Homeಮುಖಪುಟಗಾಜಿಪುರ್‌ ಗಡಿಯಲ್ಲಿ ನೀರು, ವಿದ್ಯುತ್ ಕಡಿತ ಮಾಡಿದ ಯುಪಿ ಸರ್ಕಾರ: ನೀರಿನ ವ್ಯವಸ್ಥೆ ಮಾಡಿದ ದೆಹಲಿ...

ಗಾಜಿಪುರ್‌ ಗಡಿಯಲ್ಲಿ ನೀರು, ವಿದ್ಯುತ್ ಕಡಿತ ಮಾಡಿದ ಯುಪಿ ಸರ್ಕಾರ: ನೀರಿನ ವ್ಯವಸ್ಥೆ ಮಾಡಿದ ದೆಹಲಿ ಸರ್ಕಾರ

ಉತ್ತರ ಪ್ರದೇಶದ ಮುಜಾಪರ್‌ ನಗರದಲ್ಲಿ ನರೇಶ್ ಟೀಕಾಯತ್‌ ನೇತೃತ್ವದಲ್ಲಿ ರೈತರ ಮಹಾಪಂಚಾಯತ್ ನಡೆಯುತ್ತಿದ್ದು, ಬಾರಿ ಸಂಖ್ಯೆಯ ರೈತರು ಗಾಜಿಪುರ್‌ಗೆ ತೆರಳುವ ನಿರ್ಧಾರ ಮಾಡಲಾಗಿದೆ.

- Advertisement -
- Advertisement -

ಉತ್ತರ ಪ್ರದೇಶ ಸರ್ಕಾರ ಗುರುವಾರ ಗಾಜಿಪುರ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸ್ಥಳದಿಂದ ಖಾಲಿ ಮಾಡುವಂತೆ ತಿಳಿಸಿದ ನಂತರ ರೈತ ನಾಯಕ ರಾಕೇಶ್ ಟೀಕಾಯತ್‌‌ ಯಾವುದೇ ಕಾರಣಕ್ಕೂ ಪ್ರತಿಭಟನಾ ಸ್ಥಳದಿಂದ ಕದಲಲ್ಲ ಎಂದು ಹೇಳಿಕೆ ನೀಡಿದ್ದು, ಕಣ್ಣೀರು ಹಾಕಿದ್ದರು. ಈ ಹಿನ್ನಲೆಯಲ್ಲಿ ದೇಶದಾದ್ಯಂತ ಸರ್ಕಾರದ ವಿರುದ್ದ ಭಾರಿ ಆಕ್ರೋಶಗಳೆದಿದ್ದು, ನಿನ್ನೆ ರಾತ್ರಿಯಿಂದಲೇ ಭಾರಿ ಸಂಖ್ಯೆ ಜನರು ಗಾಜಿಪುರ್ ಗಡಿಯಲ್ಲಿ ನೆರೆಯುತ್ತಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ನಿನ್ನೆಗಿಂತ ಇಂದು ಮೂರು ಪಟ್ಟು ಹೆಚ್ಚು ಜನರು ಗಾಜೀಪುರದಲ್ಲಿ ಸೇರುತ್ತಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶ ಸರ್ಕಾರವು ಗಡಿಯಲ್ಲಿ ಕಳೆದ 32 ಗಂಟೆಗಳಿಂದ ನೀರು ಮತ್ತು ವಿದ್ಯುತ್ ‌ಸಂಪರ್ಕ ಕಡಿತಗೊಳಿಸಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಬೆಂಬಲಿಸಿದ್ದಾರೆ. ರೈತರಿಗೆ ಬೇಕಾಗುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ʼಬಾರ್ಡರ್‌ʼಗಳಲ್ಲಿ ರಾತ್ರಿ ಆಗಿದ್ದೇನು? – ಗ್ರೌಂಡ್‌ ರಿಪೋರ್ಟ್‌

ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ ನರೇಶ್ ಟೀಕಾಯತ್‌ ನೇತೃತ್ವದಲ್ಲಿ ರೈತರ ಮಹಾಪಂಚಾಯತ್ ನಡೆಯುತ್ತಿದ್ದು, ಭಾರಿ ಸಂಖ್ಯೆಯ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಅಲ್ಲಿ ನೆರೆದಿರುವ ಎಲ್ಲಾ ರೈತರು ಗಾಜಿಪುರ್‌ ಗಡಿಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರೈತರ ಹೋರಾಟ; ಜ. 30ರಂದು ರಾಜ್ಯದಲ್ಲೂ ಉಪವಾಸ ಸತ್ಯಾಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿ ದಾರಿ ತಪ್ಪಿಸುವ ಜಾಹೀರಾತು ಪ್ರಕರಣ; ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ರಾಮ್‌ದೇವ್‌ಗೆ ಸುಪ್ರೀಂ ತಪರಾಕಿ

0
ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಯೋಗ ಗುರು ರಾಮ್‌ದೇವ್, ಅವರ ಸಹಾಯಕ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಂದು ವಾರ ಕಾಲಾವಕಾಶ ನೀಡಿದೆ. ಆದರೆ, ಈಗ ಅವರನ್ನು...