Homeಅಂತರಾಷ್ಟ್ರೀಯಅಮೆರಿಕದಲ್ಲಿ ಪೂರ್ಣ ಲಸಿಕೆ ಪಡೆದವರಿಗೆ ಮಾಸ್ಕ್ ಅನಗತ್ಯ...

ಅಮೆರಿಕದಲ್ಲಿ ಪೂರ್ಣ ಲಸಿಕೆ ಪಡೆದವರಿಗೆ ಮಾಸ್ಕ್ ಅನಗತ್ಯ…

- Advertisement -
- Advertisement -

ನೀವು ಕರೆ ಮಾಡಿದ ತಕ್ಷಣ ಒಂದು ಕಾಲರ್‌ಟ್ಯೂನ್ ಕೇಳು ಬರುತ್ತದೆ. “ಭಾರತದಲ್ಲಿ ಒದಗಿಸಲಾಗುವ ಲಸಿಕೆಗಳು ವಿಶ್ವಾಸಾರ್ಹ. ಹಿಂಜರಿಕೆಯಿಲ್ಲದೆ ನೀವು ಲಸಿಕೆ ಹಾಕಿಸಿಕೊಳ್ಳಿ, ಲಸಿಕೆ ಹಾಕಿಸಿಕೊಂಡ ನಂತರವೂ ಮಾಸ್ಕ್ ಹಾಕುವುದನ್ನು, ಸಾಮಾಜಿಕ ಅಂತರ ಕಾಪಾಡುವುದ್ನು ಮರೆಯಬೇಡಿ”… ಎಂದು ಅದರಲ್ಲಿ ಹೇಳಲಾಗುತ್ತದೆ.

ಆದರೆ, ಅಮೆರಿಕದಲ್ಲಿ ಈಗ ಲಸಿಕೆ ಹಾಕಿಸಿಕೊಂಡವರಿಗೆ ಮಾಸ್ಕ್ ಕಡ್ಡಾಯ ಎಂಬ ನೀತಿಯನ್ನು ಸಡಿಲಿಸಗೊಳಿಸಲಾಗಿದೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
“ಕೊರೊನಾ ವೈರಸ್ ವಿರುದ್ಧದ ನಮ್ಮ ಸುದೀರ್ಘ ಯುದ್ಧದಲ್ಲಿ ಇಂದು ಅಮೆರಿಕಕ್ಕೆ ಉತ್ತಮ ದಿನವಾಗಿದೆ” ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗುರುವಾರ ತಿಳಿಸಿದ್ದಾರೆ. ಅವರು ಅಮೆರಿಕದ ಲಸಿಕಾ ಕಾರ್ಯಕ್ರಮವನ್ನು “ಐತಿಹಾಸಿಕ ವ್ಯವಸ್ಥಾಪನಾ ಸಾಧನೆ” ಎಂದು ಕರೆದರು.

ಅಧ್ಯಕ್ಷ ಜೋ ಬೈಡೆನ್ ಅವರು ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ವಿಜಯವನ್ನು ಘೋಷಿಸುವತ್ತ ಇನ್ನೂ ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಸಂಪೂರ್ಣವಾಗಿ ಲಸಿಕೆ ಪಡೆದ ಅಮೆರಿಕನ್ನರು ಮಾಸ್ಕ್‌ಗಳನ್ನು ಹಾಕಲೇಬೇಕೆಂಬ ಒತ್ತಡವಿಲ್ಲ ಎಂದು ಅಮೆರಿಕ ಘೋಷಿಸಿದೆ.
ಆದರೆ ಇಲ್ಲಿ ಮೊಬೈಲ್ ಕರೆ ಮಾಡಿದರೆ, ‘ಲಸಿಕೆ ವಿಶ್ವಾಸಾರ್ಹ, ಹಾಕಿಸಿಕೊಳ್ಳಿ, ಹಾಕಿಸಿಕೊಂಡ ನಂತರವೂ ಮಾಸ್ಕ್ ಹಾಕಿ’ ಎಂದು ಸರ್ಕಾರ ಸಂದೇಶ ನೀಡುತ್ತಿದೆ! ಅಂದರೆ ನಮ್ಮ ಲಸಿಕೆಗಳು ವಿಶ್ವಾಸಾರ್ಹ ಅಲ್ಲವೇ ಎಂಬ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ.

ಅಮೆರಿಕ ತನ್ನ 35% ಜನಸಂಖ್ಯೆಗೆ ಪೂರ್ಣ ಲಸಿಕೆ ನೀಡಿಯಾಗಿದೆ. ಆದರೆ ಇಲ್ಲಿ ಶೇ.2.8 ಜನರಿಗೆ ಮಾತ್ರ ಎರಡೂ ಡೋಸ್ ಲಸಿಕೆ ಸಿಕ್ಕಿದೆ. ಇದು ಮೋದಿ ಸರ್ಕಾರದ ಲಸಿಕಾ ನೀತಿಯ ವೈಫಲ್ಯಕ್ಕೆ ಸಾಕ್ಷಿಯೇ?

ಅಮೆರಿಕದಲ್ಲಿ ಕೇಸ್‌ಲೋಡ್ ( ಒಟ್ಟು ಸೋಂಕಿತರ ಸಂಖ್ಯೆ) ಇಳಿಮುಖದ ಹಾದಿಯಲ್ಲಿದ್ದರೆ, ಇಲ್ಲಿ ಕೇಸ್‌ಲೋಡ್ ಹೆಚ್ಚುತ್ತಿದೆ ಮತ್ತು ದೈನಿಕ ಕೋವಿಡ್ ಸಾವುಗಳ ಪ್ರಮಾಣವೂ ಏರುತ್ತಿದೆ.
ಅಲ್ಲಿ ಅಮೆರಿಕದ ಮುಖ್ಯಸ್ಥ ಜನರ ಪರ ನಿಂತು ಪ್ರಕಟಣೆ ನೀಡುತ್ತಾರೆ, ಇಲ್ಲಿ ಮೋದಿ ಪ್ರೆಸ್ ಅವರನ್ನೇ ಭೇಟಿ ಆಗುವುದಿಲ್ಲ!

