Homeಮುಖಪುಟಮಹಾರಾಷ್ಟ್ರ: ಉದ್ಧವ್‌ ಠಾಕ್ರೆ ಅಧಿಕಾರ ಕಳೆದುಕೊಳ್ಳಲು ಕಾರಣವಾಯ್ತು- ಈ ನಾಲ್ಕು ಅಂಶ

ಮಹಾರಾಷ್ಟ್ರ: ಉದ್ಧವ್‌ ಠಾಕ್ರೆ ಅಧಿಕಾರ ಕಳೆದುಕೊಳ್ಳಲು ಕಾರಣವಾಯ್ತು- ಈ ನಾಲ್ಕು ಅಂಶ

- Advertisement -
- Advertisement -

ಜೂನ್ 29 ಬುಧವಾರದಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ಒಂದು ವಾರ ಕಾಲ ನಡೆದ ರಾಜಕೀಯ ಹೈಡ್ರಾಮ ಕ್ಲೈಮಾಕ್ಸ್‌ ಹಂತಕ್ಕೆ ತಲುಪಿದೆ.

ಕ್ಯಾಬಿನೆಟ್ ಮಂತ್ರಿ, ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು 40 ಇತರ ಶಾಸಕರು ಮೊದಲು ಸೂರತ್‌ನಲ್ಲಿ, ನಂತರ ಗುವಾಹಟಿಯಲ್ಲಿ ಮೊಕ್ಕಾಂ ಹೂಡಿದಾಗ ಬಿಕ್ಕಟ್ಟು ಪ್ರಾರಂಭವಾಯಿತು. ಶಿವಸೇನೆಯು ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯಿಂದ ಹೊರಬಂದು ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸುವಂತೆ ಬಂಡಾಯ ಶಾಸಕರು ಒತ್ತಾಯಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಬಹುಮತ ಸಾಬೀತುಪಡಿಸಲು ಉದ್ಧವ್ ಠಾಕ್ರೆ ಸರ್ಕಾರಕ್ಕೆ ಆದೇಶಿಸಿದ ನಂತರ, 16 ಬಂಡಾಯ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಶಿವಸೇನೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಆದಾಗ್ಯೂ, ಸುಪ್ರೀಂಕೋರ್ಟ್ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿಯಿತು. ಬಹುಮತ ಸಾಬೀತಿಗೆ ಸೂಚಿಸಿದ್ದು, ಠಾಕ್ರೆ ಅವರ ರಾಜೀನಾಮೆಗೆ ಕಾರಣವಾಯಿತು.

ಈ ಬೆಳವಣಿಗೆಗಳ ಹಿನ್ನಲೆಯಲ್ಲಿ ಉದ್ಧವ್ ಠಾಕ್ರೆ ಅವರ ಅಧಿಕಾರ ಪಥನಕ್ಕೆ ಕಾರಣವಾದ ನಾಲ್ಕು ಅಂಶಗಳನ್ನು ‘ದಿ ಕ್ವಿಂಟ್‌’ ಜಾಲತಾಣ ಪಟ್ಟಿ ಮಾಡಿದೆ.

  1. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿ

ಶಿವಸೇನೆ 2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಎರಡು ಪಕ್ಷಗಳು 161 ಸ್ಥಾನಗಳನ್ನು ಗೆದ್ದವು. 288 ಸ್ಥಾನಗಳ ವಿಧಾನಸಭೆಯಲ್ಲಿ ಅನುಕೂಲಕರ ಬಹುಮತವಿತ್ತು. ಆದರೆ ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಸ್ಥಾನವನ್ನು ಹಿಂತಿರುಗಿಸುವ ಭರವಸೆಯಿಂದ ಬಿಜೆಪಿ ಹಿಂದೆ ಸರಿದಿದ್ದರಿಂದ ಶಿವಸೇನೆಯು ಮೈತ್ರಿಯಿಂದ ಹೊರನಡೆಯಿತು.

ಇದರ ನಂತರ ಒಂದು ತಿಂಗಳ ಸುದೀರ್ಘ ರಾಜಕೀಯ ಹೈಡ್ರಾಮ ನಡೆಯಿತು. ಅಂತಿಮವಾಗಿ ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಜೊತೆಗೆ ಸೇರಿ ಶಿವಸೇನೆ ಸರ್ಕಾರವನ್ನು ರಚಿಸಿತು.

ಈ ‘ಅಸಂಭವ’ ಮೈತ್ರಿ ಕೆಲವು ತಿಂಗಳುಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದರು. ಎಂವಿಎ ಸರ್ಕಾರದ ಎರಡೂವರೆ ವರ್ಷಗಳ ಸುದೀರ್ಘ ಅವಧಿಯ ಉದ್ದಕ್ಕೂ, ಮೈತ್ರಿಯೊಳಗೆ ಆಗಾಗ್ಗೆ ಬಿರುಕುಗಳು ಕಾಣಿಸಿಕೊಂಡಿದ್ದವು.

