Homeಅಂಕಣಗಳುಗೌರಿ ಕಾರ್ನರ್: ಆಲ್ ಗೋರ್ ಎಂಬ ವಿಭಿನ್ನ ವ್ಯಕ್ತಿ

ಗೌರಿ ಕಾರ್ನರ್: ಆಲ್ ಗೋರ್ ಎಂಬ ವಿಭಿನ್ನ ವ್ಯಕ್ತಿ

- Advertisement -
- Advertisement -

ಅಮೆರಿಕದ ಮಾಜಿ ಉಪಾಧ್ಯಕ್ಷನಾಗಿದ್ದ, ‘An Inconvent Truth’ ಎಂಬ ಸಾಕ್ಷ್ಯ ಚಿತ್ರದಲ್ಲಿ ಭಾಗವಹಿಸಿ ಜಾಗತಿಕ ತಾಪಮಾನದ ಏರುವಿಕೆಯ ಬಗ್ಗೆ ಎಲ್ಲೆಡೆ ಎಚ್ಚರ ಮೂಡಿಸಿದ, ಅದಕ್ಕಾಗಿಯೇ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದ ಮನುಷ್ಯ ಗೋರ್.

PC : 500 Days Of Film

ಹಾಗೆ ನೋಡಿದರೆ ಗೋರ್ ಕೂಡ ಅದೆಷ್ಟೋ ಅಮೆರಿಕನ್ನರಂತೆ ಸಾಮಾನ್ಯ ಮನುಷ್ಯನಾಗುವ, ಅದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಮೆರಿಕದ ಹಾಲಿ ಅಧ್ಯಕ್ಷ ಜಾರ್ಜ್ ಬುಷ್‌ನಂತೆ ಯುದ್ಧಕೋರನೂ, ಅತಾರ್ಕಿಕ ವಾದಗಾರನೂ, ಆಸಂಬದ್ಧ ಚಿಂತನೆಯವನೂ ಆಗುವ ಅಪಾಯವಿತ್ತು. ಯಾಕೆಂದರೆ ಬುಷ್‌ನಂತೆ ಗೋರ್ ಕೂಡ ಹಣ ಮತ್ತು ರಾಜಕೀಯ ಹಿರಿಮೆ ಹೊಂದಿದ್ದ ವಂಶದಲ್ಲಿ ಜನಿಸಿದ್ದ, ಆತನಂತೆ ಖ್ಯಾತ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆದ, ಕೊನೆಗೆ ಸಕ್ರಿಯ ರಾಜಕೀಯಕ್ಕೂ ಕಾಲಿಟ್ಟಿದ್ದ.

ಆದರೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ರೂಪಿಸುವುದು ಅವರ ಅನುಭವಗಳು. ಉದಾಹರಣೆಗೆ ಜಾರ್ಜ್ ಬುಷ್ ತನ್ನ ವಂಶದ ಬಲ ಉಪಯೋಗಿಸಿಕೊಂಡು ವಿಯಟ್ನಾಮ್ ಯುದ್ಧದಲ್ಲಿ ’ಪಾಲ್ಗೊಂಡರು’ ಎಂದೂ ಯುದ್ಧಭೂಮಿಯಲ್ಲಿ ಕಾಲಿಡದಂತೆ ಎಚ್ಚರ ವಹಿಸಿದ. ಇಂತಹದೇ ನಕಲಿ ಪಾಲ್ಗೊಳ್ಳುವಿಕೆಯ ಅವಕಾಶ ಆಲ್ ಗೋರ್‌ಗೂ ಒದಗಿ ಬಂದಿತ್ತು. ಆದರೆ ಆ ಅವಕಾಶವನ್ನು ನಿರಾಕರಿಸಿದ್ದ ಗೋರ್. ಈ ಕಾರಣಕ್ಕೆ ಮಾತ್ರ ವಿಚಿತ್ರವಾಗಿಯೂ, ವಿಭಿನ್ನವಾಗಿಯೂ ಕಾಣಿಸುತ್ತಿದ್ದ ಮೊದಲೇ, ಆತ ನೈತಿಕ ಕಾರಣಗಳಿಗಾಗಿ ವಿಯಟ್ನಾಮ್ ಯುದ್ಧವನ್ನು ಗೋರ್ ವಿರೋಧಿಸಿದ್ದರೂ ತನ್ನ ನಾಗರಿಕ ಜವಾಬ್ದಾರಿಗಳಿಂದ ಹಿಂಜರಿಯಬಾರದೆಂದು ಸೈನ್ಯವನ್ನು ಸೇರಿದ್ದ.

