ಬ್ರಿಟಾನಿಯಾ ಇಂಡಸ್ಟ್ರೀಸ್ ಮಂಡಳಿಯು ಕಾರ್ಯನಿರ್ವಾಹಕ ಮತ್ತು ಸ್ವತಂತ್ರ ನಿರ್ದೇಶಕರ ವಿಭಾಗದಲ್ಲಿ ಕಂಪನಿಯ ಹೆಚ್ಚುವರಿ ನಿರ್ದೇಶಕರಾಗಿ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಅವರನ್ನು ನೇಮಿಸಿದೆ. ಐದು ವರ್ಷಗಳ ಅವಧಿಗೆ ಮಾರ್ಚ್ 31 ರಿಂದ ಜಾರಿಗೆ ಬರುವಂತೆ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಲಾಗಿದೆ.
“2021 ರ ಮಾರ್ಚ್ 31 ರಂದು ನಡೆದ ಸಭೆಯಲ್ಲಿ ಕಂಪನಿಯ ನಿರ್ದೇಶಕರ ಮಂಡಳಿಯು ಮಾರ್ಚ್ 31 2021 ರಿಂದ ಜಾರಿಗೆ ಬರುವಂತೆ ಕಂಪನಿಯ ಷೇರುದಾರರ ಅನುಮೋದನೆಗೆ ಒಳಪಟ್ಟು 2026 ರ ಮಾರ್ಚ್ 30 ರವರೆಗೆ 5 ವರ್ಷಗಳ ಅವಧಿಗೆ ಕಾರ್ಯನಿರ್ವಾಹಕ ಮತ್ತು ಸ್ವತಂತ್ರ ನಿರ್ದೇಶಕರ ವಿಭಾಗದಲ್ಲಿ ಕಂಪನಿಯ ಹೆಚ್ಚುವರಿ ನಿರ್ದೇಶಕರಾಗಿ ಡಾ. ಉರ್ಜಿತ್ ಪಟೇಲ್ ಅವರನ್ನು ನೇಮಕ ಮಾಡಲು ಅನುಮೋದನೆ ನೀಡಿತು” ಎಂದು ಬ್ರಿಟಾನಿಯಾ ಇಂಡಸ್ಟ್ರೀಸ್ ಬುಧವಾರ ತಿಳಿಸಿದೆ.
ಇದನ್ನೂ ಓದಿ: ಅಮೆರಿಕವನ್ನು ಹಿಂದಿಕ್ಕಲಿದೆ ಚೀನಾ ಆರ್ಥಿಕತೆ; ಯಾಕೆ ಗೊತ್ತೇ?
ಉರ್ಜಿತ್ ಪಟೇಲ್ ಭಾರತೀಯ ಅರ್ಥಶಾಸ್ತ್ರಜ್ಞರಾಗಿದ್ದು, ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2016 ರಿಂದ 2018 ರವರೆಗೆ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಯುಪಿಎ ಸರ್ಕಾರ ಅವರನ್ನು ಆರ್‌ಬಿಐ ಉಪ ಗವರ್ನರ್ ಆಗಿ ನೇಮಕ ಮಾಡಿತ್ತು. ಈ ಸಮಯದಲ್ಲಿ ಹಣಕಾಸು ನೀತಿ, ಆರ್ಥಿಕ ಸಂಶೋಧನೆ, ಹಣಕಾಸು ಮಾರುಕಟ್ಟೆಗಳು, ಅಂಕಿಅಂಶಗಳು ಮತ್ತು ಮಾಹಿತಿ ನಿರ್ವಹಣೆಯನ್ನು ಮಾಡಿದ್ದರು.
ಇದರ ನಂತರ ಎನ್‌ಡಿಎ ಸರ್ಕಾರವು ಅವರನ್ನು ಗವರ್ನರ್ ಆಗಿ ನೇಮಿಸಿತ್ತು. 10 ಡಿಸೆಂಬರ್ 2018 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಭಾರತದ ಆರ್ಥಿಕತೆ ಕುಸಿಯುತ್ತಿದ್ದರೂ ಅದಾನಿ ಕಂಪನಿ ಮಾತ್ರ ಬೆಳೆಯುತ್ತಿರುವುದು ಹೇಗೆ?


