ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರನೆಂಬ ಖ್ಯಾತಿಗೆ ಒಳಗಾಗಿದ್ದ ಬ್ರೆಜಿಲ್ ದೇಶದ ಪೀಲೆ (82) ಕೊನೆಯುಸಿರೆಳೆದಿದ್ದಾರೆ.
ಮೂರು ಬಾರಿ ಫಿಫಾ ವಿಶ್ವಕಪ್ ವಿಜೇತ ತಂಡದಲ್ಲಿದ್ದ ಏಕೈಕ ಆಟಗಾರರಾಗಿದ್ದ ಪೀಲೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ಬಾರಿಯ ಫಿಫಾ ವಿಶ್ವಕಪ್ ಅನ್ನು ಅವರು ಆಸ್ಪತ್ರೆಯಲ್ಲಿಯೇ ನೋಡಬೇಕಾಗಿತ್ತು. ಅವರು ಗುರುವಾರ ಮಧ್ಯರಾತ್ರಿ ಸಾವ್‌ಪೌಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಎಡ್ಸನ್ ಅರಾಂಟೆಸ್ ಡು ನಸಿಮೆಂಟೊ ನಿಜನಾಮದ ಪೀಲೆ 1,366 ಪಂದ್ಯಗಳಲ್ಲಿ 1,281 ಗೋಲು ಗಳಿಸಿ ದಾಖಲೆ ಮಾಡಿದ್ದಾರೆ. ಫಿಫಾ ಶತಮಾನದ ಆಟಗಾರ ಪ್ರಶಸ್ತಿ ಪುರಸ್ಕೃತರಾಗಿದ್ದ ಪೀಲೆ, ಟೈಮ್ಸ್‌ನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು.
ಪ್ರಪಂಚದೆಲ್ಲಡೆ ಸಂತಾಪ
ಫುಟ್‌ಬಾಲ್ ಜಗತ್ತಿನ ದಂತಕಥೆ ಪೀಲೆ ನಿಧನಕ್ಕೆ ಪ್ರಪಂಚದಾದ್ಯಂತ ಸಂತಾಪ ಸೂಚಿಸಲಾಗಿದೆ. ಫ್ರಾನ್ಸ್‌ನ ಉದಯೋನ್ಮುಖ ಆಟಗಾರ ಕಿಲಿಯನ್ ಎಂಬಾಪೆ, “ಫುಟ್ಬಾಲ್ ರಾಜ ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಪರಂಪರೆಯನ್ನು ಎಂದಿಗೂ ಮರೆಯಲಾಗುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
The king of football has left us but his legacy will never be forgotten.
RIP KING 💔👑… pic.twitter.com/F55PrcM2Ud— Kylian Mbappé (@KMbappe) December 29, 2022
“ಬ್ರೆಜಿಲ್‌ನ ಇತ್ತೀಚಿನ ಪೀಳಿಗೆಗೆ ಸಿಗಲಾರದ ಅವಕಾಶ ನನಗೆ ಸಿಕ್ಕಿತ್ತು. ನಾನು ಪಕೆಂಬು ಮತ್ತು ಮೊರುಂಬಿಯಲ್ಲಿ ಪೀಲೆ ಆಡುವುದನ್ನು ನಾನು ನೇರವಾಗಿ ನೋಡಿದ್ದೇನೆ. ಚೆಂಡು ಪೀಲೆಗೆ ಸಿಕ್ಕಿತ್ತೆಂದರೆ ಅವರು ವಿಶೇಷವಾದುದ್ದನ್ನು ಮಾಡುತ್ತಿದ್ದರು. ಹಲವು ಬಾರಿ ಅದು ಗೋಲ್‌ನೊಂದಿಗೆ ಕೊನೆಗೊಳ್ಳುತ್ತಿತ್ತು” ಎಂದು ಬ್ರೆಜಿಲ್ ಅಧ್ಯಕ್ಷ ಲುಲಾ ನೆನಪಿಸಿಕೊಂಡಿದ್ದಾರೆ.
Eu tive o privilégio que os brasileiros mais jovens não tiveram: eu vi o Pelé jogar, ao vivo, no Pacaembu e Morumbi. Jogar, não. Eu vi o Pelé dar show. Porque quando pegava na bola ele sempre fazia algo especial, que muitas vezes acabava em gol.
📸: @ricardostuckert pic.twitter.com/YQs3K119t9
— Lula (@LulaOficial) December 29, 2022
ಪೀಲೆ ಸುಂದರ ಆಟವಾಡಿದ ಶ್ರೇಷ್ಠರಲ್ಲಿ ಒಬ್ಬರು. ವಿಶ್ವದ ಪ್ರಮುಖ ಕ್ರೀಡಾಪಟುಗಳಲ್ಲಿ ಒಬ್ಬರಾಗಿ, ಜನರನ್ನು ಒಟ್ಟುಗೂಡಿಸುವ ಕ್ರೀಡೆಯ ಶಕ್ತಿಯನ್ನು ಅವರು ಅರ್ಥಮಾಡಿಕೊಂಡರು. ಅವರ ಕುಟುಂಬ ಮತ್ತು ಅವರನ್ನು ಪ್ರೀತಿಸುವ ಮತ್ತು ಮೆಚ್ಚಿದ ಪ್ರತಿಯೊಬ್ಬರಿಗೂ ನನ್ನ ಸಂತಾಪಗಳು ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಟ್ವೀಟ್ ಮಾಡಿದ್ದಾರೆ.
ಪೀಲೆ ಕೇವಲ ಫುಟ್‌ಬಾಲ್‌ನ ರಾಜನಲ್ಲ, ಆದರೆ ನಿರ್ವಿವಾದವಾಗಿ 20ನೇ ಶತಮಾನದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಅವರು ಲಕ್ಷಾಂತರ ಜನರನ್ನು ಪ್ರೇರೇಪಿಸಿದರು. ಕಪ್ಪು ಮುತ್ತು ಎಂದು ಖ್ಯಾತರಾಗಿದ್ದ ಅವರು ಯಾವಾಗಲೂ ಎಲ್ಲಾ ಅರ್ಥದಲ್ಲಿ ಫುಟ್‌ಬಾಲ್‌ನ ಐಕಾನ್ ಆಗಿ ಉಳಿಯುತ್ತದೆ. ಅವರು ಮರೆಯಲಾಗದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ನಿಧನ; ಗಣ್ಯರ ಸಂತಾಪ


