Homeಮುಖಪುಟಗೋವಾ ಗೆದ್ದರೆ ಅಯೋಧ್ಯೆ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಉಚಿತ ತೀರ್ಥ ಯಾತ್ರೆ: ಕೇಜ್ರಿವಾಲ್

ಗೋವಾ ಗೆದ್ದರೆ ಅಯೋಧ್ಯೆ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಉಚಿತ ತೀರ್ಥ ಯಾತ್ರೆ: ಕೇಜ್ರಿವಾಲ್

- Advertisement -

2022 ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಅಯೋಧ್ಯೆ ಮತ್ತು ಇತರ ಧಾರ್ಮಿಕ ಕೇಂದ್ರಗಳಿಗೆ ಉಚಿತ ತೀರ್ಥಯಾತ್ರೆಯನ್ನು ಏರ್ಪಡಿಸಲಾಗುವುದು ಎಂದು ಆಮ್‌ ಆದ್ಮಿ ಪಕ್ಷ(ಎಎಪಿ)ದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಭರವಸೆ ನೀಡಿದ್ದಾರೆ.

“ಗೋವಾದಲ್ಲಿ ನಾವು ಸರ್ಕಾರ ರಚಿಸಿದರೆ ಹಿಂದೂಗಳಿಗೆ ಅಯೋಧ್ಯೆಗೆ, ಕ್ರಿಶ್ಚಿಯನ್ನರಿಗೆ ವೆಲಂಕಣಿಗೆ ಉಚಿತ ಯಾತ್ರೆಯನ್ನು ಏರ್ಪಡಿಸುತ್ತೇವೆ. ಮುಸ್ಲಿಮರಿಗೆ ನಾವು ಅಜ್ಮೀರ್ ಷರೀಫ್ ಮತ್ತು ಸಾಯಿಬಾಬಾರನ್ನು ಗೌರವಿಸುವವರಿಗೆ ಶಿರಡಿ ದೇವಸ್ಥಾನಕ್ಕೆ ಉಚಿತ ಪ್ರವಾಸವನ್ನು ಒದಗಿಸುತ್ತೇವೆ” ಎಂದು ಕೇಜ್ರಿವಾಲ್ ಗೋವಾದಲ್ಲಿ ಹೇಳಿದ್ದಾರೆ.

ಇದು ಗೋವಾ ರಾಜ್ಯದ ಜನತೆಗೆ ಎಎಪಿ ನೀಡುತ್ತಿರುವ ಮೂರನೇ ಗ್ಯಾರಂಟಿ ಎಂದು ಕೇಜ್ರಿವಾಲ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಗೋವಾ ಚುನಾವಣೆ: ಉಚಿತ ವಿದ್ಯುತ್, ಉದ್ಯೋಗ ಖಾತ್ರಿ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್

ಈ ಹಿಂದೆ ಎಎಪಿ, ಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯರಿಗೆ ಉದ್ಯೋಗ ಮತ್ತು ಅಲ್ಲಿಯವರೆಗೆ ತಿಂಗಳಿಗೆ 5,000 ರೂಪಾಯಿ ನಿರುದ್ಯೋಗ ಭತ್ಯೆ ನೀಡುವುದಾಗಿ ಭರವಸೆ ನೀಡಿತ್ತು.

ಈ ಹಿಂದೆ ಗೋವಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ಗೋವಾದಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಮತ್ತು ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ್ದರು.

ಉಚಿತ ತೀರ್ಥಯಾತ್ರೆ ಹೊಸ ವಿಷಯವೇನಲ್ಲ ಎಂದು ಹೇಳಿರುವ ಕೇಜ್ರಿವಾಲ್‌, “ತಮ್ಮ ಸರ್ಕಾರವು ದೆಹಲಿಯಲ್ಲಿ ಸಿಎಂ ತೀರ್ಥಯಾತ್ರೆ ಯೋಜನೆಯನ್ನು ಪರಿಚಯಿಸಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭ್ರಷ್ಟ, ಕೋಮುವಾದಿ ಬಿಜೆಪಿ ಸೋಲಿಸೋಣ: ಮಮತಾ ಬ್ಯಾನರ್ಜಿ ಜೊತೆ ಮೈತ್ರಿಗೆ ಮುಂದಾದ ಗೋವಾ ಫಾರ್ವಾಡ್ ಪಾರ್ಟಿ

