ಮಧ್ಯಪ್ರದೇಶದ ಶಹಾದೋಲ್ ಜಿಲ್ಲೆಯ ಬಿಜೆಪಿಯ ನಾಯಕ ಸೇರಿದಂತೆ ನಾಲ್ವರು ದುಷ್ಕರ್ಮಿಗಳು 20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಜೈತ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂತ್ರಸ್ತೆ ಯುವತಿಯನ್ನು ಆರೋಪಿಗಳು ಅಪಹರಿಸಿದ್ದರು. ನಂತರ ಗಡಘಾಟ್ ಪ್ರದೇಶದ ತೋಟದ ಮನೆಯೊಂದರಲ್ಲಿ ಕೂಡಿಹಾಕಿ ಯುವತಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಘಟನೆಯು ಫೆಬ್ರವರಿ 18 ಮತ್ತು 19 ರಂದು ನಡೆದಿದೆ ಎಂದು ಶಹದೋಲ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಮುಖೇಶ್ ವೈಶ್ ಹೇಳಿದ್ದಾರೆ.
ಇದನ್ನೂ ಓದಿ: ಆತ್ಮನಿರ್ಭರಕ್ಕಾಗಿ ಖಾಸಗಿಯವರನ್ನು ಬೆಂಬಲಿಸಿ: ಮೋದಿ ಹೇಳಿಕೆಗೆ ಕೆಲವು ಪ್ರಶ್ನೆಗಳು
“ಈ ನಾಲ್ವರು ಆರೋಪಿಗಳು ಫೆಬ್ರವರಿ 20 ರಂದು ಯುವತಿಯ ಮನೆಯ ಮುಂದೆ ಸಂತ್ರಸ್ತೆಯನ್ನು ಎಸೆದು ಹೋಗಿದ್ದಾರೆ. ಘಟನೆಯ ಬಗ್ಗೆ ಭಾನುವಾರದಂದು ಪೊಲೀಸ್ ದೂರು ನೀಡಲಾಗಿದೆ. ಯುವತಿಯನ್ನು ಮೊದಲು ಜೈತ್‌ಪುರ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ನಂತರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
Mandal president of the ruling party*
— Anurag Dwary (@Anurag_Dwary) February 21, 2021
ಬಿಜೆಪಿ ಜೈತ್‌ಪುತರ್ ಮಂಡಲ್ ಮುಖ್ಯಸ್ಥ ವಿಜಯ್ ತ್ರಿಪಾಠಿ ಕೂಡಾ ಈ ಅತ್ಯಾಚಾರದಲ್ಲಿ ಭಾಗಿಯಾಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಂಧನಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಎಎಸ್‌ಪಿ ಹೇಳಿದ್ದಾರೆ.
ಆರೋಪಿಗಳ ಹೆಸರಿನಲ್ಲಿ ಬಿಜೆಪಿ ನಾಯಕನ ಹೆಸರು ಉಲ್ಲೇಖಿಸಲ್ಪಟ್ಟಿರುವ ಸುದ್ದಿ ಹೊರಬೀಳುತ್ತಿದ್ದಂತೆ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ಪಕ್ಷವು ತಿಳಿಸಿದೆ.
ಶಹದೋಲ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಮಲ್ ಪ್ರತಾಪ್ ಸಿಂಗ್ ಅವರು ವಿಜಯ್ ತ್ರಿಪಾಠಿ ಅವರನ್ನು ಜೈತ್‌ಪುರ ಮಂಡಲ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತುಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನನ್ನ ಬಂಧನದಲ್ಲಿ ಬಿಜೆಪಿಯ ಪಿತೂರಿಯಿದೆ ಎಂದ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ


