Homeಮುಖಪುಟಜನರನ್ನು ಪ್ರಚೋದಿಸುವ ಟಿವಿ ಕಾರ್ಯಕ್ರಮ ನಿಗ್ರಹಿಸಿ: ಕೇಂದ್ರಕ್ಕೆ ಸುಪ್ರೀಂ ತಾಕೀತು

ಜನರನ್ನು ಪ್ರಚೋದಿಸುವ ಟಿವಿ ಕಾರ್ಯಕ್ರಮ ನಿಗ್ರಹಿಸಿ: ಕೇಂದ್ರಕ್ಕೆ ಸುಪ್ರೀಂ ತಾಕೀತು

’ರೈತರ ರ್‍ಯಾಲಿಯಿಂದಾಗಿ ನೀವು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ್ದೀರಿ. ನಿಮ್ಮ ಗಮನ/ಆದ್ಯತೆ ರೈತರ ಮೇಲೆ ಇಲ್ಲ, ಆದರೆ ನೀವು ಇಂಟರ್ನೆಟ್ ಮೊಬೈಲ್ ಅನ್ನು ಸ್ಥಗಿತ ಮಾಡಿದ್ದಿರಿ’ ಎಂದು ಸಕಾರಕ್ಕೆ ಸುಪ್ರಿಂಕೋರ್ಟ್ ಚಾಟಿ ಬೀಸಿದೆ.

- Advertisement -
- Advertisement -

ಜನರನ್ನು ಹಿಂಸಾಚಾರಕ್ಕೆ ಪ್ರೇರೇಪಿಸುವ ದೂರದರ್ಶನ ಕಾರ್ಯಕ್ರಮಗಳು ಮತ್ತು ಸುದ್ದಿಗಳನ್ನು ಸಕ್ರಿಯವಾಗಿ ನಿಯಂತ್ರಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು (ಗುರುವಾರ) ಸರ್ಕಾರಕ್ಕೆ ತಿಳಿಸಿದೆ. ಇದಕ್ಕೆ ಸಂಬಂಧಿಸಿದ ಕಾನೂನುಗಳನ್ನು ಬಿಗಿಗೊಳಿಸುವಂತೆ ಸೂಚಿಸಿದೆ.

“ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಚೋದನೆಯ ತಡೆಗಟ್ಟುವಿಕೆ ಒಂದು ಪ್ರಮುಖ ಭಾಗವಾಗಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಏನನ್ನೂ ಮಾಡಿಲ್ಲ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಕಳೆದ ವರ್ಷ ಈ ವಿಷಯದ ಬಗ್ಗೆ ಹಲವಾರು ವಿವಾದಗಳು ಘಟಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಮಾತನ್ನು ಹೇಳಿದೆ.

“ನ್ಯಾಯಯುತ ಮತ್ತು ಸತ್ಯವಾದ ವರದಿಗಾರಿಕೆ ಒಂದು ಸಮಸ್ಯೆಯಲ್ಲ. ಇತರರನ್ನು ಕೆರಳಿಸುವ ರೀತಿಯಲ್ಲಿ ಅದನ್ನು ಯೋಜಿಸಿದಾಗ ಅದು ಒಂದು ಸಮಸ್ಯೆ” ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ, ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ರೈತ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ: ಹೆಚ್​.ಎಸ್​. ದೊರೆಸ್ವಾಮಿ

ಕಳೆದ ವರ್ಷ ದೆಹಲಿಯಲ್ಲಿ ನಡೆದ ತಬ್ಲಿಘಿ ಜಮಾಅತ್ ಸಭೆಯ ಕುರಿತ ಮಾಧ್ಯಮ ಪ್ರಸಾರಕ್ಕೆ ಸಂಬಂಧಿಸಿದಂತೆ ಜಮಿಯತ್ ಉಲೆಮಾ-ಐ-ಹಿಂದ್, ಪೀಸ್ ಪಾರ್ಟಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾಯಾಲಯವು, ಸರ್ಕಾರ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಬ್ರಾಡ್‌ಕಾಸ್ಟಿಂಗ್ ಅಸೋಸಿಯೇಷ್‌ನಗಳಿಗೆ ನೋಟಿಸ್ ನೀಡಿದೆ. ತಬ್ಲೀಘೀ ಜಮಾಅತ್‌ ಸಭೆಯನ್ನು ಮಾಧ್ಯಮಗಳ ಒಂದು ಭಾಗವು ಕೋಮುವಾದೀಕರಿಸಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

’ಇಂತಹ ಕೆಲವು ಸಂದರ್ಭಗಳಲ್ಲಿ ಪ್ರಸಾರವನ್ನು ನಿಲ್ಲಿಸಿದೆ’ ಎಂದು ಕೇಂದ್ರ ವಾದಿಸಿದಾಗ, ಮುಖ್ಯ ನ್ಯಾಯಮೂರ್ತಿ ಬೊಬ್ಡೆ, ’ಜನರನ್ನು ಪ್ರಚೋದಿಸುವ ಪರಿಣಾಮವನ್ನು ಹೊಂದಿರುವ ಕಾರ್ಯಕ್ರಮಗಳಿವೆ ಎಂಬುದು ನಿಜ. ನೀವು (ಸರ್ಕಾರ) ಇದರ ಬಗ್ಗೆ ಏನನ್ನೂ ಮಾಡುವುದಿಲ್ಲ. ಅದು ಎರಡೂ ರೀತಿಯಲ್ಲಿ ಸಂಭವಿಸಬಹುದು. ಪ್ರಚೋದನೆಯು ಎರಡೂ ಸಮುದಾಯದ ವಿರುದ್ಧವಾಗಿರಬಹುದು’ ಎಂದು ತಿಳಿಸಿದರು.

