Homeಕರ್ನಾಟಕಸೈಮಾ-2021: ರಚಿತಾ ರಾಮ್, ರಶ್ಮಿಕಾ, ದರ್ಶನ್, ರಕ್ಷಿತ್ ಶೆಟ್ಟಿ, ಬಿ.ಸುರೇಶ್‌ಗೆ ಪ್ರಶಸ್ತಿ

ಸೈಮಾ-2021: ರಚಿತಾ ರಾಮ್, ರಶ್ಮಿಕಾ, ದರ್ಶನ್, ರಕ್ಷಿತ್ ಶೆಟ್ಟಿ, ಬಿ.ಸುರೇಶ್‌ಗೆ ಪ್ರಶಸ್ತಿ

- Advertisement -
- Advertisement -

ಸೈಮಾ 2021ರ ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್‌ನಲ್ಲಿ ನಡೆದಿದ್ದು, ಕನ್ನಡದ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಆಯುಷ್ಮಾನ್​ ಭವ ಚಿತ್ರದ ನಟನೆಗಾಗಿ ರಚಿತಾ ರಾಮ್ ತಮ್ಮದಾಗಿಸಿಕೊಂಡಿದ್ದಾರೆ.

ಯಜಮಾನ ಚಿತ್ರದ ನಟನೆಗಾಗಿ ನಟ ದರ್ಶನ್, ಅವನೇ ಶ್ರೀಮನ್ನಾರಾಯಣ ಚಿತ್ರದ ನಟನೆಗಾಗಿ ರಕ್ಷಿತ್ ಶೆಟ್ಟಿ ಪ್ರಶಸ್ತಿ ಪಡೆದರೆ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ‘ಆಕ್ಟ್-1978’ ಚಿತ್ರದಲ್ಲಿನ ನಟನೆಗಾಗಿ ಬಿ.ಸುರೇಶ್ ತಮ್ಮದಾಗಿಸಿಕೊಂಡಿದ್ದಾರೆ.

ತೆಲುಗಿನ ಡಿಯರ್ ಕಾಮ್ರೆಡ್ ಮತ್ತು ಕನ್ನಡದ ಯಜಮಾನ ಚಿತ್ರಗಳಲ್ಲಿನ ನಟನೆಗಾಗಿ ಎರಡು ಭಾಷೆಗಳಲ್ಲಿ ಅತ್ಯುತ್ತಮ ನಟಿ ಕ್ರಿಟಿಕ್ಸ್​ ಅವಾರ್ಡ್‌ಗಳನ್ನು ರಶ್ಮಿಕಾ ಮಂದಣ್ಣ ಬಾಚಿಕೊಂಡಿದ್ದಾರೆ.

ಇದನ್ನೂ ಓದಿ: ಭ್ರಷ್ಟತೆಯ ಬಗ್ಗೆ ಮಧ್ಯಮ ವರ್ಗದ ನಂಬಿಕೆಯನ್ನು ಜನಪ್ರಿಯ ಧಾಟಿಯಲ್ಲಿ ಹೇಳುವ ಆಕ್ಟ್ – 1978

 

View this post on Instagram

 

A post shared by SIIMA (@siimawards)

 

View this post on Instagram

 

A post shared by SIIMA (@siimawards)

ನಾನುಗೌರಿ.ಕಾಂನೊಂದಿಗೆ ಮಾತನಾಡಿರುವ ಸೈಮಾ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದ ನಟ, ನಿರ್ದೇಶಕ ಬಿ.ಸುರೇಶ್, “ಪ್ರಶಸ್ತಿಗಳು ಬಹಳ ಮುಖ್ಯ ಅಲ್ಲ. ಅದಕ್ಕಿಂತ ಮುಖ್ಯವಾದದು ಜರ್ನಿ. ಈ ಪಯಣದಲ್ಲಿ ಏನೇನು ಮಾಡಲು ಸಾಧ್ಯವೋ ಅದನೇಲ್ಲಾ ಮಾಡಬೇಕು ಅಷ್ಟೇ. ಪ್ರಶಸ್ತಿ ಬಂದರೂ, ಬರದಿದ್ದರೂ ವ್ಯತ್ಯಾಸವಿಲ್ಲ. ಪ್ರಶಸ್ತಿಗಳನ್ನು ಮೀರಿದ್ದು ಬದುಕು” ಎಂದಿದ್ದಾರೆ.