PC : Wikipedia (ಜಾರ್ಜ್ ಬುಷ್)

ಆ ಯುದ್ಧದಲ್ಲಿ ತಾನು ಕಂಡದ್ದನ್ನು ಗೋರ್ ಹೀಗೆ ವಿವರಿಸುತ್ತಾನೆ: “ಆ ಯುದ್ಧ ಒಂದು ದೊಡ್ಡ ತಪ್ಪು ಎಂಬ ನನ್ನ ಅಭಿಪ್ರಾಯದಲ್ಲಿ ಯಾವ ಬದಲಾವಣೆಗಳೂ ಆಗಲಿಲ್ಲ. ಆದರೆ ಅದನ್ನು ವಿರೋಧಿಸುತ್ತಿದ್ದ ನನ್ನಂತಹವರನ್ನೂ ಅಚ್ಚರಿಗೊಳಿಸಿದ ಅಂಶ ಯಾವುದೆಂದರೆ ಅಲ್ಲಿನ ಜನ ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕೆಂದು ತೀವ್ರವಾಗಿ ಹೋರಾಟ ಮಾಡುತ್ತಿದ್ದದ್ದು.”

ಯುದ್ಧದಿಂದ ಹಿಂದಿರುಗಿದ ಗೋರ್ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಐದು ವರ್ಷಗಳ ಕಾಲ ತನ್ನ ರಾಜ್ಯದಲ್ಲಿನ ಪತ್ರಿಕೆಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡಿದ. ಆಗ ಆತ ಬರೆದ ತನಿಖಾ ವರದಿಗಳಿಂದಾಗಿ ಅಲ್ಲಿನ ಪೌರಾಡಳಿತದಲ್ಲಿನ ಭ್ರಷ್ಟಾಚಾರ ಬಹಿರಂಗಗೊಂಡು ಇಬ್ಬರು ಅಧಿಕಾರಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತು. ಆದರೆ ಅದು ಗೋರ್‌ಗೆ ಸಮಾಧಾನ ತರಲಿಲ್ಲ. ಭ್ರಷ್ಟಾಚಾರವನ್ನು ಬಹಿರಂಗಗೊಳಿಸುವ ಬದಲಾಗಿ ಅದನ್ನು ತಡೆಯಬಹುದಾದ ಸ್ಥಾನದಲ್ಲಿದ್ದರೆ ವಾಸಿ ಎಂದು ನಿರ್ಧರಿಸಿದ. ಆ ನಿಟ್ಟಿನಲ್ಲಿ ವಕೀಲನಾಗಬೇಕೆಂದು ಕಾನೂನು ವಿದ್ಯಾಲಯವನ್ನು ಸೇರಿದ.

ಆದರೆ ಅದನ್ನು ಸಂಪೂರ್ಣಗೊಳಿಸುವ ಮುನ್ನ ಆತನ ಕ್ಷೇತ್ರದ ರಾಜಕೀಯ ನಾಯಕ ನಿವೃತ್ತಿ ಘೋಷಿಸಿದ. ಆ ಸ್ಥಾನಕ್ಕೆ ತಾನೇಕೆ ಸ್ಪರ್ಧಿಸಬಾರದೆಂದು ಚಿಂತಿಸಿ, ಸಕ್ರಿಯ ರಾಜಕೀಯವನ್ನು ಗೋರ್ ಪ್ರವೇಶಿಸಿದ. ಸ್ಥಳೀಯ ಚುನಾವಣೆಗಳಲ್ಲಿ ಗೆದ್ದು ರಾಜಕಾರಣಿ ಆದ. ಗೋರ್ ಅನಂತರ ಹಲವು ಬಾರಿ ಸೆನೆಟರ್ ಆಗಿಯೂ ಆಯ್ಕೆಯಾದ.

