Homeಮುಖಪುಟಮಹಾರಾಷ್ಟ್ರ: ಆಟೋ ಡ್ರೈವರ್‌‌ ಆಗಿದ್ದ ಶಿಂಧೆ ಸಿಎಂ ಕುರ್ಚಿಯವರೆಗೆ...

ಮಹಾರಾಷ್ಟ್ರ: ಆಟೋ ಡ್ರೈವರ್‌‌ ಆಗಿದ್ದ ಶಿಂಧೆ ಸಿಎಂ ಕುರ್ಚಿಯವರೆಗೆ…

ಶಿಂಧೆ ತಮ್ಮ ಟ್ವಿಟರ್ ಹ್ಯಾಂಡಲ್‌ನ ಪ್ರೊಫೈಲ್ ಚಿತ್ರ ಬದಲಿಸಿದ್ದು, ಬಾಳಾಸಾಹೇಬ್ ಠಾಕ್ರೆಯವರೊಂದಿಗೆ ಇರುವ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ.

- Advertisement -
- Advertisement -

ಶಿವಸೇನೆಯ ಉದ್ಧವ್ ಠಾಕ್ರೆ ನಾಯಕತ್ವದ ವಿರುದ್ಧ ಒಂಬತ್ತು ದಿನಗಳ ಬಂಡಾಯದ ನಂತರ ಗುರುವಾರ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಏಕನಾಥ್ ಶಿಂಧೆ, ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ರಾಜಕೀಯ ಉತ್ತರಾಧಿಕಾರಿ ಎಂಬ ಸಂದೇಶ ರವಾನಿಸಲು ಹೊರಟಿದ್ದಾರೆ.

ಪ್ರಮಾಣವಚನ ಸಮಾರಂಭದ ನಂತರ, ಶಿಂಧೆ ತಮ್ಮ ಟ್ವಿಟರ್ ಹ್ಯಾಂಡಲ್‌ನ ಪ್ರೊಫೈಲ್ ಚಿತ್ರ ಬದಲಿಸಿದ್ದು, ಬಾಳಾಸಾಹೇಬ್ ಠಾಕ್ರೆಯವರೊಂದಿಗೆ ಇರುವ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ಹಿಂದುತ್ವ ಮತ್ತು ಮರಾಠಾ ರಾಜಕೀಯ ಸಂಕೇತವಾಗಿ ಬಾಳಾ ಸಾಹೇಬ್‌ ಜೊತೆಗಿನ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ.

ಬಿಜೆಪಿ ಬೆಂಬಲದೊಂದಿಗೆ ಶಿವಸೇನೆ ಬಂಡಾಯಗಾರರು ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈಗ ಪಕ್ಷದ ಮೇಲೆ ಹಿಡಿತ ಸಾಧಿಸುವ ಹೋರಾಟ ನಡೆಸುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಂಡಾಯಗಾರರೇ ನಿಜವಾದ ಶಿವಸೇನಾ ನಾಯಕರು ಎಂದು ಶಿಂಧೆ ಬಣ ಸುಪ್ರೀಂ ಕೋರ್ಟ್‌ನಲ್ಲಿ ಘೋಷಿಸಿದೆ. ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಜೊತೆ ಒಕ್ಕೂಟವನ್ನು ರಚಿಸುವ ಮೂಲಕ ಉದ್ಧವ್‌ ಠಾಕ್ರೆ ಅವರು ಬಾಳ್ ಠಾಕ್ರೆಯವರ ಹಿಂದುತ್ವ ಸಿದ್ಧಾಂತವನ್ನು ದುರ್ಬಲಗೊಳಿಸಿದ್ದಾರೆ. “ಇದು ಅಸ್ವಾಭಾವಿಕ ಮೈತ್ರಿ” ಎಂಬುದು ಬಂಡಾಯಗಾರರ ವಾದವಾಗಿದೆ.

ದಾಖಲೆ ಪ್ರಕಾರ ಹೇಳುವುದಾದರೆ ಶಿಂಧೆ ಅವರಿಗೆ 39 (55ರಲ್ಲಿ) ಶಿವಸೇನಾ ಶಾಸಕರ ಬೆಂಬಲವಿದೆ. ಉದ್ಧವ್ ಠಾಕ್ರೆ ಅವರ ಜೊತೆ 15 ಮಂದಿ ಶಾಸಕರಿದ್ದಾರೆ.

