Homeಮುಖಪುಟರಾಮ್‌ರಾಜ್‌ ಪಂಚೆ ಜಾಹೀರಾತಿನಲ್ಲಿ ಗಾಂಧಿ: ಮೆಚ್ಚುಗೆ, ವಿಮರ್ಶೆ

ರಾಮ್‌ರಾಜ್‌ ಪಂಚೆ ಜಾಹೀರಾತಿನಲ್ಲಿ ಗಾಂಧಿ: ಮೆಚ್ಚುಗೆ, ವಿಮರ್ಶೆ

‘ಗಾಂಧೀಜಿಯವರು ಪಂಚೆ ಮಾತ್ರವೇ ತನ್ನ ಉಡುಗೆಯೆಂದು ನಿರ್ಧರಿಸಿ ನೂರು ವರ್ಷವಾಯಿತು’ ಎಂದು ರಾಮ್‌ರಾಜ್‌ ಸಂಸ್ಥೆ ನೀಡಿರುವ ಜಾಹೀರಾತು ಮೆಚ್ಚುಗೆ, ಟೀಕೆ ಹಾಗೂ ವಿಮರ್ಶೆಗೆ ಒಳಗಾಗಿದೆ.

- Advertisement -
- Advertisement -

‘ಪಂಚೆ ಮಾತ್ರವೇ ತನ್ನ ಉಡುಗೆಯೆಂದು ಗಾಂಧೀಜಿಯವರು ಘೋಷಿಸಿ ನೂರು ವರ್ಷಗಳಾಯಿತು’ ಎಂದು ರಾಮ್‌ರಾಜ್‌ ಕಾಟನ್‌ ಸಂಸ್ಥೆ ನೀಡಿರುವ ಜಾಹೀರಾತು (ಸೆ.22, ಬುಧವಾರ) ಮೆಚ್ಚುಗೆ, ಟೀಕೆ ಹಾಗೂ ವಿಮರ್ಶೆಗೆ ಒಳಗಾಗಿದೆ.

‘ಪ್ರಜಾವಾಣಿ’ ದಿನಪತ್ರಿಕೆಯ ಮುಖಮುಖಪುಟದಲ್ಲಿ ಪ್ರಕಟವಾಗಿರುವ ಜಾಹೀರಾತನ್ನುಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕ ಓದುಗರು, ಜಾಹೀರಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಅನೇಕರು ಇದು ಬಂಡವಾಳಶಾಹಿ ವ್ಯವಸ್ಥೆಯ ವ್ಯಾಪಾರಿ ಗುಣವಷ್ಟೇ ಎಂದು ಟೀಕಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ಬಳಿಯ ಜವಳಿ ನಗರವೆಂದೇ ಖ್ಯಾತವಾದ ತಿರುಪುರದಲ್ಲಿ 1983ರಲ್ಲಿ ಸ್ಥಾಪನೆಯಾದ ರಾಮ್‌ರಾಜ್‌, ಇಂದು ಭಾರತದಲ್ಲಿ ಮನೆಮಾತಾಗಿರುವ ಬ್ರಾಂಡ್‌ಗಳಲ್ಲಿ ಒಂದಾಗಿದೆ. ದೋತಿ, ಅಂಗಿಗಳು, ಒಳ ಉಡುಪುಗಳು ಇತ್ಯಾದಿ ಉತ್ಪನ್ನಗಳಿಗೆ ರಾಮ್‌ರಾಜ್‌ ಅಚ್ಚುಮೆಚ್ಚಾಗಿದೆ. ಇಂದು ನೀಡಿರುವ ಜಾಹೀರಾತಿನಲ್ಲಿ ಗಾಂಧೀಜಿಯವರ ‘ಪಂಚೆ ಪ್ರೀತಿ’ಯನ್ನು ಸ್ಮರಿಸಲಾಗಿದೆ.

ಜಾಹೀರಾತಿನಲ್ಲಿ ಇರುವುದೇನು?

“ಕಳೆದ 100 ವರ್ಷಗಳ ಹಿಂದೆ ಇದೇ ದಿನದಂದು ತಮಿಳುನಾಡಿನ ಮಧುರೈ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಪಂಚೆ ಮಾತ್ರವೇ ಇನ್ನು ತನ್ನ ಉಡುಗೆಯೆಂದು ನಿರ್ಧರಿಸಿದ, ಮಾನವೀಯತೆ ತುಂಬಿದ ಮಹಾನ್‌ ವ್ಯಕ್ತಿ ಮಹಾತ್ಮಾ ಗಾಂಧೀಜಿಯರಿಗೆ ರಾಮ್‌ರಾಜ್‌ನ ಹೆಮ್ಮೆಯ ಸೆಲ್ಯೂಟ್‌”

