Homeಅಂತರಾಷ್ಟ್ರೀಯಆಸ್ಕರ್ ಪ್ರಶಸ್ತಿಗೆ ಮೊದಲ ಮುಸ್ಲಿಂ ನಟ ನಾಮನಿರ್ದೇಶನ: ಇತಿಹಾಸ ಸೃಷ್ಟಿಸಿದ ರಿಜ್ ಅಹ್ಮದ್

ಆಸ್ಕರ್ ಪ್ರಶಸ್ತಿಗೆ ಮೊದಲ ಮುಸ್ಲಿಂ ನಟ ನಾಮನಿರ್ದೇಶನ: ಇತಿಹಾಸ ಸೃಷ್ಟಿಸಿದ ರಿಜ್ ಅಹ್ಮದ್

'ಸೌಂಡ್ ಆಫ್ ಮೆಟಲ್' ಎನ್ನುವ ಚಿತ್ರದಲ್ಲಿನ ಪಾತ್ರಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ

- Advertisement -

ಬ್ರಿಟಿಷ್-ಪಾಕಿಸ್ತಾನಿ ನಟ ರಿಜ್ ಅಹ್ಮದ್ ‘ಸೌಂಡ್ ಆಫ್ ಮೆಟಲ್’ ಎನ್ನುವ ಚಿತ್ರದಲ್ಲಿನ ಪಾತ್ರಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ರಿಜ್ ಅಹ್ಮದ್ ಈ ಹಿಂದೆ 2017 ರಲ್ಲಿ ಎಚ್‌ಬಿಒ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಮಿನಿ ಸೀರೀಸ್ “ದಿ ನೈಟ್ ಆಫ್” ನಲ್ಲಿನ ನಟನೆಗಾಗಿ ಎಮ್ಮಿ ಪ್ರಶಸ್ತಿ ಗೆದ್ದ ಮೊದಲ ಮುಸ್ಲಿಂ ಮತ್ತು ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಮಹರ್ಶಲಾ ಅಲಿ ಈ ಹಿಂದೆ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, 2017 ರಲ್ಲಿ ಮೂನ್‌ಲೈಟ್ ಮತ್ತು 2019 ರಲ್ಲಿ ಗ್ರೀನ್ ಬುಕ್‌ಗಾಗಿ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ರಿಜ್ ಅಹ್ಮದ್, ತನ್ನನ್ನು ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವುದಕ್ಕೆ ತಮ್ಮ ಸಹ ನಟರಿಗೆ, ಚಿತ್ರದ ನಿರ್ದೇಶಕರಿಗೆ ಮತ್ತು ತಂತ್ರಜ್ಞರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಪಿಕೆ ಟಾಕೀಸ್ 02: ಅರ್ಥಕ್ಕಿಂತಲೂ ಅನುಭವಕ್ಕೆ ಸಿಕ್ಕುವ – ಮಾನವೀಯತೆಯನ್ನು ಕಲಕುವ ಥಿಯೋಡೊರಸ್ ಸಿನಿಮಾಗಳು

ಸೌಂಡ್ ಆಫ್ ಮೆಟಲ್

‘ಸೌಂಡ್ ಆಫ್ ಮೆಟಲ್’ ಚಿತ್ರವು ಮಾಜಿ ಡ್ರಗ್ ವ್ಯಸನಿ ಮತ್ತು ಡ್ರಮ್ಮರ್ ರುಬೆನ್ ಸ್ಟೋನ್ (ರಿಜ್ ಅಹ್ಮದ್) ಅವರ ಜೀವನದ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ಕಥಾನಾಯಕನಿಗೆ ಕಿವುಡುತನ ಆವರಿಸಿಕೊಳ್ಳುತ್ತಿರುತ್ತದೆ. ಇದರಿಂದ ತನ್ನ ಸಂಗೀತ ವೃತ್ತಿ ಮತ್ತು ಸಂಬಂಧಗಳೊಂದಿಗೆ ಆತ ಎದುರಿಸುವ ಸವಾಲುಗಳನ್ನು ಚಿತ್ರವು ವಿವರಿಸುತ್ತದೆ. ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.

