Homeನಾನು ಗೌರಿಕಲ್ಬುರ್ಗಿ ಗೌರಿಯರನ್ನು ಕೊಂದದ್ದು ಒಂದೇ ಬಂದೂಕು!

ಕಲ್ಬುರ್ಗಿ ಗೌರಿಯರನ್ನು ಕೊಂದದ್ದು ಒಂದೇ ಬಂದೂಕು!

- Advertisement -
- Advertisement -

ತನಿಖೆ ಆರಂಭವಾದ ಶುರುವಿನಿಂದಲೂ, ‘ಇದು ಪೂರ್ವಾಗ್ರಹಪೀಡಿತ ತನಿಖೆ’ ಎಂದು ಒಂದು ಕಥನ ಕಟ್ಟುವ ಪ್ರಕ್ರಿಯೆ ಬಲಪಂಥೀಯ ಶಕ್ತಿಗಳಿಂದ ನಿರಂತರ ಜಾರಿಯಲ್ಲಿತ್ತು. ಈ ಸಮಸ್ಯೆಯನ್ನು ಎದುರುಗೊಂಡು ನಿಷ್ಪಕ್ಷಪಾತ ತನಿಖೆಯ ಪ್ರಕ್ರಿಯೆಯನ್ನು ಮುಂದುವರೆಸುವುದು ಹಾಗೂ ಈ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕಾದ ಒತ್ತಡ ತನಿಖಾ ತಂಡದ ಮೇಲಿತ್ತು. ಇದಲ್ಲದೆ, ತನಿಖೆಯ ದೃಷ್ಟಿ ತಮ್ಮೆಡೆಗೇ ಹರಿದಿದೆಯೆಂದು ಆರೋಪಿಗಳಿಗೆ ಆದಷ್ಟು ಕಾಲ ಸುಳಿವು ಸಿಗದಂತೆ ನೋಡಿಕೊಳ್ಳುವ ಸವಾಲೂ ಕೂಡ ತನಿಖಾ ತಂಡದ ಮುಂದಿತ್ತು.
ಈ ತನಿಖೆಯ ಮೊಟ್ಟಮೊದಲ ಸುಳಿವು ಸಿಕ್ಕಿದ್ದು ಸೆಪ್ಟೆಂಬರ್ 13ರಂದು. ಅಂದರೆ ಕೊಲೆ ನಡೆದು ಸರಿಯಾಗಿ ವಾರದ ನಂತರ. ತನಿಖೆಯ ದಿಕ್ಕನ್ನು ಬಹುತೇಕ ನಿರ್ಣಯಿಸಿದ್ದು ಇದೇ ಸುಳಿವು. ಬಲಪಂಥೀಯ ಹಿಂದೂ ಉಗ್ರವಾದವೇ ಮುಖ್ಯ ಎಳೆಯಾಗಿತ್ತು. ಆದರೆ ತನಿಖಾದಳ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾಗಿದ್ದರಿಂದ ಈ ಸುಳಿವನ್ನು ಸಾರ್ವಜನಿಕಗೊಳಿಸಲಿಲ್ಲ. ಮಾಧ್ಯಮಗಳಿಂದ ಪ್ರಶ್ನೆ ಬಂದಾಗಲೂ ಅದನ್ನು ಅಲ್ಲಗಳೆಯುತ್ತಲೇ ಬಂತು.
ಏನದು ಸೆಪ್ಟೆಂಬರ್ 13, ತನಿಖಾದಳಕ್ಕೆ ಸಿಕ್ಕ ಸುಳಿವು? ಗೌರಿ ಹತ್ಯೆ ನಡೆದ ಸ್ಥಳದಲ್ಲಿ ಆಕೆಯತ್ತ ಸಿಡಿದ ನಾಲ್ಕು ಗುಂಡುಗಳ ಹೊರಕವಚ ಲಭಿಸಿದ್ದು ಅವು ದಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯಾ ಸ್ಥಳಗಳಲ್ಲಿ ಸಿಕ್ಕಂತೆಯೇ 7.65 ಮಿಲಿಮೀಟರ್ ಕ್ಯಾಲಿಬರ್‍ನ ನಾಡಪಿಸ್ತೂಲಿನವೇ ಆಗಿತ್ತು ಎಂದು ಹೇಳಿದ್ದೆನಷ್ಟೆ. ಕೂಡಲೇ ಈ ಹತ್ಯೆಗಳಿಗಿರುವ ಸಾಮ್ಯತೆಯ ಕಾರಣ ಅಲ್ಲಿ ಸಿಕ್ಕ ಗುಂಡಿನ ಹೊರಕವಚಗಳ ಜೊತೆ ಹೋಲಿಸಿದರು ವಿಧಿವಿಜ್ಞಾನ ತಜ್ಞರು. ಹೀಗೆ ಹೋಲಿಸಿದಾಗ ಎರಡು ಗುಂಡುಗಳು ಒಂದೇ ಬಂದೂಕಿನಿಂದ ಸಿಡಿದವೇ ಅಥವ ಎರಡು ಬೇರೆ ಬೇರೆ ಬಂದೂಕುಗಳಿಂದ ಸಿಡಿದವೇ ಎಂದು ಹೇಳಬಹುದು. ಹೇಗೆ? ಅದಕ್ಕೆ ಮೊದಲು ಒಂದು ಪಿಸ್ತೂಲು ಹೇಗೆ ಕೆಲಸ ಮಾಡುತ್ತದೆಂದು ತಿಳಿದುಕೊಳ್ಳಬೇಕು. ಪಿಸ್ತೂಲಿನಲ್ಲಿ ಗುಂಡುಗಳನ್ನು ತುಂಬಿರಲಾಗುತ್ತದೆ. ಪಿಸ್ತೂಲಿನ ಟ್ರಿಗರ್ ಒತ್ತಿದಾಗ, ಆ ಕೀಲು ಹೋಗಿ ಗುಂಡಿಗೆ ಬಡಿದು ಅದನ್ನು ಅಸಾಧ್ಯ ವೇಗದಲ್ಲಿ ಮುಂದೆ ತಳ್ಳುತ್ತದೆ. ಹೀಗೆ ಹೊರದಬ್ಬಿಸಿಕೊಂಡ ಗುಂಡು ಬಹುವೇಗದಲ್ಲಿ ತಿರುಗುತ್ತಾ (ಠಿiಟಿ) ಪಿಸ್ತೂಲಿನ ನಳಿಕೆಯ ಮೂಲಕ ಹೊರಹೊಮ್ಮುತ್ತದೆ. ಒಂದು ಸುರಂಗದಂತಿರುವ ನಳಿಕೆಯಲ್ಲಿ ಗುಂಡು ಆ ವೇಗದಲ್ಲಿ ತಿರುಗುತ್ತಾ ತೂರಿಕೊಂಡು ಬರುವುದರಿಂದ ಗುಂಡಿನ ಹೊರಕವಚ ಮತ್ತು ನಳಿಕೆಯ ನಡುವೆ ತಿಕ್ಕಾಟವಾಗುತ್ತದೆ (ಜಿಡಿiಛಿಣioಟಿ). ಈ ತಿಕ್ಕಾಟವು ಗುಂಡು, ಅಥವಾ ಅದರ ಹೊರಕವಚದ ಮೇಲೆ ಕೆಲವು ಗುರುತುಗಳನ್ನು ಮೂಡಿಸುತ್ತದೆ. ಇವನ್ನು ವಿಧಿವಿಜ್ಞಾನ ಪರಿಭಾಷೆಯಲ್ಲಿ sಣಡಿiಚಿಣioಟಿ mಚಿಡಿಞs ಎಂದು ಕರೆಯುತ್ತಾರೆ. ಈ ಗುರುತು ಬಂದೂಕಿನ ನಳಿಕೆ ಗುಂಡಿನ ಹೊರಕವಚದ ಮೇಲೆ ಬಿಡುವ ಬೆರಳಚ್ಚು! ಅಂದರೆ ಯಾವುದೇ ಎರಡು ಬಂದೂಕುಗಳು ಒಂದೇ ಗುರುತುಗಳನ್ನು ಮೂಡಿಸಲಾರವು. ಹೀಗೆ ಒಂದು ಗುಂಡಿನ ಹೊರಕವಚವನ್ನು ಒಂದು ನಿರ್ದಿಷ್ಟ ಬಂದೂಕಿಗೆ ತಳುಕು ಹಾಕಿದ್ದು ಮೊದಲ ಬಾರಿಗೆ 1835ರಲ್ಲಿ, ಲಂಡನ್‍ನಲ್ಲಿ. ಅದರಿಂದ ಒಂದು ಕೊಲೆ ಪ್ರಕರಣವನ್ನು ಬೇಧಿಸಲಾಯಿತು.
