Homeಕರ್ನಾಟಕಕನ್ನಡದ ಮಹತ್ವದ ಲೇಖಕ ಗಿರೀಶ್ ಕಾರ್ನಾಡ್ ಅಸ್ತಂಗತ

ಕನ್ನಡದ ಮಹತ್ವದ ಲೇಖಕ ಗಿರೀಶ್ ಕಾರ್ನಾಡ್ ಅಸ್ತಂಗತ

ಗಿರೀಶ್ ಕಾರ್ನಡ್‍ರವರು ತಮ್ಮ ಜೀವಿತದ ಕೊನೆಯವರೆಗು ತಾವು ನಂಬಿದ ತತ್ವಗಳ ಪರವಾಗಿ ದನಿ ಎತ್ತಿದವರು.

- Advertisement -
- Advertisement -

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ಕನ್ನಡದ ಹೆಸರಾಂತ ಲೇಖಕ, ನಾಟಕಕಾರ, ಜಾತ್ಯಾತೀತವಾದಿ ಗಿರೀಶ್ ಕಾರ್ನಾಡ್ ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಹಲವಾರು ತಿಂಗಳುಗಳಿಂದ ಉಸಿರಾಟ ಮತ್ತು ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ.

81 ವರ್ಷದ ಗಿರೀಶ್ ಕಾರ್ನಾಡ್ ರವರು ತಮ್ಮ ಜೀವಿತದ ಕೊನೆಯವರೆಗು ತಾವು ನಂಬಿದ ತತ್ವಗಳ ಪರವಾಗಿ ದನಿ ಎತ್ತಿದವರು. 2018ರ ಸೆಪ್ಟಂಬರ್ 05ರಂದು ಗೌರಿ ಹತ್ಯೆ ವಿರೋಧಿ ಒಕ್ಕೂಟದಿಂದ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅನಾರೋಗ್ಯದ ನಡುವೆಯೂ ‘ಮೀ ಟೂ ಅರ್ಬನ್ ನಕ್ಸಲ್’ ಫಲಕವನ್ನು ತಮ್ಮ ಕೊರಳಿಗೆ ಹಾಕಿಕೊಂಡು ಭಾಗವಹಿಸಿ ಗಮನ ಸೆಳೆದಿದ್ದರು.

ತಲೆದಂಡ, ಯಾಯಾತಿ, ತುಘಲಕ್, ಟಿಪ್ಪು ಕಂಡ ಕನಸು ಸೇರಿದಂತೆ ಹಲವು ಅತ್ಯುತ್ತಮ ನಾಟಕಗಳನ್ನು ರಚಿಸಿ ಪ್ರಸಿದ್ದರಾಗಿದ್ದ ಇವರು ಕನ್ನಡದ ಮಹತ್ವದ ಚಿಂತಕರಾಗಿದ್ದರು. ಗಿರೀಶ್ ಕಾರ್ನಾಡ್ ರ ನಿಧನದ ಹಿನ್ನೆಲೆಯಲ್ಲಿ ಹಲವು ಗಣ್ಯರು, ಲೇಖಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯಯವರನ್ನು ಕೋರ್ಟ್‌ಗೆ ಎಳೆದಿದ್ದಕ್ಕೆ ಬಿಎಸ್‌ವೈ ವಿರುದ್ಧ ಕಾಂಗ್ರೆಸ್ ಸೇಡು; ಬಿಜೆಪಿ ಆರೋಪ

0
'ರಾಜ್ಯದ ಕಾಂಗ್ರೆಸ್ ಸರ್ಕಾರವು ಮಾಜಿ ಮುಖ್ಯಮಂತ್ರಿ ಬಿ.ಎಸ್ ಒಳಗೊಂಡಿರುವ ಪೋಕ್ಸೋ ಪ್ರಕರಣದಲ್ಲಿ ಸೇಡಿನ ರಾಜಕಾರಣ ಮಾಡುತ್ತಿದೆ. ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರನ್ನು ಕೋರ್ಟ್‌ಗೆ ಎಳೆದಿದ್ದಕ್ಕೆ ಯಡಿಯೂರಪ್ಪ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ" ಎಂದು ರಾಜ್ಯ...