ಲಿಂಗ ಸಮಾನತೆ ಸಂದೇಶ ಸಾರಿದ ಕ್ಯಾಡ್‌ಬರಿ ಡೈರಿಮಿಲ್ಕ್ ಚಾಕೋಲೆಟ್ ಜಾಹೀರಾತಿಗೆ ಪ್ರೇಕ್ಷಕರು ಭರಪೂರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಎಂದರೆ ಪುರುಷರಷ್ಟೇ ಎಂದು ಭಾವಿಸಿರುವ ಸಮಾಜದಲ್ಲಿ ಕ್ಯಾಡ್‌ಬರಿಯ ನೂತನ ಜಾಹೀರಾತು ಲಿಂಗ ಸಮಾನತೆಯ ಆಶಯವನ್ನು ಎತ್ತಿ ಹಿಡಿದಿದೆ. ಜಾಹೀರಾತು ವೀಕ್ಷಿಸಿದ ಸಹಸ್ರಾರು ಜನರು ಭಾವುಕರಾಗಿದ್ದಾರೆ. ಈ ಜಾಹೀರಾತನ್ನು ನೋಡಿ ಕಣ್ತುಂಬಿ ಬಂತು ಎಂದು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಕಮೆಂಟ್ ಮಾಡಿದ್ದಾರೆ.
ಏನಿದು ಜಾಹೀರಾತು?
ನೆನಪುಗಳೊಂದಿಗೆ ಬೆರೆತ ನಗು-ಅಳು ಮಿಶ್ರಿತ ಭಾವ (ನಾಸ್ಟಾಲ್ಜಿಯಾ) ಸೃಷ್ಟಿಸಿರುವ ಈ ಜಾಹೀರಾತು, 90ರ ದಶಕ ಹಾಗೂ 2021ನೇ ಇಸವಿಯ ನಡುವೆ ಆಗಿರುವ ಬದಲಾವಣೆಯನ್ನು ಒಳಗೊಂಡಿದೆ. ಈಗಿನ ಜಾಹೀರಾತು ಕ್ರಿಕೆಟ್‌ನಲ್ಲಿ ಮಹಿಳೆಯರೂ ಸಾಧನೆ ಮಾಡಿರುವುದನ್ನು ಬಿಂಬಿಸುತ್ತದೆ. ಹಿಂದೆ ಕೇವಲ ಪುರುಷರಷ್ಟೇ ಕ್ರೀಡಾಂಗಣದ ಮೇಲೆ ಹಿಡಿತ ಸಾಧಿಸಿದ್ದರು. 2021ನೇ ಇಸವಿಯಲ್ಲಿ ಹೆಣ್ಣುಮಕ್ಕಳೂ ಸಾಧನೆಗೈದಿದ್ದಾರೆ ಎಂಬ ಸಮಾನತೆಯ ಸಂದೇಶವನ್ನು ಕ್ಯಾಡ್‌ಬರಿ ಕಟ್ಟಿಕೊಟ್ಟಿರುವ ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ.
90ರ ದಶಕದ ಹಿನ್ನೆಲೆಯ ಹಳೆಯ ಕ್ಯಾಡ್‌ಬರಿ ಜಾಹೀರಾತು ಹೀಗಿದೆ: “ಶತಕದ ಹೊಸ್ತಿಲಿನಲ್ಲಿರುವ ಬ್ಯಾಟ್‌ಮನ್ ಕೊನೆಯ ಎಸೆತದಲ್ಲಿ ಸಿಕ್ಸ್ ಹೊಡೆಯಲೇ ಬೇಕಿದೆ. ಆತ ಬ್ಯಾಟ್ ಬೀಸಿದಾಗ ಗಾಳಿಯಲ್ಲಿ ತೂರಿದ ಬಾಲ್, ಫೀಲ್ಡರ್ ಕೈಗೆ ಸಿಗುತ್ತದೆ ಎಂದು ಭಾವಿಸಿರುವಾಗಲೇ ಅದು ಬೌಂಡರಿ ದಾಟಿರುತ್ತದೆ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಯುವತಿ ಕ್ಯಾಡ್‌ಬರಿ ಡೈರಿ ಮಿಲ್ಕ್ ತಿನ್ನುತ್ತಾ, ಖುಷಿಯಲ್ಲಿ ಓಡೋಡಿ ಬರುತ್ತಾಳೆ. ಮೈದಾನದೊಳಗೆ ಯುವತಿ ಬಾರದಂತೆ ತಡೆಯಲು ಸೆಕ್ಯುರಿಟಿ ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಎಲ್ಲಾ ಪ್ರೇಕ್ಷಕರೂ ಯುವತಿಯ ಉತ್ಸಾಹವನ್ನು ನೋಡಿ ಖುಷಿ ಪಡುತ್ತಾರೆ”.
