Homeಕರ್ನಾಟಕರೈತನಿಗೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಹೆಣಗುವುದು, ಬೆಂಕಿಯೊಡನೆ ಸೆಣಸಿದಂತೆಯೇ!

ರೈತನಿಗೆ ಸರ್ಕಾರಿ ಅಧಿಕಾರಿಗಳ ಜೊತೆಗೆ ಹೆಣಗುವುದು, ಬೆಂಕಿಯೊಡನೆ ಸೆಣಸಿದಂತೆಯೇ!

- Advertisement -
- Advertisement -

ಕಳೆದ ಕೆಲವು ವರ್ಷಗಳಿಂದ ನನ್ನ ಭಾಗದ ಜಮೀನಿನಲ್ಲಿ ಸುಮಾರು ನೂರೈವತ್ತು ಹಣ್ಣಿನ ಸಸಿ ಮತ್ತು ನೂರು ತೆಂಗಿನ ಸಸಿ ನೆಟ್ಟು, ಡ್ರಿಪ್ ನೀರಾವರಿ ಸಹಾಯದಿಂದ ಬದುಕಿನ ಅಂತ್ಯ ಅರ್ಥಪೂರ್ಣವಾಗುವಂತೆ ಮಾಡತೊಡಗಿದೆ. ಕಳೆದ ಮುಂಗಾರಿನಲ್ಲಿ ರಾಗಿಯನ್ನು ಬಿತ್ತಿದೆ. ರಾಗಿ ಚೆನ್ನಾಗಿ ಬಂದು ಇನ್ನೇನು ಕುಯ್ಯುವ ಸಮಯಕ್ಕೆ ನಿರಂತರವಾಗಿ ಮಳೆ ಹಿಡಿದುಕೊಂಡಿತು. ಇದರಿಂದ ಜವುಗಿಗೆ ಸಿಕ್ಕ ರಾಗಿ ಪೈರು ತೆನೆ ಹೊರಲಾರದೆ ಹೊಲದಲ್ಲಿ ಮಗ್ಗ ಮಲಗಿಬಿಟ್ಟಿತು. ಹೊಲಕ್ಕೆ ಕಾಲಿಟ್ಟರೆ ಬೆರಳ ಸಂದಿ ಕೆಸರು ಮೇಲೆ ಬರುತ್ತಿತ್ತು. ಆದ್ದರಿಂದ ದಡದಲ್ಲಿ ನಿಂತು ಅಸಹಾಯಕನಾಗಿ ಕೈಗೆ ಬಂದ ತುತ್ತು ಮಣ್ಣಾಗುವುದನ್ನು ನೋಡುತ್ತ ನಿಲ್ಲುವಂತಾಯ್ತು. ಮಲಗಿದ್ದ ರಾಗಿ ಪೈರಿನಿಂದ ತೆನೆ ಕಟಾವು ಮಾಡಿಕೊಂಡ ಇಲಿಗಳು ಮತ್ತು ತ್ಲಾಡಗಳು ಹೊಲದ ತುಂಬ ಬಿಲ ತೋಡಿಕೊಂಡು ರಾಗಿ ಸಂಗ್ರಹಿಸತೊಡಗಿದವು. ಇಷ್ಟೊಂದು ಇಲಿ ಬಿಲಗಳನ್ನು ನಾನು ಈವರೆಗೆ ಕಂಡಿರಲಿಲ್ಲ. ಮೊದಲಾಗಿದ್ದರೆ ಮಣ್ಣು ವಡ್ಡರು ಮತ್ತು ಕಲ್ಲು ವಡ್ಡರ ಜೊತೆ ನಾವು ಸೇರಿಕೊಂಡು ಇಲಿ ಬಿಲ ಅಗೆದು ಈಚಲು ದೊಣ್ಣೆಯಿಂದ ಬೀಸಿ ಹೊಡೆದು ಕೊಲ್ಲುತ್ತಿದ್ದೆವು ಮತ್ತು ಅಲ್ಲೇ ಸುಟ್ಟುಕೊಂಡು ತಿನ್ನುತ್ತಿದ್ದೆವು, ಮನೆಗೆ ತಂದು ಸಾರು ಮಾಡುವುದೂ ಇತ್ತು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಇನ್ನ ರಾತ್ರಿವೇಳೆ ಬಂದು ಕಾದು ಕೂತು ಬೇಟೆಯಾಡುವ ಗೂಬೆಗಳಿಂದಲೂ ಇಲಿ ಸಂತತಿಯನ್ನು ನಿಯಂತ್ರಿಸಲಾಗಿಲ್ಲ. ಸಾಮಾನ್ಯವಾಗಿ ಹೊಲದ ಇಲಿಗಳು ದಾಸ್ತಾನು ಸಂಗ್ರಹಿಸುವುದು ರಾತ್ರಿವೇಳೆ. ಅವುಗಳ ಈ ಕೆಲಸಕ್ಕೆ ಅವೇ ಮಾಡಿಕೊಂಡ ರೋಡುಗಳು ಇವೆ. ಈ ಚಟುವಟಿಕೆ ಗಮನಿಸುತ್ತ ಕುಳಿತ ಗೂಬೆ ಸದ್ದಿಲ್ಲದೆ ಬಂದು ಇಲಿಗಳನ್ನು ಅಪಹರಿಸುತ್ತಿದ್ದವು. ಇಲಿಯ ಹತ್ತಿರ ಬಂದರೂ ಈ ಗೂಬೆಗಳ ರಕ್ಕೆ ಸದ್ದು ಮಾಡುವುದಿಲ್ಲವಂತೆ.