ಆದರೆ ಅಲ್ಲೂ ಗೋರ್‌ನದ್ದು ವಿಶಿಷ್ಟ ನಿಲುವುಗಳು. ಯಾವ ಸದ್ದಾಂ ಹುಸೇನನು ಸಾಮೂಹಿಕ ವಿನಾಶಕಾರಿ ಆಸ್ತ್ರಗಳನ್ನು ಹೊಂದಿದ್ದನೆಂದೂ, ಇರಾಕಿನಲ್ಲಿನ ಕುರ್ದ್ ಸಮುದಾಯದ ಜನಾಂಗೀಯ ಹತ್ಯೆ ನಡೆಸಿದ್ದನೆಂದೂ ಆತನಿಗೆ ಮೊನ್ನೆ ಅಮೆರಿಕ ಗಲ್ಲುಶಿಕ್ಷೆ ವಿಧಿಸಿತ್ತೋ, ಅದೇ ಆಮೆರಿಕ 60 ದಶಕದಲ್ಲಿ ಆದೇ ಸದ್ದಾಂನಿಗೆ ಆರ್ಥಿಕ ಮತ್ತು ಶಸ್ತ್ರಾಸ್ತ್ರಗಳ ನೆರವನ್ನು ನೀಡುತ್ತಿದ್ದನ್ನು ಆಗಲೇ ಗೋರ್ ವಿರೋಧಿಸಿದ್ದ.

PC : Wikipedia, (ರೋನಾಲ್ಡ್ ರೇಗನ್)

ಆಗ ಗೋರ್, ಸದ್ದಾಂನ ಕೃತ್ಯಗಳನ್ನು ತಡೆಯಬೇಕಾದರೆ ಆತನಿಗೆ ಅಮೆರಿಕ ಯಾವುದೇ ರೀತಿಯ ಸಹಾಯ ಮಾಡಬಾರದೆಂಬ ಕಾಯಿದೆಯನ್ನು ಸೆನೆಟ್‌ನಲ್ಲಿ ಜಾರಿಗೆ ತರಲು ಎರಡು ಬಾರಿ ಪ್ರಯತ್ನಿಸಿದ್ದ. ಆಗ ಗೋರ್‌ನನ್ನು ವಿರೋಧಿಸಿ ಆತ ರೂಪಿಸಿದ್ದ ಕಾಯಿದೆ ಅನುಷ್ಠಾನಕ್ಕೆ ಬಾರದಂತೆ ಅಂದಿನ ಅಧ್ಯಕ್ಷ ರೋನಾಲ್ಡ್ ರೇಗನ್ ಮತ್ತು ಉಪಾಧ್ಯಕ್ಷ ಜಾರ್ಜ್ ಬುಷ್‌ರ (ಹಾಲಿ ಅಧ್ಯಕ್ಷನ ತಂದೆ) ಸರ್ಕಾರ ತಡೆದಿತ್ತು. ಈ ವಿರೋಧದ ನಡುವೆಯೂ ಮತ್ತೆ 1988ರಲ್ಲಿ ಸಾಮೂಹಿಕ ಹತ್ಯಾವಿರೋಧಿ ಕಾಯಿದೆಯನ್ನು ಗೋರ್ ಸೆನೆಟ್‌ಗಳಲ್ಲಿ ಮಂಡಿಸಿದ್ದ. ಆಗ ರೇಗನ್‌ಗೆ ಗೋರ್ ಮೇಲೆ ಎಷ್ಟು ಕೋಪ ಬಂದಿತ್ತೆಂದರೆ, ತನ್ನ ಅಧ್ಯಕ್ಷ ಸ್ಥಾನ ನೀಡಿದ ವೀಟೋ ಹಕ್ಕನ್ನು ಜಾರಿಗೊಳಿಸುವುದಾಗಿ ಬೆದರಿಸಿದ್ದ.

ಇದಕ್ಕೆ ಉತ್ತರವಾಗಿ ತಾನೇ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಗೋರ್ ನಿರ್ಧರಿಸಿದ. ಅದಕ್ಕೆಂದು ಎಲ್ಲಾ ತಯಾರಿಗಳೂ ನಡೆಯುತ್ತಿದ್ದಾಗಲೇ ಅಪಘಾತವೊಂದರಲ್ಲಿ ಆತನ ಮಗನಿಗೆ ಮಾರಣಾಂತಿಕ ಗಾಯಗಳಾದವು. ತನ್ನ ಅಧ್ಯಕ್ಷ ಕನಸುಗಳನ್ನು ಬದಿಗೊತ್ತಿ ಮಗನ ಶುಶ್ರೂಷೆಗೆ ತಂದೆ ಗೋರ್ ನಿಂತ. ಹಾಗೆ ಮಗನನ್ನು ನೋಡಿಕೊಳ್ಳುತ್ತಿದ್ದಾಗಲೇ ಪರಿಸರ ರಕ್ಷಣೆಯನ್ನು ಕುರಿತು ‘Earth in the Balance’ ಎಂಬ ಪುಸ್ತಕವನ್ನು ಬರೆದ. ಇದು ಅತ್ಯಂತ ಜನಪ್ರಿಯವಾಗಿ ಅಪಾರ ಸಂಖ್ಯೆಯಲ್ಲಿ ಮಾರಾಟವಾಯಿತು. 1992ರಲ್ಲಿ ಡೆಮಾಕ್ರಾಟ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಲ್ ಕ್ಲಿಂಟನ್, ತನ್ನೊಂದಿಗೆ ಉಪಾಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿ ಆಲ್ ಗೋರ್‌ನನ್ನು ಆಯ್ಕೆ ಮಾಡಿಕೊಂಡ. ಆ ಚುನಾವಣೆಯಲ್ಲಿ ಅವರಿಬ್ಬರೂ ಗೆದ್ದರು. ಮಾತ್ರವಲ್ಲ; ಉಪಾಧ್ಯಕ್ಷನಾಗಿ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಹಲವು ಕಾನೂನುಗಳು ಜಾರಿಗೆ ಬರುವಂತೆ ಗೋರ್ ನೋಡಿಕೊಂಡ.

ಎಂಟು ವರ್ಷಗಳ ಕಾಲ ಉಪಾಧ್ಯಕ್ಷನಾದ ಗೋರ್ 2000ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ. ಆ ಚುನಾವಣೆಯಲ್ಲಿ ಮತಚೀಟಿಗಳಲ್ಲಿ ಗೊಂದಲ ಸೃಷ್ಟಿಯಾಗಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಗೋರ್‌ನ ಪ್ರತಿಸ್ಪರ್ಧಿ ಜಾರ್ಜ್ ಬುಷ್ ಗೆದ್ದಿದ್ದಾನೆಂದು ಘೋಷಿಸಿತು. ಈ ತೀರ್ಪನ್ನು ಗೋರ್ ಪ್ರಶ್ನಿಸಬಹುದಿತ್ತು. ಆದರೆ ಆತ ಹಾಗೆ ಮಾಡಲಿಲ್ಲ. ಬದಲಾಗಿ, “ನಮ್ಮ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತ್ತು ಜನರ ಐಕ್ಯತೆಯನ್ನು ಕಾಪಾಡಲು ಈ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ” ಎಂದು ಹೇಳಿ ತನ್ನ ಸಜ್ಜನಿಕೆಯನ್ನು ಮೆರೆದ. ವಾಸ್ತವವಾಗಿ ಆ ಚುನಾವಣೆಗಳಲ್ಲಿ ಬುಷ್‌ಗಿಂತಲೂ ಗೋರ್‌ಗೆ ಐವತ್ತು ಲಕ್ಷ ಹೆಚ್ಚು ಜನಪ್ರಿಯ ಮತಗಳು ಬಂದಿದ್ದವು! ಆದ್ದರಿಂದ ಆತ ಮತ್ತೆ 2004ರಲ್ಲಿ ಬುಷ್ ವಿರುದ್ಧ ಸ್ಪರ್ಧಿಸಬೇಕೆಂಬ ಒತ್ತಡ ಪ್ರಾರಂಭವಾಯಿತು. ಇದಕ್ಕೆ ಮಣಿಯದ ಗೋರ್ ’ನಾನು ಸ್ಪರ್ಧಿಸುವುದಿಲ್ಲ, ಬದಲಾಗಿ ಹೊಸ ಮುಖಗಳು ಬರಲಿ’ ಎಂದು ಹೇಳಿ ಸುಮ್ಮನಾದ.

PC : Wikipedia

ಗೋರ್‌ನ ಭಾಷಣಗಳು ಎಷ್ಟು ಜನಪ್ರಿಯತೆ ಪಡೆದವೆಂದರೆ ಅದಕ್ಕೆಂದು ನೀಡುತ್ತಿದ್ದ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗುತ್ತಿದ್ದವು. ಇದು ಹಲವಾರು ಕಡೆ ನಡೆದಾಗ ಗೋರ್‌ರವರ ಈ ಭಾಷಣವನ್ನೆ ಯಾಕೆ ಒಂದು ಸಾಕ್ಷ್ಯ ಚಿತ್ರವನ್ನಾಗಿಸಬಾರದು ಎಂಬ ಚಿಂತನೆ ಡೇವಿಸ್ ಗುಗನ್‌ಹೈಮ್ ಎಂಬುವವರಲ್ಲಿ ಮೂಡಿತು. ಅದರ ಪರಿಣಾಮವೇ ‘An Inconvenient Truth’ ಎಂಬ ಚಿತ್ರ. ಅದಕ್ಕೆ ಸಾಕ್ಷ್ಯ ಚಿತ್ರಗಳ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯೂ ಲಭಿಸಿತು.

ಇದೆಲ್ಲದರ ಮಧ್ಯೆ ಗೋರ್ ಬುಷ್‌ರವರ ಯುದ್ಧಕೋರತನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ದಾಳಿಯನ್ನೇ ನೆಪವಾಗಿಟ್ಟುಕೊಂಡು ಇರಾಕಿನ ಮೇಲೆ ನಡೆಸಿದ ದಾಳಿಯನ್ನು ಕಟುವಾಗಿ ಟೀಕಿಸಿರುವ ಗೋರ್ ಬುಷ್‌ನ ಈ ನೀತಿಯನ್ನು ವಿರೋಧಿಸುವವರಿಗೆ ಧನಸಹಾಯ ಮಾಡುತ್ತಾ ಬಂದಿದ್ದಾರೆ.

ಅಲ್ ಗೋರ್ ನಿಜವಾಗಲೂ ವಿಭಿನ್ನ ವ್ಯಕ್ತಿತ್ವದ ಮನುಷ್ಯ. ನಮ್ಮ ಭೂಮಿಯನ್ನು ನಮ್ಮ ಮಕ್ಕಳಿಗಾಗಿ ಮೊಮ್ಮಕ್ಕಳಿಗಾಗಿ ಉಳಿಸಬೇಕೆಂಬುದರ ಬಗ್ಗೆ ಜಾಗತಿಕ ಎಚ್ಚರಿಕೆಯನ್ನು ನೀಡಿದ ವ್ಯಕ್ತಿ. ಇಂತಹ ವ್ಯಕ್ತಿಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಹಾಗೆ ನೋಡಿದರೆ ರಕ್ತಸಿಕ್ತ ಯುದ್ಧಗಳನ್ನು ನಿಲ್ಲಿಸಿದ್ದಕ್ಕೆ ಅಥವಾ ತಡೆದಿದ್ದಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈಗ ಪ್ರಕೃತಿಯೊಂದಿಗೆ ಮಾನವ ನಡೆಸುತ್ತಿರುವ ವಿನಾಶಕಾರಿ ಯುದ್ಧವನ್ನು ತುರ್ತಾಗಿ ತಡೆಯಬೇಕು ಎಂದಿದ್ದಕ್ಕೆ ಗೋರ್‌ಗೆ ಇದನ್ನು ನೀಡಲಾಗಿದೆ.

(ಅಕ್ಟೋಬರ್ 24, 2007ರಂದು ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಕ್ಯಾಪಿಟಲ್ ಮೇಲೆ ದಾಳಿ – ಟ್ರಂಪ್ ಪದಚ್ಯುತಿಗೆ ಮುಂದಾದ ಅಮೆರಿಕ ಸಂಸತ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...