Homeಮುಖಪುಟ’ಮೋದಿಯೊಂದಿಗೆ ಯುವಶಕ್ತಿ’ ಹ್ಯಾಶ್‌ಟ್ಯಾಗ್‌ ಟ್ರೆಂಡ್‌‌ ಮಾಡುವಂತೆ ವಿವಿಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ!

’ಮೋದಿಯೊಂದಿಗೆ ಯುವಶಕ್ತಿ’ ಹ್ಯಾಶ್‌ಟ್ಯಾಗ್‌ ಟ್ರೆಂಡ್‌‌ ಮಾಡುವಂತೆ ವಿವಿಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ!

- Advertisement -
- Advertisement -

ಕೇಂದ್ರ ಸರ್ಕಾರ ದೇಶದ ಎಲ್ಲಾ ವಿಶ್ವವಿದ್ಯಾನಿಯಗಳಿಗೆ ’ಮೋದಿಯೊಂದಿಗೆ ಯುವಶಕ್ತಿ’ (#YuvaShaktiWithModi) ಸೇರಿದಂತೆ ಹಲವು ಹ್ಯಾಶ್‌ಟ್ಯಾಗ್‌‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯಗೊಳಿಸಲು ಪತ್ರ ಬರೆದು ಒತ್ತಾಯಿಸಿದ್ದು ಇದೀಗ ಬೆಳಕಿಗೆ ಬಂದಿದೆ.

ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಸೋಮವಾರ ಆಯೋಜಿಸಿದ್ದ 2021 ರ ರಾಷ್ಟ್ರೀಯ ಯುವ ಸಂಸತ್ತಿನ ಉತ್ಸವಕ್ಕೆ, ಸಾಮಾಜಿಕ ಜಾಲತಾಣದಲ್ಲಿ ’ಮೋದಿಯೊಂದಿಗೆ ಯುವಶಕ್ತಿ’(#YuvaShaktiWithModi) ಹ್ಯಾಶ್‌ಟ್ಯಾಗ್‌ ಜೊತೆಗೆ, ’ಯುವಾಹ್’(#YUVAAH) ’ಉತ್ಸವ್‌‌ ನಯೇ ಭಾರತ್ ‌ಕ’(#UtsahNayeBharatKa) ಮತ್ತು #NYF2021 ಹ್ಯಾಶ್‌ಟ್ಯಾಗ್‌ಗಳನ್ನು ಜನಪ್ರಿಯಗೊಳಿಸಲು ದೇಶದ ಎಲ್ಲಾ ವಿಶ್ವವಿದ್ಯಾನಿಲಯಕ್ಕೆ ಪತ್ರ ಬರೆದು ಒತ್ತಾಯಿಸಿದ್ದವು.

ಇದನ್ನೂ ಓದಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಬಲಿಷ್ಠ, ವೈವಿಧ್ಯ ಭಾರತವನ್ನು ಪ್ರತಿನಿಧಿಸುತ್ತದೆ: ಪ್ರಧಾನಿ ಮೋದಿ

ಯುವ ಸಂಸತ್‌ ಸೋಮವಾರ(ಇಂದು) ನಡೆದಿದ್ದು ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಬಗ್ಗೆ ದೇಶದ ಎಲ್ಲಾ ವಿವಿಗಳ ಉಪಕುಲಪತಿಗಳಿಗೆ ಹಾಗೂ ಎಲ್ಲಾ ಕಾಲೇಜಿನ ಪ್ರಾಂಶುಪಾಲರಿಗೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ಪತ್ರ ಬರೆದಿತ್ತು. ಪತ್ರದಲ್ಲಿ, ರಾಷ್ಟ್ರೀಯ ಯುವ ಸಂಸತ್‌ ಉತ್ಸವದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರರ ಭಾಗವಹಿಸುವಿಕೆಯನ್ನು ಉತ್ತೇಜಿಸುವಂತೆ ಕೇಳಿಕೊಂಡಿತ್ತು.

ಕಾರ್ಯಕ್ರಮದಲ್ಲಿ ಸ್ಪೀಕರ್, ರಾಜ್ಯಸಭೆಯ ಉಪಾಧ್ಯಕ್ಷರು, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸಚಿವರು, ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಜೊತೆಗೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ #YuvaShaktiWithModi ಸೇರಿದಂತೆ ಹಲವು ಹ್ಯಾಶ್‌ಟ್ಯಾಗ್‌‌ಗಳನ್ನು ಜನಪ್ರಿಯಗೊಳಿಸುವಂತೆ ಕೂಡಾ ಹೇಳಲಾಗಿತ್ತು.

ಯುವಸಂಸತ್‌ ಇಂದು ನಡೆದಿದ್ದು, ದೇಶದಾದ್ಯಂತ ಹಲವು ರಾಜ್ಯಗಳ ವಿದ್ಯಾರ್ಥಿಗಳು ಮಾತನಾಡಿದರು.

ಇದನ್ನೂ ಓದಿ: ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಬೆಂಬಲಿಸಿ #ಕನ್ನಡವಿವಿಉಳಿಸಿ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...