ಅಂದರೆ ಹಲವು ಸಿಡಿದ ಗುಂಡಿನ ಹೊರಕವಚಗಳನ್ನು ಕಲಸುಮೇಲೊಗರ ಮಾಡಿದರೂ, ತಜ್ಞರು ಒಂದು ನಿರ್ದಿಷ್ಟ ಬಂದೂಕಿನಿಂದ ಸಿಡಿದ ಗುಂಡುಗಳನ್ನು ಗುರುತಿಸಿ ಪ್ರತ್ಯೇಕಿಸಬಲ್ಲರು. ಒಂದೇ ಬಂದೂಕಿನಿಂದಾದ ಯಾವುದೇ ಸರಣಿ ಕೊಲೆ ಪ್ರಕರಣಗಳಲ್ಲಿ ಇದು ಅತಿ ದೊಡ್ಡ ಶಕ್ತಿ. ಏಕೆಂದರೆ ಹಲವು ಅಪರಾಧ ಪ್ರಕರಣಗಳಲ್ಲಿ ಒಂದೇ ಬಂದೂಕು ಬಳಸಲಾಗಿದೆಯೇ ಇಲ್ಲವೇ ಎಂದು ತೀರ್ಮಾನಿಸುವುದು ಸುಲಭ. ಯಾವುದೇ ಸರಣಿ ಪ್ರಕರಣದಲ್ಲಿ ಹಲವು ಅಪರಾಧ ಕೃತ್ಯಗಳ ಹಿಂದೆ ಒಂದೇ ಅಪರಾಧಿ ಅಥವಾ ಒಂದೇ ಗುಂಪಿದೆ ಎಂದು ಸಾಬೀತು ಮಾಡಬೇಕೆಂದರೆ, ಮೊದಲು ಈ ಪ್ರಕರಣಗಳ ನಡುವಿನ ಕೊಂಡಿಯನ್ನು ನಿರೂಪಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಆದದ್ದೂ ಅದೇ.
ಕರ್ನಾಟಕ ರಾಜ್ಯ ಪೊಲೀಸರ ಬಳಿ ಕಲ್ಬುರ್ಗಿಯನ್ನು ಕೊಂದ ಗುಂಡಿನ ಹೊರಕವಚಗಳು ಮಾತ್ರ ಇದ್ದವು. ಹಾಗಾಗಿ ಗೌರಿ ಮತ್ತು ಕಲ್ಬುರ್ಗಿಯರನ್ನು ಕೊಂದ ಗುಂಡುಗಳ ಪರೀಕ್ಷೆ ನಡೆಯಿತು. ಕಲ್ಬುರ್ಗಿ ಮತ್ತು ಗೌರಿ ಇಬ್ಬರನ್ನೂ ಒಂದೇ ಪಿಸ್ತೂಲಿನಿಂದ ಸಿಡಿದ ಗುಂಡುಗಳು ಕೊಂದವು ಎಂದು ಸ್ಪಷ್ಟವಾಗಿ ತನ್ನ ಅಭಿಪ್ರಾಯ ನೀಡಿತು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ. ಅವತ್ತು ಸೆಪ್ಟೆಂಬರ್ 13, 2017. ಆದರೆ ಏನು ಬಂತು? ಕಲ್ಬುರ್ಗಿ ಪ್ರಕರಣವನ್ನು ಇನ್ನೂ ಬೇಧಿಸಿಲ್ಲ; ಆದ್ದರಿಂದ ಎರಡೂ ಕೊಲೆಗಳನ್ನು ಒಂದೇ ಗುಂಪು ಮಾಡಿರಬಹುದಾದರೂ ಅವರ ಗುರುತು ಪತ್ತೆ ಆಗಿಲ್ಲದ ಕಾರಣ ಈ ಫೊರೆನ್ಸಿಕ್ ವರದಿ ತನಿಖೆಗೆ ನಿಜಕ್ಕೂ ಸಹಾಯ ಮಾಡಿತೆ ಎಂಬುದು ಪ್ರಶ್ನೆ. ಇದಕ್ಕೆ ಉತ್ತರ ಹೌದು ಮತ್ತು ಇಲ್ಲ.
