Homeಮುಖಪುಟಯುಪಿ ಚುನಾವಣೆ-2022: ಮಹಿಳೆಯರಿಗೆ ಮತ್ತೇ ಭರ್ಜರಿ ಭರವಸೆ ನೀಡಿದ ಪ್ರಿಯಾಂಕ ಗಾಂಧಿ

ಯುಪಿ ಚುನಾವಣೆ-2022: ಮಹಿಳೆಯರಿಗೆ ಮತ್ತೇ ಭರ್ಜರಿ ಭರವಸೆ ನೀಡಿದ ಪ್ರಿಯಾಂಕ ಗಾಂಧಿ

- Advertisement -
- Advertisement -

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಪಕ್ಷಗಳು ಸಜ್ಜಾಗುತ್ತಿದೆ. ಈ ವೇಳೆ ರಾಜ್ಯದಲ್ಲಿ ಮತ್ತೇ ಪುಟಿದೇಳುವ ಪ್ರಯತ್ನದಲ್ಲಿ ಕಾಂಗ್ರೆಸ್ ಇದೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ರಾಜ್ಯದಾದ್ಯಂತ ಪಕ್ಷವನ್ನು ಸಂಘಟಿಸುವತ್ತ ಗಮನ ಹರಿಸಿದ್ದಾರೆ. ಜೊತೆಗೆ ಮುಂದಿನ ಚುನಾವಣೆಯ ತಯಾರಿಗಾಗಿ ಜನಪ್ರಿಯ ಭರವಸೆಗಳನ್ನು ರಾಜ್ಯದ ಜನತೆಗೆ ನೀಡುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಐದು ಸರ್ಕಾರಿ ಉದ್ಯೋಗಗಳಲ್ಲಿ ಎರಡು ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿರುವುದಾಗಿ ಘೋಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ವಾರ್ಷಿಕವಾಗಿ 3 ಅಡುಗೆ ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುತ್ತೇವೆ ಎಂದು ಅವರು ಘೋಷಿಸಿದ್ದಾರೆ.

ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆಯನ್ನು ಪ್ರಿಯಾಂಕ ಗಾಂಧಿ ರಾಜ್ಯ ಮಹಿಳೆಯರಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಯುಪಿಯಲ್ಲಿ ಪಕ್ಷ ಅಧಿಕಾರಕ್ಕೇರಿದರೆ 10 ಲಕ್ಷ ರೂ. ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ: ಪ್ರಿಯಾಂಕಾ ಗಾಂಧಿ

ಪ್ರಿಯಾಂಕ ಈ ಹಿಂದೆ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಜೊತಗೆ ರಾಜ್ಯದ ಚುನಾವಣೆಯಲ್ಲಿ ಪಕ್ಷವು 40% ಮಹಿಳೆಯರಿಗೆ  ಟಿಕೆಟ್ ನೀಡುವುದಾಗಿ ಘೋಷಿಸಿದ್ದರು. ಪಕ್ಷವು ಪ್ರಣಾಳಿಕೆ ಸಮಿತಿ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದ್ದರು.

ಇಷ್ಟೇ ಅಲ್ಲದೆ ಅವರು, ಕಳೆದ ಶನಿವಾರದಂದು ರೈತರ ಸಾಲ ಮನ್ನಾ ಮತ್ತು 20 ಲಕ್ಷ ಜನರಿಗೆ ಉದ್ಯೋಗ ಸೇರಿದಂತೆ ಏಳು ಭರವಸೆಗಳನ್ನು ಜನತೆಯ ಮುಂದಿಟ್ಟಿದ್ದರು. ಗೋಧಿ ಮತ್ತು ಭತ್ತವನ್ನು ಕ್ವಿಂಟಾಲ್‌ಗೆ 2,500 ರೂ.ಗೆ ಮತ್ತು ಕಬ್ಬಿಗೆ ಕ್ವಿಂಟಾಲ್‌ಗೆ 400 ರೂ. ನೀಡಿ ಖರೀದಿಸುವುದಾಗಿ ಅವರು ತಮ್ಮ ಭರವಸೆಗಳಲ್ಲಿ ಘೋಷಿಸಿದ್ದಾರೆ.

10 ಲಕ್ಷ ರೂಪಾಯಿವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ವಿದ್ಯುತ್ ಬಿಲ್ ದರ ಅರ್ಧದಷ್ಟು ಕಡಿತಗೊಳಿಸುವುದು ಮತ್ತು ಸಾಂಕ್ರಾಮಿಕದಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕುಟುಂಬಗಳಿಗೆ 25,000 ರೂಪಾಯಿಗಳನ್ನು ನೀಡುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಯುಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದರೆ ಪದವಿ ವಿದ್ಯಾರ್ಥಿನಿಯರಿಗೆ ‘ಸ್ಕೂಟಿ’: ಪ್ರಿಯಾಂಕ ಗಾಂಧಿ ಮತ್ತೊಂದು ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪ್ರಿಯಾಂಕ ವಾದ್ರ ಚುನಾವಣಾ ಪ್ರಣಾಳಿಕೆ ಯಲ್ಲಿ ಒಂದು ಕೆಜಿ ಚಿನ್ನ ಒಬ್ಬರಿಗೆ ಬೇಕಾದರೂ ಕೊಡ್ತೀವಿ ,ಕಾರು ಸಹ ಕೊಡ್ತೀವಿ ಅಂತ ಹೇಳಿದರೂ ಆಶ್ಚರ್ಯ ಇಲ್ಲಾ ಬಿಡಿ ,ಬಿಟ್ಟಿ ಬರವಸೆಗಳ ಹೀಡೀರಿಕೆ ಮಾಡಲು ಇವರ ಗಂಡ ವಾದ್ರ ಅಕ್ರಮವಾಗಿ ಸಂಪಾದನೆ ಮಾಡಿರೋ ಆಸ್ತಿ ,60 ವರ್ಷಗಳಲ್ಲಿ ಗಾಂದಿ ಕುಟುಂಬ ,ಗುಲಾಮರ ಕುಟುಂಬದಲ್ಲಿ ಇರುವ ಅಕ್ರಮ ಆಸ್ತಿ ಮಾರಿ ಜನರ ಸಮಸ್ಯೆ ಬಗೆ ಹರಿಸಿ ನಂತರ ಚುನಾವಣಾ ಪ್ರಣಾಳಿಕೆ ,ಪ್ರಚಾರ ಮಾಡಲಿ ತನ್ನ ಅಜ್ಜಿಯ ಮೂಗು ತೋರಿಸುವ ಮೂಲಕ …..

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...