“ಮೊದಲ ಎರಡು ವರ್ಷಗಳಲ್ಲಿ, 35,000 ಕ್ಕೂ ಹೆಚ್ಚು ಜನರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ. ನಾವು ಹವಾನಿಯಂತ್ರಿತ ರೈಲುಗಳಲ್ಲಿ ಜನರನ್ನು ಯಾತ್ರಾ ಸ್ಥಳಗಳಿಗೆ ಕರೆದೊಯ್ಯುತ್ತೇವೆ. ಊಟ ಸೇರಿದಂತೆ ಅವರ ಎಲ್ಲ ಅಗತ್ಯಗಳನ್ನು ನಾವು ನೋಡಿಕೊಳ್ಳುತ್ತೇವೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

“ಗೋವಾದಲ್ಲಿ ಮೊದಲ ಬಾರಿಗೆ ಪ್ರಾಮಾಣಿಕ ಸರ್ಕಾರವನ್ನು ಪಕ್ಷವೂ ನೀಡಲಿದೆ. ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನೀಡಿದ ಎಲ್ಲಾ ಭರವಸೆಗಳನ್ನು ನಾವು ಈಡೇರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿರುದ್ಧ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ್ದರೂ ಅವರನ್ನು ರಕ್ಷಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಪ್ರತಿದಿನ ಕರ್ನಾಟಕದಿಂದ ಕಳುಹಿಸಲ್ಪಟ್ಟ 2,100 ಕೆಜಿ ಗೋಮಾಂಸವನ್ನು ಗೋವಾದಲ್ಲಿ ಸೇವಿಸುತ್ತಾರೆ: ಸಿಎಂ

“ನಾವು ಚುನಾವಣಾ ಖಾತರಿಗಳನ್ನು ಘೋಷಿಸಿದಾಗ, ನಾನು ಎಲ್ಲಿಂದ ಹಣವನ್ನು ಪಡೆಯುತ್ತೇನೆ ಎಂದು ಜನರು ನನ್ನನ್ನು ಕೇಳುತ್ತಾರೆ. ಇದಕ್ಕೆ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಉತ್ತರ ನೀಡಿದ್ದಾರೆ” ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.

ಅಕ್ಟೋಬರ್ 2019 ರಿಂದ ಆಗಸ್ಟ್ 2020 ರವರೆಗೆ ಗೋವಾದ ರಾಜ್ಯಪಾಲ ಆಗಿದ್ದ ಸತ್ಯಪಾಲ್ ಮಲಿಕ್ ಅವರು ದೂರದರ್ಶನ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಗೋವಾ ಸರ್ಕಾರದಲ್ಲಿ ಭ್ರಷ್ಟಾಚಾರವಿದೆ ಎಂದು ಹೇಳಿದ್ದು, ಮುಖ್ಯಮಂತ್ರಿ ವಿರುದ್ದ ಆರೋಪ ಮಾಡಿದ್ದರು.

ಕಳೆದ 75 ವರ್ಷಗಳ ಸ್ವಾತಂತ್ರ ಭಾರತದಲ್ಲಿ ಯಾವುದೇ ರಾಜ್ಯಪಾಲರು ತಮ್ಮದೇ ಸರ್ಕಾರದ ವಿರುದ್ಧ ಇಂತಹ ಆರೋಪ ಮಾಡಿರುವುದು ಇದುವೆ ಮೊದಲು. ಗೋವಾದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಲು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ತಪ್ಪು ನೀತಿಗಳೇ ಕಾರಣ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಯಾರು ಗೋವಾವನ್ನು ಗೆಲ್ಲುತ್ತಾರೊ, ಅವರು ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಾರೆ: ಪಿ. ಚಿದಂಬರಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿರೋಧ ಮಾಡಿದವರು ಈಗ ಉಚಿತ ತೀರ್ಥ ಯಾತ್ರೆಗೆ ಕಳಿಸಿ ಕೊಡೋದು ಅಂದರೆ ಈ ಕೇಜ್ರಿವಾಲ್ ಎಂಥ ಅವಕಾಶ ವಾದಿ ಎನ್ನುವ ವಿಚಾರ ತಿಳಿಯಬಹುದು

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial