Homeಕರ್ನಾಟಕಪ್ರಗ್ಯಾ ಠಾಕೂರ್ ಸಹಚರರಿಗೆ ಗೌರಿ ಲಂಕೇಶ್ ಹತ್ಯೆಯ ಜೊತೆಗೆ ನಂಟು: ಕೋರ್ಟ್ ಗೆ ಹೇಳಿದ ಎಸ್‍ಐಟಿ

ಪ್ರಗ್ಯಾ ಠಾಕೂರ್ ಸಹಚರರಿಗೆ ಗೌರಿ ಲಂಕೇಶ್ ಹತ್ಯೆಯ ಜೊತೆಗೆ ನಂಟು: ಕೋರ್ಟ್ ಗೆ ಹೇಳಿದ ಎಸ್‍ಐಟಿ

- Advertisement -
- Advertisement -

| ನಾನುಗೌರಿ ಡೆಸ್ಕ್ |

ಅಭಿನವ್ ಭಾರತ್ ಗೂ ಸನಾತನ ಸಂಸ್ಥೆಗೂ ಇದೆ ನಂಟು

ಭೋಪಾಲ್‍ನ ಬಿಜೆಪಿ ಅಭ್ಯರ್ಥಿ, ಭಯೋತ್ಪಾದನೆಯ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್‍ರ ಜೊತೆ 2008ರ ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿದ್ದು ತಲೆ ಮರೆಸಿಕೊಂಡವರೇ ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಿಗೆ ಬಾಂಬ್ ಹಾಕುವ ತರಬೇತಿ ಕೊಟ್ಟಿದ್ದಾರೆಂದು ಎಸ್‍ಐಟಿ ಕೋರ್ಟ್‍ಗೆ ಸಲ್ಲಿಸಿದ ಮಾಹಿತಿಯಲ್ಲಿ ಹೇಳಿದೆ. ಅಷ್ಟೇ ಅಲ್ಲದೇ ಈ ಬಾಂಬ್ ತರಬೇತಿ ನೀಡಿದವರು ಪ್ರಗ್ಯಾ ಠಾಕೂರ್‍ರ ಸಂಘಟನೆ ಅಭಿನವ್ ಭಾರತ್‍ನ ಸದಸ್ಯರಾಗಿದ್ದಾರೆಂದೂ ಕೋರ್ಟ್‍ಗೆ ಸಲ್ಲಿಸಿದ ಮಾಹಿತಿಯಲ್ಲಿ ಹೇಳಲಾಗಿದೆ. ಈ ಕುರಿತು ಇಂದಿನ ಇಂಡಿಯನ್ ಎಕ್ಸ್‍ಪ್ರೆಸ್‍ನಲ್ಲಿ ವಿವರವಾಗಿ ವರದಿ ಮಾಡಲಾಗಿದೆ.

2006ರಿಂದ 2008ರವರೆಗೆ ಹಲವು ಬಾಂಬ್ ಸ್ಫೋಟಗಳು ನಡೆದಿದ್ದವು. ಅವುಗಳೆಂದರೆ ಮಾಲೆಗಾಂವ್, ಮೆಕ್ಕಾ ಮಸ್ಜಿದ್, ಅಜ್ಮೀರ್ ದರ್ಗಾ, ಸಂಝೋತಾ ಎಕ್ಸ್‍ಪ್ರೆಸ್ ಸ್ಫೋಟಗಳು. ಇವೆಲ್ಲದರಲ್ಲಿ ಒಟ್ಟು 117 ಜನರು ಸತ್ತಿದ್ದರು. ಸಂಝೋತಾ ಎಕ್ಸ್‍ಪ್ರೆಸ್ ಎಂಬುದು ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ದೆಹಲಿ ಮತ್ತು ಲಾಹೋರ್ ಮಧ್ಯೆ ಆರಂಭಿಸಲಾಗಿದ್ದ ರೈಲು.

ಈ ಸ್ಫೋಟಗಳಲ್ಲಿ ಅಭಿನವ್ ಭಾರತ್ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದಾರೆಂಬ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿತ್ತು. ಆದರೆ ತಲೆ ಮರೆಸಿಕೊಂಡಿದ್ದಾರೆಂದು ಹೇಳಲಾದ ಸಂದೀಪ್ ಡಾಂಗೆ, ರಾಮ್‍ಜಿ ಕಲ್ಸಾಂಗ್ರಾ ಮತ್ತು ಅಶ್ವಿನ್ ಚೌಹಾಣ್ ಇವರುಗಳು ನಡೆಸಿದ ರಹಸ್ಯ ಬಾಂಬ್ ತರಬೇತಿಯಲ್ಲಿ ಭಾಗವಹಿಸಿದ್ದವರಲ್ಲಿ ಕೆಲವರು ಗೌರಿ ಲಂಕೇಶ್ ಹತ್ಯೆ ಕೇಸಿನಲ್ಲಿ ಆರೋಪಿಗಳು ಮತ್ತು ಸಾಕ್ಷಿದಾರರಾಗಿದ್ದಾರೆ. ಈ ವಿಷಯವು ಎಸ್‍ಐಟಿಯು, ಸದರಿ ಕೇಸಿಲ್ಲಿ ಕೋರ್ಟಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ಇದೆ.

