Homeಮುಖಪುಟರೈತ ಮುಖಂಡ ರಾಕೇಶ್‌ ಟಿಕಾಯತ್‌ ಮನೆ ಮುಂದೆ ನೆರೆದ ಜನಸಂದಣಿ: ರಾತ್ರಿಯೇ ದೆಹಲಿಗೆ ಮೆರವಣಿಗೆ ಹೊರಡಲು...

ರೈತ ಮುಖಂಡ ರಾಕೇಶ್‌ ಟಿಕಾಯತ್‌ ಮನೆ ಮುಂದೆ ನೆರೆದ ಜನಸಂದಣಿ: ರಾತ್ರಿಯೇ ದೆಹಲಿಗೆ ಮೆರವಣಿಗೆ ಹೊರಡಲು ನಿರ್ಧಾರ

- Advertisement -
- Advertisement -

ಮುಜಫರ್ ನಗರದ ಸಿಸೌಲಿಯಲ್ಲಿರುವ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಮನೆ ಮುಂದೆ ನೆರೆದ ಜನಸಂದಣಿಯು ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ಹೋರಾಟ ಬೆಂಬಲಿಸಲು ದೆಹಲಿಗೆ ಮೆರವಣಿಗೆ ಹೊರಡಲು ಸಿದ್ದ ಎಂದು ಘೋಷಿಸಿದ್ದಾರೆ.

ಗಾಜಿಪುರ್‌ ಗಡಿಯಲ್ಲಿ ರಾಕೇಶ್‌ ಟಿಕಾಯತ್‌ ರೈತ ಹೋರಾಟ ಮುಂದುವರೆಸುತ್ತಿದ್ದಾರೆ. ಆದರೆ ಗಣರಾಜ್ಯೋತ್ಸವದಂದು ಕೆಂಪು ಕೋಟೆಯ ಅಹಿತಕರ ಘಟನೆ ಜರುಗಿದ ನಂತರ ರೈತ ಹೋರಾಟ ಹತ್ತಿಕ್ಕಲು ಉತ್ತರ ಪ್ರದೇಶ ಪೊಲೀಸರು ಯತ್ನಿಸುತ್ತಿದ್ದು, ಇಂದು ಅವರು ಅಲ್ಲಿಂದ ತೆರವು ಮಾಡಬೇಕೆಂದು ಒತ್ತಾಯಿಸಿದ್ದರು. ಗಡಿಯ ಜನರಿಗೆ ನೀರು, ವಿದ್ಯುತ್‌ ಸಂಪರ್ಕ ಕಿತ್ತು ಹಾಕಲಾಗಿತ್ತು. ನಿನ್ನೆ ರಾತ್ರಿ ಕೆಲವೆಡೆ ಲಾಠೀ ಚಾರ್ಜ್‌ ಸಹ ಮಾಡಲಾಗಿತ್ತು.

ಇಂದು ಶತಾಯ ಗತಾಯ ರೈತರನ್ನು ಅಲ್ಲಿಂದ ತೆರವುಗೊಳಿಸಲು ಮುಂದಾದಾಗ ರೈತ ಮುಖಂಡ ರಾಕೇಶ್‌ ಟಿಕಾಯತ್ ನಮ್ಮ ಮೇಲೆ ಗುಂಡು ಹಾರಿಸಿದರೂ ಸರಿಯೇ ಇಲ್ಲಿಂದ ಕದಲುವುದಿಲ್ಲ ಎಂದು ಘೋಷಿಸಿದ್ದಾರೆ. ಅಲ್ಲದೇ ಪೊಲೀಸರು ನಮ್ಮನ್ನು ತೆರವುಗೊಳಿಸಿದರೆ ನಮ್ಮ ಸಾವಿಗೆ ಅವರೇ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಬಹಳಷ್ಟು ರೈತರು ಕೆರಳಿದ್ದು ಪೊಲೀಸರ ವಿರು‍ದ್ಧ ಹರಿಹಾಯ್ದಿದ್ದಾರೆ. ಅವರೆಲ್ಲರೂ ಸದ್ಯಕ್ಕೆ ಟಿಕಾಯತ್‌ ಮನೆ ಮುಂದೆ ಜಮಾಯಿಸಿ ಹೋರಾಟಕ್ಕೆ ಬೇಷರತ್‌ ಬೆಂಬಲ ಘೋಷಿಸಿದ್ದಾರೆ.

ಸುಪ್ರೀಂ ಕೋರ್ಟ್ ಶಾಂತಿಯುತ ಧರಣಿಯನ್ನು ಸಮರ್ಥಿಸಿದೆ. ಗಾಜಿಪುರ ಗಡಿಯಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ. ಇದರ ಹೊರತಾಗಿಯೂ, ಸರ್ಕಾರವು ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಇದು ಉತ್ತರ ಪ್ರದೇಶ ಸರ್ಕಾರದ ಮುಖ ”ಎಂದು ಎಂದು ರಾಕೇಶ್ ಟಿಕಾಯತ್‌ ಕಿಡಿಕಾರಿದ್ದಾರೆ.


ಇದನ್ನೂ ಓದಿ: ಹರಿಯಾಣದ ಹಳ್ಳಿ ಹಳ್ಳಿಯಿಂದ ತೀರ್ಮಾನ: ರಾತ್ರಿಯೇ ದೆಹಲಿ ಗಡಿಗಳಿಗೆ ಹೋಗಿ ಹೋರಾಟದಲ್ಲಿ ಭಾಗಿಯಾಗಲು ನಿರ್ಧಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...