ಅದಕ್ಕೆ ನಾವು ದಭೊಲ್ಕರ್, ಪನ್ಸಾರೆ, ಕಲ್ಬುರ್ಗಿ ಮತ್ತು ಗೌರಿ ಇವರನ್ನು ಕೊಂದ ಗುಂಡಿನ ಹೊರಕವಚಗಳ ಪರೀಕ್ಷೆಯ ವರದಿಗಳೆಲ್ಲವನ್ನೂ ಅಭ್ಯಸಿಸಬೇಕು. ಕಲ್ಬುರ್ಗಿ ಅವರ ಕೊಲೆಯ ತನಿಖೆ ನಡೆಸುತ್ತಿದ್ದ ರಾಜ್ಯ ಸಿಐಡಿ ದಭೋಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿ ಅವರ ಕೊಲೆಯ ಸ್ಥಳದಲ್ಲಿ ಸಿಕ್ಕ ಎಲ್ಲ ಗುಂಡಿನ ಹೊರಕವಚಗಳನ್ನು ಸಂಗ್ರಹಿಸಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷಿಸಿತು. ಆ ವರದಿಯ ಪ್ರಕಾರ ದಭೋಲ್ಕರ್ ಮತ್ತು ಕಲ್ಬುರ್ಗಿಯರನ್ನು ಎರಡು ಬೇರೆ ಬೇರೆ ಬಂದೂಕುಗಳನ್ನು ಬಳಸಿ ಕೊಲ್ಲಲಾಗಿತ್ತು. ಈ ಬಂದೂಕುಗಳನ್ನು ನಾವು `ಅ’ ಮತ್ತು `ಬ’ ಎಂದು ಪರಿಗಣಿಸೋಣ. ಆದರೆ ಈ ಎರಡು ಕೊಲೆಗಳ ನಡುವೆ ನಡೆದ ಪನ್ಸಾರೆ ಅವರ ಕೊಲೆಗೆ ಎರಡು ಬಂದೂಕುಗಳು ಬಳಕೆಯಾಗಿದ್ದವು. ಅಲ್ಲಿ ಸಿಕ್ಕ ಗುಂಡಿನ ಹೊರಕವಚಗಳಲ್ಲಿ ಕೆಲವು ಬಂದೂಕು `ಅ’ ಮತ್ತು ಇನ್ನು ಕೆಲವು ಬಂದೂಕು `ಬ’ ಇಂದ ಸಿಡಿದವು ಎಂದು ವರದಿ ನೀಡಿತು. ಅಂದರೆ ಒಂದೇ ಗುಂಪು ಎರಡು ಬಂದೂಕುಗಳನ್ನು ಬಳಸಿ ಮೂರು ಕೊಲೆ ಮಾಡಿತ್ತು. ಪನ್ಸಾರೆ ಅವರ ಕೊಲೆ ಪ್ರಕರಣದಲ್ಲಿ ಎರಡೂ ಬಂದೂಕು ಬಳಕೆಯಾದದ್ದು ತನಿಖಾಧಿಕಾರಿಗಳ ಅದೃಷ್ಟವೆಂದೇ ಹೇಳಬೇಕು. ಇಲ್ಲದಿದ್ದರೆ ಬಂದೂಕು `ಅ’ ಮತ್ತು ಬಂದೂಕು `ಬ’ ಅನ್ನು ಲಿಂಕ್ ಮಾಡಲು ಆಗುತ್ತಿರಲಿಲ್ಲ. ಇದರೊಂದಿಗೆ ದಭೊಲ್ಕರ್, ಪನ್ಸಾರೆ ಮತ್ತು ಕಲ್ಬುರ್ಗಿ ಅವರ ಪ್ರಕರಣಗಳು ತಳುಕು ಹಾಕಿಕೊಂಡಿದ್ದವು. ಈಗ ಗೌರಿಯನ್ನು ಕೊಂದ ಗುಂಡುಗಳು ಕಲ್ಬುರ್ಗಿಯನ್ನು ಕೊಂದ ಗುಂಡುಗಳ ಸಿಡಿದ ಬಂದೂಕಿನಿಂದಲೇ ಸಿಡಿದವು ಎಂಬ ವರದಿ ಹೇಳಿದ್ದು, ಮತ್ತೆ ಬಂದೂಕು `ಬ’ ಅನ್ನು ಬಳಸಿ ಗೌರಿಯನ್ನು ಕೊಲ್ಲಲಾಯಿತೆಂದು. ಅಲ್ಲಿಗೆ ಈ ಬಂದೂಕು ಪನ್ಸಾರೆ, ಕಲ್ಬುರ್ಗಿ ಮತ್ತು ಗೌರಿಯರನ್ನು ಕೊಂದಿದೆ. ಇದೇ ಗುಂಪಿನ ಬಳಿಯಿರುವ ಬಂದೂಕು `ಅ’ ದಭೋಲ್ಕರ್ ಮತ್ತು ಪನ್ಸಾರೆಯವರ ಕೊಲೆಗೆ ಬಳಸಲಾಗಿದೆ.
