ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸೋಮವಾರದಿಂದ ನೆರೆಯ ರಾಜ್ಯವನ್ನು ಜಿಲ್ಲೆಯೊಂದಿಗೆ ಸಂಪರ್ಕಿಸುವ 9 ರಸ್ತೆಗಳನ್ನು ಮುಚ್ಚಲಿದೆ.
ಜಿಲ್ಲೆಯನ್ನು ಕೇರಳದೊಂದಿಗೆ ಸಂಪರ್ಕಿಸುವ 14 ರಸ್ತೆಗಳಿದ್ದು, ಅವುಗಳಲ್ಲಿ ತಲಪಾಡಿ (ಮಂಗಳೂರು ತಾಲ್ಲೂಕು), ಸಾರಡ್ಕ (ಬಂಟ್ವಾಳ), ಮೆನಾಲಾ (ಪುತ್ತೂರು), ನೆಟ್ಟನಿಗೆ ಮುಡ್ನೂರು (ಪುತ್ತೂರು) ಮತ್ತು ಜಾಲ್ಸೂರ್ (ಸುಳ್ಯ) ರಸ್ತೆಗಳನ್ನು ಮಾತ್ರ ಮುಕ್ತವಾಗಿ ಇಡಲಾಗುವುದು.
ಇದನ್ನೂ ಓದಿ: ಕರ್ನಾಟಕ ಸರ್ಕಾರದ ಈ ಕ್ರಮದಿಂದ ಧರ್ಮನಿರಪೇಕ್ಷತೆಗೆ ಕತ್ತರಿ – ಡಾ.ಬಿ.ಪಿ.ಮಹೇಶ್ ಚಂದ್ರ ಗುರು
ಬಂಟ್ವಾಳ ತಾಲೂಕಿನ ಅಂತರಾಜ್ಯ ಗಡಿ ಪಾತೂರ್ ಮೂಲಕ ಮುಡಿಪು ಮತ್ತು ಸಾಲೆತ್ತೂರ್ ನಡುವೆ ಪ್ರಯಾಣಿಸುವ ಜನರು ಈಗ ಮಂಚಿ-ಇರಾ ಮೂಲಕ ಆರು ಕಿಲೋಮೀಟರ್ ದೂರ ಹೆಚ್ಚು ಪ್ರಯಾಣಿಸಬೇಕಾಗತ್ತದೆ. ಗಡಿ ಜಿಲ್ಲೆಗಳ ನಡುವೆ ಜನರ ಸಂಚಾರ ಬಹಳ ಹೆಚ್ಚಿರುವುದರಿಂದ ಕೇರಳದ ಹೆಚ್ಚಿನ ಗಡಿಗಳನ್ನು ಮುಚ್ಚುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಹೇಳಿಕೆಯನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ಇದು ಜನನಿಬಿಡ ಗಡಿಯಾಗಿದ್ದು, ಜಿಲ್ಲೆಗಳ ನಡುವೆ ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಕೊರೊನಾ ನೆಗೆಟಿವ್ ವರದಿಯನ್ನು ಹದಿನೈದು ದಿನಕ್ಕೊಮ್ಮೆ ದೈನಂದಿನ ಪ್ರಯಾಣಿಕರಿಗೆ ಕಡ್ಡಾಯಗೊಳಿಸಲಾಗಿದ್ದರೂ, ಪ್ರವೇಶ ಗಡಿಗಳನ್ನು ತೆರೆದಿದ್ದರೆ ಇದನ್ನು ಕಾರ್ಯಗತಗೊಳಿಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ, ಕೆಲವು ಗಡಿ ಕೇಂದ್ರಗಳನ್ನು ಮುಚ್ಚಲೇಬೇಕಾಗಿದೆ” ಎಂದು ಅವರು ಹೇಳಿದ್ದಾರೆ.
ಜಿಲ್ಲಾಡಳಿತದ ನಿರ್ಧಾರವು ಸಾವಿರಾರು ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ನಡುವೆ ಪ್ರತಿದಿನ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಇದು ತೊಂದರೆಯನ್ನುಂಟು ಮಾಡುತ್ತದೆ.
ಇದನ್ನೂ ಓದಿ: ಪಂಜಾಬ್: ರೈತರ ಮಹಾರ್‍ಯಾಲಿಯಲ್ಲಿ ಮಿಂದೆದ್ದ ಬರ್ನಾಲಾ ಜಿಲ್ಲೆ!