ಇದೆಲ್ಲಕ್ಕಿಂತ ಮುಖ್ಯವಾದ ಘಟನೆಯೊಂದನ್ನು ಇಲ್ಲಿ ದಾಖಲಿಸಬೇಕಿದೆ. ಅಂಗರು ಗಿಡ ಅಗೆದು ತೆಗೆಯುತ್ತಿರುವಾಗ ಹೆಬ್ಬಾವಿನ ಗಾತ್ರದ ಮಂಡಲದ ಹಾವು ನಮ್ಮ ಹುಡುಗನ ಗುದ್ದಲಿಗೆ ಸಿಕ್ಕಿತ್ತು. ಸೀಳಿಹೋದ ಅದರೆ ಹೊಟ್ಟೆಯಿಂದ ಮೂರ್ನಾಲ್ಕು ಮರಿಗಳು ದೂರಕ್ಕೆ ಸಿಡಿದವು. ಆಶ್ಚರ್ಯವೆಂದರೆ ಐದೇ ನಿಮಿಷಕ್ಕೆ ಎರಡು ಹದ್ದುಗಳು ಪ್ರತ್ಯಕ್ಷವಾಗಿ ವಿಮಾನ ಇಳಿದಂತೆ ಬಂದು ಮಂಡಲದ ಹಾವಿನ ಮರಿಗಳನ್ನ ಎಗರಿಸಿಕೊಂಡು ಹೋದವು. ನಾನು ದಂಗು ಬಡಿದು ನಿಂತೆ. ಮಂಡಲದ ಹಾವಿನ ಹತ್ಯೆ ಈ ಹದ್ದುಗಳಿಗೆ ತಿಳಿದಿದ್ದು ಹೇಗೆ? ಆಹಾರ ಸರಪಳಿಯ ಜಾಲ ಇನ್ನೆಷ್ಟು ಸೂಕ್ಷ್ಮವಾಗಿರಬೇಕೆಂದು ಆಶ್ಚರ್ಯವಾಯ್ತು. ಈ ಭೂಮಿ ಸಂಬಂಧ ಕೊಡುವ ನೆಮ್ಮದಿ ಅಸಾಧಾರಣವಾದದ್ದು.

ಭೂಮಿಯ ಒಡನಾಟದಲ್ಲಿದ್ದರೆ ಹೊರ ಜಗತ್ತಿನ ಯಾವುದೂ ಬೇಕಾಗುವುದಿಲ್ಲ. ಟಿವಿ ಪತ್ರಿಕೆಗಳೂ ಕೂಡ ನಮ್ಮನ್ನ ಸೆಳೆಯಲಾರವು. ಇಂತಹದ್ದೊಂದು ಜೀವನ ಕ್ರಮಕ್ಕೆ ಮತ್ತೆ ಒಗ್ಗಿಕೊಂಡು ಇರಬೇಕಾದರೆ ತೆಂಗು ಮತ್ತು ಹಣ್ಣಿನ ತೋಟ ನಳನಳಿಸುತ್ತಿತ್ತು. ಇದರೊಳಗೆ ಮಲಗಿದ್ದ ರಾಗಿ ಮುಂದೆ ಗೊಬ್ಬರವಾಗುವದರಲ್ಲಿ ಯಾವ ಸಂಶಯವೂ ಇಲ್ಲ ಎಂದುಸಮಾಧಾನದಿಂದಿರಬೇಕಾದರೆ, ಇದ್ದಕ್ಕಿದ್ದಂತೆ ಜಮೀನಿಗೆ ಬೆಂಕಿ ಬಿದ್ದಿತು. ಅದೆಷ್ಟು ವೇಗವಾಗಿ ಉರಿದು ಬೂದಿಯಾಯ್ತೆಂದರೆ, ನಾಗಮಂಗಲದಿಂದ ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಎಲ್ಲವೂ ಸರ್ವನಾಶವಾಗಿತ್ತು. ಹೊಲದಲ್ಲಿ ಒಣಗಿ ಮಲಗಿದ್ದ ರಾಗಿಹುಲ್ಲಿಗೆ ಬಿದ್ದ ಬೆಂಕಿ, ಪೆಟ್ರೋಲ್ ಎರಚಿದೆಯೇನೋ ಎಂಬಂತೆ ವೇಗವಾಗಿ ಹಬ್ಬಿ ಓಡತೊಡಗಿತು. ಹತ್ತಾರು ಮಾರು ದೂರದಲ್ಲಿದ್ದ ಬದುಗಳು ಕೂಡ ಬೆಂಕಿ ರವೆಗೆ ದಿಗ್ಗನೆ ಹತ್ತಿಕೊಳ್ಳುತ್ತಿದ್ದವು. ಕೆಲವು ವಾರಗಳ ಹಿಂದೆ ನಿರಂತರವಾಗಿ ಹೊಡೆದಿದ್ದ ಮಳೆ ದೆಸೆಯಿಂದ, ಹುಲ್ಲು ಚೆನ್ನಾಗಿ ಬೆಳೆದು ಒಣಗಿಕೊಂಡಿತ್ತು.