ಪ್ರತಿಭಟನಾಕಾರ ರೈತರು ನಡೆಸಿದ ಟ್ರ್ಯಾಕ್ಟರ್ ರ್‍ಯಾಲಿಯ ಹಿಂಸಾಚಾರದ ನಂತರ ಗಣರಾಜ್ಯೋತ್ಸವದಂದು ಇಂಟರ್ನೆಟ್ ಸ್ಥಗಿತಗೊಳಿಸಿದ ಬಗ್ಗೆ ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ, “ರೈತರ ರ್‍ಯಾಲಿಯಿಂದಾಗಿ ನೀವು ಇಂಟರ್ನೆಟ್‌ ಅನ್ನು ಸ್ಥಗಿತಗೊಳಿಸಿದ್ದೀರಿ. ನಿಮ್ಮ ಗಮನ/ಆದ್ಯತೆ ರೈತರ ಮೇಲೆ ಇಲ್ಲ, ಆದರೆ ನೀವು ಇಂಟರ್ನೆಟ್ ಮೊಬೈಲ್ ಅನ್ನು ಸ್ಥಗಿತ ಮಾಡಿದ್ದಿರಿ. ಇವು ಎಲ್ಲೆಡೆ ಉದ್ಭವಿಸಬಹುದಾದ ಸಮಸ್ಯೆಗಳು” ಎಂದರು.

ಇದನ್ನೂ ಓದಿ: ದೆಹಲಿ ರೈತ ಹೋರಾಟ ಸಾಗಿ ಬಂದ ಹಾದಿ: ಮಂಡಿಯೂರುತ್ತಿರುವ ಕೇಂದ್ರ ಸರ್ಕಾರ!

ಕೇಬಲ್ ಟೆಲಿವಿಷನ್ ನೆಟ್ವರ್ಕ್ (ನಿಯಂತ್ರಣ) ಕಾಯ್ದೆಯನ್ನು ಸರ್ಕಾರ ಪರಿಷ್ಕರಿಸಬೇಕೆಂದು ನ್ಯಾಯಾಲಯ ಬಯಸಿದೆ ಎಂದು ನ್ಯಾಯಾಲಯ ಹೇಳಿದೆ. “ಕಾನೂನಿನಲ್ಲಿ ಕೇವಲ ಒಂದು ಸಾಲು ಸೇರಿಸುವುದರಿಂದ ಇದನ್ನು ಮಾಡಬಹುದು” ಎಂದು ನ್ಯಾಯಾಧೀಶರು ಹೇಳಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೆಲವು ಸಂದರ್ಭಗಳಲ್ಲಿ ಅಂತಹ ಟೆಲಿವಿಷನ್ ಚಾನೆಲ್ ವಿರುದ್ಧ ಕ್ರಮ ಕೈಗೊಂಡಿದ್ದು, ನ್ಯಾಯಾಲಯದ ಸಲಹೆಗಳನ್ನು ಸರ್ಕಾರಕ್ಕೆ ತಿಳಿಸುತ್ತೇವೆ ಎಂದರು.

“ಸರ್ಕಾರದ ಅಧಿಕಾರವನ್ನು ಎಷ್ಟು ಪ್ರಕರಣಗಳಲ್ಲಿ ಬಳಸಲಾಗಿದೆ ಎಂಬುದರ ಕುರಿತು ನಾವು ವಿವರಗಳನ್ನು ನೀಡಬಹುದು. ಆದರೆ ಲೈವ್ ಚಾಟ್ ಶೋನಲ್ಲಿ ಯಾವುದೇ ನಿಯಂತ್ರಣವಿಲ್ಲ, ಯಾರಾದರೂ ಪ್ರಚೋದನತ್ಮಕವಾಗಿ ಮಾತನಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಒಂದು ತಂಡ ರಚಿಸಲಾಗಿದೆ, ಇದು ಮೇಲ್ವಿಚಾರಣೆ ನಡೆಸುತ್ತಿದೆ ಮತ್ತು ಕ್ರಮ ಕೈಗೊಂಡಿದೆ, ಕೆಲವು ಸಂದರ್ಭಗಳಲ್ಲಿ ನಾವು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಪ್ರಸಾರವನ್ನು ನಿಲ್ಲಿಸಿದ್ದೇವೆ “ಎಂದು ತುಷಾರ್ ಮೆಹ್ತಾ ಹೇಳಿದರು.

ಇದನ್ನೂ ಓದಿ: ’ಮೋದಿಯೊಂದಿಗೆ ಯುವಶಕ್ತಿ’ ಹ್ಯಾಶ್‌ಟ್ಯಾಗ್‌ ಟ್ರೆಂಡ್‌‌ ಮಾಡುವಂತೆ ವಿವಿಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...