ಇದು ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯದ ವರದಿ. ಆದರೆ ಬಂದೂಕು `ಅ’ ಕುರಿತು ಒಂದು ದೊಡ್ಡ ಗೊಂದಲ ಇದೆ. ಇವತ್ತು ದಭೋಲ್ಕರ್, ಪನ್ಸಾರೆ ಪ್ರಕರಣಗಳಲ್ಲಿ ಆರೋಪಿಗಳ ಪರ ವಕೀಲರಿಗೆ ಇದೇ ದೊಡ್ಡ ಅಸ್ತ್ರ. ಆಗಸ್ಟ್ 20, 2013ರಂದು ಮುಂಜಾನೆ 7:30ರ ಸುಮಾರಿಗೆ ವಾಯುವಿಹಾರಕ್ಕೆ ತೆರಳಿದ್ದಾಗ ನರೇಂದ್ರ ದಭೋಲ್ಕರ್ ಅವರ ಕೊಲೆಯಾಯಿತು. ಸುಮಾರು ಮೂರೂವರೆ ಘಂಟೆಗಳ ತರುವಾಯ ನವಿ ಮುಂಬಯಿ ಪೊಲೀಸರು ವಿಕಾಸ್ ಖಂಡೇಲವಾಲ ಮತ್ತು ಮನೀಷ್ ನಗೋರಿ ಎಂಬಿಬ್ಬರು ಗನ್‍ರನ್ನರ್‍ಗಳನ್ನು ಬಂಧಿಸುತ್ತಾರೆ, ಅವರಿಂದ ಕೆಲವು ನಾಡಪಿಸ್ತೂಲುಗಳನ್ನು ವಶಪಡಿಸಿಕೊಳ್ಳುತ್ತಾರೆ. ಹೀಗೆ ವಶಪಡಿಸಿಕೊಂಡ ನಾಡಪಿಸ್ತೂಲುಗಳನ್ನು ಮುಂಬಯಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಿಕೊಡಲಾಗುತ್ತದೆ. ಇದೇ ಪ್ರಯೋಗಾಲಯವು ದಭೋಲ್ಕರ್ ಅವರ ಹತ್ಯೆಗೆ ಬಳಸಿದ ಗುಂಡಿನ ಹೊರಕವಚಗಳ ಪರೀಕ್ಷೆಯನ್ನೂ ನಡೆಸುತ್ತಿತ್ತು. ಹಾಗಾಗಿ ಎರಡನ್ನೂ ಹೋಲಿಸಿದಾಗ, ಈ ಹೊರಕವಚಗಳು ವಶಪಡಿಸಿಕೊಂಡ ಒಂದು ನಾಡಪಿಸ್ತೂಲಿನೊಂದಿಗೆ ಸರಿ ಹೊಂದುತ್ತದೆ ಎಂದು ವರದಿ ನೀಡಿತು. ಅಲ್ಲಿಗೆ ದಭೊಲ್ಕರ್ ಅವರ ಪ್ರಕರಣವನ್ನು ಬೇಧಿಸಲಾಯಿತೆಂದು ವಿಕಾಸ ಖಂಡೇಲವಾಲ ಮತ್ತು ಮನೀಷ್ ನಗೋರಿ ಅವರನ್ನು ಪುಣೆಯ ಪೊಲೀಸರು ಬಂಧಿಸಿದರು. ಆದರೆ ತನಿಖೆ ಮುಂದೆ ಸಾಗಲೇ ಇಲ್ಲ. ಇವರಿಬ್ಬರೂ ದಭೊಲ್ಕರ್ ಕೊಲೆಯ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ನೀಡಲಿಲ್ಲ, ಪುಣೆಯ ಪೊಲೀಸರು ಅವರ ಮೇಲೆ ಯಾವುದೇ ಸಾಕ್ಷಿಗಳನ್ನು ನೀಡದಾದರು. ಅವರು ಜಾಮೀನಿನ ಮೇಲೆ ಹೊರಬಂದರು. ಆದರೆ ದಭೋಲ್ಕರ್ ಅವರ ದೇಹ ಹೊಕ್ಕ ಗುಂಡುಗಳ ಹೋಲಿಕೆಯಿದ್ದ ಬಂದೂಕು ಪೊಲೀಸರ ವಶದಲ್ಲೇ ಇತ್ತು. 2015ರ ಫೆಬ್ರವರಿಯಲ್ಲಿ ಕೊಲ್ಹಾಪುರದಲ್ಲಿ ಗೋವಿಂದ ಪನ್ಸಾರೆ ಮತ್ತು ಅದೇ ವರ್ಷ ಆಗಸ್ಟ್‍ನಲ್ಲಿ ಧಾರವಾಡದಲ್ಲಿ ಎಂ.ಎಂ. ಕಲ್ಬುರ್ಗಿ ಅವರ ಕೊಲೆಗಳಾದವು. ಬೆಂಗಳೂರು ಪ್ರಯೋಗಾಲಯವು ದಭೋಲ್ಕರ್ ಅವರನ್ನು ಕೊಲ್ಲಲು ಬಳಸಿದ ಬಂದೂಕನ್ನು ಮತ್ತೆ ಪನ್ಸಾರೆ ಅವರ ಕೊಲೆಯಲ್ಲೂ ಬಳಸಲಾಗಿದೆಯೆಂದು ವರದಿ ನೀಡಿತು. ಅಸಲು ದಭೋಲ್ಕರ್ ಅವರನ್ನು ಕೊಂದ ಪಿಸ್ತೂಲನ್ನು ಕೊಲೆ ನಡೆದ ಮೂರು ಘಂಟೆಗಳಲ್ಲಿ ಪೊಲೀಸರು ವಶಪಡಿಸಿಕೊಂಡು ಅವರ ಸುಪರ್ದಿಯಲ್ಲಿಟ್ಟುಕೊಂಡಿದ್ದರೆ, ಆ ಪಿಸ್ತೂಲನ್ನು ಸುಮಾರು ಎರಡು ವರ್ಷದ ಬಳಿಕ ಪನ್ಸಾರೆ ಅವರ ಕೊಲೆಗೆ ಹೇಗೆ ಬಳಸಲಾಯಿತು ಎಂಬುದು ಸರಳ ಪ್ರಶ್ನೆ.