ಅಗ್ನಿಶಾಮಕ ದಳದವರು ಯಾವ ಆತಂಕವೂ ಇಲ್ಲದೆ ಮಹಜರು ರಿಪೋರ್ಟು ತಯಾರಿಸಿ ಸಹಿ ಪಡೆದರು. ಸಮಾಧಾನದಿಂದ ಎಳನೀರು ಕುಡಿದು ಮುಂದಿನ ಕೃಷಿಯ ಬಗ್ಗೆ ಮುಫತ್ತಾದ ಸಲಹೆಕೊಟ್ಟು ಹೊರಟರು. ಆಗ ಅವರು ಮಾಡಿದ ಮಹಜರಿನ ಕಾಪಿ ಕೇಳಿದೆ. ಮಂಡ್ಯಕ್ಕೆ ಹೋಗಿ ಪಡೆದುಕೊಳ್ಳಿ, ಇನ್ನೆರಡು ದಿನ ಬಿಟ್ಟು ಅಲ್ಲಿಗೆ ಕಳಿಸುತ್ತೇವೆ ಎಂದರು. ಹೀಗಂದು ಅಗ್ನಿಶಾಮಕ ವಾಹನ ಹತ್ತುವ ಮುನ್ನ ಕೈಬಾಯಿ ನೋಡಿದರು, ನಾನು ನಮಸ್ಕಾರ ಹಾಕಿದೆ.

