ಕರ್ನಾಟಕದಿಂದ ಗೋವಾಕ್ಕೆ ಪ್ರತಿದಿನ 2,100 ಕೆಜಿ ಗೋಮಾಂಸ ರವಾನೆ: ಸಿಎಂ | Naanu gauri
Photo Courtesy: Beef Magazine

ಕರ್ನಾಟಕದ ಮಾಂಸ ವ್ಯಾಪಾರಿಗಳಿಂದ ಪಡೆಯಲಾದ 2,100 ಕೆಜಿ ಗೋಮಾಂಸವನ್ನು ಗೋವಾದಲ್ಲಿ ಪ್ರತಿದಿನ ಸೇವಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಂಗಳವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್‌ ವರದಿ ಮಾಡಿದೆ.

ಗೋವಾ ಶಾಸಕಾಂಗ ಸಭೆಯಲ್ಲಿ ನಡೆಯುತ್ತಿರುವ ಎರಡು ದಿನಗಳ ಅಧಿವೇಶನದಲ್ಲಿ ಅವರು ಇದನ್ನು ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ಅಲೆಕ್ಸೊ ರೆಜಿನಾಲ್ಡೊ ಅವರು ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸಿದ್ದರು.

ಕಾಂಗ್ರೆಸ್‌ ಶಾಸಕನ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ ಸಾವಂತ್, “ಕಳೆದ ಆರು ತಿಂಗಳಲ್ಲಿ 388 ಟನ್ ಗೋಮಾಂಸವನ್ನು ಕರ್ನಾಟಕದಿಂದ ಖರೀದಿಸಲಾಗಿದೆ. ಈ ಗೋಮಾಂಸವನ್ನು ದನಗಳು ಮತ್ತು ಎಮ್ಮೆ(cattle and buffalo)ಯಿಂದ ಪಡೆಯಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗೋಮಾಂಸ ತಿನ್ನುವವರ ಡಿಎನ್‌ಎ ನಮ್ಮಲಿಲ್ಲ- RSS ಮುಖ್ಯಸ್ಥರ ಹೇಳಿಕೆಗೆ ವಿಎಚ್‌ಪಿ ಸದಸ್ಯೆ ಸಾಧ್ವಿ ತಿರುಗೇಟು

“ಸಕ್ಷಮ ಅಧಿಕಾರಿಗಳು ಸಂಗ್ರಹಿಸಿದ ಮಾಂಸ ತಪಾಸಣೆ ಶುಲ್ಕದ ಆಧಾರದ ಮೇಲೆ, 2,120 ಕೆಜಿ ಗೋಮಾಂಸವನ್ನು ಕರ್ನಾಟಕದಿಂದ ಪ್ರತಿನಿತ್ಯ ಬಳಕೆಗಾಗಿ ಪಡೆಯಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಇತ್ತೀಚೆಗೆ ಗೋಹತ್ಯೆ ನಿಷೇಧ ಕಾನೂನು ಅಂಗೀಕರಿಸಿದ ನಂತರ ಗೋವಾದಲ್ಲಿ ಹಲವಾರು ತಿಂಗಳು ಗೋಮಾಂಸ ಕೊರತೆಯನ್ನು ಉಂಟಾಗಿತ್ತು ಎಂದು ಡೆಕ್ಕನ್ ಹೆರಾಲ್ಡ್‌ ಹೇಳಿದೆ.

ಮಹಾರಾಷ್ಟ್ರದಲ್ಲಿ ಕೂಡಾ ಇದೇ ರೀತಿಯ ಕಾನೂನು ಜಾರಿಗೆ ಬಂದ ನಂತರ, ಗೋವಾಕ್ಕೆ ತಾಜಾ ಗೋಮಾಂಸ ಮತ್ತು ಜಾನುವಾರುಗಳನ್ನು ಪೂರೈಕೆ ಮಾಡುತ್ತಿರುವ ಏಕೈಕ ಪ್ರಮುಖ ರಾಜ್ಯ ಕರ್ನಾಟಕವಾಗಿತ್ತು. ಗೋವಾ ಜನಸಂಖ್ಯೆಯ 30% ಕ್ಕಿಂತ ಹೆಚ್ಚು ಜನರು ಗೋಮಾಂಸವನ್ನು ಸೇವಿಸುತ್ತಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ’ಗೋಮಾಂಸ ರಾಷ್ಟ್ರೀಯ ಆಹಾರ’ ಎಂದ ಬಿಜೆಪಿ ಅಭ್ಯರ್ಥಿ 

ಇದನ್ನೂ ಓದಿ: ಕರ್ನಾಟಕದಿಂದ ಗೋಮಾಂಸ ಆಮದು ಮಾಡಿಕೊಳ್ಳುವುದಾಗಿ ಗೋವಾ ಸಿಎಂ ಹೇಳಿಕೆ: ಕಾಂಗ್ರೆಸ್ ಟೀಕೆ

LEAVE A REPLY

Please enter your comment!
Please enter your name here