Homeಕರ್ನಾಟಕಹತಾಶೆಯ ಬಿಜೆಪಿ ಮುಖಂಡರ ಬೆದರಿಕೆಯ ಭಾಷೆ!

ಹತಾಶೆಯ ಬಿಜೆಪಿ ಮುಖಂಡರ ಬೆದರಿಕೆಯ ಭಾಷೆ!

- Advertisement -
- Advertisement -

ಕರ್ನಾಟಕ ರಾಜ್ಯದ ಚುನಾವಣೆ ಪ್ರಚಾರದ ಭಾಷಣದಲ್ಲಿ ಕೇಂದ್ರ ಸರಕಾರದ ಗೃಹಮಂತ್ರಿಗಳಾದ ಶ್ರೀ ಅಮಿತ್ ಶಾ ಅವರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ರಾಜ್ಯದಲ್ಲಿ ಕೋಮುಗಲಭೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ. ಸ್ವತಃ ಅಮಿತ್ ಶಾ ಅವರಿಗೆ ಗೊತ್ತಿರದಿದ್ದರೂ ಭಾರತ ರಾಷ್ಟ್ರದ ಗೃಹಮಂತ್ರಿಗಳಿಗೆ ಬಹು ಜವಾಬ್ದಾರಿಯುತವಾದ ಸ್ಥಾನವಿರುತ್ತದೆ. ಪೂರ್ವಾಶ್ರಮದಲ್ಲಿ ಅಪರಾಧಿಗಳಾಗಿದ್ದರೂ, ಗಡಿಪಾರು ಆಗಿದ್ದರೂ ಗೃಹಮಂತ್ರಿ ಹುದ್ದೆಯು ಸಂವಿಧಾನಾತ್ಮಕವಾದ ಸರಕಾರದ ಹುದ್ದೆಯಾಗಿರುತ್ತದೆ. ಇದು ಅವರಿಗೆ ಇನ್ನೂ ಅರ್ಥವಾದಂತೆ ಕಾಣುತ್ತಿಲ್ಲ. ಅವರಾಗಲಿ ಬಿಜೆಪಿ ಪಕ್ಷವಾಗಲಿ ಏನೇ ಸಮಜಾಯಿಷಿ ಕೊಟ್ಟರೂ ಅವರ ಈ ಹೇಳಿಕೆಯ ನಿಜಾರ್ಥವು ಎಲ್ಲರಿಗೂ ಅರ್ಥವಾಗಿದೆ. ಗೆದ್ದ ಮೇಲೆ ಕಾಂಗ್ರೆಸ್ ಪಕ್ಷವು ಕೋಮುಗಲಭೆಗಳನ್ನು ಮಾಡಿಸಲು ಕಾರಣವೇ ಇರುವುದಿಲ್ಲ, ಹೀಗಾಗಿ ತಮ್ಮ ಪಕ್ಷವು ಸೋತರೆ ಈ ಗಲಭೆಗಳನ್ನು ನಡೆಸುತ್ತದೆ ಎಚ್ಚರವಾಗಿರಿ ಎಂದು ಈ ಹೇಳಿಕೆಯ ತಾತ್ವಿರ್ಯವಲ್ಲದೇ ಮತ್ತೇನು?