ಅವತ್ತಿಗೆ ದಭೊಲ್ಕರ್ ಅವರ ತನಿಖೆಯನ್ನು ಸಿಬಿಐ ನಡೆಸುತ್ತಿತ್ತು. ಬೆಂಗಳೂರು ಪ್ರಯೋಗಾಲಯದ ವರದಿಯನ್ನು ಮತ್ತೆ ಪರೀಕ್ಷಿಸಲು ಗುಜರಾತಿನ ಪ್ರಯೋಗಾಲಯಕ್ಕೆ ನೀಡಲಾಯಿತು. ಗುಜರಾತಿನ ಪ್ರಯೋಗಾಲಯವೂ ಸಹ ಬೆಂಗಳೂರಿನ ವರದಿಯನ್ನೇ ಎತ್ತಿ ಹಿಡಿಯಿತು. ಮೂರನೇ ಅಭಿಪ್ರಾಯ ಪಡೆಯಲು ಸಿಬಿಐ ಜಗತ್ತಿನ ಶ್ರೇಷ್ಠ ಪೊಲೀಸ್ ಸಂಸ್ಥೆಯೆನಿಸಿದ ಸ್ಕಾಟ್‍ಲ್ಯಾಂಡ್ ಯಾರ್ಡ್‍ಗೆ ನೀಡಲು ಮುಂದಾಯಿತಾದರೂ ಅವರು ಒಪ್ಪಲಿಲ್ಲ. ಈಗ ಮುಂಬಯಿಯ ವರದಿಯನ್ನು ಬೆಂಗಳೂರು ಮತ್ತು ಗುಜರಾತಿನ ಪ್ರಯೋಗಾಲಯದ ವರದಿಗಳು ಅಲ್ಲಗಳೆದಿವೆ. ಮುಂಬಯಿ ಪ್ರಯೋಗಾಲಯವು ಹೀಗೇಕೆ ವರದಿ ನೀಡಿತೆಂದೂ ಸಿಬಿಐ ತನಿಖೆ ನಡೆಸಿತು. ಮುಂಬಯಿ ಪ್ರಯೋಗಾಲಯದ ವರದಿಯು Iಟಿಣegಡಿಚಿಣeಜ ಃಚಿಟಟisಣiಛಿ Iಜeಟಿಣiಜಿiಛಿಚಿಣioಟಿ Sಥಿsಣem ಅನ್ನು ಬಳಸಿ ದಭೋಲ್ಕರ್ ಅವರ ಹತ್ಯೆಯ ಸ್ಥಳದಲ್ಲಿ ಸಿಕ್ಕ ಗುಂಡಿನ ಹೊರಕವಚಗಳು ಮತ್ತು ವಿಕಾಸ್ ಖಂಡೇಲವಾಲನ ಬಳಿ ಸಿಕ್ಕ ನಾಡಪಿಸ್ತೂಲನ್ನು ಹೋಲಿಸಿತ್ತು. ಅಸಲು ತಪ್ಪು ನಡೆದಿದ್ದೇ ಇಲ್ಲಿ. Iಟಿಣegಡಿಚಿಣeಜ ಃಚಿಟಟisಣiಛಿ Iಜeಟಿಣiಜಿiಛಿಚಿಣioಟಿ Sಥಿsಣem ಎಂಬುದು ಕಾರ್ಖಾನೆಯಲ್ಲಿ ಮಾಡಿದ ಆಧುನಿಕ ಪಿಸ್ತೂಲುಗಳನ್ನು ಹೋಲಿಸಲು ಇರುವ ಜಚಿಣಚಿbಚಿse & soಜಿಣತಿಚಿಡಿe. ಅದರಲ್ಲಿ ಕಚ್ಚಾ ನಾಡಪಿಸ್ತೂಲಿನ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ನಾಡಪಿಸ್ತೂಲು ಮತ್ತು ನಾಡಪಿಸ್ತೂಲಿನಿಂದ ಹೊಮ್ಮಿದ್ದ ಗುಂಡಿನ ಹೊರಕವಚವನ್ನು ಈ soಜಿಣತಿಚಿಡಿeನಲ್ಲಿ ಹೋಲಿಸಿದ್ದಕ್ಕೆ ಈ ರೀತಿಯ ತಪ್ಪು ವರದಿ ಬಂತೆಂದು ತೇಲಿತು.
ಈ ನಾಲ್ಕು ಕೊಲೆಗಳ ಒಪ್ಪಿತ ವಿಧಿವಿಜ್ಞಾನ ವರದಿಯನ್ನು ಕೋಷ್ಠಕದಲ್ಲಿ ವಿವರಿಸಲಾಗಿದೆ. ಸೆಪ್ಟೆಂಬರ್ 13, 2017ರಂದು ವಿಶೇಷ ತನಿಖಾದಳಕ್ಕೆ ಈ ವರದಿ ತಲುಪಿತು. ನಾಲ್ಕು ಕೊಲೆಗಳನ್ನು ಒಂದೇ ಗುಂಪು ಮಾಡಿದೆಯೆಂಬುದನ್ನು ಈ ವರದಿ ಸೂಚಿಸುತ್ತಿತ್ತೇ ಹೊರತು ಕೊಲೆ ಮಾಡಿದ್ದು ಯಾರು ಎಂಬುದನ್ನಲ್ಲ. ಈ ಹಿನ್ನೆಲೆಯಲ್ಲಿ ಇದೇ ಗುಂಪು ನಡೆಸಿದ ಇತರ ಪಾತಕಗಳ ಬಗ್ಗೆ ಅಭ್ಯಾಸ ಮಾಡುವುದು ಅನಿವಾರ್ಯ.
ಸೆಪ್ಟೆಂಬರ್ 2015ರಲ್ಲಿ ಪನ್ಸಾರೆ ಅವರ ಕೊಲೆ ಸಂಬಂಧ ಮಹಾರಾಷ್ಟ್ರದ ವಿಶೇಷ ತನಿಖಾದಳ ಗೋವೆ ಮೂಲದ ಸನಾತನ ಸಂಸ್ಥೆಯ ನಂಟು ಹೊಂದಿದ ಸಮೀರ ಗಾಯಕ್ವಾಡ್ ಎಂಬುವನನ್ನು ಬಂಧಿಸಿತ್ತು. ಸನಾತನ ಸಂಸ್ಥೆಯೂ ಸಹ ಆತ ತಮ್ಮ ಸಂಸ್ಥೆಯ ನಂಟು ಹೊಂದಿದ್ದನ್ನು ನಿರಾಕರಿಸಿರಲಿಲ್ಲ. ಬದಲಿಗೆ ಆತ ಅಮಾಯಕ ಎಂದು ವಾದಿಸಿತ್ತು. ಸನಾತನ ಸಂಸ್ಥೆಯ ನಂಟು ಹೊಂದಿದ್ದ ಕೆಲವು ವ್ಯಕ್ತಿಗಳು ಈ ಹಿಂದೆ 2007ರಲ್ಲಿ ಮಹಾರಾಷ್ಟ್ರದ ವಾಶಿ, ಥಾಣೆ ಮತ್ತು ಪನ್ವೇಲ್ ಊರುಗಳಲ್ಲಿ ನಡೆದ ಬಾಂಬ್ ಸ್ಫೋಟಗಳು ಮತ್ತು 2009ರಲ್ಲಿ ಗೋವೆಯ ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಬಂಧಿತರಾಗಿದ್ದರು. ಇವರ ಮೇಲೆ ಭಯೋತ್ಪಾದನಾ ನಿಗ್ರಹ ಕಾನೂನುಗಳನ್ನು ಅನ್ವಯಿಸಲಾಗಿತ್ತು. 2011ರಲ್ಲಿ ಮಹಾರಾಷ್ಟ್ರದ ನ್ಯಾಯಾಲಯವು ವಾಶಿ, ಥಾಣೆ ಮತ್ತು ಪನ್ವೇಲ್ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಯೆಂದು ಘೋಷಿಸಿ 10 ವರ್ಷಗಳ ಸಜೆ ವಿಧಿಸಿತು. ಅವರು ಇವತ್ತಿಗೂ ಸಜೆ ಅನುಭವಿಸುತ್ತಿದ್ದಾರೆ. ಇನ್ನು ಗೋವೆಯ ಮಡಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಹಲವರು – ರುದ್ರ ಪಾಟೀಲ್, ಸಾರಂಗ ಅಕೋಳ್ಕರ್, ವಿನಯ್ ಪವಾರ್ ಮತ್ತಿತರರು ಅವತ್ತಿನಿಂದ ತಲೆಮರೆಸಿಕೊಂಡಿದ್ದು ದಭೋಲ್ಕರ್ ಪ್ರಕರಣದಲ್ಲಿ ಸಿಬಿಐ ಸೆಪ್ಟೆಂಬರ್ 2016ರಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಾರಂಗ ಅಕೋಳ್ಕರ್ ಮತ್ತು ವಿನಯ ಪವಾರ್ ಅವರೇ ಬೈಕಿನ ಮೇಲೆ ಬಂದು ದಭೋಲ್ಕರ್ ಅವರನ್ನು ಗುಂಡಿಟ್ಟು ಕೊಂದರು ಎಂದು ಹೇಳಿದ್ದರು. ಇವರ ಮೇಲೆ ಕೇಂದ್ರ ಸರ್ಕಾರ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಈ ಚಾರ್ಜ್‍ಶೀಟ್ ಸಲ್ಲಿಕೆಗೆ ಮೂರು ತಿಂಗಳ ಹಿಂದೆ 2016ರ ಜೂನ್‍ನಲ್ಲಿ ಸಿಬಿಐ ಮುಂಬಯಿ ಬಳಿಯ ಪನ್ವೇಲ್‍ನಿಂದ ಇಎನ್‍ಟಿ ಸರ್ಜನ್ ಆದ ಡಾ. ವೀರೇಂದ್ರ ತಾವ್ಡೆಯನ್ನು ಬಂಧಿಸಿತ್ತು. ದಭೋಲ್ಕರ್ ಅವರ ಕೊಲೆಯ ಬಗ್ಗೆ ಡಾ. ತಾವ್ಡೆ ಮತ್ತು ಸಾರಂಗ ಅಕೋಳ್ಕರ್ ನಡೆಸಿದ ಇ-ಮೇಲ್ ಸಂಭಾಷಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಡಾ. ತಾವ್ಡೆ ಸನಾತನ ಸಂಸ್ಥೆಯ ಜೊತೆ ನಿಕಟ ಸಂಪರ್ಕ ಹೊಂದಿರುವ 2002ರಲ್ಲಿ ರಚಿತವಾದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಎಂದು ಸಿಬಿಐ ಹೇಳಿತ್ತು. ಇನ್ನು ಕಲ್ಬುರ್ಗಿ ಅವರ ಕೊಲೆ ಪ್ರಕರಣವನ್ನು ಇದುವರೆಗೂ ಬೇಧಿಸಲಾಗಿಲ್ಲವಾದರೂ ಸಿಐಡಿ ತನಿಖೆಯು ಇದೇ ಜಾಲದತ್ತ ಬಂದು ನಿಂತಿತ್ತು. ಉಮಾ ಕಲ್ಬುರ್ಗಿ ಅವರ ಸಹಾಯದಿಂದ ತಯಾರಿಸಲಾದ ರೇಖಾಚಿತ್ರವು ಸದ್ಯ ತಲೆಮರೆಸಿಕೊಂಡಿರುವ ರುದ್ರ ಪಾಟೀಲನಿಗೆ ಹೋಲುತ್ತದೆ ಎಂದೇ ಇವತ್ತಿಗೂ ನಂಬಲಾಗಿದೆ.
ಹೀಗೆ ಸೆಪ್ಟೆಂಬರ್ 13ರಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಾಲ್ಕು ಕೊಲೆಗಳನ್ನು ಒಂದೇ ಗುಂಪು ನಡೆಸಿರುವ ಸಾಧ್ಯತೆಯನ್ನು ನಿಚ್ಚಳಗೊಳಿಸಿದಾಗ, ನಿಖರ ವ್ಯಕ್ತಿಗಳೆಡೆ ಬೊಟ್ಟು ಮಾಡದಿದ್ದರೂ ತನಿಖೆಯ ದಿಕ್ಕನ್ನು ಖಂಡಿತ ನಿರ್ಣಯಿಸಿತು.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು)
ನಿಖೆ ಆರಂಭವಾದ ಶುರುವಿನಿಂದಲೂ, ‘ಇದು ಪೂರ್ವಾಗ್ರಹಪೀಡಿತ ತನಿಖೆ’ ಎಂದು ಒಂದು ಕಥನ ಕಟ್ಟುವ ಪ್ರಕ್ರಿಯೆ ಬಲಪಂಥೀಯ ಶಕ್ತಿಗಳಿಂದ ನಿರಂತರ ಜಾರಿಯಲ್ಲಿತ್ತು. ಈ ಸಮಸ್ಯೆಯನ್ನು ಎದುರುಗೊಂಡು ನಿಷ್ಪಕ್ಷಪಾತ ತನಿಖೆಯ ಪ್ರಕ್ರಿಯೆಯನ್ನು ಮುಂದುವರೆಸುವುದು ಹಾಗೂ ಈ ಬಗ್ಗೆ ಜನರಿಗೆ ಮನದಟ್ಟು ಮಾಡಬೇಕಾದ ಒತ್ತಡ ತನಿಖಾ ತಂಡದ ಮೇಲಿತ್ತು. ಇದಲ್ಲದೆ, ತನಿಖೆಯ ದೃಷ್ಟಿ ತಮ್ಮೆಡೆಗೇ ಹರಿದಿದೆಯೆಂದು ಆರೋಪಿಗಳಿಗೆ ಆದಷ್ಟು ಕಾಲ ಸುಳಿವು ಸಿಗದಂತೆ ನೋಡಿಕೊಳ್ಳುವ ಸವಾಲೂ ಕೂಡ ತನಿಖಾ ತಂಡದ ಮುಂದಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...