Homeಮುಖಪುಟʼಬಾರ್ಡರ್‌ʼಗಳಲ್ಲಿ ರಾತ್ರಿ ಆಗಿದ್ದೇನು? - ಗ್ರೌಂಡ್‌ ರಿಪೋರ್ಟ್‌

ʼಬಾರ್ಡರ್‌ʼಗಳಲ್ಲಿ ರಾತ್ರಿ ಆಗಿದ್ದೇನು? – ಗ್ರೌಂಡ್‌ ರಿಪೋರ್ಟ್‌

- Advertisement -
- Advertisement -

(ಗೌರಿ ಮೀಡಿಯಾದ ಮೂವರು ಪತ್ರಕರ್ತೆಯರ – ಸ್ವಾತಿ, ಮಮತಾ ಮತ್ತು ಕಾವ್ಯ – ತಂಡ ಮತ್ತು ದೊಡ್ಡಿಪಾಳ್ಯ ನರಸಿಂಹಮೂರ್ತಿ ಹಾಗೂ ಸಂಯುಕ್ತ್ ಕಿಸಾನ್ ಮೋರ್ಚಾದ ಕಡೆಯಿಂದ ಬಂದಿರುವ ನೇರ ಮಾಹಿತಿ)

1. ಸಿಂಘುವಿನಲ್ಲಿ ಏನಾಯಿತು?
ಸುಮಾರು 30 ಜನ (ಸ್ಥಳೀಯರೆಂದು ಗೋದಿ ಮೀಡಿಯಾ ಹೇಳಿದ್ದು) ಪೊಲೀಸ್ ಪ್ರೊಟೆಕ್ಷನ್‌ನಲ್ಲಿ ಟಿವಿ ಕ್ಯಾಮೆರಾಗಳನ್ನೂ ಕರೆತಂದು ಸುಮಾರು ಒಂದು ಕಿ.ಮೀ ದೂರದಲ್ಲಿ ಒಂದು ಪ್ರೊಟೆಸ್ಟ್ ಪೋಸ್ ಕೊಟ್ಟು ಹೋಗಿದ್ದಾರೆ. ಅಲ್ಲಿರುವ ಸುಮಾರು 50,000 ಜನರಿಗೆ ಇದರ ಸುಳಿವೇ ಇಲ್ಲ. ಯಾವ ಸ್ಥಳೀಯರೂ ಇದನ್ನು ವಿರೋಧಿಸಿಲ್ಲ. ಏಕೆಂದರೆ ಸುಮಾರು 12 ಕಿ.ಮೀ.ವರೆಗೆ ಈ ಪ್ರತಿಭಟನಾಕಾರರು ಗುಂಪಾಗಿ ಇದ್ದಾರೆ. ವಾಸ್ತವವೇನೆಂದರೆ ಇಲ್ಲಿಗೆ ಬಂದು ಇದರ ವಿರುದ್ಧವೇ ಪ್ರತಿಭಟನೆ ಮಾಡಲು ಹೆದರುವಷ್ಟು ಇಲ್ಲಿನ ಸಂಖ್ಯೆ ಇದೆ. ಪಂಜಾಬಿ ಯುವಜನರಿಂದ ಈ ಪ್ರದೇಶ ತುಂಬಿ ಹೋಗಿದೆ.

ಇದನ್ನೂ ಓದಿ: ಹರಿಯಾಣದ ಹಳ್ಳಿ ಹಳ್ಳಿಯಿಂದ ತೀರ್ಮಾನ: ರಾತ್ರಿಯೇ ದೆಹಲಿ ಗಡಿಗಳಿಗೆ ಹೋಗಿ ಹೋರಾಟದಲ್ಲಿ ಭಾಗಿಯಾಗಲು ನಿರ್ಧಾರ

2. ಟಿಕ್ರಿಯಲ್ಲಿ ಏನಾಯಿತು?
ಇಲ್ಲಿಯೂ 40,000ದಷ್ಟು ಜನರಿದ್ದಾರಾದರೂ ಅವರು 25 ಕಿ.ಮೀ.ಗಳಷ್ಟು ಜಾಗದಲ್ಲಿ ಚದುರಿ ಹೋಗಿದ್ದಾರೆ. ಹಾಗಾಗಿ ಅಲ್ಲಲ್ಲಿ ಅವರ ಮೇಲೆ ದಾಳಿ ನಡೆಸಬಹುದು ಎಂಬ ನಿರೀಕ್ಷೆಯಿತ್ತು. (ಸ್ವತಃ ನಮ್ಮ ತಂಡ ಸಂದರ್ಶನಕ್ಕಾಗಿ ಟಿಕ್ರಿ ಬಾರ್ಡರ್ ಮೆಟ್ರೋ ಸ್ಟೇಷನ್‌ನಿಂದ ಸ್ವಲ್ಪ ದೂರದ ಒಂದು ಮನೆಗೆ ತೆರಳಿದ್ದರು. ಅಲ್ಲಿ ಬಂದೂಕುಧಾರಿ ಗೂಂಡಾಗಳು ಹೋಗಿ ಹೆದರಿಸಿದ್ದರು. ಈ ಬಗ್ಗೆ ಪ್ರತ್ಯೇಕ ಸ್ಟೋರಿ ಬರಲಿದೆ). ಆದರೆ ಅಂಥದ್ದೇನೂ ಆಗಿಲ್ಲ. ಇಡೀ ಟಿಕ್ರಿ ಬಾರ್ಡರ್ ಸುರಕ್ಷಿತವಾಗಿದೆ.

