುವ ಯೋಜನೆ ಮಾಡಲಾಗಿತ್ತು. ಆ ರಾತ್ರಿ ಮಳೆಯಾಗಿತ್ತು, ಆದರೆ ಮೃತ ದೇಹದ ಹತ್ತಿರವೇ ಬಿದ್ದಿದ್ದ ಆಕೆಯ ಪಠ್ಯಪುಸ್ತಕ ಒಂಚೂರು ಒದ್ದೆಯಾಗಿರಲಿಲ್ಲ. ವ್ಯವಸ್ಥಿತವಾಗಿ ಸಾಕ್ಷ್ಯಗಳನ್ನು ನಾಶ ಮಾಡುವ ಶತಪ್ರಯತ್ನ ರೇಪಿಸ್ಟ್ ಗ್ಯಾಂಗ್ ಮಾಡಿತ್ತು.

ಉಜಿರೆ-ಧರ್ಮಸ್ಥಳದಲ್ಲಿ ಪ್ರತಿಭಟನೆಗಳು ಸರಣಿಯಾಗಿ ಭುಗಿಲೆದ್ದು ಇಡೀ ದಕ್ಷಿಣ ಕನ್ನಡಕ್ಕೆ ಹೋರಾಟದ ಕಿಚ್ಚು ವ್ಯಾಪಿಸಿತ್ತು. ಪ್ರತಿಭಟನಾಕಾರರ ಆಕ್ರೋಶ, ಅನುಮಾನ ಧರ್ಮ ವ್ಯಾಪಾರಿಯ ರಕ್ತಸಂಬಂಧಿ ಪುಂಡ ಹುಡುಗರ ಮೇಲೆ ಕೇಂದ್ರೀಕೃತವಾಗಿತ್ತು. ಜನರು ನ್ಯಾಯಕ್ಕಾಗಿ ಹೋರಾಡುತ್ತಿದ್ದರೆ ಪೋಲಿಸರು ಪ್ರಕರಣ ಹಳ್ಳ ಹಿಡಿಸಲು ಹವಣಿಸುತ್ತಿದ್ದರು. ಧರ್ಮಸ್ಥಳದ ಮಂಜುನಾಥ, ಧರ್ಮ ದೇವತೆ ಅಣ್ಣಪ್ಪ ಸ್ವಾಮಿ ಅಂಗಳದಲ್ಲಿ ಅಂಡೆಲೆಯುತ್ತಿದ್ದ ಮಾನಸಿಕ ಅಸ್ವಸ್ಥ ಸಂತೋಷ್‌ರಾವ್ ಹುಡುಗಿಯನ್ನು ಅಪಹರಿಸಿ ಕಾಡಿನಲ್ಲಿ ಅತ್ಯಾಚಾರ ನಡೆಸಿದ್ದಾನೆಂದು ಕತೆ ಕಟ್ಟಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿಯೂ ದೈವ ಸ್ವರೂಪಿ ಎಂದೇ ಧರ್ಮಸ್ಥಳದ ಶ್ರದ್ಧಾಳುಗಳು ನಂಬುವ ವೀರೇಂದ್ರ ಹೆಗ್ಗಡೆ ಪರಿವಾರದ ಉದಯ ಜೈನ್, ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಎಂಬ ನವ ತರುಣರು ಸಂತೋಷ್‌ರಾವ್‌ನೇ ಅತ್ಯಾಚಾರಿ ಎಂದು ತೀರ್ಪು ಕೊಟ್ಟು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು! ಇಲ್ಲಿ ಅಡಗಿದೆ ನಿರ್ಭಯಳ ರೇಪ್ ಆಂಡ್ ಮರ್ಡರ್ ಮಿಸ್ಟರಿ!!

ಧರ್ಮಸ್ಥಳ ದೇವರ ದೊರೆಗಳ ಪರಿವಾರದ ಮೇಲಿದ್ದ ಜನತೆಯ ಶಂಕೆ ಬಲವಾಯಿತು. ಧರ್ಮಸ್ಥಳದಲ್ಲಿ ಅಸಂಖ್ಯಾ ಹೆಣ್ಣು ಜೀವಗಳ ಅಸಹಜ ಸಾವು ಸಂಭವಿಸುತ್ತಿರುವ ಪುಕಾರುಗಳು ಎದ್ದವು. ಪೊಲೀಸರೇ ಕೊಟ್ಟ ಮಾಹಿತಿಯಂತೆ ನಿರ್ಭಯಳಿಗಿಂತ ಮೊದಲು ದೇವ ಸನ್ನಿಧಿಯಲ್ಲಿ ನೂರಾರು ಹೆಣ್ಣು ಬಲಿ-ಬಲಾತ್ಕಾರ ನಡೆದಿರುವುದು ಹೊರಗೆ ಬಂದಿತು. ಸಿಬಿಐನಿಂದಲೇ ನಿರ್ಭಯ ಅತ್ಯಾಚಾರದ ತನಿಖೆ ನಡೆಯಬೇಕೆಂಬ ಬೇಡಿಕೆಯನ್ನು ಪ್ರತಿಭಟನಾಕಾರರು ಇಟ್ಟರು. ಸ್ಥಳೀಯ ಪೊಲೀಸರು ನೈಜ ಅಪರಾಧಿಗಳನ್ನು ರಕ್ಷಿಸಲು ನಾಟಕ ನಡೆಸುತ್ತಿದ್ದಾರೆಂಬ ಅನಿಸಿಕೆ ಜನರದ್ದಾಗಿತ್ತು. ಕೊನೆಗೆ ಸರ್ಕಾರವು ಸಿಬಿಐಗೆ ಸೌಜನ್ಯ ಪ್ರಕರಣವನ್ನು ಹಸ್ತಾಂತರಿಸಬೇಕಾಗಿ ಬಂತು. ಆದರೆ ಸಿಬಿಐ ಸಹ ಪ್ರಾಮಾಣಿಕ ತನಿಖೆ ನಡೆಸಲೇ ಇಲ್ಲ. ಸ್ಥಳೀಯ ಪೊಲೀಸರ ತನಿಖೆ ಜಾಡಿನಲ್ಲೇ ಸಾಗಿದ ಸಿಬಿಐ ಶೂರರು ಅಪರಾಧಿಗಳು ತಪ್ಪಿಸಿಕೊಳ್ಳಲು ಅನುಕೂಲವಾಗುವಂತ “ತನಿಖೆ” ತಂತ್ರ ನಡೆಸಿತು.