ಶಾ ಅವರು ಸತ್ಯವನ್ನೇ ನುಡಿದಿದ್ದಾರೆ. ಕಾರಣಗಳು ಹೀಗಿವೆ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಳ್ವಿಕೆಯು ಸಂಪೂರ್ಣವಾಗಿ ವಿಫಲವಾಗಿದೆ. ಭ್ರಷ್ಟಾಚಾರ, ದೇಶದ ಕಾನೂನುಗಳನ್ನು ತಿರುಚಿ, ಉಲ್ಲಂಘನೆ ಮಾಡಿ ಕಾರ್ಪೊರೆಟ್ ಶಕ್ತಿಗಳಿಗೆ ಮಾಡುತ್ತಿರುವ ಸಹಾಯ, ಬೆಲೆ ಏರಿಕೆ, ದಲಿತರು, ಮುಸ್ಲಿಮರು ಹಾಗೂ ಮಹಿಳೆಯರ ಮೇಲೆ ನಿರಂತರವಾದ ಆಕ್ರಮಣ ಹಾಗೂ ಹಿಂಸೆ- ಇವುಗಳ ಹೊರತಾಗಿ ಇನ್ನ್ಯಾವ ಸಾಧನೆಯನ್ನು ಅದು ಮಾಡಿಲ್ಲ. ಕ್ರಮೇಣವಾಗಿ ಅಂಧ ಭಕ್ತಿ, ಪ್ರಚಾರದ ಪ್ರಭಾವ ಇವುಗಳಿಂದ ಹೊರಬರುತ್ತಿರುವ ಜನರು ಇದನ್ನು ಅರ್ಥಮಾಡಿಕೊಂಡು ಎಚ್ಚರಗೊಳ್ಳುತ್ತಿದ್ದಾರೆ. ಆದರೆ ಬಿಜೆಪಿ, ಆರ್‌ಎಸ್‌ಎಸ್ ಬಳಿ ಕೋಮುಗಲಭೆ, ಧ್ರುವೀಕರಣವನ್ನು ಬಿಟ್ಟರೆ ಇನ್ಯಾವುದೇ ಸೈದ್ಧಾಂತಿಕ ಪರ್ಯಾಯ ಇಲ್ಲ. ಕ್ರಿಯಾಶೀಲತೆಯೂ ಇಲ್ಲ. ಆರ್‌ಎಸ್‌ಎಸ್‌ನ ಸ್ಥಾಪಕರಿಂದ ಶುರುವಾಗಿ ಈವರೆಗೆ ಗಂಭೀರ ಚಿಂತನೆ, ರಾಜಕೀಯ ಕ್ರಿಯಾಶೀಲತೆಗೆ ಬೇಕಾದ ವೈಚಾರಿಕ ಶಕ್ತಿ ಎಂದಿಗೂ ಇದ್ದಿಲ್ಲ. ಇಂಥ ನಿರ್ವಾತದಲ್ಲಿ ಅಮಿತ್ ಶಾ ಅಂಥವರಿಗೆ ಜನರನ್ನು ಹೆದರಿಸುವುದು ಅನಿವಾರ್ಯವಾಗಿದೆ. ಮಾನ್ಯ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೂ ಬಹುಮುಖ್ಯ ಕಾರಣವೆಂದರೆ ಅವರು ನೇರವಾಗಿ ಕೋಮುವಾದಿ ಹಿಂಸೆಯನ್ನು ಬೆಂಬಲಿಸಿಲ್ಲ ಎಂಬುದು. ನಂತರ ಶ್ರೀ