ಇದೆಲ್ಲ ಇರಲಿ, ಎರಡೂ ಲಸಿಕೆ ಪಡೆದವರೂ ಮಾಸ್ಕ್ ಹಾಕಬೇಕು ಎಂದು ಸರ್ಕಾರ ಹೇಳುತ್ತಿರುವುದೇಕೆ? ಈ ಲಸಿಕೆಗಳೇ ಸಂಪೂರ್ಣವಾಗಿ ಪರೀಕ್ಷೆಗೆ ಒಳಪಟ್ಟಿಲ್ಲವೇ?
“ನಿಯಮವು ತುಂಬಾ ಸರಳವಾಗಿದೆ: ಲಸಿಕೆ ಪಡೆಯಿರಿ ಅಥವಾ ನೀವು ಪಡೆಯುವವರೆಗೂ ಮಾಸ್ಕ್ ಧರಿಸಿ” ಎಂದು ಬೈಡೆನ್ ಗುರುವಾರ ಹೇಳಿದರು.

“ಸಂಪೂರ್ಣವಾಗಿ ಲಸಿಕೆ ಪಡೆದ ಯಾರಾದರೂ ಮಾಸ್ಕ್ ಇಲ್ಲದೇ ಅಥವಾ ದೈಹಿಕ ದೂರವನ್ನು ಕಾಪಾಡಿಕೊಳ್ಳದೇ ದೊಡ್ಡ ಅಥವಾ ಸಣ್ಣ ಒಳಾಂಗಣ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸಬಹುದು” ಎಂದು ಸಿಡಿಸಿ ನಿರ್ದೇಶಕ ರೋಚೆಲ್ ವಾಲೆನ್ಸ್ಕಿ ಹೇಳಿದರು. ‘ನೀವು ಸಂಪೂರ್ಣವಾಗಿ ಲಸಿಕೆ ಪಡೆದಿದ್ದರೆ, ಸಾಂಕ್ರಾಮಿಕ ರೋಗದಿಂದಾಗಿ ನೀವು ಈವರೆಗೆ ನಿಲ್ಲಿಸಿದ್ದ ಎಲ್ಲ ಕೆಲಸಗಳನ್ನೂ ಮಾಡಬಹುದು’ ಎಂದಿದ್ದಾರೆ.

ಇದರ ಜೊತೆಗೇ ಸರ್ಕಾರ ಕೆಲವು ಎಚ್ಚರಿಕೆಗಳನ್ನೂ ವಿಧಿಸಿದೆ. ಮಾಸ್ಕ್‌ಗಳ ಯುಗವು ಇನ್ನೂ ಮುಗಿದಿಲ್ಲ. ಸಂಪೂರ್ಣವಾಗಿ ಲಸಿಕೆ ಪಡೆದವರೂ ಕೂಡ, ಎಲ್ಲಾ ವಿಮಾನಗಳು, ಬಸ್ಸುಗಳು, ರೈಲುಗಳು ಮತ್ತು ಇತರ ಸಾರ್ವಜನಿಕ ಸಾರಿಗೆಯಲ್ಲಿ ಮಾಸ್ಕ್ ಧರಿಸುವುದು ಉತ್ತಮ ಎಂದೂ ಹೇಳಿದೆ.

ಅಧ್ಯಕ್ಷ ಬಿಡೆನ್ ಪ್ರಕಾರ, ಶೇ. 70ರಷ್ಟು ವಯಸ್ಕ ಅಮೆರಿಕನ್ನರಿಗೆ ಜುಲೈ 4 ರೊಳಗೆ ಕನಿಷ್ಠ ಒಂದು ಲಸಿಕೆ ಶಾಟ್ ಲಣಿಸಲಿದೆ. ಇದು ಮತ್ತೊಂದು ಸಾಂಕೇತಿಕ ಮೈಲಿಗಲ್ಲು. ವೈರಸ್ ತೊಡೆದುಹಾಕುವ ಮೂಲಕ ದೇಶವು ತನ್ನ ವಾರ್ಷಿಕ ಸ್ವಾತಂತ್ರ‍್ಯ ದಿನಾಚರಣೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಮೊದಲ ಕೋವಿಡ್ ಅಲೆಯಲ್ಲಿ ತೀವ್ರವಾಗಿ ತತ್ತರಿಸಿದ್ದ ದೇಶಗಳು ಎಚ್ಚೆತ್ತುಕೊಂಡು ಎರಡನೇ ಅಲೆಯನ್ನು ಹಿಮ್ಮೆಟ್ಟಿಸುವ ಹೊತ್ತಿನಲ್ಲಿ ಈ ದೇಶವು ಮೂರನೇ ಅಲೆಗೆ ಸಿದ್ಧತೆ ಮಾಡಿಕೊಳ್ಳ ಬೇಕಿದೆ!

* ಪಿ.ಕೆ. ಮಲ್ಲನಗೌಡರ್


ಇದನ್ನೂ ಓದಿ: ಕಪ್ಪು ಹಣ, ಅನಿಲ್ ಅಂಬಾನಿ, ಮೋದಿ, ಅಕೌಂಟಿಗೆ 15 ಲಕ್ಷ, ರಫೇಲ್ ಡೀಲ್: ಒಂದು ಸ್ಫೋಟಕ ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...