Homeಅಂತರಾಷ್ಟ್ರೀಯಗಾಝಾ: ಸಂಸತ್ತು, ಸರ್ಕಾರಿ ಕಚೇರಿಗಳನ್ನು ವಶಪಡಿಸಿಕೊಂಡ ಇಸ್ರೇಲ್‌ ಸೇನೆ

ಗಾಝಾ: ಸಂಸತ್ತು, ಸರ್ಕಾರಿ ಕಚೇರಿಗಳನ್ನು ವಶಪಡಿಸಿಕೊಂಡ ಇಸ್ರೇಲ್‌ ಸೇನೆ

- Advertisement -
- Advertisement -

ಗಾಝಾ ನಗರದಲ್ಲಿ ಹಮಾಸ್ ನಡೆಸುತ್ತಿದ್ದ ಸಂಸತ್ತು ಮತ್ತು ಇತರ ಸರ್ಕಾರಿ ಸಂಸ್ಥೆಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್‌ ಸೇನೆ ಹೇಳಿದೆ.

ಇಸ್ರೇಲ್‌ನ ಮಿಲಿಟರಿ ಘಟಕಗಳು ಹಮಾಸ್ ಸಂಸತ್ತು, ಸರ್ಕಾರಿ ಕಟ್ಟಡ, ಹಮಾಸ್ ಪೊಲೀಸ್ ಪ್ರಧಾನ ಕಚೇರಿ ಮತ್ತು  ಶಸ್ತ್ರಾಸ್ತ್ರಗಳ ಉತ್ಪಾದನೆ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಘಟಕವನ್ನು ಕೂಡ ವಶಪಡಿಸಿಕೊಂಡಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ವೆಸ್ಟ್‌ಬ್ಯಾಂಕ್‌ನಲ್ಲಿ ಇಸ್ರೇಲ್ ಪಡೆಗಳ ದಾಳಿಯಿಂದಾಗಿ 8 ಮಂದಿ ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದಾರೆ . ತುಲ್ಕರೇಮ್‌ ನಗರದಲ್ಲಿ ಇಸ್ರೇಲ್‌ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ 7 ಮಂದಿ ಸಾವಿಗೀಡಾಗಿದ್ದಾರೆ ಎಂದು  ಪ್ಯಾಲೆಸ್ತೀನ್‌ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಸೋಮವಾರ ಅಲ್ ಶಿಫಾ ಆಸ್ಪತ್ರೆಯ ಗೇಟ್‌ಗಳ ಹೊರಗೆ ಇಸ್ರೇಲ್‌ ಯುದ್ಧ ಟ್ಯಾಂಕ್‌ಗಳನ್ನು ನಿಲ್ಲಿಸಿತ್ತು. ಅಲ್ ಶಿಫಾ ಆಸ್ಪತ್ರೆಯ ಆವರಣದಲ್ಲಿ  ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿ ಅಲ್ ಶಿಫಾ ಆಸ್ಪತ್ರೆಯಲ್ಲಿ ನೂರಾರು ಸಾವುಗಳು ಸಂಭವಿಸಿದೆ. ನಿನ್ನೆ ಆಸ್ಪತ್ರೆಯ ಆವರಣದಲ್ಲೇ ನವಜಾತ ಶಿಶುಗಳು ಸೇರಿ 179 ಮಂದಿಯನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿದೆ.

ಅಲ್ ಶಿಫಾ ಆಸ್ಪತ್ರೆಯು ಗಾಝಾ ನಗರದ ಅತಿದೊಡ್ಡ ಆಸ್ಪತ್ರೆಯಾಗಿದೆ. ಇಸ್ರೇಲ್‌ ಪಡೆ ಇದೀಗ ಆಸ್ಪತ್ರೆಯ ಗೇಟ್‌ನ್ನು ಸುತ್ತುವರಿದಿದೆ. ಆಸ್ಪತ್ರೆಯ ಆವರಣದ ಬಳಿ ಇಸ್ರೇಲ್‌ ದಾಳಿ ಬಳಿಕ ಆಸ್ಪತ್ರೆಗೆ ವಿದ್ಯುತ್‌ ಕೊರತೆ  ಉಂಟಾಗಿದೆ. ಆಮ್ಲಜನಕದ ಕೊರತೆಯಿಂದ ನವಜಾತ ಶಿಶುಗಳ ಸಾವು ಸಂಭವಿಸಿದೆ. ಐಸಿಯು ಘಟಕಗಳ ಸ್ಥಗಿತದಿಂದ ಅಪಾರ ಸಾವುಗಳು ಸಂಭವಿಸಿದೆ.

ರೋಗಿಗಳು, ಸಿಬ್ಬಂದಿ ಮತ್ತು ಸ್ಥಳಾಂತರಗೊಂಡ ನಾಗರಿಕರು ಸೇರಿದಂತೆ 10,000ಕ್ಕೂ ಹೆಚ್ಚು ಜನರು ಅಲ್ ಶಿಫಾದೊಳಗೆ ಇರಬಹುದು ಎನ್ನಲಾಗಿದೆ. ಆದರೆ ಆಸ್ಪತ್ರೆ ಸುತ್ತ ಇಸ್ರೇಲ್‌ ಪಡೆಗಳು ಆವರಿಸಿದ ಕಾರಣ ತೆರವಿಗೆ ಸಮಸ್ಯೆಯಾಗಿದೆ.

ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಮರ್ವಾನ್ ಅಬು ಸದಾ ಮಾತನಾಡಿ, ಅಲ್-ಶಿಫಾದ ಹೊರಗೆ ಎಲ್ಲೆಡೆ ಗುಂಡಿನ ದಾಳಿ ಮತ್ತು ಬಾಂಬ್ ದಾಳಿ ನಡೆದಿದೆ. ನೀವು ದಾಳಿಯ ಶಬ್ಧವನ್ನು ಪ್ರತಿ ಸೆಕೆಂಡಿನಲ್ಲಿ ಕೇಳಬಹುದು. ಅಲ್-ಶಿಫಾ ಆಸ್ಪತ್ರೆಯಿಂದ ಯಾರೂ ಹೊರಬರಲು ಸಾಧ್ಯವಾಗುತ್ತಿಲ್ಲ. ಯಾರೂ ಅಲ್-ಶಿಫಾ ಆಸ್ಪತ್ರೆಗೆ ಬರುವಂತಿಲ್ಲ ಎಂದು ಅವರು ಹೇಳಿದ್ದರು.

ಹಮಾಸ್‌ ಸಶಸ್ತ್ರ ಗುಂಪು ಅ.7 ರಂದು ದಕ್ಷಿಣ ಇಸ್ರೇಲ್‌ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 1,200 ಜನರು ಮೃತಪಟ್ಟಿದ್ದು, 240 ಜನರನ್ನು ಒತ್ತೆಯಾಳುಗಳಾಗಿ ಇರಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಯುದ್ಧ ಘೋಷಿಸಿ ನಡೆಸಿದ ದಾಳಿಯಲ್ಲಿ 11,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾ ವೈದ್ಯಕೀಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತರಲ್ಲಿ 40% ಮಕ್ಕಳಿದ್ದಾರೆ ಎಂದು ಪ್ಯಾಲೆಸ್ತೀನ್‌ ಸಚಿವಾಲಯವು ತಿಳಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...