ನನ್ನ ಜೀವನದ ಹಾದಿಯಲ್ಲಿ ನಾನು ತೆಗೆದುಕೊಂಡ ಎಲ್ಲಾ ಬದಲಾವಣೆಗಳೂ ಮುಖ್ಯವಾದ ಘಟನೆಳಿಂದಲೇ ನಡೆದಿವೆ. ಈ ನಿರ್ಣಯಗಳು ಆಳವಾದ ಆಲೋಚನೆಯ ನಂತರ ತೆಗೆದುಕೊಂಡವುಗಳು. ಆದುದರಿಂದ ನಾನು ಬೇಸರಗೊಳ್ಳ ಬೇಕಾದುದೇನೂ ಇಲ್ಲ. ನನ್ನಿಂದ ಮಾಡಲು ಸಾಧ್ಯವಾದ ಒಂದೇ ಒಂದು ಸಹಾಯ ನಾನು ತೆಗೆದುಕೊಂಡ ಈ ನಿರ್ಧಾರವೇ. ಮಧುರೈಯಲ್ಲಿ ನನ್ನ ಉಡುಪಿನಲ್ಲಿ ನಾನು ತೆಗೆದುಕೊಂಡ ಈ ಬದಲಾವಣೆಯ ಪರಿಣಾಮವಾಗಿ ನಂತರ ಪಂಚೆ ನನ್ನ ಗುರುತಾಗಿಯೇ ಪರಿಣಮಿಸಿತು.

– ಗಾಂಧೀಜಿ

‘ಪಂಚೆ ನನ್ನ ಗುರುತು’ ಎಂದು ನೀವು ಹೇಳಿದ ನುಡಿಯನ್ನೇ ವೇದವಾಕ್ಯದಂತೆ ಅನುಸರಿಸಿ, 40 ವರ್ಷಗಳಿಂದಲೂ ಪಂಚೆಯನ್ನು ಭಾರತದ ಗುರುತನ್ನಾಗಿಸಿದ್ದು ಮಾತ್ರವಲ್ಲದೆ, ಸಾವಿರಾರು ನೇಕಾರರ ಜೀವನಾಧಾರವನ್ನೂ ಉನ್ನತಮಟ್ಟಕ್ಕೇರಿಸಿದ, ‘ರಾಮ್‌ರಾಜ್‌’ ಎನ್ನುವ ಹೆಮ್ಮೆಯನ್ನು ನಿಮ್ಮ ಪಾದಕಮಲಗಳಿಗೆ ಅರ್ಪಿಸುತ್ತೇವೆ.

– ಇದು ‘ಪ್ರಜಾವಾಣಿ’ಯ ಮೊದಲ ಪುಟದಲ್ಲಿ ಪ್ರಕಟವಾಗಿರುವ ಜಾಹೀರಾತಿನ ಸಾರಾಂಶ.

ಜನರ ಪ್ರತಿಕ್ರಿಯೆ

ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತಿನ ಪೋಟೋ ಹಂಚಿಕೊಂಡು, “ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಜಾಹೀರಾತು
ಯಾಕೋ ನನಗಿಷ್ಟವಾಯಿತು
” ಎಂದು ಚಿಂತಕ, ಕಲಾವಿದ ಗಿರಿಧರ್‌ ಕಾರ್ಕಳ ಅವರು ತಮ್ಮ ಎಫ್‌.ಬಿ. ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ನನಗೂ ಖಷಿಯಾಯಿತು ಗಿರಿಧರ್. ಅದರೇ ಸಲ್ಪ ಭಯವೂ ಆಯಿತು, ಎಲ್ಲದರೂ ಗಡ್ಡಪ್ಪನ ಪೋಟೋ ಇರಬಹುದೋ ಎಂದು, ಆದರೆ ಇರಲಿಲ್ಲ ಬಚಾವ್’ ಎಂದು ಉದ್ಯಾವರ ನಾಗೇಶ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಲಿಂಗ ಸಮಾನತೆ ಸಾರಿದ ಕ್ಯಾಡ್‌ಬರಿ ಡೈರಿಮಿಲ್ಕ್‌ ಜಾಹೀರಾತಿಗೆ ಭರಪೂರ ಮೆಚ್ಚುಗೆ

“ಎಲ್ಲಿ ಸ್ವಲ್ಪ ಸುಳ್ಳು ಕೂಡಾ ಇದೆ . ಅದು 100% ಖಾದಿ ಅಲ್ವಾ? ರಾಮ್‌ರಾಜ್ ಆ ಬಗೆಯದ್ದೇ?” ಎಂದು ವ್ಯಂಗ್ಯಚಿತ್ರಕಾರ ದಿನೇಶ್‌ ಕುಕ್ಕುಜಡ್ಕ ಪ್ರತಿಕ್ರಿಯಿಸಿದ್ದು, “ಪಂಚೆ ಎಂದಷ್ಟೇ ಉಲ್ಲೇಖಿಸಿರೋದ್ರಿಂದ ನಾವೂ ಪಂಚೆಯ ಕುರಿತೇ ಪಂಚಾತಿಕೆ ಮಾಡೋಣ ಅಲ್ವಾ?” ಎಂದು ಗಿರಿಧರ್‌ ಪ್ರತಿಕ್ರಿಯಿಸಿದ್ದಾರೆ.