ಯಡಿಯೂರಪ್ಪ

ಬೊಮ್ಮಾಯಿಯವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲಾಯಿತು. ಅವರು ಮಾಡಿದ ಮೊದಲ ಕೆಲಸವೆಂದರೆ ಕೋಮುಗಲಭೆ, ಹಿಂಸೆಯಲ್ಲಿ ತೊಡಗಿದ್ದವರಿಗೆ ‘Action–Reaction’ ಸೂತ್ರದಲ್ಲಿ ಸಂಪೂರ್ಣ ಬೆಂಬಲ ಹಾಗೂ ರಿಯಾಯಿತಿ ನೀಡಿದ್ದು. ಅವರಿಗೆ ಹೈಕಮಾಂಡ್‌ನಿಂದ ದೊರೆತ ಎರಡೇ ನಿರ್ದೇಶನಗಳೆಂದರೆ ಭ್ರಷ್ಟಾಚಾರ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳಬೇಡಿ ಮತ್ತು ಕೋಮುವಾದಿ ಗಲಭೆಗಳಿಗೆ ಸಂಪೂರ್ಣ ಅವಕಾಶ ಕೊಡಿಯೆಂದಿರಬೇಕು. ಇವೆರಡನ್ನೂ ಅವರು ಅಕ್ಷರಶಃ ಪಾಲಿಸಿದ್ದಾರೆ. ಜೊತೆಗೆ ಕರ್ನಾಟಕದ ಬಿಜೆಪಿ ಧುರೀಣರ ಹುಟ್ಟುಗುಣವಾದ ಹೈಕಮಾಂಡ್ ಗುಲಾಮಗಿರಿಯೂ ಅವರ ವ್ಯಕ್ತಿತ್ವದಲ್ಲಿದೆ. ಹೀಗಾಗಿ ಕರ್ನಾಟಕದ ಅಸ್ಮಿತೆ, ವೈಚಾರಿಕ ಪ್ರಜ್ಞೆ, ಜಾತ್ಯತೀತತೆ ಅವರಿಗೆ ಮುಖ್ಯವಾಗಿಲ್ಲ. ಶ್ರೀ ಯಡಿಯೂರಪ್ಪನವರಿಗೆ ಲಿಂಗಾಯತ ಸಮುದಾಯದ ಬಗ್ಗೆಯಾದರೂ ಅಭಿಮಾನವೋ ಕಾಳಜಿಯೋ ಇದೆ. ಆದರೆ ಬೊಮ್ಮಾಯಿಯವರು ತಾವೇ ಮುಂದೆ ನಿಂತು ಯಡಿಯೂರಪ್ಪ, ಶೆಟ್ಟರ್, ಸವದಿಯವರಿಗೆ ಅವಮಾನ ಮಾಡಿಸಿದ್ದಾರೆ. ಏಕೆಂದರೆ ಒಂದು ವೇಳೆ ಗೆದ್ದರೆ ತಾವು ಮಾತ್ರ ಲಿಂಗಾಯತ ಧುರೀಣರೆಂದು ಅಧಿಕಾರಕ್ಕಾಗಿ ಹಕ್ಕು ಚಲಾಯಿಸಬಹುದೆಂಬುದು ಅವರ ಎಣಿಕೆಯಿರಬಹುದು. ಅಧಿಕಾರಕ್ಕಾಗಿ ಲಿಂಗಾಯತ ಸಮುದಾಯಕ್ಕೂ ದ್ರೋಹ ಬಗೆದು ಕಡೆಗಣಿಸಲು ಸಿದ್ಧ ಎನ್ನುವ ನಂಬಿಕೆಯಿರುವುದರಿಂದಲೇ ಬಿಜೆಪಿ ಪಕ್ಷ ಹಾಗೂ ಕೇಂದ್ರ ಸರಕಾರಗಳು ಅವರಿಗೆ ಸಂಪೂರ್ಣ ಬೆಂಬಲ ನೀಡಿದೆ. ಈ ಎಲ್ಲಾ ಹಿನ್ನೆಲೆಯಿಂದಾಗಿಯೇ ಅಮಿತ್ ಶಾ ಧೈರ್ಯವಾಗಿ ಕರ್ನಾಟಕದ ಜನತೆಯನ್ನು ಸಾರ್ವಜನಿಕವಾಗಿ ಬೆದರಿಸುವ ಧೈರ್ಯ ಮಾಡಿದರು.

ಇದನ್ನೂ ಓದಿ: ಎದ್ದೇಳು ಕರ್ನಾಟಕ: ಒಂದು ಅಸಾಧಾರಣ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ

ಇದನ್ನು ಗಂಭೀರವಾಗಿ ಪರಿಗಣಿಸಲು ಗಟ್ಟಿಯಾದ ಕಾರಣಗಳಿವೆ. ಮೊದಲನೆಯದಾಗಿ ಕೇಂದ್ರ ಸರಕಾರವು ಭಾರತೀಯ ಸಂವಿಧಾನದ ಮೂಲರಚನೆಯ ಭಾಗವೇ ಆಗಿರುವ ಒಕ್ಕೂಟದ ಪರಿಕಲ್ಪನೆಯನ್ನು ಒಪ್ಪಿಕೊಂಡಿಲ್ಲ. ಒಕ್ಕೂಟದ ಬದಲಾಗಿ ಸರ್ವಾಧಿಕಾರವನ್ನು ತರಲು ಅದು ಪ್ರಯತ್ನಿಸುತ್ತದೆ. ಇದನ್ನು ಒಪ್ಪುತ್ತಿಲ್ಲವಾದ್ದರಿಂದ ಸರ್ವೋಚ್ಚ ನ್ಯಾಯಾಲಯದ ಮೇಲೆ ಕೂಡ ಅನೈತಿಕ ಒತ್ತಡ ತರಲು ಪ್ರಯತ್ನಿಸುತ್ತದೆ. ಇದರ ಭಾಗವಾಗಿಯೇ ನಡ್ಡಾ ಅವರು ಕರ್ನಾಟಕದಲ್ಲಿಯೇ ಭಾಷಣ ಮಾಡುತ್ತಾ, ಇಲ್ಲಿಯ ಜನರಿಗೆ ನೀವು ಬಿಜೆಪಿಗೆ ಮತ ಹಾಕಿ ಶ್ರೀ ಮೋದಿಯವರ ಆಶೀರ್ವಾದ ಪಡೆಯಿರಿ ಎಂದು ಹೇಳುತ್ತಾರೆ. ಹೀಗಾಗಿ ಆರ್‌ಎಸ್‌ಎಸ್, ಬಿಜೆಪಿ ಸಿದ್ಧಾಂತವೆಂದರೆ ಬಲಾಢ್ಯ ಕೇಂದ್ರ ಮತ್ತು ಅಸಹಾಯಕ ರಾಜ್ಯಗಳ ನಡುವೆ ತೀವ್ರ ಅಸಮಾನತೆಯ ನಿಬಂಧವಿರಬೇಕೆಂಬುದು. ಕರ್ನಾಟಕದಲ್ಲಿ ಹಾಗೆ ಆಗುತ್ತಿಲ್ಲವೆಂದು ಅವು ವಿಚಲಿತವಾಗಿವೆ. ತಮಗೆ ಬಿಜೆಪಿ ಟಿಕೆಟ್ ಸಿಕ್ಕಲಿಲ್ಲವೆಂದು ಬಂಡಾಯ ಮಾಡಿದ ಬಿಜೆಪಿ ರಾಜಕಾರಣಿಗಳು ಮೋದಿಯವರ ಪ್ರಶ್ನಾತೀತ ನಾಯಕತ್ವ, ವಿಶ್ವಗುರು ಪಾತ್ರ ಇವುಗಳನ್ನು ಒಂದುಕ್ಷಣವೂ ಗಮನಿಸದೇ ಆಚೆಗೆ ಎಸೆದಿದ್ದಾರೆ. ಕರ್ನಾಟಕದಲ್ಲಿ ಚುನಾವಣಾ ಸೋಲು-ಗೆಲುವುಗಳಿಗಿಂತ ಇದು ಬಹುದೊಡ್ಡ ಆಘಾತವಾಗಿದೆ. ಏಕೆಂದರೆ ತಮ್ಮ ಪಕ್ಷದ ರಾಜಕೀಯ ಧುರೀಣರೇ ದೆಹಲಿಯ ಉಸಿರುಗಟ್ಟುವ ಅಧಿಕಾರವನ್ನು ತಡೆದುಕೊಳ್ಳಲು ಆಗುವುದಿಲ್ಲವೆಂದು ಪ್ರತಿರೋಧ ತೋರಿಸಿದ ಮೇಲೆ ಸಾಮಾನ್ಯ ಪ್ರಜೆಗಳಿಗೂ ಕೇಂದ್ರದವ ಪ್ರಾಬಲ್ಯವು ಕೇವಲ ಮಾಧ್ಯಮಗಳ ವಿಚಾರವೆಂಬುದು ಗೊತ್ತಾಗಿದೆ. ಹೀಗಾಗಿಯೇ ಶೆಟ್ಟರ್ ಹಾಗೂ ಸವದಿಯವರ ಮೇಲೆ ಇಂಥ ರೋಷ. ಜೊತೆಗೆ ಅಭದ್ರತೆ. ಇವರಿಬ್ಬರೂ ಚುನಾವಣೆಯಲ್ಲಿ ಸೋಲುವುದು ಅಸಾಧ್ಯ. ಅಲ್ಲಿಗೆ 2024ರ ಚುನಾವಣೆಗಳ ಭವಿಷ್ಯವು ಬೇರೆಯಾಗುತ್ತದೆ. ಆದರೆ ಬಿಜೆಪಿಗೆ ಪರ್ಯಾಯವಿಲ್ಲ.