ರಿಜ್ ಅಹ್ಮದ್ ಬಗ್ಗೆ ಇನ್ನಷ್ಟು

ರಿಜ್ವಾನ್ ಅಹ್ಮದ್ ಆಗಿ ಜನಿಸಿದ ಅವರನ್ನು ರಿಜ್ ಎಂಸಿ ಎಂದೂ ಕರೆಯುತ್ತಾರೆ. ಇವರು ಲಂಡನ್‌ನಲ್ಲಿ ಬ್ರಿಟಿಷ್-ಪಾಕಿಸ್ತಾನಿ ಕುಟುಂಬದಲ್ಲಿ ಜನಿಸಿದರು. ಕೆಲವು ವರದಿಗಳ ಪ್ರಕಾರ, ಅವರು ಬ್ರಿಟಿಷರ ಕಾಲದಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮೊದಲ ಮುಸ್ಲಿಂ ಸರ್ ಶಾ ಮುಹಮ್ಮದ್ ಸುಲೈಮಾನ್ ಅವರ ವಂಶಸ್ಥರು.

ಜನವರಿ 2021 ರಲ್ಲಿ, ರಿಜ್ ಅವರು ಅಮೇರಿಕನ್ ಕಾದಂಬರಿಗಾರ್ತಿಯಾದ ಫಾತಿಮಾ ಫರ್ಹೀನ್ ಮಿರ್ಜಾ ಅವರನ್ನು ವಿವಾಹವಾಗಿದ್ದರು.

ರಿಜ್ ಅಹ್ಮದ್ ನಟ ಮತ್ತು ಸಂಗೀತಗಾರ ಹಾಗೂ ಸಾಮಾಜಿಕ ಕಾರ್ಯಕರ್ತದ್ದಾರೆ. ರೋಜ್ ಒನ್, ವೆನಮ್, ದಿ ಸಿಸ್ಟರ್ಸ್ ಬ್ರದರ್ಸ್, ನೈಟ್‌ಕ್ರಾಲರ್, ಫೋರ್ ಲಯನ್ಸ್ ಮತ್ತು ಅವರ ಇತ್ತೀಚಿನ ಮೊಗಲ್ ಮೊಗ್ಲಿ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಹೆಚ್ಚು ಪ್ರಸಿದ್ಧಿ ಪಡೆದಿದ್ದರು.

ಇದನ್ನೂ ಓದಿ: ಅಂಬಾನಿ 5G ಗಾಗಿ ಥಿಯೇಟರ್ ಓಪನ್ ಮಾಡ್ತಿಲ್ಲ; ಇದು ಬಹುದೊಡ್ಡ ಹಗರಣ ಎಂದ ನಟ ದರ್ಶನ್

Best Picture

  1. The Father
  2. Judas and the Black Messiah
  3. Mank
  4. Minari
  5. Nomadland
  6. Promising Young Woman
  7. Sound of Metal
  8. The Trial Of The Chicago 7

Best Director

  1. Thomas Vinterburg, Another Round
  2. Emerald Fennell, Promising Young Woman
  3. David Fincher, Mank
  4. Lee Isaac Chung, Minari
  5. Chloé Zhao, Nomadland

Best Actress

  1. Viola Davis, Ma Rainey’s Black Bottom
  2. Andra Day, The United States vs. Billie Holiday
  3. Vanessa Kirby, Pieces of a Woman
  4. Frances McDormand, Nomadland
  5. Carey Mulligan, Promising Young Woman

Best Actor

  1. Riz Ahmed, Sound of Metal
  2. Chadwick Boseman, Ma Rainey’s Black Bottom
  3. Anthony Hopkins, The Father
  4. Gary Oldman, Mank
  5. Steven Yeun, Minari
  6. Best Supporting Actress
  7. Glenn Close (Hillbilly Elegy)
  8. Amanda Seyfried (Mank)
  9. Maria Bakalova (Borat 2)
  10. Olivia Colman (The Father)
  11. Yuh-Jung Youn (Minari)