2017ರಲ್ಲಿ ಸಿಬಿಐನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಸಿಬಿಐ ವೈಫಲ್ಯವನ್ನು ನ್ಯಾಯಾಧೀಶೆ ಬಿ.ಎಸ್. ರೇಖಾ ಎತ್ತಿ ತೋರಿಸಿದರು. ಸರಿಯಾಗಿ ಯಾಕೆ ತನಿಖೆ ನಡೆಸಿಲ್ಲವೆಂದು ಕಟುವಾಗಿ ಸಿಬಿಐಗೆ ಪ್ರಶ್ನಿಸಿದ್ದರು. ವೈದ್ಯರುಗಳ ಪ್ರಕಾರ ಅರೆಹುಚ್ಚ ಸಂತೋಷ್ ರಾವ್‌ಗೆ ಲೈಂಗಿಕ ಸಾಮರ್ಥ್ಯವೇ ಇಲ್ಲ. ವೈಜ್ಞಾನಿಕ ವಿವರಗಳಂತೆ ಸೌಜನ್ಯಳ ಮೃತದೇಹದಲ್ಲಿ ಸಿಕ್ಕ ಕೂದಲೂ ಸಂತೋಷ್ ರಾವ್‌ನದ್ದಾಗಿರಲಿಲ್ಲ. ವೀರ್ಯ ಸಂಗ್ರಹಿಸದಿರುವುದು ಸೇರಿದಂತೆ ಹಲವು ಲೋಪ-ದೋಷಗಳ ಬಗ್ಗೆ ನ್ಯಾಯಾಧೀಶರು ಸಿಬಿಐ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೇವ ಪರಿವಾರದ ಜೈನ್‌ಗಳನ್ನು ಸಿಬಿಐ ನಿಷ್ಠುರ ತನಿಖೆಗೆ ಒಳಪಡಿಸಿರಲೇ ಇಲ್ಲ.

ನಿರ್ಭಯಳ ತಂದೆ ಚಂದಪ್ಪಗೌಡ ತನಗೆ ಉದಯ್ ಜೈನ್, ಮಲ್ಲಿಕ್ ಜೈನ್ ಮತ್ತು ಆಶ್ರಿತ್ ಜೈನ್ ಮೇಲೆ ಬಲವಾದ ಅನುಮಾನವಿದೆ ಎಂದು ಹೇಳಿದ್ದರು. ಸಿಬಿಐ ನ್ಯಾಯಾಲಯ ಈ ತ್ರಿಮೂರ್ತಿಗಳಿಗೆ ಸಮನ್ಸ್ ಕಳುಹಿಸಿತ್ತು, ಅದಕ್ಕೆ ಅವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದರು. ಈ ನಡುವೆ ನಿರ್ಭಯಳನ್ನು ಎಳೆದುಕೊಂಡು ಹೋಗುತ್ತಿರುವುದನ್ನು ಕಂಡಿದ್ದ ರವಿ ಪೂಜಾರಿ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡರು. ಕೇಸ್ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಬಡ್ತಿ ಪಡೆದುಕೊಂಡರು. ವಿಚಾರಣೆಗೆ ಬಿದ್ದಿರುವ ತಡೆ ತೆರವಾಗುವ ಲಕ್ಷಣವೊಂದೂ ಕಾಣಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಧರ್ಮವ್ಯಾಪಾರಿಯ ಶಿಷ್ಯರೇ ಆಡಳಿತ ನಡೆಸುತ್ತಿದ್ದಾರೆ. ಈ ಧರ್ಮಾಡಳಿತದಲ್ಲಿ ನಿರ್ಭಯಾಗೆ ಸಿಕ್ಕಂತೆ ಧರ್ಮಸ್ಥಳದ ನಿರ್ಭಯಳಿಗೆ ನ್ಯಾಯ ಸಿಗುವುದು ಸುಲಭವಲ್ಲ!! ನ್ಯಾಯ ದೇವತೆಯನ್ನೇ ಗಲಿಬಿಲಿಗೊಳಿಸುವ ಪವಾಡ ಶಕ್ತಿ ಧರ್ಮಸ್ಥಳದ ಧರ್ಮ-ದೇವರ ಯಜಮಾನರಿಗಿದೆಯೆಂದೇ ಕರಾವಳಿಗರು ಮಾತನಾಡಿಕೊಳ್ಳುತ್ತಿದ್ದಾರೆ.

(ಸಂತ್ರಸ್ತೆಯ ನಿಜವಾದ ಹೆಸರನ್ನು ಧರ್ಮಸ್ಥಳದ ನಿರ್ಭಯ ಎಂದು ಬದಲಿಸಲಾಗಿದೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...