ಅಷ್ಟೇ ಅಲ್ಲ, 2007ರ ಅಜ್ಮೀರ್ ದರ್ಗಾ ಸ್ಫೋಟದ ಪ್ರಕರಣದ ನಂತರ ಭೂಗತನಾಗಿದ್ದ ಸುರೇಶ್ ನಾಯರ್ ಅಲಿಯಾಸ್ ಬಾಬಾಜಿಯು ಆ ರಹಸ್ಯ ಕ್ಯಾಂಪಿನಲ್ಲಿ ತರಬೇತಿದಾರನಾಗಿದ್ದ ಮತ್ತು ಆತನನ್ನು ನವೆಂಬರ್ 2018ರಲ್ಲಿ ಗುಜರಾತ್‍ನ ಭರೂಚ್‍ನಲ್ಲಿ ಬಂಧಿಸಲಾಗಿದೆ. ಅಂದರೆ, ಅಭಿನವ್ ಭಾರತ್ ಮತ್ತು ಸನಾತನ ಸಂಸ್ಥೆಗೂ ಸಂಬಂಧವಿದೆಯೆಂದಾಯಿತು!

ಬಾಬಾಜಿ ಮತ್ತು ಗುರೂಜಿಗಳಿಂದ ಬಾಂಬ್ ತರಬೇತಿ

ಬಾಬಾಜಿಯ ಜೊತೆಗೆ ನಾಲ್ಕು ಜನ ಗುರೂಜಿಗಳೂ ಬಾಂಬ್ ತರಬೇತಿಯಲ್ಲಿದ್ದರೆಂದು ಗೌರಿ ಲಂಕೇಶ್ ಹಂತಕರು ಪೊಲೀಸರಿಗೆ ಹೇಳಿದ್ದರು. ಅಂತಹ ಒಬ್ಬ ತರಬೇತಿದಾರನನ್ನೂ ಬಂಧಿಸಲಾಗಿದ್ದು ಆತನ ಹೆಸರೇ ಪ್ರತಾಪ್ ಹಾಜಾ. ಆತ ಪ.ಬಂಗಾಳದ ಭವಾನಿ ಸೇನಾಕ್ಕೆ ಸೇರಿದ ವ್ಯಕ್ತಿ. ಈ ಎಲ್ಲಾ ಸಂಘಟನೆಗಳೂ ಹಿಂದುತ್ವವನ್ನು ತಮ್ಮ ಸಿದ್ಧಾಂತವೆಂದು ಹೇಳುತ್ತವೆ.

ಇದನ್ನೂ ಓದಿ: ಪ್ರಗ್ಯಾ ಎಂಬ ಭಯೋತ್ಪಾದನೆಯ ಆರೋಪಿಯೂ ನರೇಂದ್ರ ಮೋದಿಯೂ

ಆರೆಸ್ಸೆಸ್ ಇವರುಗಳ ಮಾತೃಸಂಸ್ಥೆಯಾಗಿದ್ದು, ಬಹುತೇಕರು ಒಂದಲ್ಲಾ ಒಂದು ಸಂದರ್ಭದಲ್ಲಿ ನೇರವಾಗಿ ಆರೆಸ್ಸೆಸ್ ಅಥವಾ ಅದರ ಅಂಗಸಂಘಟನೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಇಂಥವರು ಸಿಕ್ಕಿಬಿದ್ದಾಗ ಅವರಿಗೂ, ಆರೆಸ್ಸೆಸ್‍ಗೂ ಅಥವಾ ಬಿಜೆಪಿಗೂ ಸಂಬಂಧ ಇಲ್ಲವೆಂದು ಪ್ರತಿಪಾದಿಸುತ್ತಾರೆ. ಆದರೆ ನಿಧಾನಕ್ಕೆ ಅವರನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಾ, ಬಹಿರಂಗವಾಗಿಯೇ ಜೊತೆಗೂಡುತ್ತಾರೆ. ಅದಕ್ಕೆ ದೊಡ್ಡ ಉದಾಹರಣೆ, ಪ್ರಗ್ಯಾ ಠಾಕೂರ್. ಆಕೆ ಮತ್ತು ಸಹಚರರು ಸಿಕ್ಕಿಬಿದ್ದಾಗ ಆರೆಸ್ಸೆಸ್‍ನ ಮುಖ್ಯಸ್ಥರೊಬ್ಬರು ಸಕಾರ್ರ್ಧರಕ್ಕೆ ಪತ್ರ ಬರೆದು, ಅವರಿಗೂ ತಮಗೂ ಯಾವುದೇ ಸಂಬಂಧವಿಲ್ಲವೆಂದು ಬಲವಾಗಿ ಪ್ರತಿಪಾದಿಸಿದ್ದರು. ಈಗ ಭೋಪಾಲ್‍ನಿಂದ ಎಂಪಿ ಟಿಕೆಟ್ಟೇ ಕೊಟ್ಟಿದ್ದಾರೆ.