Best Supporting Actor

  1. Daniel Kaluuya (Judas And The Black Messiah)
  2. Sacha Baron Cohen (The Trial Of The Chicago 7)
  3. Lakeith Stanfield (Judas And The Black Messiah)
  4. Leslie Odom Jr (One Night In Miami)
  5. Paul Raci (Sound Of Metal)

Best Original Screenplay

  1. Judas And The Black Messiah
  2. Minari
  3. Promising Young Woman
  4. Sound Of Metal
  5. The Trial Of The Chicago 7

Best Adapted Screenplay

  1. Borat 2
  2. The Father
  3. Nomadland
  4. One Night In Miami
  5. The White Tiger

Best International Feature

  1. Another Round (Denmark)
  2. Better Days (Hong Kong)
  3. Collective (Romania)
  4. The Man Who Sold His Skin (Tunisia)
  5. Quo Vadis, Aida? (Bosnia)

Best Animated Feature

  1. Onward
  2. Over the Moon
  3. A Shaun the Sheep Movie: Farmageddon
  4. Soul
  5. Wolfwalkers

Best Original Score

  1. Da 5 Bloods
  2. Mank
  3. Minari
  4. Soul

Best Original Song

  1. Husavik, Eurovision Song Contest: The Story of Fire Saga
  2. Fight For You, Judas and the Black Messiah
  3. lo Si (Seen), The Life Ahead
  4. Speak Now, One Night in Miami
  5. Hear My Voice, The Trial of the Chicago 7

Best Documentary Feature

  1. My Octopus Teacher
  2. Collective
  3. Crip Camp
  4. The Mole Agent
  5. Time

Best Documentary Short

  1. Colette
  2. A Concierto is a Conversation
  3. Do Not Split
  4. Hunger Ward
  5. A Love Song for Latasha

Best Live Action Short

  1. Feeling Through
  2. The Letter Room
  3. The Present
  4. Two Distant Strangers
  5. White Eye

Best Animated Short

  1. Burrow
  2. Genius Loci
  3. If Anything Happens I Love You
  4. Opera
  5. Yes-People

Best Sound

  1. Greyhound
  2. Mank
  3. News of the World
  4. Sound of Metal
  5. Soul

Best Production Design

  1. The Father
  2. Ma Rainey’s Black Bottom
  3. Mank
  4. News Of The World
  5. Tenet

Best Cinematography

  1. Judas and the Black Messiah
  2. Mank
  3. News of the World
  4. Nomadland
  5. The Trial Of The Chicago 7
  6. Best Makeup And Hair
  7. Emma
  8. Hillbilly Elegy
  9. Ma Rainey’s Black Bottom
  10. Mank
  11. Pinocchio

Best Costume Design

  1. Emma
  2. Ma Rainey’s Black Bottom
  3. Mank
  4. Mulan
  5. Pinocchio

Best Film Editing

  1. The Father
  2. Nomadland
  3. Promising Young Woman
  4. Sound Of Metal
  5. The Trial Of The Chicago 7

Best Visual Effects

  1. Love and Monsters
  2. The Midnight Sky
  3. Mulan
  4. The One and Only Ivan
  5. Tenet

ಇದನ್ನೂ ಓದಿ: ‘ಕನ್ನಡ’ದ ಸಿನೆಮಾ ಅಂದ್ರೆ ಯಾವುದು? : ಕೆ.ಫಣಿರಾಜ್

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಳ್ಳುವ ಮೂಲಕ ನಟ ರಿಜ್ ಅಹಮದ್ ಅವರು ಏಷ್ಯಾಕ್ಕೆ ದೊಡ್ಡ ಹೆಸರು ತಂದಿದ್ದಾರೆ. ಅಭಿನಂದನೆಗಳು.

  2. Bohemian Rhapsody 2018 ರಲ್ಲಿ ತೆರೆಕಂಡ ಚಿತ್ರಕ್ಕಾಗಿ ರಾಮಿ ಮಲಿಕ್ Egyptian actor ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

LEAVE A REPLY

Please enter your comment!
Please enter your name here

- Advertisment -

Must Read

Wordpress Social Share Plugin powered by Ultimatelysocial
Shares