ಕೋಮು ಪ್ರಚೋದನೆ ಮಾಡಿದ ಸೂಲಿಬೆಲೆ: ಟ್ವಿಟರ್‌ನಲ್ಲಿ ಬುದ್ದಿವಾದ ಹೇಳಿದ ಪೊಲೀಸ್‌ ಅಧಿಕಾರಿ | Naanu Gauri

ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆ ಅವರು ‘ಈದ್‌ ಮೀಲಾದ್‌‌’ ರ್‍ಯಾಲಿಯ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ, ಕೋಮು ಪ್ರಚೋದನೆಗೆ ಯತ್ನಿಸಿರುವ ಘಟನೆ ಬುಧವಾರ ನಡೆದಿದೆ. ಆದರೆ ಇದಕ್ಕೆ ವ್ಯಾಪಕ ಆಕ್ರೋಶ ಕೂಡಾ ವ್ಯಕ್ತವಾಗಿದ್ದು, ಬೆಂಗಳೂರಿನ ಮಾಜಿ ಪೊಲೀಸ್‌ ಕಮೀಷನರ್‌, ಪ್ರಸ್ತುತ ರೈಲ್ವೇ ADGP ಆಗಿರುವ ಭಾಸ್ಕರ್‌ ರಾವ್ ಅವರು ಟ್ವಿಟರ್‌ನಲ್ಲೆ ಅವರಿಗೆ ಬುದ್ದಿವಾದ ಹೇಳಿದ್ದಾರೆ.

ಮಂಗಳವಾರದಂದು ದೇಶದಾದ್ಯಂತ ಪ್ರವಾದಿ ಮೊಹಮ್ಮದರ ಹುಟ್ಟು ಹಬ್ಬವನ್ನು (ಈದ್‌ ಮಿಲಾದ್‌) ಆಚರಿಸಲಾಗಿತ್ತು. ಈ ಆಚರಣೆಯ ವೇಳೆ ಸಾಮಾನ್ಯವಾಗಿ ಮೆರವಣಿಗೆಯನ್ನು ನಡೆಸಲಾಗುತ್ತದೆ. ಇಂತಹದ್ದೇ ಮೆರವಣಿಗೆಯ ವಿಡಿಯೊವೊಂದನ್ನು ಸೂಲಿಬೆಲೆ ತನ್ನ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ ಬಗ್ಗೆ ಅಪಪ್ರಚಾರ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲು

ವಿಡಿಯೊದಲ್ಲಿ, ಜನರು ಮೆರವಣಿಗೆ ಹೊರಟಿದ್ದು, ಅದರಲ್ಲಿ ಸಾಧಾರಣವಾಗಿ ಈದ್‌ ಮಿಲಾದ್‌ ದಿನ ಬಳಸುವ ಹಸಿರು ಧ್ವಜವನ್ನು ಬಳಸಲಾಗಿದೆ. ಅದರಲ್ಲಿ ಯಾವುದೇ ಸಂಘಟನೆಯದ್ದೋ, ಪಕ್ಷದ್ದೋ ಧ್ವಜ ಇರಲಿಲ್ಲ. ಮೆರವಣಿಗೆಯ ಪಕ್ಕದಲ್ಲೇ ಇಬ್ಬರು ಪುಟ್ಟ ಮಕ್ಕಳು ಕೇಸರಿ ಧ್ವಜವನ್ನು ಬೀಸಿಕೊಂಡು ಸೈಕಲ್ ಹೊರಡುತ್ತಾರೆ. ಅವರಿಗೆ ಯಾರು ಕೂಡಾ ತೊಂದರೆ ಮಾಡುವುದಿಲ್ಲ, ಜೊತೆಗೆ ಮಕ್ಕಳಿಬ್ಬರು ಸಹಜವಾಗಿ ಧ್ವಜಗಳನ್ನು ಬೀಸಿಕೊಂಡು ಹೋಗುತ್ತಾರೆ.

ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆ, “ತುಂಬಾ ಜನರಿದ್ದಾರೆ ಎಂದು ಹೆದರಬೇಡಿ. ಕುರಿಗಳು ಗುಂಪಿನಲ್ಲಿ‌ ಹೋಗುತ್ತವೆ, ಸಿಂಹ ಏಕಾಂಗಿಯಾಗಿ ನಡೆಯುತ್ತದೆ” ಎಂದು ಬರೆದಿದ್ದಾರೆ. ಇಲ್ಲಿ ಮೆರವಣಿಗೆ ಹೊರಟಿರುವ ಜನರನ್ನು ಅವರು ಹಂಗಿಸಿ ಬರೆದಿದ್ದಾರೆ.