ಬಸವರಾಜ ಬೊಮ್ಮಾಯಿ

ಇನ್ನೊಂದು ಕಾರಣವೆಂದರೆ ಹಿಂದುತ್ವದ ಕಟ್ಟರ್ ಅನುಯಾಯಿಗಳನ್ನು ಬಿಜೆಪಿ ಬಳಸಿಕೊಂಡು ಎಸೆದಿದೆ ಅನ್ನುವ ಸತ್ಯವು ಈಗ ಜನರಿಗೆ ಮನದಟ್ಟಾಗುತ್ತಿದೆ. ಪುತ್ತೂರಿನಲ್ಲಿ ಪುತ್ತಿಲನೆನ್ನುವ ಹಿಂದುತ್ವವಾದಿಗೆ ಟಿಕೆಟು ಕೊಟ್ಟಿಲ್ಲ. ಅಷ್ಟೇ ಅಲ್ಲ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಲ್ಲಡ್ಕ ಭಟ್ಟರ ವಿಡಿಯೋ ಒಂದರಲ್ಲಿ, ’ಅವನು ಮಾಡಿದ ಅಪರಾಧಗಳಿಗೂ ನಮಗು ಏನು ಸಂಬಂಧವೆಂದು’ ಅವರು ನೇರವಾಗಿ ಹೇಳಿದ್ದಾರೆ. ಈ ವಿಡಿಯೋವನ್ನು ವಿವರವಾಗಿ ಕೇಳಿದರೆ, ಪುತ್ತಿಲ ಅವರ ಮೇಲೆ ಯಾವಯಾವ ಕೇಸುಗಳಿವೆ ಮತ್ತು ಅವರ ಮೇಲೆ ಯಾವಯಾವ ಕೇಸುಗಳನ್ನು ಹಾಕಬಹುದು ಎಂದು ಅವರ ಶತ್ರುಗಳಿಗೆ ವಿವರವಾಗಿ ಹೇಳಿಕೊಡುತ್ತಿರುವುದು ಅರ್ಥವಾಗುತ್ತದೆ. ಹಾಗೆಯೇ ಕಾರ್ಕಳದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮಸೇನೆಯ ಮುತಾಲಿಕರು ಹಾಲಿ ಶಾಸಕರ ಜಾತಕವನ್ನು ಪ್ರತಿದಿನ ಬಿಡಿಸಿ ಇಡುತ್ತಿದ್ದಾರೆ. ಆದರೆ ಅವರಿಗೆ ಬಿಜೆಪಿಯ ಯಾವ ಬೆಂಬಲವೂ ಇಲ್ಲ; ಅಂದರೆ ಕರಾವಳಿಯಲ್ಲಿ ಕೋಮುವಾದಿ ಗಲಭೆ ಹಾಗೂ ಹಿಂಸೆಗಳ ಮೂಲಕ ಬಿಜೆಪಿಗೆ ತಳಪಾಯ ಒದಗಿಸಿದ ಹಿಂದುತ್ವವಾದಿ ಗುಂಪುಗಳನ್ನು ಈಗ ಬೀದಿಗೆ ಎಸೆಯಲಾಗಿದೆ. ಇವರಲ್ಲಿ ಬಹುಪಾಲು ಶೂದ್ರರು, ದಲಿತರು ಆಗಿರುವುದರಿಂದ ಹೀಗೆ ಮಾಡುವುದರಲ್ಲಿ ಆರ್‌ಎಸ್‌ಎಸ್‌ಗೆ ಯಾವುದೇ ಅಭ್ಯಂತರವಿಲ್ಲ.