ಗಾಂಧಿ ಹತ್ಯೆಯನ್ನು ಸಂಭ್ರಮಿಸಿದವರ ಸಂತತಿ ಹೆಚ್ಚಾಗುತ್ತಿರುವ ಈ ದಿನಮಾನಗಳಲ್ಲಿ ಗಾಂಧೀಜಿಯವರನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದ್ದಾರೆ. ಹೀಗಾಗಿ ರಾಮ್‌ರಾಮ್‌ ಜಾಹೀರಾತು ದುರಿತ ಕಾಲದ ಹೊಸ ಭರವಸೆ ಎಂಬುದು ಅನೇಕರ ಮನದಾಳ.

ಜಾಹೀರಾತಿನ ಕುರಿತು ಆಕ್ಷೇಪಗಳೂ ವ್ಯಕ್ತವಾಗಿವೆ. “ಬಂಡವಾಳಶಾಹಿ ಗುಣ ಅದು. ಚಾಲ್ತಿಯಲ್ಲಿರುವ ಎಲ್ಲ ಸಾಂಕೇತಿಕ ಭಾಷೆಗಳನ್ನು, ಸಂಕೇತಗಳನ್ನು ಮತ್ತು ರೂಪಕಗಳನ್ನು ತನ್ನದಾಗಿಸಿಕೊಳ್ಳುತ್ತಾ ವಿಸ್ತರಿಸಿಕೊಳ್ಳುವುದು ಬಂಡವಾಳದ ಲಕ್ಷಣ. ರಾಮರಾಜ್ ಅದನ್ನೇ ಮಾಡಿದೆ ನಾಳೆ ಅದಾನಿ ಅಂಬಾನಿ ಸಹ ಇದನ್ನೇ ಅನುಕರಿಸುತ್ತಾರೆ” ಎಂದು ಚಿಂತಕ ನಾ.ದಿವಾಕರ್‌ ಅಭಿಪ್ರಾಯ ತಾಳಿದ್ದಾರೆ.

ಲೈಂಗಿಕ ರೋಗಗಳ ತಜ್ಞರಾದ ನಡಹಳ್ಳಿ ವಸಂತ್‌ ಪ್ರತಿಕ್ರಿಯಿಸಿದ್ದು, “ವಿಪರ್ಯಾಸವೆಂದರೆ ಗಾಂಧೀಜಿಯೂ ಕಾರ್ಪೋರೇಟ್‌ ಆಸ್ತಿಯಾಗುತ್ತಿದ್ದಾರೆ. ಕೈಮಗ್ಗವನ್ನು ಸ್ವಾಭಿಮಾನದ ಆರ್ಥಿಕ ಸ್ವಾವಲಂಬನೆಯ ಗುರುತಾಗಿ ಪ್ರಾರಂಭಿಸಿದ್ದರು ಗಾಂಧೀಜಿ. ಇವರ ಹೆಸರನ್ನು ಯಂತ್ರಗಳಿಂದ ತಯಾರಿಸುವ ಕಾರ್ಪೋರೇಟ್‌ಗಳು ಬಳಸುತ್ತಿದ್ದಾರೆ. ಎಲ್ಲರೂ ದುರಪಯೋಗ ಪಡಿಸಿಕೊಂಡಮೇಲೂ ಗಾಂಧಿ ಎನ್ನುವ ಹೆಸರು ಪರಿಶುದ್ಧವಾಗಿಯೇ ಉಳಿಯುತ್ತದೆ’ ಎಂದಿದ್ದಾರೆ.

ಒಟ್ಟಾರೆ ಜಾಹೀರಾತಿಯ ಸಂದೇಶ ತಾತ್ವಿಕವಾಗಿ ಒಳ್ಳೆಯದಿದ್ದರೂ ವ್ಯಾಪಾರಿ ಮನೋಭಾವದ ಆಯಾಮಗಳನ್ನು ಅಲ್ಲಗಳೆಯುವಂತಿಲ್ಲ. ಗ್ರಾಮಸ್ವರಾಜ್ಯದ ಕಲ್ಪನೆಯಲ್ಲಿ ಕಾರ್ಪೊರೇಟ್‌ ವ್ಯವಸ್ಥೆಯನ್ನು ಗಾಂಧಿ ಒಪ್ಪುವುದಿಲ್ಲ ಎನ್ನುವವರ ವಾದದಲ್ಲಿ ಉರುಳಿದೆ.


ಇದನ್ನೂ ಓದಿ: ಸರಕಾರಿ ಜಾಹೀರಾತು 100% ಕಡಿತ: ಸಿಎಎ ಪ್ರತಿಭಟನೆಗಳ ವರದಿ ಮಾಡಿದ್ದಕ್ಕೆ ಬೆಲೆ ತೆರುತ್ತಿದೆಯೇ ವಾರ್ತಾಭಾರತಿ ಕನ್ನಡ ದೈನಿಕ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...