“ಈ ಪಾತ್ರ ಮಾಡಲು ನನಗೆ ಕಥೆ ಹೇಳಿದಾಗ ನಾನು ಬೇರೆ ಐದು ಜನ ಕಲಾವಿದರ ಹೆಸರನ್ನು ಹೇಳಿ ಅವರು ನನಗಿಂತ ಚೆನ್ನಾಗಿ ಪಾತ್ರ ನಿರ್ವಹಿಸುತ್ತಾರೆ ಎಂದಿದ್ದೆ. ಆದರೆ, ನಿರ್ದೇಶಕರು ನೀವೇ ಈ ಪಾತ್ರ ಮಾಡಬೇಕು ಎಂದರು” ಎಂದು ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

 

View this post on Instagram

 

A post shared by SIIMA (@siimawards)

ಸೈಮಾ- 2021ರ ಕನ್ನಡ ವಿಭಾಗದ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ.

ಅತ್ಯುತ್ತಮ ನಟ: ದರ್ಶನ್​ (ಯಜಮಾನ)

ಅತ್ಯುತ್ತಮ ನಟಿ: ರಚಿತಾ ರಾಮ್​ (ಆಯುಷ್ಮಾನ್​ ಭವ)

ಅತ್ಯುತ್ತಮ ನಟ ಕ್ರಿಟಿಕ್ಸ್​ ಅವಾರ್ಡ್​: ರಕ್ಷಿತ್​ ಶೆಟ್ಟಿ (ಅವನೇ ಶ್ರೀಮನ್ನಾರಾಯಣ)

ಅತ್ಯುತ್ತಮ ನಟಿ ಕ್ರಿಟಿಕ್ಸ್​ ಅವಾರ್ಡ್​: ರಶ್ಮಿಕಾ ಮಂದಣ್ಣ (ಯಜಮಾನ)

ಅತ್ಯುತ್ತಮ ಹೊಸ ನಟ ಅಭಿಷೇಕ್​ ಅಂಬರೀಷ್​ (ಅಮರ್​)

ಅತ್ಯುತ್ತಮ ಪೋಷಕ ನಟಿ: ಕಾರುಣ್ಯ ರಾಮ್​ (ಮನೆ ಮಾರಾಟಕ್ಕಿದೆ)

ಅತ್ಯುತ್ತಮ ಪೋಷಕ ನಟ: ಬಿ.ಸುರೇಶ್ (ಆಕ್ಟ್-1978)

ಅತ್ಯುತ್ತಮ ಖಳನಟ: ಸಾಯಿ ಕುಮಾರ್​ (ಭರಾಟೆ)

ಅತ್ಯುತ್ತಮ ಚೊಚ್ಚಲ ನಿರ್ದೇಶನ: ಮಯೂರ ರಾಘವೇಂದ್ರ (ಕನ್ನಡ್​ ಗೊತ್ತಿಲ್ಲ)

ಅತ್ಯುತ್ತಮ ಹಾಸ್ಯ ಕಲಾವಿದ: ಸಾಧು ಕೋಕಿಲ (ಯಜಮಾನ)

ಅತ್ಯುತ್ತಮ ನಿರ್ದೇಶನ: ಹರಿಕೃಷ್ಣ, ಪೋನ್​ ಕುಮಾರ್​ (ಯಜಮಾನ)

ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ (ಯಜಮಾನ)

ಅತ್ಯುತ್ತಮ ನೃತ್ಯ ನಿರ್ದೇಶನ: ಇಮ್ರಾನ್​ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅನನ್ಯಾ ಭಟ್​ (ಗೀತಾ- ಕೇಳದೇ ಕೇಳದೇ)

ಅತ್ಯುತ್ತಮ ಸಾಹಿತ್ಯ: ಪವನ್​ ಒಡೆಯರ್​ (ನಟಸಾರ್ವಭೌಮ)

ಅತ್ಯುತ್ತಮ ಚಿತ್ರ (ಕನ್ನಡ) – ಮೀಡಿಯಾ ಹೌಸ್ ಸ್ಟುಡಿಯೋ (ಯಜಮಾನ)


ಇದನ್ನೂ ಓದಿ: ಹಿಂದೂಗಳ ಭಾವನೆಗೆ ಧಕ್ಕೆ ಆರೋಪ: ನಟಿ ತ್ರಿಷಾ ಬಂಧನಕ್ಕೆ ಒತ್ತಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -