Homeಮುಖಪುಟಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಚಿತ್ರಣ

ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಚಿತ್ರಣ

- Advertisement -
- Advertisement -

ಬ್ರಿಟಿಷ್ ಮತ್ತು ಯುಎಸ್‌ಎಯ ಆರ್ಥಿಕತೆಗೆ 2023ನೇ ವರ್ಷವು ಒಂದು ನಿರ್ಣಾಯಕ ಘಟ್ಟವಾಗಿದೆ. ಕೋವಿಡ್ ಪಿಡುಗಿನ ನಂತರ ಉಂಟಾದ ಆರ್ಥಿಕ ಧ್ವಂಸದ ಬಳಿಕ ಮತ್ತೊಮ್ಮೆ ಹಳಿಗೆ ಮರಳಲು ಈ ಎರಡೂ ಬೃಹತ್ ಆರ್ಥಿಕತೆಗಳು ಹೆಣಗಾಡುತ್ತಿವೆ. ಹಣದುಬ್ಬರದ ದರಗಳು ಏರುತ್ತಿವೆ. ಸರಕಾರಗಳು ಹಣದುಬ್ಬರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಆದರೆ, ಈ ಪ್ರಯತ್ನಗಳು ಸಾಕಾಗುತ್ತಿಲ್ಲ. ಈ ದೇಶಗಳು ಆರ್ಥಿಕ ಹಿಂಜರಿತದತ್ತ ಜಾರಬಹುದು ಎಂದು ತಜ್ಞರು ಚಿಂತಿಸಲು ಆರಂಭಿಸಿದ್ದಾರೆ. ಜೀವನ ನಿರ್ವಹಣಾ ವೆಚ್ಚಗಳು ಏರುತ್ತಲಿದ್ದು, ನಿರುದ್ಯೋಗದ ಪ್ರಮಾಣವೂ ಏರಬಹುದೆಂದು ಹಲವರು ಆತಂಕಗೊಂಡಿದ್ದಾರೆ. ಜಾಗತಿಕ ಆರ್ಥಿಕತೆಯ ಚಿತ್ರಣವು ತ್ವರಿತವಾಗಿ ಬದಲಾಗುತ್ತಿದೆ. ಈ ದುರಿತ ಕಾಲವನ್ನು ಈ ಎರಡು ದೇಶಗಳು ಹೇಗೆ ನಿಭಾಯಿಸಬಹುದು ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಅವು ಆರ್ಥಿಕ ಹಿಂಜರಿತವನ್ನು ತಪ್ಪಿಸಿಕೊಳ್ಳಬಹುದೇ ಅಥವಾ ಒತ್ತಡಕ್ಕೆ ಕುಸಿದುಬೀಳಬಹುದೆ? ಮುಂದಿನ ಕೆಲವು ತಿಂಗಳುಗಳು ನಿರ್ಣಾಯಕವಾಗಿದ್ದು, ಈಗ ಮಾಡಲಾಗುವ ನಿರ್ಧಾರಗಳು ಈ ಆರ್ಥಿಕತೆಗಳ ಭವಿಷ್ಯದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರಲಿವೆ.