ಇನ್ನು ಕಡೆಯದಾಗಿ ಶ್ರೀ ಯಡಿಯೂರಪ್ಪನವರು ಶೆಟ್ಟರ್‌ರನ್ನು ಸೋಲಿಸುವುದೇ ನನ್ನ ಜೀವನದ ಗುರಿ ಎಂದು ಅಬ್ಬರಿಸುತ್ತಿರುವುದು; ಕರ್ನಾಟಕದ ಚುನಾವಣಾ ಅಭ್ಯರ್ಥಿಗಳ ಆಯ್ಕೆಯ ಸಭೆಯಲ್ಲಿ ಶ್ರೀ ಸಂತೋಷ್ ಅವರೊಬ್ಬರೇ ಅನೇಕ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಶಿಫಾರಸ್ಸು ಮಾಡುವುದನ್ನು ವಿರೋಧಿಸಿದ ಯಡಿಯೂರಪ್ಪನವರನ್ನು ಹೊರಗೆ ಹಾಕಲಾಯಿತು ಎಂಬ ಸುದ್ದಿ ಕೇಳಿಬಂತು. ಅವರನ್ನು ಹೊರಗಿಟ್ಟು ಚರ್ಚೆ ನಡೆಸಲಾಯಿತು. ಆದರೂ ಅವರು ಏನು ಆಗಿಲ್ಲವೆಂದರು. ಈಗ ಈ ಆರ್ಭಟಕ್ಕೆ ಕಾರಣವೆಂದರೆ ಬಿಜೆಪಿ ಯಡಿಯೂರಪ್ಪನವರ ಅಕ್ರಮ ಆಸ್ತಿ, ಅವರ ಪತ್ನಿಯ ಅಸಹಜ ಸಾವು, ಒಬ್ಬ ರಾಜಕೀಯ ಮಹಿಳೆಯ ಜೊತೆಗಿನ ಸಂಬಂಧ- ಇವುಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಅವರನ್ನು ಹದ್ದುಬಸ್ತಿನಲ್ಲಿ ಇಟ್ಟಿದೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಅಲ್ಲದೆ ಪಕ್ಷ ಲಿಂಗಾಯತ ಸಮುದಾಯವನ್ನು ಅವಮಾನಿಸಿಲ್ಲ ಎನ್ನುವುದನ್ನು ಅವರು ಸಮರ್ಥಿಸಬೇಕೆಂದು ಹೈಕಮಾಂಡ್ ಆಜ್ಞೆ ನೀಡಿದೆ. ಹೀಗಾಗಿ ಕರ್ನಾಟಕದ ’ಮಾಸ್‌ಲೀಡರ್’ ಒಬ್ಬರು ವೈಯಕ್ತಿಕ ಭೀತಿಯಿಂದಾಗಿ, ತಮ್ಮ ರಕ್ತದಲ್ಲಿ ಚುನಾವಣೆ ಫಲಿತಾಂಶ ಬರೆದುಕೊಡಲು ಸಿದ್ಧರಾಗಿದ್ದಾರೆ. ಈಗಾಗಲೇ ಪಕ್ಷದ ಕಸದಬುಟ್ಟಿಗೆ ಸೇರಿರುವ ಅವರು ದೇಹದಲ್ಲಿ ಉಳಿದಿರುವ ರಕ್ತವನ್ನು ಮುಂದಿನ ಕರಾಳ ದಿನಗಳಿಗಾಗಿ ಉಳಿಸಿಕೊಳ್ಳಲಿ.

ಜೆ.ಪಿ ನಡ್ಡಾ

ಈ ಹೇಳಿಕೆಗಳಿಗೆ, ದ್ವೇಷ ಭಾಷಣಗಳಿಗೆ ನಾವು ಸ್ಪಂದಿಸುವುದು ಹೇಗೆ? ಮೊದಲನೆಯದಾಗಿ ಇವೆಲ್ಲವೂ ಪೂರ್ವನಿರ್ಧಾರಿತವೆನ್ನುವುದು ಗೊತ್ತಿರಲಿ. ಇವ್ಯಾವುದೇ ಹೇಳಿಕೆಗಳು ಆ ಕ್ಷಣದದಲ್ಲಿ ಬಾಯಿತಪ್ಪಿ ಬಂದವುಗಳಲ್ಲ. ಇವುಗಳ ಉದ್ದೇಶವೆಂದರೆ ಆತಂಕ ಹಾಗು ಆಕ್ರೋಶದ ಸ್ಥಿತಿಯನ್ನು ನಿರ್ಮಾಣ ಮಾಡುವುದು. ಅಂಥ ವಾತಾವರಣದಲ್ಲಿ ಸೂಕ್ತವಾದ ಅವಕಾಶ ಸಿಕ್ಕಕೂಡಲೇ ಗಲಭೆ ಆರಂಭಿಸಿ ಅದರ ಜವಾಬ್ದಾರಿಯನ್ನು ವಿರೋಧ ಪಕ್ಷಗಳಿಗೆ ಆರೋಪಿಸುವುದು. ಇದರ ಪ್ರಯೋಜನವೆಂದರೆ ರಾಜ್ಯ ಸರಕಾರದ ಸಂಪೂರ್ಣ ವಿಫಲತೆಯು ಚುನಾವಣೆಯ ಕೇಂದ್ರ ವಿಷಯವಾಗುವುದಿಲ್ಲ. ಕೋಮುವಾದಿ ಧ್ರುವೀಕರಣದಿಂದಾಗಿ ಒಂದಿಷ್ಟು ಮತಗಳು ಬಿಜೆಪಿ ಪರವಾಗಿ ಬೀಳಬಹುದು. ಪರಿಹಾರವೆಂದರೆ ಈ ಕೀಟಲೆಗಳಿಗೆ ಜನ ಸಾಮಾನ್ಯರು ಸ್ಪಂದಿಸದಿರುವುದು ಮತ್ತು ವಿವಿಧ ಪಕ್ಷಗಳ ಧುರೀಣರು ಏನೇ ಹೇಳಿದರೂ ನಾವು ನಮ್ಮ ದಿನನಿತ್ಯದ ಬದುಕಿನ ವಾಸ್ತವದ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು ಮತಚಲಾಯಿಸುವುದು.

ಜೊತೆಗೆ, ಕರ್ನಾಟಕದ ಅಸ್ಮಿತೆಯ ಮೇಲೆ ಹೊರಗಿನವರು ಆಕ್ರಮಣವನ್ನು ಮತ ಚಲಾಯಿಸುವುದರ ಮೂಲಕ ವಿರೋಧಿಸೋಣ. ದೇಶದ ಪ್ರಧಾನ ಮಂತ್ರಿಗಳು, ಗೃಹ ಮಂತ್ರಿಗಳು ನಮ್ಮ ಪ್ರೀತಿಯ ರಾಷ್ಟ್ರನಾಯಕರಾಗಿ ನಮ್ಮವರಾಗಬೇಕಿತ್ತು. ದುರಂತವೆಂದರೆ ಇಲ್ಲಿಯ ಸಮುದಾಯಗಳನ್ನು, ಧುರೀಣರನ್ನು ಅವಮಾನಿಸಿ ಹೀನಾಯಗೊಳಿಸುವ ಹೊರಗಿನ ಶಕ್ತಿಗಳ ಪ್ರತಿನಿಧಿಗಳಾಗಿದ್ದಾರೆ. ಅವರು ನಮ್ಮ ರಾಜ್ಯದ ಅಮಾಯಕರನ್ನು ಅವಮಾನಿಸಿ, ಸಂಕಷ್ಟಕ್ಕೆ ಸಿಲುಕಿಸಲು ಬೇರೆ ರಾಜ್ಯಗಳಿಂದ ’ಕಾರ್ಯಕರ್ತ’ರನ್ನು ಇಲ್ಲಿಗೆ ತಂದಿರುವ ದುಷ್ಟರಾಗಿದ್ದಾರೆ. ಕರ್ನಾಟಕ ಜನತೆ ’ನಮ್ಮ ಕರ್ನಾಟಕ ನಮಗೆ’ ಎಂದು ಒಂದು ದನಿಯಲ್ಲಿ ಗಟ್ಟಿಯಾಗಿ ಹೇಳಿದರೆ ಸಾಕು ಪರಿಸ್ಥಿತಿ ಬದಲಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚೆನ್ನೈನಲ್ಲಿ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಹೋರಾಟ ನಡೆಸುತ್ತಿದ್ದ ಅಂಗವಿಕಲರ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ

ಚೆನ್ನೈ: ರಾಜ್ಯ ಸರ್ಕಾರದಿಂದ ನೀಡುತ್ತಿರುವ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಒತ್ತಾಯಿಸಿ ಚೆನ್ನೈನಲ್ಲಿ ಅಂಗವಿಕಲರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.  ಅಂಗವಿಕಲರು ನಡೆಸುತ್ತಿದ್ದ ಈ ಪ್ರತಿಭಟನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಲವಾರು ಪ್ರತಿಭಟನಾಕಾರರನ್ನು...

ರಾಜ್ಯಸಭೆ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ; ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ

10 ರಾಜ್ಯಗಳಿಂದ ಖಾಲಿ ಇರುವ 37 ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಬುಧವಾರ ವೇಳಾಪಟ್ಟಿ ಪ್ರಕಟಿಸಿದೆ. ಆಯೋಗದ ಪ್ರಕಾರ, ಮಾರ್ಚ್ 16 ರಂದು ಬೆಳಿಗ್ಗೆ 9:00...

