Homeಕರ್ನಾಟಕಗುಜರಾತ್‌ನಲ್ಲಿ ಹೆರಾಯಿನ್ ವಶ: ಮೋದಿ ಮಿತ್ರ ಅದಾನಿಯ ಪಾತ್ರದ ಬಗ್ಗೆ ತನಿಖೆ ಏಕಿಲ್ಲ?- ಕಾಂಗ್ರೆಸ್

ಗುಜರಾತ್‌ನಲ್ಲಿ ಹೆರಾಯಿನ್ ವಶ: ಮೋದಿ ಮಿತ್ರ ಅದಾನಿಯ ಪಾತ್ರದ ಬಗ್ಗೆ ತನಿಖೆ ಏಕಿಲ್ಲ?- ಕಾಂಗ್ರೆಸ್

- Advertisement -
- Advertisement -

ಅದಾನಿ ಮಾಲೀಕತ್ವದಲ್ಲಿರುವ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಸುಮಾರು ಮೂರು ಟನ್‌ಗಳ 20 ಸಾವಿರ ಕೋಟಿ ರೂಪಾಯಿ ಮೌಲ್ಯಗಳ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಂದರಿನ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ತಾಲಿಬಾನ್‌‌‌ ಅಫ್ಘಾನ್‌‌‌ ಅನ್ನು ಸ್ವಾಧೀನಪಡಿಸಿಕೊಂಡ ತಿಂಗಳ ನಂತರ ಅಲ್ಲಿಂದ ಬಂದಿದ್ದ ಹೆರಾಯಿನ್, ದೆಹಲಿಗೆ ಕಡೆಗೆ ಹೊರಟಿದ್ದವು ಎಂದು ಹೇಳಲಾಗಿದ್ದು, ಸಾಗಾಟಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಗುಜರಾತ್‌ನ ಅಧಿಕಾರಿಯೊಬ್ಬರು ಹೇಳಿದ್ದಾಗಿ ದಿ ವೈರ್‌ ಉಲ್ಲೇಖಿಸಿದೆ.

ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನಿ ಮೋದಿ ಮತ್ತು ಒಕ್ಕೂಟ ಸರರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. “ಎರಡು ಕಂಟೈನರ್‌ಗಳಲ್ಲಿ 21 ಸಾವಿರ ಕೋಟಿ ಮೌಲ್ಯದ ಹೆರಾಯಿನ್‌ ಭಾರತಕ್ಕೆ ತರುವಲ್ಲಿ ಮೋದಿ ಮಿತ್ರ ಅದಾನಿಯ ಪಾತ್ರದ ಬಗ್ಗೆ ತನಿಖೆ ಏಕಿಲ್ಲ?” ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ವಿವಾದಾತ್ಮಕ ಕೃಷಿ ಕಾಯ್ದೆಗಳ ಹಿಂದೆ ಮೈಕ್ರೋಸಾಫ್ಟ್, ಅಮೆಜಾನ್ ಕಂಪನಿಗಳ ಲಾಬಿ: ಕುಮಾರ್ ಎಸ್

“ಗುಜರಾತಿನ ಅದಾನಿ ಪೋರ್ಟ್‌ನಲ್ಲಿ ಹಿಂದೆಂದೂ ಕಾಣದ ದಾಖಲೆ ಮೊತ್ತದ 3000 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. #HumDoHamareDo ಸರ್ಕಾರದಲ್ಲಿ ಮೋದಿ ಮಿತ್ರರು ಎಲ್ಲಾ ಬಗೆಯ ವ್ಯವಹಾರಗಳಿಗೂ ಇಳಿದರೆ..? ಈ ದೊಡ್ಡ ಮಟ್ಟದ ಡ್ರಗ್ಸ್ ಅಫಗಾನಿಸ್ತಾನದಿಂದ ಬಂದಿದ್ದು ಹೇಗೆ, ತಾಲಿಬಾನಿಗಳೊಂದಿಗೆ ಸಂಪರ್ಕ ಹೊಂದಿದವರಾರು..? ಈ ಬಗ್ಗೆ ಮೋದಿ ಮೌನವೇಕೆ..?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

“ಬಂದರು, ಏರ್ಪೋರ್ಟ್‌, ಡಿಫೆನ್ಸ್‌ನಂತಹ ದೇಶದ ಸೂಕ್ಷ್ಮ ಕ್ಷೇತ್ರಗಳನ್ನು ಸಂಪೂರ್ಣ ಧನದಾಹಿ ಉದ್ಯಮಿಗಳ ತೆಕ್ಕೆಯಲ್ಲಿಟ್ಟು ದೇಶವನ್ನು ಅಭದ್ರತೆಗೆ ದೂಡುವ ಕೆಲಸ ಮಾಡುತ್ತಿದೆ ಬಿಜೆಪಿ ಸರ್ಕಾರ. ಎರಡು ಕಂಟೈನರ್‌ಗಳಲ್ಲಿ 21 ಸಾವಿರ ಕೋಟಿ ಮೌಲ್ಯದ ಹೆರಾಯಿನ್‌ ಭಾರತಕ್ಕೆ ತರುವಲ್ಲಿ ಮೋದಿ ಮಿತ್ರ ಅದಾನಿಯ ಪಾತ್ರದ ಬಗ್ಗೆ ತನಿಖೆ ಏಕಿಲ್ಲ..?” ಎಂದಿದೆ.

“ದೇಶದೊಳಗೆ ನುಸುಳಲು ಮಾದಕವಸ್ತುಗಳ ಕಳ್ಳಸಾಗಾಣಿಕೆದಾರರಿಗೆ, ಭಯೋತ್ಪಾದಕರಿಗೆ ಗುಜರಾತ್ ಬಹುಪ್ರಿಯ ಸ್ಥಳ. ದೊಡ್ಡಮಟ್ಟದ ಡ್ರಗ್ಸ್ ದೇಶದೊಳಗೆ ಬರುವುದು ಗುಜರಾತ್ ಮೂಲಕವೇ ಏಕೆ? ಪ್ರಧಾನಿ ನರೇಂದ್ರಮೋದಿಯವರು ಕಳ್ಳರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದ್ದಾರೆಯೇ? ಗುಜರಾತಿನದ್ದು ಡ್ರಗ್ಸ್ ಮಾಡೆಲ್ ಎಂಬುದು ಈಗ ದೇಶದ ಜನತೆಗೆ ಈಗ ಅರಿವಾಗಿದೆ!” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅದಾನಿ ಮಾಲಿಕತ್ವದ ಬಂದರಿನಲ್ಲಿ 20 ಸಾವಿರ ಕೋಟಿ ರೂ.ಗಳ ಹೆರಾಯಿನ್ ವಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...