ಜಗತ್ತು ಒಂದು ಹೊಸ ಮತ್ತು ಅನಿಶ್ಚಿತತೆಯ ಭವಿಷ್ಯವನ್ನು ಎದುರುನೋಡುತ್ತಿದೆ. ಕೋವಿಡ್-19 ಪಿಡುಗು ಜಾಗತಿಕ ಮಟ್ಟದಲ್ಲಿ ವ್ಯಾಪಕವಾದ ಮತ್ತು ಏರುಪೇರಿನ ಆರ್ಥಿಕ ಅಸ್ಥಿರತೆಗೆ ಕಾರಣವಾಗಿದೆ. ಇದು ಆಳವಾದ ಮತ್ತು ದೀರ್ಘಕಾಲದ ಆರ್ಥಿಕ ಬಿಕ್ಕಟ್ಟನ್ನು ಉಂಟುಮಾಡಬಹುದು ಎಂಬ ಭಯಕ್ಕೆ ಕಾರಣವಾಗಿದೆ. ಹೇಗೂ ನಿರ್ದಿಷ್ಟವಾಗಿ ಪಾಶ್ಚಾತ್ಯ ಪ್ರಪಂಚವು 2008ರಿಂದಲೇ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದ್ದು, ಈ ಬಿಕ್ಕಟ್ಟಿಗೆ ಕಾರಣವಾದ ರಾಚನಿಕ ಸಮಸ್ಯೆಗಳಿಗೆ ಇನ್ನೂ ಉತ್ತರಗಳನ್ನು ಕಂಡುಕೊಳ್ಳಬೇಕಿದೆ. ಈ ಬಿಕ್ಕಟ್ಟಿನ ಪರಿಣಾಮಗಳು ಈಗಾಗಲೇ ಯುರೋಪಿನ ರಾಜಕೀಯವನ್ನು ಮರುರೂಪಿಸಿವೆ.

ಯುನೈಟೆಡ್ ಕಿಂಗ್ಡಮ್‌ನಲ್ಲಿ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್ ಅವರ ಹಗರಣಗಳು ಮತ್ತು ಪರಿಣಾಮವಾಗಿ ಅವರ ನಿರ್ಗಮನವು ಒಂದು ರಾಜಕೀಯ ಬಿಕ್ಕಟ್ಟನ್ನು ಉಂಟುಮಾಡಿರುವುದಲ್ಲದೇ, ಕೋವಿಡ್ ಪಿಡುಗು ಉಂಟುಮಾಡಿದ ಆರ್ಥಿಕ ಸಂಕಷ್ಟಗಳು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿವೆ. ನಂತರ ಪ್ರಧಾನಿಯಾಗಿ ಬಂದ ಟ್ರಸ್ ದುರ್ಬಲ ಆರ್ಥಿಕತೆ ಮತ್ತು ಆಳುವ ಪಕ್ಷದೊಳಗೆ ಮುಂದುವರಿಯುತ್ತಿರುವ ಒಳಜಗಳ ಹಾಗೂ ಕುಸಿದಿದ್ದ ಸ್ವೀಕಾರಾರ್ಹ ರೇಟಿಂಗ್‌ಅನ್ನು ಬಳುವಳಿಯಾಗಿ ಪಡೆದರು. ತ್ವರಿತವಾಗಿ ಅವರು ಜಾಗ ಖಾಲಿ ಮಾಡಬೇಕಾಗಿಬಂದು, ರಿಶಿ ಸುನಕ್ ಪ್ರಧಾನಿಯಾದರು.

ಇದೇ ರೀತಿಯಲ್ಲಿ ಯುಎಸ್‌ಎಯಲ್ಲಿಯೂ ಅಧ್ಯಕ್ಷ ಜೋ ಬೈಡನ್ ಒಬ್ಬ ಪೇಲವ ನಾಯಕ ಎಂದು ಪರಿಗಣಿಸಲಾಗುತ್ತಿದ್ದು, ಅಲ್ಲಿನ ಜನತೆಯ ಅಂಗೀಕಾರವನ್ನು ಪಡೆಯಲು ಅವರು ವಿಫಲರಾಗುತ್ತಿದ್ದಾರೆ. ಆರ್ಥಿಕ ಪುನಶ್ಚೇತನಕ್ಕೆ ಅವರ ಪ್ರಯತ್ನಗಳ ಹೊರತಾಗಿಯೂ, ಅವರು ಎರಡೂ ರಾಜಕೀಯ ಪಕ್ಷಗಳಿಂದ ವಿರೋಧ ಎದುರಿಸುತ್ತಿದ್ದಾರೆ. ದೊಡ್ಡದಾದ ಆದರೆ ಅಸ್ಥಿರವಾದ ಶಾಸನಸಭೆಗಳ ಬೆಂಬಲ ಪಡೆಯಲು ವಿಫಲರಾಗುತ್ತಿದ್ದಾರೆ.

