‘ಇದೇನಾ ಅಚ್ಚೇ ದಿನ್’- ಮುಂಬೈಯ ಬೀದಿ ಬೀದಿಗಳಲ್ಲಿ ಬ್ಯಾನರ್‌ ಅಳವಡಿಸಿದ ಶಿವಸೇನೆ!

ಮುಂಬಯಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ 97 ರೂ. ತಲುಪಿದ ಎರಡು ದಿನಗಳಲ್ಲಿ, ಶಿವಸೇನೆಯ ಯುವ ವಿಭಾಗವಾದ ಯುವಸೇನೆಯು ಸೋಮವಾರ ನಗರದ ಹಲವಾರು ಪೆಟ್ರೋಲ್ ಪಂಪ್‌ಗಳಲ್ಲಿ ಬ್ಯಾನರ್‌ಗಳನ್ನು ಹಾಕಿದೆ.

2014 ರ ಲೋಕಸಭಾ ಚುನಾವಣೆಯ ಸಂದರ್ಭದ ಬಿಜೆಪಿಯ ‘ಅಚ್ಚೆ ದಿನ್ ಆನೆ ವಾಲೆ ಹೈ’ (ಒಳ್ಳೆಯ ದಿನಗಳು ಬರಲಿವೆ) ಘೋಷವಾಕ್ಯವನ್ನು ಪ್ರಶ್ನಿಸಿ ‘ಇದೇನಾ ಒಳ್ಳೆಯ ದಿನಗಳು’ ಎಂದು ಬರೆದಿರುವ ಬ್ಯಾನರ್‌ಗಳನ್ನು ಹಾಕುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಜನರಿಗೆ ಗುರುತು ಸಿಗಬಾರದು ಅಂತ ಗಡ್ಡ ಬೆಳೆಸಿದ್ದಾರೆ: ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯ

ಈ ಬ್ಯಾನರ್‌ಗಳನ್ನು ಮುಂಬೈಯ ಪೆಟ್ರೋಲ್ ಪಂಪ್, ರಸ್ತೆಬದಿಗಳಲ್ಲಿ ನೇತು ಹಾಕಿದ್ದು, ಇದೇನಾ ಒಳ್ಳೆಯ ದಿನಗಳು ಪ್ರಶ್ನೆಯ ಜೊತೆಗೆ 2015 ಮತ್ತು 2021 ರಲ್ಲಿ ಗ್ಯಾಸ್, ಡೀಸೆಲ್, ಪೆಟ್ರೋಲ್‌ ಬೆಲೆಗಳ ಹೋಲಿಕೆಗಳನ್ನು ಮಾಡಲಾಗಿದೆ. ಬ್ಯಾನರ್‌‌ನಲ್ಲಿ, 2015 ರಂದು ಗ್ಯಾಸ್‌ಗೆ 572.55 ಇತ್ತು 2021 ರಲ್ಲಿ 719 ಆಗಿದೆ. ಡೀಸೆಲ್‌ಗೆ 52.99 ಇದ್ದದ್ದು 88.06 ಆಗಿದೆ. ಪೆಟ್ರೋಲ್‌ಗೆ 64.60  ಇದ್ದದ್ದು 96.62 ಆಗಿದೆ ಎಂದು ಬರೆಯಲಾಗಿದೆ.

ಸೋಮವಾರ ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 97 ರೂ.ಗಳಾಗಿದ್ದು, ಡೀಸೆಲ್ ಬೆಲೆ ಲೀಟರ್‌ಗೆ 88.06 ರೂ.ಗಳಷ್ಟಾಗಿದೆ.

ಇಂಧನ ಬೆಲೆಗಳ ಹೆಚ್ಚಳದ ಬಗ್ಗೆ ಮಾತನಾಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, “ಇಂಧನ ಬೆಲೆ ಏರಿಕೆಗೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯು ಇಂಧನ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಎರಡನೆಯದಾಗಿ ಇಂಧನಗಳನ್ನು ಉತ್ಪಾದಿಸುವ ರಾಷ್ಟ್ರಗಳು ಹೆಚ್ಚಿನ ಲಾಭ ಗಳಿಸಲು ಕಡಿಮೆ ಇಂಧನವನ್ನು ಉತ್ಪಾದಿಸುತ್ತಿವೆ. ಇದರಿಂದ ಗ್ರಾಹಕ ದೇಶಗಳು ತೊಂದರೆ ಅನುಭವಿಸುತ್ತಿವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆತ್ಮನಿರ್ಭರಕ್ಕಾಗಿ ಖಾಸಗಿಯವರನ್ನು ಬೆಂಬಲಿಸಿ: ಮೋದಿ ಹೇಳಿಕೆಗೆ ಕೆಲವು ಪ್ರಶ್ನೆಗಳು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

LEAVE A REPLY

Please enter your comment!
Please enter your name here