‘ದ್ರೋಹ ಬಗೆದಿದ್ದಾರೆ’ ಎಂಬ ಬೇಸರದೊಂದಿಗೆ ರಾಜೀನಾಮೆ ನೀಡಿದ ಉದ್ಧವ್‌, ಬಂಡಾಯ ನಾಯಕ ಶಿಂಧೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಶಿವಸೇನೆಯು ಆಟೋ ರಿಕ್ಷಾ ಚಾಲಕರು, ಕೈಗಾಡಿ ಎಳೆಯುವವರನ್ನು ಸಂಸದರು ಮತ್ತು ಶಾಸಕರನ್ನಾಗಿ ಮಾಡಿದೆ” ಎಂದಿದ್ದಾರೆ ಉದ್ಧವ್‌. ಶಿಂಧೆಯವರು ಈ ಹಿಂದೆ ಥಾಣೆಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದದ್ದು ಇಲ್ಲಿ ಗಮನಾರ್ಹ.

ಠಾಕ್ರೆಯವರ ರಾಜೀನಾಮೆಯು ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರಕ್ಕೆ ದಾರಿ ಮಾಡಿಕೊಟ್ಟಿತು. ಅನಿರೀಕ್ಷಿತವಾಗಿ ಶಿಂಧೆ ಮುಖ್ಯಮಂತ್ರಿ ಪದವಿಗೇರಿದರು. ಬಿಜೆಪಿ ಆಡಳಿತವಿರುವ ಅಸ್ಸಾಂನ ಹೋಟೆಲ್‌ನಲ್ಲಿ ಬಂಡಾಯ ಶಾಸಕರನ್ನು ನೋಡಿಕೊಂಡ ಶಿಂಧೆ ಅವರಿಗೆ ಮುಖ್ಯಮಂತ್ರಿ ಹುದ್ದೆ ದೊರೆತಿದೆ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ಫಡ್ನವೀಸ್‌ ಮುಖ್ಯಮಂತ್ರಿಯಾಗುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ.

ರಿಕ್ಷಾ ಚಾಲಕರಾಗಿದ್ದ ಶಿಂಧೆ ಸಿಎಂ ಕುರ್ಚಿಯವರೆಗೆ…

ರಿಕ್ಷಾ ಚಾಲಕರಾಗಿದ್ದ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವವರೆಗೆ ಬೆಳೆದರು. ಕಟ್ಟಾ ಶಿವಸೇನೆಯವರಾಗಿದ್ದ ಏಕನಾಥ್ ಸಂಭಾಜಿ ಶಿಂಧೆ, ರಾಜಕೀಯವಾಗಿ ಪ್ರಭಾವಿಯಾಗಿರುವ ಮರಾಠಾ ಸಮುದಾಯಕ್ಕೆ ಸೇರಿದವರು. ಸತಾರಾ ಜಿಲ್ಲೆಯವರಾದ ವೈ.ಬಿ.ಚವ್ಹಾಣ್, ಬಾಬಾಸಾಹೇಬ್ ಭೋಸಲೆ ಮತ್ತು ಪೃಥ್ವಿರಾಜ್ ಚವಾಣ್ ನಂತರದಲ್ಲಿ ಉನ್ನತ ಹುದ್ದೆಗೇರಿದ ಕೀರ್ತಿಗೆ ಶಿಂಧೆ ಭಾಜನರಾಗಿದ್ದಾರೆ.

2019ರ ವಿಧಾನಸಭಾ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ಹಿಡಿಯಲು ಸಾಧ್ಯವಾಗದ ಬಿಜೆಪಿ, ಎಂವಿಎ ಸರ್ಕಾರವನ್ನು ಉರುಳಿಸಲು ಶಿಂಧೆ ಅವರನ್ನು ತನ್ನ ಗುರಾಣಿಯಾಗಿ ಬಳಸಿಕೊಂಡಿತು.

2004ರಿಂದ ಥಾಣೆಯ ಕಪ್ರಿ-ಪಚ್ಪಖಾಡಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಅವಧಿಯ ಶಾಸಕರಾಗಿದ್ದ ಶಿಂಧೆ ಅವರು ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ, ನಂತರ ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರದಲ್ಲಿ ಯೋಜನೆಗಳ ಅನುಷ್ಠಾನಕಾರರಾಗಿ ತಮ್ಮ ಛಾಪು ಮೂಡಿಸಿದರು. ಕೋವಿಡ್ ಕಾರಣದಿಂದಾಗಿ ಉದ್ಧವ್‌ ಠಾಕ್ರೆ ಹೆಚ್ಚಾಗಿ ತಮ್ಮ ನಿವಾಸದಿಂದಲೇ ಕಾರ್ಯನಿರ್ವಹಿಸುತ್ತಿದ್ದಾಗ ಶಿಂಧೆ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದರು. ಸಾಂಕ್ರಾಮಿಕ ಬಿಕ್ಕಟ್ಟು, ನೈಸರ್ಗಿಕ ಅವಘಡ ಮೊದಲಾದ ಸಂದರ್ಭಗಳಲ್ಲಿ ಶಿಂಧೆ ಮುಂದೆ ನುಗ್ಗುತ್ತಿದ್ದರು.

ಇದನ್ನೂ ಓದಿರಿ: ಮಹಾರಾಷ್ಟ್ರ: ಉದ್ಧವ್‌ ಠಾಕ್ರೆ ಅಧಿಕಾರ ಕಳೆದುಕೊಳ್ಳಲು ಕಾರಣವಾಯ್ತು- ಈ ನಾಲ್ಕು ಅಂಶ

ಹಣಕಾಸಿನ ಮುಗ್ಗಟ್ಟು ಹಾಗೂ ಕೌಟುಂಬಿಕ ಸಮಸ್ಯೆಗಳಿಂದ ಶಿಕ್ಷಣವನ್ನು ಅರ್ಧಕ್ಕೆ ಬಿಡಬೇಕಾಗಿ ಬಂದ ಶಿಂಧೆ, ಶಿವಸೇನೆಯ ಭದ್ರಕೋಟೆಯಾಗಿದ್ದ ಥಾಣೆಗೆ ತೆರಳಿ ಮೀನು ಮಾರಾಟದಲ್ಲಿ ತೊಡಗಿದ್ದ ಕಂಪನಿಗೆ ಸೇರಿಕೊಂಡರು. ಆದರೆ, ಸಂಬಳ ಸಾಲದೆ ಕೆಲಸ ಬಿಟ್ಟು ರಿಕ್ಷಾ ಚಾಲಕರಾದರು. 1970ರ ದಶಕದಲ್ಲಿ ಶಿಂಧೆ, ಶಿವಸೇನೆಯ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆಯವರ ಮರಾಠಿ ರಾಜಕಾರಣದ ಮನವಿಗೆ ಆಕರ್ಷಿತರಾದರು. ಕೇಸರಿ ಪಕ್ಷಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಶಿವಸೇನೆಯ ಫೈರ್‌ಬ್ರಾಂಡ್ ಥಾಣೆ ಜಿಲ್ಲಾ ಮುಖ್ಯಸ್ಥ ಆನಂದ್ ದಿಘೆ ಅವರ ಸಂಪರ್ಕಕ್ಕೆ ಶಿಂಧೆ ಬರುತ್ತಾರೆ. ಶಿವಸೇನೆಯ ಬಲವರ್ಧನೆಗೆ ಕೆಲಸ ಮಾಡಿದ ಶಿಂಧೆ, ದಿಘೆ ಅವರ ಆಪ್ತರಾಗುತ್ತಾರೆ.

ಮಹಾರಾಷ್ಟ್ರ-ಕರ್ನಾಟಕ ಗಡಿ ಹೋರಾಟ ಸೇರಿದಂತೆ ವಿವಿಧ ಆಂದೋಲನಗಳಲ್ಲಿ ಶಿಂಧೆ ಭಾಗವಹಿಸಿದ್ದರು. ಶಿಂಧೆಯವರ ಉತ್ಸಾಹ, ಪಕ್ಷಕ್ಕಾಗಿ ಸಮರ್ಪಣಾ ಭಾವ, ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸುವ ಗುಣ ಅನೇಕರನ್ನು ಆಕರ್ಷಿಸಿತು. ಶಿಂಧೆಯವರ ಕೆಲಸದಿಂದ ಪ್ರಭಾವಿತರಾದ ದಿಘೆ, 1997ರಲ್ಲಿ ಪಕ್ಷದ ಟಿಕೆಟ್ ದೊರಕಿಸುವ ಮೂಲಕ ಚುನಾವಣಾ ರಾಜಕಾರಣಕ್ಕೆ ಎಳೆ ತರುತ್ತಾರೆ. ಹೀಗೆ ರಾಜಕೀಯ ಬದುಕು ಆರಂಭಿಸಿದ ಶಿಂಧೆ, ಮಹಾರಾಷ್ಟ್ರದ ಸಿಎಂ ಕುರ್ಚಿ ಹಿಡಿಯುವವರೆಗೆ ಬೆಳೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...