3. ಘಾಜಿಪುರ ಬಾರ್ಡರ್’ನಲ್ಲಿ ಏನಾಯಿತು?
ಇದು ಉತ್ತರ ಪ್ರದೇಶದ ಭಾಗ. ಇಲ್ಲಿ ಪೊಲೀಸರು ಖಾಲಿ ಮಾಡಬೇಕೆಂದು ಅಲ್ಟಿಮೇಟಂ ಕೊಟ್ಟಿದ್ದಲ್ಲದೇ ನೀರು ಕಟ್ ಮಾಡಿದ್ದರು. ಮೊಬೈಲ್ ಟಾಯ್ಲೆಟ್‌ಗಳನ್ನು ಎತ್ತಿಕೊಂಡು ಹೋಗಿಬಿಟ್ಟರು. ಒಂದು ಹಂತದಲ್ಲಿ ಶಾಂತಿಯುತವಾಗಿ ಎಲ್ಲರೂ ಬಂಧನಕ್ಕೊಳಗಾಗೋಣ ಎಂಬ ನಿಲುವಿಗೆ ಬರಬಹುದು ಎಂದು ಕಾಣುತ್ತಿತ್ತು. ಆದರೆ ಯಾವಾಗ ಸ್ಥಳೀಯ ಬಿಜೆಪಿ ಎಂಎಲ್‌ಎ ಹಾಗೂ ಇತರ ಬಿಜೆಪಿ ಕಾರ್ಯಕರ್ತರು ಬಂದು ನೇರವಾಗಿ ಪ್ರತಿಭಟನಾಕಾರರನ್ನು ಎಬ್ಬಿಸಲು ಪ್ರಯತ್ನಿಸಿದರೋ, ಹಾಗೂ ಕೆಲವರು ನೇರವಾಗಿ ವೇದಿಕೆ ಏರಲು ಹೊರಟರೋ ಇಡೀ ಸನ್ನಿವೇಶ ಬದಲಾಯಿತು. ಬಿಕೆಯು ಟಿಕಾಯಿತ್ ನಾಯಕ ರಾಕೇಶ್ ಟಿಕಾಯಿತ್ ಮೈಕ್ ಎತ್ತಿಕೊಂಡು ಮಾಡಿದ 30 ನಿಮಿಷಗಳ ಭಾಷಣ ಇದೀಗ ವೈರಲ್.

ಇದನ್ನೂ ಓದಿ: ಜನರನ್ನು ಪ್ರಚೋದಿಸುವ ಟಿವಿ ಕಾರ್ಯಕ್ರಮ ನಿಗ್ರಹಿಸಿ: ಕೇಂದ್ರಕ್ಕೆ ಸುಪ್ರೀಂ ತಾಕೀತು

ನಮ್ಮ ಮೇಲೆ ಗುಂಡು ಹಾರಿಸಲಿ, ನಾನಿಲ್ಲೇ ನೇಣು ಹಾಕಿಕೊಳ್ಳುತ್ತೇನೆ, ಆದರೆ ಸತ್ಯಾಗ್ರಹದ ಜಾಗ ಖಾಲಿ ಮಾಡಲ್ಲ ಎಂದು ರಾಕೇಶ್ ಮಾಡಿದ ಭಾಷಣ ಸಂಚಲನ ಮೂಡಿಸಿತು. ಸ್ವಲ್ಪ ಹೊತ್ತಿನಲ್ಲಿ ರಾಕೇಶ್ ಟಿಕಾಯಿತ್ ಅವರ ಊರಿನ ಮನೆಯ ಮುಂದೆ ಸಾವಿರಾರು ಜನರು ಸೇರಿದರು ಮತ್ತು 10.45ರ ಹೊತ್ತಿಗೆ ಅವರ ಮೊದಲ ಗುಂಪು ಘಾಜಿಪುರ ಸೇರಿಯಾಗಿತ್ತು. ಬೆಳಗಿನ ಹೊತ್ತಿಗೆ 10,000 ಜನರಾದರೂ ಸೇರಬೇಕು ಎಂದು ಕರೆ ನೀಡಿದ್ದಾರೆ.

ಒಂದೆರಡು ಕಡೆ ನಡೆಯುತ್ತಿದ್ದ ನಿರಂತರ ಸತ್ಯಾಗ್ರಹ ನಿಂತಿದೆ ಎಂಬ ಸುದ್ದಿ ಇದೆ, ಅದೇ ಸಂದರ್ಭದಲ್ಲಿ ಪಂಜಾಬಿನಾದ್ಯAತ ನಡೆಯುತ್ತಿದ್ದ ಧರಣಿ ಸತ್ಯಾಗ್ರಹಗಳಲ್ಲಿ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂಬ ತೀರ್ಮಾನ ಮಾಡಿದ್ದಾರೆ. ಹರಿಯಾಣದ ವಿವಿಧ ಹಳ್ಳಿಗಳ ಪಂಚಾಯತ್‌ಗಳಲ್ಲಿ ದೆಹಲಿಗೆ ತೆರಳಬೇಕು ಎಂಬ ನಿರ್ಣಯ ಕೈಗೊಂಡಿದ್ದಾರೆ.

ಚಳವಳಿಯ ತೀವ್ರತೆ ಉತ್ತರ ಪ್ರದೇಶದ ಕಡೆಯೂ ಹೆಚ್ಚುತ್ತಿದೆ. ಸ್ವಲ್ಪ ಹೊತ್ತಿನಲ್ಲಿ ಸಂಪೂರ್ಣ ಸುದ್ದಿ ನೀಡಲಾಗುತ್ತದೆ.


ಇದನ್ನೂ ಓದಿ: ರೈತರ ಹೋರಾಟ; ಜ. 30ರಂದು ರಾಜ್ಯದಲ್ಲೂ ಉಪವಾಸ ಸತ್ಯಾಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...