ಅವರ ಪೋಸ್ಟ್‌ಗೆ ಟ್ವಿಟರ್‌ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಬೆಂಗಳೂರಿನ ಮಾಜಿ ಪೊಲೀಸ್‌ ಕಮೀಷನರ್‌, ಪ್ರಸ್ತುತ ರೈಲ್ವೇ ADGP ಆಗಿರುವ ಭಾಸ್ಕರ್‌ ರಾವ್ ಅವರು ಬುದ್ದಿವಾದ ಹೇಳಿದ್ದಾರೆ.

ಇದನ್ನೂ ಓದಿ: ಇಸ್ಲಾಂ ಮತ್ತು ಅಂಬೇಡ್ಕರ್‌‌ ಬಗೆಗಿನ ಸುಳ್ಳುಗಳು; ಮಹಾ ಮಾನವತಾವಾದಿಗೆ ‘ಸೂಲಿಬೆಲೆ’ ಮಾಡಿದ ಅವಮಾನ!

ಭಾಸ್ಕರ್‌ ರಾವ್ ಅವರು, “ಬಡ ಮುಗ್ಧ ಮಕ್ಕಳನ್ನು ಪ್ರಚೋದನೆಗೆ ಬಳಸಬಾರದು. ನೀವು ಯಾವ ಸಂದೇಶವನ್ನು ಹೇಳಲು ಬಯಸುತ್ತಿದ್ದೀರಿ.ನೀವೊಬ್ಬರು ಐಕಾನ್ ಆಗಿದ್ದು, ದಯವಿಟ್ಟು ಧನಾತ್ಮಕ ಪದಗಳನ್ನು ಬಳಸಿ” ಎಂದು ಹೇಳಿದ್ದಾರೆ.

ಭಾಸ್ಕರ್‌ ರಾಮ್ ಅವರ ರೀಟ್ವೀಟ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆಯಾದರೂ, ಸೂಲಿಬೆಲೆ ಅವರನ್ನು ‘ಐಕಾನ್’ ಎಂದು ಸಂಬೋಧಿಸಿದ್ದಕ್ಕೆ ಆಕ್ಷೇಪ ಕೂಡಾ ವ್ಯಕ್ತವಾಗಿದೆ.

ಇದನ್ನೂ ಓದಿ: ನಿಮ್ಮ ಸುಳ್ಳು ನಮಗೆ ಬೇಡ: ಸೂಲಿಬೆಲೆ ವಿರುದ್ಧ ಗೋಬ್ಯಾಕ್ ಎಂದ ಶಿವಮೊಗ್ಗ ಯುವಜನರು

ಹರೀಶ್ ಎನ್ನುವವರು, “ಮಾನ್ಯ ಭಾಸ್ಕರ್ ರಾವ್ ಸರ್, ನಿಮ್ಮ ಮೇಲೆ ಹಾಗೂ ನಿಮ್ಮ ಕರ್ತವ್ಯ ನಿಷ್ಠೆ ಮೇಲೆ ನಮಗೆ ಅಪಾರ ಗೌರವವಿದೆ. ದಯವಿಟ್ಟು ಇಂಥವರನ್ನು ICON ಎಂದು ಸಂಭೋದಿಸ ಬೇಡಿ. ಸುಳ್ಳೇ ಅವರ ಸರ್ವಸ್ವ. ಮಾರದಿಗಾಗಿ ಒಂದು ವಿಡಿಯೋ ಹಾಕಿದ್ದೇನೆ ನೋಡಿ ಆನಂದಿಸಿ. ಮತ್ತಷ್ಟು ವಿಡಿಯೋಗಳಿಗಾಗಿ ಹೆಂಗ್ ಪುಂಗ್ಲಿ ವೀಡಿಯೋಸ್ ಎಂದು ಸರ್ಚ್ ಮಾಡಿ ನೋಡಿ ಆನಂದಿಸಿ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಮಿಥುನ್ ಶೇಟ್ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಲಿಂಗಾಯಿತರಾಗಲು ಹೊರಟಿದ್ದು, ಹಿಂಜರಿದಿದ್ದು

LEAVE A REPLY

Please enter your comment!
Please enter your name here