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮಂಗಳವಾರ ಲಕ್ನೋದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ...

5% ಮುಸ್ಲಿಂ ಮೀಸಲಾತಿ ಪ್ರಕ್ರಿಯೆ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಗಾಗಿ ಜಾತಿ ಪರಿಶೀಲನೆ ಮತ್ತು ಪ್ರಮಾಣೀಕರಣ ಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ (ಫೆ.17) ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ತಕ್ಷಣದ ಬದಲಾವಣೆಯನ್ನು ತರದಿದ್ದರೂ,...

‘ಆರ್‌ಎಸ್‌ಎಸ್ ನೋಂದಣಿಗೆ ಕಾಂಗ್ರೆಸ್ ಕಾನೂನು ತರಲಿದೆ’: ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತ ತಮ್ಮ ಹೇಳಿಕೆಗಳನ್ನು ಮತ್ತು ಕರಾವಳಿ ಕರ್ನಾಟಕದ ಹೂಡಿಕೆಗಳ ಮೇಲೆ ಕೋಮು ಉದ್ವಿಗ್ನತೆ ಪರಿಣಾಮ...

ವಿನೋದ್ ಅದಾನಿ ಸಹಚರರ ವಿರುದ್ಧ ತನಿಖೆ ನಡೆಸಿದ ಇಟಾಲಿಯನ್ ಬ್ಯಾಂಕ್; ಅನುಮಾನಾಸ್ಪದ ‘ಹೆಡ್ಜ್ ಫಂಡ್’ ಹೂಡಿಕೆ ಪತ್ತೆ

ಜನವರಿ 2023 ರಲ್ಲಿ ಹಿಂಡೆನ್‌ಬರ್ಗ್‌ ರಿಸರ್ಚ್ ವರದಿಯ ಬೆನ್ನಲ್ಲೇ, ಇಟಲಿಯ ಅತಿದೊಡ್ಡ ಬ್ಯಾಂಕ್ 'ಇಂಟೆಸಾ ಸ್ಯಾನ್ಪೋಲೊ' ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರ ಇಬ್ಬರು ಸಹಚರರನ್ನು...

‘ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

"ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು, ಅವರನ್ನು ಚರಂಡಿ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯುವುದು 'ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ" ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ್ನು ಸುಪ್ರೀಂ...

‘ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ನಾವು ನಿಮ್ಮಿಂದ ಶಕ್ತಿ ಪಡೆಯುತ್ತೇವೆ’: ಕೇರಳ ಸಮ್ಮೇಳನದಲ್ಲಿ ಫಾರೂಕ್ ಅಬ್ದುಲ್ಲಾ ಭಾವುಕ ಮಾತು

"ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ಮತ್ತು ಅದು ಸ್ವತಂತ್ರವಾಗಿಯೇ ಉಳಿದಿದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಮತ್ತು ಬಲಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ನಿಮ್ಮಿಂದ ಶಕ್ತಿಯನ್ನು ಪಡೆಯುತ್ತೇವೆ. ನಾವು ನಿಮ್ಮನ್ನು ನೋಡುತ್ತೇವೆ...

ದತ್ತಾಂಶ ಸಂರಕ್ಷಣಾ ಕಾನೂನಿನಡಿಯಲ್ಲಿ ಆರ್‌ಟಿಐ ತಿದ್ದುಪಡಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಮೂಲಕ ಪರಿಚಯಿಸಲಾದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಎಂದು 'ಬಾರ್ ಮತ್ತು ಬೆಂಚ್' ವರದಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ...

ಅಜಿತ್ ಪವಾರ್ ಸಾವು : ಎರಡೂ ಫ್ಲೈಟ್ ರೆಕಾರ್ಡರ್‌ಗಳು ಹಾನಿಗೊಳಗಾಗಿವೆ ಎಂದ ವಿಮಾನಯಾನ ಸಚಿವಾಲಯ

ಬಾರಾಮತಿಯಲ್ಲಿ ಜನವರಿ 28 ರಂದು ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಅಪಘಾತಕ್ಕೀಡಾದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ (ಫೆ.17) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವಿಮಾನದ ಎರಡೂ ಸ್ವತಂತ್ರ ಫ್ಲೈಟ್...