2. ಉದ್ಧವ್ ಠಾಕ್ರೆ – ರಾಜಕೀಯದಲ್ಲಿ ‘ಒಳ್ಳೆಯ ವ್ಯಕ್ತಿ’

ಉದ್ಧವ್ ಠಾಕ್ರೆ ನಿಜವಾಗಿಯೂ ರಾಜಕೀಯದಲ್ಲಿ ಒಳ್ಳೆಯ ವ್ಯಕ್ತಿ. ಶಾಂತ ಸ್ವಭಾವದವರು. ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರೂ, ಅದರ ಕ್ರೆಡಿಟ್‌ ಪಡೆಯಲು ಮಿತಿಮೀರಿ ಯತ್ನಿಸುವುದಿಲ್ಲ. ಜೊತೆಗೆ ತಮ್ಮ ಮೈತ್ರಿ ಪಾಲುದಾರರಿಗೆ ವಿಧೇಯರಾಗಿದ್ದರು.

ಏಕನಾಥ್ ಶಿಂಧೆಯವರು ಉದ್ಧವ್ ಠಾಕ್ರೆ ಅವರ ಮೂಗಿನ ನೇರದಲ್ಲಿದ್ದ ಸುಮಾರು 40 ಶಾಸಕರನ್ನು ಕರೆದುಕೊಂಡು ಹೋಗಿದ್ದು ಸಣ್ಣ ಸಾಧನೆಯಲ್ಲ. ಈ ಕುರಿತು ಶಿವಸೇನೆ ಮುಖ್ಯಸ್ಥರು ಸ್ವಲ್ಪ ಯೋಚಿಸುವುದು ಅಗತ್ಯವಿತ್ತು.

3. ಇ.ಡಿ. ಭಯದಲ್ಲಿ ಬಾಬು ಬಯ್ಯಾ

ಬಂಡಾಯಗಾರ ಏಕನಾಥ್ ಶಿಂಧೆ ಸೇರಿದಂತೆ ಹಲವಾರು ಅತೃಪ್ತ ಶಾಸಕರು ತನಿಖಾ ಸಂಸ್ಥೆಗಳ ಭಯದಲ್ಲಿದ್ದಾರೆ ಎಂಬುದು ರಹಸ್ಯವಾದ ವಿಚಾರವೇನೂ ಅಲ್ಲ. ಇವರು ಕೇಂದ್ರೀಯ ಏಜೆನ್ಸಿಗಳಿಂದ ತಪ್ಪಿಸಿಕೊಳ್ಳಬೇಕಿತ್ತು. ಹೀಗಾಗಿ ಹೆಚ್ಚಿನ ಬಂಡಾಯ ಶಾಸಕರು ಎಂವಿಎ ಮೈತ್ರಿಯನ್ನು ತೊರೆದು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಶಿಂಧೆ ಅವರ ಬೇಡಿಕೆಯನ್ನು ಬೆಂಬಲಿಸಿದರು.

ಇದನ್ನೂ ಓದಿರಿ: ಮುಂದಿನ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ: ಸಿದ್ದರಾಮಯ್ಯ

4. ಹಿಂದುತ್ವ ಪರಂಪರೆಯ ಅಗ್ಗಜಗ್ಗಾಟ

ಉದ್ಧವ್ ಠಾಕ್ರೆಯವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಮೇಲೆ ಆಶ್ಚರ್ಯಕರ ರೀತಿಯಲ್ಲಿ ಹಲವು ಸಂದರ್ಭಗಳಲ್ಲಿ ಜಾತ್ಯತೀತ ನಿಲುವು ಪ್ರದರ್ಶಿಸಿದರು.

ಪ್ರವಾದಿಯವರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ, ಹನುಮಾನ್ ಚಾಲೀಸಾ ಪಠಣ ವಿವಾದ ಸಂದರ್ಭದಲ್ಲಿ ಬಿಜೆಪಿಯನ್ನು ವಿರೋಧಿಸಿದರು. “ಅಧಿಕಾರಕ್ಕಾಗಿ ಶಿವಸೇನೆ ಮತ್ತು ಬಾಳಾಸಾಹೇಬ್ ಅವರ ಹಿಂದುತ್ವ ರಾಜಕಾರಣದ ಗುರುತನ್ನು ಉದ್ಧವ್‌ ತ್ಯಜಿಸಿದ್ದಾರೆ” ಎಂದು ಬಿಂಬಿಸಲು ಅವರ ಜಾತ್ಯತೀತ ಪ್ರತಿಕ್ರಿಯೆಗಳು ಬಳಕೆಯಾದವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...