ಯಾರು ಗೋವಾವನ್ನು ಗೆಲ್ಲುತ್ತಾರೊ, ಅವರು ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಾರೆ: ಪಿ. ಚಿದಂಬರಂ | Naanu Gauri

ಗೋವಾವನ್ನು ಗೆಲ್ಲುವವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಕ್ಕೂಟ ಸರ್ಕಾರವಾಗಿ ಅಧಿಕಾರ ಹಿಡಿಯುತ್ತಾರೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು 2022 ರ ಗೋವಾ ವಿಧಾನಸಭಾ ಚುನಾವಣೆಯ ಕಾಂಗ್ರೆಸ್‌ ಪಕ್ಷದ ಹಿರಿಯ ವೀಕ್ಷಕ ಪಿ. ಚಿದಂಬರಂ ಗುರುವಾರ ಹೇಳಿದ್ದಾರೆ.

ಪಣಜಿಯಲ್ಲಿ ಪಕ್ಷದ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಇತಿಹಾಸದ ಬಗ್ಗೆ ಒಂದು ವಿಷಯವನ್ನು ಹೇಳುತ್ತೇನೆ. ಯಾರು ಗೋವಾವನ್ನು ಗೆಲ್ಲುತ್ತಾರೋ ಅವರು ಮುಂದೆ ದೆಹಲಿಯನ್ನು ಗೆಲ್ಲುತ್ತಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಪಕ್ಷ ನನಗೆ ದ್ರೋಹ ಮಾಡುತ್ತಿದೆ’: ರಾಜೀನಾಮೆಗೆ ಸಜ್ಜಾದ ಬಿಜೆಪಿ ಶಾಸಕ ಮಸಾಲೆ ಜಯರಾಮ

“2007 ರಲ್ಲಿ ನಾವು ಗೋವಾವನ್ನು ಗೆದ್ದೆವು, ನಂತರ 2009 ರಲ್ಲಿ ನಾವು ದೆಹಲಿಯನ್ನು ಗೆದ್ದೆವು. 2012 ರಲ್ಲಿ ನಾವು ದುರದೃಷ್ಟವಶಾತ್ ಗೋವನ್ನು ಕಳೆದುಕೊಂಡೆವು, ಇದರ ಜೊತೆಗೆ 2014 ರಲ್ಲಿ ನಾವು ದೆಹಲಿಯನ್ನು ಕಳೆದುಕೊಂಡೆವು” ಎಂದು ಅವರು ಹೇಳಿದ್ದಾರೆ.

“2017 ರಲ್ಲಿ ಕಾಂಗ್ರೆಸ್‌ ಗೋವನ್ನು ಗೆದ್ದಿತ್ತಾದರೂ, ನಾವು ಅಧಿಕಾರ ಹಿಡಿಯಲು ಆಗದೆ ರಾಜ್ಯವನ್ನು ಕಳೆದುಕೊಂಡರು. ಅದೇ ರೀತಿ 2019 ರಲ್ಲಿ ನಾವು ದೆಹಲಿಯನ್ನು ಕಳೆದುಕೊಂಡೆವು” ಎಂದು ಚಿದಂಬರಂ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದಂತಹ ಪ್ರತಿಸ್ಪರ್ಧಿಗಳನ್ನು ಉಲ್ಲೇಖಿಸಿದ ಅವರು, ಗೋವಾವು ಇತರರಿಂದ ಆಕ್ರಮಣ ಮಾಡಲು ಇದು ‘ವಸಾಹತು’ ಅಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

“2022 ರಲ್ಲಿ ಗೋವಾವನ್ನು ಗೆಲ್ಲಲು ಮತ್ತು 2024 ರಲ್ಲಿ ರಾಷ್ಟ್ರದ ಆಡಳಿತ ಪಕ್ಷವಾಗಿ ಕಾಂಗ್ರೆಸ್‌ ಅನ್ನು ನೋಡಲು, ಪಕ್ಷವು ಇಲ್ಲಿಯ ಜನರ ಮನಸ್ಸನ್ನು ಗೆಲ್ಲುವುದು ಬಹಳ ಮುಖ್ಯ” ಎಂದು ಅವರು ಹೇಳಿದ್ದಾರೆ.

“ಗೋವಾ ಯಾವುದೇ ಆಕ್ರಮಣಕಾರರ ರಾಜಕೀಯ ವಸಾಹತು ಆಗಬಾರದು. ಗೋವಾವನ್ನು ಗೋವಾನ್ನರು ನಿಯಂತ್ರಿಸಬೇಕು. ಗೋವಾವನ್ನು, ಗೋವಾದ ಜನರು, ಗೋವಾದ ಜನರಿಗಾಗಿ ಅಧಿಕಾರ ನಡೆಸಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 2024ಕ್ಕೆ ರಾವಣನನ್ನು ಸಂಪೂರ್ಣವಾಗಿ ಸುಡುತ್ತೇವೆ: ಶಿವಸೇನೆ ಸಂಸದ ಸಂಜಯ್ ರಾವತ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here