Homeಮುಖಪುಟಉಚಿತ ಕೊರೊನಾ ಲಸಿಕೆ ವಿವಾದ: ಬಿಹಾರೇತರ ರಾಜ್ಯದವರು ಬಾಂಗ್ಲಾದೇಶದವರೇ- ಶಿವಸೇನೆ ಪ್ರಶ್ನೆ

ಉಚಿತ ಕೊರೊನಾ ಲಸಿಕೆ ವಿವಾದ: ಬಿಹಾರೇತರ ರಾಜ್ಯದವರು ಬಾಂಗ್ಲಾದೇಶದವರೇ- ಶಿವಸೇನೆ ಪ್ರಶ್ನೆ

ಜಾತಿ, ಮತ, ಧರ್ಮದ ಮೇಲೆ ಜನರನ್ನು ವಿಭಜಿಸಬೇಡಿ ಎಂದು ಉದ್ದವ್ ಠಾಕ್ರೆ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ

- Advertisement -
- Advertisement -

ಬಿಹಾರದಲ್ಲಿ ಉಚಿತ ಕೊರೊನಾ ಲಸಿಕೆ ನೀಡುತ್ತೇವೆ ಎಂದು ಬಿಜೆಪಿ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ್ದು, ಇತರ ರಾಜ್ಯದವರು ಬಾಂಗ್ಲಾದೇಶ ಅಥವಾ ಕಝಾಕಿಸ್ತಾನ್ ಮೂಲದವರು ಎಂದು ಬಿಜೆಪಿ ಭಾವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾದರ್‌ನಲ್ಲಿ ನಡೆದ ಶಿವಸೇನೆಯ ವಾರ್ಷಿಕ ದಸರಾ ರ್‍ಯಾಲಿಯಲ್ಲಿ ಮಾತನಾಡಿದ ಉದ್ದವ್ ಠಾಕ್ರೆ, “ನೀವು ಬಿಹಾರದಲ್ಲಿ ಉಚಿತ ಕೊರೊನಾ ಲಸಿಕೆ ನೀಡುವ ಭರವಸೆ ನೀಡಿದ್ದೀರಿ, ಇತರ ರಾಜ್ಯಗಳ ಜನರು ಬಾಂಗ್ಲಾದೇಶ ಅಥವಾ ಕಝಕಿಸ್ತಾನದ ಜನರೆ. ನೀವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದೀರಿ, ಈ ಬಗ್ಗೆ ನಿಮಗೆ ನಾಚಿಕೆಯಾಗಬೇಕು” ಎಂದು ಅವರು ಹೇಳಿದರು.

ಇದನ್ನೂ ಓದಿ: ಗೋವಾದಲ್ಲಿ ಬೀಫ್ ಬ್ಯಾನ್ ಯಾಕಿಲ್ಲ, ಇದ ನಿಮ್ಮ ಹಿಂದುತ್ವ?: ಉದ್ಧವ್ ಠಾಕ್ರೆ ವಾಗ್ದಾಳಿ

ನಟಿ ಕಂಗನಾ ರಣಾವತ್ ವಿರುದ್ಧದ ಕೂಡಾ ಪರೋಕ್ಷವಾಗಿ ದಾಳಿ ಮಾಡಿದ ಠಾಕ್ರೆ, ಕೆಲವರು ಬ್ರೆಡ್ ಮತ್ತು ಬೆಣ್ಣೆಗಾಗಿ ಮುಂಬೈಗೆ ಬರುತ್ತಾರೆ ಮತ್ತು ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಎಂದು ಕರೆದು ನಗರವನ್ನು ನಿಂದಿಸುತ್ತಾರೆ ಎಂದು ಹೇಳಿದ್ದಾರೆ.

“ಬಿಹಾರದ ಮಗನ ನ್ಯಾಯಕ್ಕಾಗಿ ಕೂಗುತ್ತಿರುವವರು ಮಹಾರಾಷ್ಟ್ರದ ಮಗನ ಚಾರಿತ್ಯ್ರಹರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ” ಎಂದ ಉದ್ದವ್ ಠಾಕ್ರೆ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಮ್ಮ ಮಗ ಆದಿತ್ಯ ಠಾಕ್ರೆ ವಿರುದ್ಧದ ಆರೋಪಗಳ ಬಗ್ಗೆ ಮೌನ ಮುರಿದರು.

ಪ್ರಸ್ತುತ ಜಿಎಸ್ಟಿ ವ್ಯವಸ್ಥೆಯನ್ನು ಮರುಪರಿಶೀಲಿಸುವ ಸಮಯ ಬಂದಿದೆ  ಎಂದ ಉದ್ದವ್ ಠಾಕ್ರೆ, ಈ ವ್ಯವಸ್ಥೆಯಿಂದ ರಾಜ್ಯಗಳು ಪ್ರಯೋಜನ ಪಡೆಯದ ಕಾರಣ ಅಗತ್ಯವಿದ್ದಲ್ಲಿ ಅದನ್ನು ಮಾರ್ಪಡಿಸುವ ಸಮಯ ಬಂದಿದೆ. ನಾವು (ಮಹಾರಾಷ್ಟ್ರ) ಜಿಎಸ್ಟಿಯ 38,000 ಕೋಟಿ ರೂಗಳನ್ನು ಇನ್ನೂ ಪಡೆದಿಲ್ಲ” ಎಂದು ಅವರು ಹೇಳಿದರು.

ಜಾತಿ, ಮತ, ಧರ್ಮದ ಮೇಲೆ ಜನರನ್ನು ವಿಭಜಿಸಬೇಡಿ ಎಂದು ಠಾಕ್ರೆ ಬಿಜೆಪಿಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಬಿಜೆಪಿಯಿಂದ ದೂರ ಸರಿದಿದ್ದೇನೆಯೆ ಹೊರತು ಹಿಂದುತ್ವದಿಂದ ಅಲ್ಲ: ಉದ್ಧವ್ ಠಾಕ್ರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಮತ ಚಲಾಯಿಸಬಹುದೇ?

0
'ಚಾಲೆಂಜ್ ವೋಟ್‌ ಮತ್ತು ಟೆಂಡರ್ಡ್‌ ವೋಟ್‌' (Challenge vote and Tender vote) ಕುರಿತು ವಿವರಿಸಿದ ಚುನಾವಣಾ ಜಾಗೃತಿಯದ್ದು ಎನ್ನಲಾದ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಸಂದೇಶದಲ್ಲಿ ಈ ಕೆಳಗಿನಂತೆ ಬರೆಯಲಾಗಿದೆ.. "ನೀವು ಮತಗಟ್ಟೆಗೆ...