ಇಂಡಿಯನ್ ಎಕ್ಸಪ್ರೆಸ್ ವರದಿ 

ಇವರುಗಳು ಹಿಂಸೆ, ಕೊಲೆ ಇತ್ಯಾದಿಗಳನ್ನು ತಮ್ಮ ಉದ್ದೇಶಗಳಿಗಾಗಿ ಬಳಸುವವರು. ಉದಾಹರಣೆಗೆ ಬಾಂಬ್ ಪರಿಣಿತ ಎನ್ನಲಾಗುವ ಡಾಂಗೆ, ಆರೆಸ್ಸೆಸ್‍ನಲ್ಲಿದ್ದ ವ್ಯಕ್ತಿ ಮತ್ತು ಆತನ ಮೇಲೆ ಇಂಟರ್‍ಪೋಲ್ ರೆಡ್ ಕಾರ್ನರ್ ನೋಟೀಸ್ ಹೊರಡಿಸಲಾಗಿದೆ. ಡಾಂಗೆ ಮತ್ತು ಕಲ್ಸಾಂಗ್ರಾ ಹಿಡಿದುಕೊಟ್ಟವರಿಗೆ ಸರ್ಕಾರವು 10 ಲಕ್ಷ ರೂ. ಮತ್ತು ಹಾಕ್ಲಾ ತಲೆಗೆ 5 ಲಕ್ಷ ರೂ ಬಹುಮಾನ ಘೋಷಿಸಿದ್ದಾರೆ.

ಅಹಮದಾಬಾದ್ ಮತ್ತು ಮಂಗಳೂರುಗಳಲ್ಲಿ ತರಬೇತಿ

ಬಾಬಾಜಿ ಅಲಿಯಾಸ್ ಸುರೇಶ್ ನಾಯರ್ ಹೇಗಿರುತ್ತಾನೆಂಬ ವಿವರವನ್ನು ಗೌರಿ ಲಂಕೇಶ್ ಹತ್ಯೆ ಕೇಸಿನಲ್ಲಿ ಬಂಧಿತರಾಗಿರುವ ಶ್ರೀಕಾಂತ್ ಪಂಗ್ರೇಕರ್, ಶರದ್ ಕಲಸ್ಕರ್ (ನರೇಂದ್ರ ಧಾಬೋಲ್ಕರ್ ಹತ್ಯೆಗೈದ ಶೂಟರ್ ಎಂಬ ಆರೋಪಿ)) ಮತ್ತು ವಾಸುದೇವ ಸೂರ್ಯವಂಶಿ ಇವರುಗಳು ಕೊಟ್ಟಿದ್ದಾರೆ. ಬಾಂಬ್ ಸ್ಫೋಟ ಮತ್ತು ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲು 19 ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿತ್ತೆಂದು ಎಸ್‍ಐಟಿ ಹೇಳಿದೆ. ಇಂತಹ ತರಬೇತಿ ನೀಡಲು ಬರುತ್ತಿದ್ದವರಲ್ಲಿ ಕೆಲವರು ಸಂತ/ಸ್ವಾಮೀಜಿ ವೇಷದಲ್ಲಿ ತಿರುಗಾಡುತ್ತಿದ್ದರೆಂದೂ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಶಿಬಿರಗಳು ಅಹಮದಾಬಾದ್  ಮತ್ತು ಮಂಗಳೂರುಗಳಲ್ಲಿ ನಡೆಯಿತೆಂದು ಹೇಳಲಾಗುತ್ತಿದೆ.

ಇದೀಗ ಆರೆಸ್ಸೆಸ್ ಮತ್ತು ಬಿಜೆಪಿ ಏನು ಹೇಳುತ್ತವೆ ಕಾದು ನೋಡಬೇಕು.

ಆಧಾರ: ಇಂಡಿಯನ್ ಎಕ್ಸಪ್ರೆಸ್

ಬಿಜೆಪಿ ಅಭ್ಯರ್ಥಿ, ಭಯೋತ್ಪಾದನೆಯ ಆರೋಪಿ ಪ್ರಗ್ಯಾ ವಿರುದ್ಧ ಐಪಿಎಸ್ ಸಂಘ ಗುಟುರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...