2021ರ ಕ್ಯಾಡ್‌ಬರಿ ಜಾಹೀರಾತು ಹೀಗಿದೆ: “ಶತಕದ ಹೊಸ್ತಿಲಿನಲ್ಲಿರುವ ಆಟಗಾರ್ತಿ ಕೊನೆಯ ಎಸೆತದಲ್ಲಿ ಸಿಕ್ಸ್ ಹೊಡೆಯಲೇ ಬೇಕಿದೆ. ಆಕೆ ಬ್ಯಾಟ್ ಬೀಸಿದಾಗ ಗಾಳಿಯಲ್ಲಿ ತೂರಿದ ಬಾಲ್, ಫೀಲ್ಡರ್ ಕೈಗೆ ಸಿಗುತ್ತದೆ ಎಂದು ಭಾವಿಸಿರುವಾಗಲೇ ಅದು ಬೌಂಡರಿ ದಾಟಿರುತ್ತದೆ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಯುವಕ ಕ್ಯಾಡ್‌ಬರಿ ಡೈರಿಮಿಲ್ಕ್ ತಿನ್ನುತ್ತಾ, ಖುಷಿಯಲ್ಲಿ ಓಡೋಡಿ ಬರುತ್ತಾನೆ. ಸೆಕ್ಯುರಿಟಿ ತಡೆಯಲು ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಎಲ್ಲಾ ಪ್ರೇಕ್ಷಕರೂ ಯುವಕನ ಖುಷಿಯನ್ನು ನೋಡಿ ತಾವೂ ಖುಷಿಪಡುತ್ತಾರೆ”
Oh wow!! Take a bow, Cadbury Dairy Milk and Ogilvy 🙂 A simple, obvious twist that was long overdue, and staring right at all of us all this while! pic.twitter.com/Urq8NXtg7W
— Karthik ?? (@beastoftraal) September 17, 2021
ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿರುವ ಕ್ಯಾಡ್‌ಬರಿ ಡೈರಿ ಮಿಲ್ಕ್ ಸಂಸ್ಥೆಯು, “ಯುವಜನರಿಗೆ ಮಾದರಿಯಾಗಿ ಹೊರಹೊಮ್ಮಿರುವ ನಮ್ಮ ಯುವತಿಯರ ಅದ್ಭುತ ಯಶಸ್ಸನ್ನು ಆಚರಿಸಲು, ಖುಷಿಪಡಲು ಕ್ಯಾಡ್‌ಬರಿ ಡೈರಿಮಿಲ್ಕ್ ಸವಿಯೋಣ” ಎಂದು ಹೇಳಿದೆ.
Join Cadbury Dairy Milk in celebrating and cheering for our girls who are making spectacular success stories and emerging as powerful role models for the youth.#CadburyDairyMilk #GoodLuckGirls #KuchAchhaHoJaayeKuchMeethaHoJaaye pic.twitter.com/b0g4dRo9DJ
— Cadbury Dairy Milk (@DairyMilkIn) September 17, 2021
ಇದನ್ನೂ ಓದಿ: ಹೃತಿಕ್, ಕತ್ರಿನಾ ಆಡ್‌ಗೆ ಹಣ ಸುರಿಯುವುದು ಬಿಟ್ಟು ಡೆಲಿವೆರಿ ಬಾಯ್‌ಗಳಿಗೆ ಸಮರ್ಪಕ ವೇತನ ನೀಡಿ: ಜೊಮ್ಯಾಟೊ ಪ್ರತಿಕ್ರಿಯೆ