ಮೂರ್ನಾಲ್ಕು ದಿನ ಬಿಟ್ಟು ಮಂಡ್ಯದ ಅಗ್ನಿಶಾಮಕ ಕಚೇರಿಗೆ ಹೋದರೆ ಎಸ್‌ಬಿಐನಲ್ಲಿ ಇನ್ನೂರು ರೂಪಾಯಿ ತುಂಬಿ ಬನ್ನಿ, ಆ ನಂತರ ವರದಿ ಕೊಡುತ್ತೇವೆ ಎಂದರು. ಅಲ್ಲಿ ನನ್ನಂತೆ ಬೆಂಕಿಗೆ ಭೂಮಿಯೊದಗಿಸಿದ್ದ ಇನ್ನಿಬ್ಬರಿದ್ದರು. ಅವರಲ್ಲೊಬ್ಬ ಮೆದೆಗೆ ಬಿದ್ದ ಬೆಂಕಿ ಆರಿಸಲು ಹೋರಾಡಿ ಮುಖ ಕೈಕಾಲನ್ನ ಸುಟ್ಟುಕೊಂಡು ಬಂದಿದ್ದ; ನಡೆಯಲಾರದೆ ಕುಂಟುತ್ತಿದ್ದ. ಅವನನ್ನ ಹತ್ತಿಸಿಕೊಂಡು ಎಸ್‌ಬಿಐ ಶಾಖೆ ಹುಡುಕುತ್ತ ಹೊರಟೆ. ಆಟೊದವನು ನಮ್ಮ ಜೊತೆಯೇ ಹುಡುಕಲು ಸಹಕರಿಸಿ, ಕೊನೆಗೆ ಕಚೇರಿಯ ಬಳಿ ಬಿಟ್ಟು ಹೊರಟುಹೋದ. ಬಸ್‌ಸ್ಟಾಂಡಿನಿಂದ ಅಗ್ನಿಶಾಮಕದಳದ ಆಫೀಸಿಗೆ ಬಿಡಲು ನೂರಿಪ್ಪತ್ತುರೂ ಆಟೋ ಖರ್ಚಾಗಿತ್ತು. ಅಷ್ಟೇ ದುಡ್ಡು ಎಸ್‌ಬಿಐ ಹುಡುಕಲು ಕೊಟ್ಟೆ. ಈಗ ಚಲನ್ ತುಂಬಿದ ನಂತರ, ಅದರ ರಸೀದಿ ಹಿಡಿದು ಅಗ್ನಿಶಾಮಕ ಕಚೇರಿಗೆ ಹೋಗಬೇಕು, ಆನಂತರ ವರದಿ ತೆಗೆದುಕೊಂಡು ಊರಿಗೆ ಹೋಗಬೇಕು. ಇದರ ಬದಲು ನಾಗಮಂಗಲದಲ್ಲಿ ಅಥವಾ ಬೆಂಕಿಬಿದ್ದ ಜಾಗದಲ್ಲೇ ಮಹಜರು ವರದಿಯ ನಕಲನ್ನು ವಿತರಿಸಲು ಇವರಿಗ್ಯಾವ ತೊಂದರೆ ಎಂದು ಯೋಚಿಸುತ್ತ ಆಫೀಸ್ ಒಳಗೇ ನಿಂತೆ. “ಹೊರಗೋಗಿ ಕುತಗಳಿ ಸುಮಾರೊತ್ತಾಗತ್ತೆ” ಎಂದ ಸಿಬ್ಬಂದಿಗೆ ಗದರುವ ಸ್ಥಿತಿಯಲ್ಲಿರಲಿಲ್ಲ. ಆದರೂ ಸಂಯಮದಿಂದ, “ನಾನೂ ಕೂಡ ಡಿಸ್ಟ್ರಿಕ್ಟ್ ಆಫೀಸರಾಗಿದ್ದೆ, ಬಂದವರಿಗೆ ಸಮಾಧಾನವಾಗಿ ಕೂತಗಳಿ ಅಂತ ಹೇಳತಿದ್ದೆ” ಎಂದೆ. ನನ್ನ ಮಾತನ್ನೇನು ಆತ ಕಿವಿಯ ಮೇಲೆ ಹಾಕಿಕೊಳ್ಳದೆ, “ನಮ್ಮ ಈ ವರದಿಯಿಂದ ಪರಿಹಾರ ಸಿಗಲ್ಲ, ನಾವು ಹೋಗಿ ಬಂದಿರೊ ರಿಪೋರ್ಟು ಅಷ್ಟೇ” ಎಂದ. “ಇರ್ಲಿ ವಿಲೇಜ್ ಅಕೌಂಟೆಂಟರಿಗೆ ವರದಿ ಬೇಕಂತೆ ಕೊಡಿ” ಎಂದೆ. ತಾಲೂಕಿನಲ್ಲಿರುವ ಅಗ್ನಿಶಾಮಕದಳ ಬರುವಷ್ಟರಲ್ಲಿ ಎಲ್ಲ ಸುಟ್ಟುಹೋಗಿತ್ತು. ಆ ಬಗೆಗಿನ ವರದಿ ಪಡೆಯಲು ಜಿಲ್ಲೆಗೆ ಅಲೆದಾಡಬೇಕಾದಾಗ ರೈತನಾಗಿ ಬದುಕುವುದು ಎಷ್ಟು ಕಷ್ಟ ಎಂಬುದರ ಜೊತೆಗೆ, ರೈತನ ಬೆಂಗಾವಲಿಗೆ ನಿಂತುಬಿಟ್ಟಿದ್ದ ಪ್ರೊ ನಂಜುಂಡಸ್ವಾಮಿ, ಸುಂದರೇಶ್, ಶಾಮಣ್ಣ ಬಾಬಾಗೌಡ ಪಾಟೀಲರೆಲ್ಲಾ ನೆನಪಿಗೆ ಬಂದು, ಅಯ್ಯೋ ಈಗ ರೈತನ ಪರ ಯಾರೂ ಇಲ್ಲವಲ್ಲ ಅನ್ನಿಸಿತು!


ಇದನ್ನೂ ಓದಿ: ಗಲಭೆಗೆ ಪ್ರಚೋದನೆ: ಪಬ್ಲಿಕ್ ಟಿವಿ ರಂಗನಾಥ್‌ ವಿರುದ್ಧ ಜಾಮೀನು ರಹಿತ ಕೇಸ್‌ ದಾಖಲಿಸುವಂತೆ ಕೋರ್ಟ್‌…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...