ಹಣದುಬ್ಬರವನ್ನು ನಿಭಾಯಿಸಲು ಎರಡು ದಾರಿಗಳಿವೆ. ಅವು ರಾಜ್ಯಾದಾಯ (fiscal) ಮತ್ತು ಹಣಕಾಸಿಗೆ ಸಂಬಂಧಿಸಿದ್ದು (monetary). ರಾಜ್ಯಾದಾಯ ಧೋರಣೆಗಳು ಸರಕಾರಿ ವೆಚ್ಚದ ನಿಯಂತ್ರಣ ಮತ್ತು ತೆರಿಗೆಗಳನ್ನು ಒಳಗೊಂಡಿದ್ದರೆ, ಹಣಕಾಸು ಧೋರಣೆಗಳು ಬಡ್ಡಿ ದರದ ನಿಯಂತ್ರಣ, ಹೂಡಿಕೆ ಅಥವಾ ಉಳಿತಾಯಕ್ಕೆ ನೀಡುವ ಪ್ರೋತ್ಸಾಹವನ್ನು ಒಳಗೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಹಣಕಾಸು ಧೋರಣೆಗಳೇ ಹೆಚ್ಚಿನ ಗಮನ ಸೆಳೆದಿವೆ. ಯಾಕೆಂದರೆ, ಅದು ಕಡಿಮೆ ರಾಜಕೀಯವನ್ನು ಒಳಗೊಂಡ ವಿಷಯ ಮತ್ತು ಹೆಚ್ಚಿನ ಸಾಮಾಜಿಕ ಪರಿಣಾಮವನ್ನು ಬೀರುವಂತವುಗಳಲ್ಲ. ಆದುದರಿಂದ, ಹಣದುಬ್ಬರದ ನಿಯಂತ್ರಣಕ್ಕೆ ದಾರಿಯಾಗಿ ರಾಜಕಾರಣಿಗಳು ಮತ್ತು ಉದ್ಯಮಪತಿಗಳು ಹೆಚ್ಚುಹೆಚ್ಚಾಗಿ ಹಣಕಾಸು ಧೋರಣೆಗಳತ್ತಲೇ ಗಮನಹರಿಸುತ್ತಿದ್ದಾರೆ.

ಆದರೆ, ಹಣದುಬ್ಬರದ ನಿರ್ವಹಣೆಯ ಈ ಹಾದಿಯು- ಸಂಪತ್ತಿನ ಅಸಮಾನ ಹಂಚಿಕೆ ಮತ್ತು ಕೆಟ್ಟ ರೀತಿಯಲ್ಲಿ ನಿಯಂತ್ರಿತವಾದ ಹಣಕಾಸು ಕ್ಷೇತ್ರವೇ ಸೇರಿದಂತೆ ಮುಂತಾದ ರಾಚನಿಕ ಮೂಲ ಸಮಸ್ಯೆಗಳನ್ನು ಪರಿಹರಿಸಲು ಶಕ್ತವಾಗಿಲ್ಲ. ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಇಲ್ಲದಿರುವುದು ಮತ್ತು ಅದಕ್ಕೆ ಹಣ ಒದಗಿಸುವ ಸಲುವಾಗಿ ತೆರಿಗೆ ಹೆಚ್ಚಳಕ್ಕೆ ಸರಕಾರಗಳು ಒಪ್ಪದಿರುವುದು- ಹಣಕಾಸು ಧೋರಣೆಗಳನ್ನು ಅತಿಯಾಗಿ ಅವಲಂಬಿಸಿದ ಒಂದು ವ್ಯವಸ್ಥೆಯನ್ನು ಉಂಟುಮಾಡಿದೆ. ಹೀಗಿದ್ದರೂ, ಹಣಕಾಸು ಧೋರಣೆಗಳು ಹಣದುಬ್ಬರದ ನಿಯಂತ್ರಣದಲ್ಲಿ ಸೀಮಿತ ಪರಿಣಾಮವನ್ನು ಬೀರುತ್ತವೆಯೇ ಹೊರತು, ಸಮಸ್ಯೆಯ ಮೂಲ ಕಾರಣವನ್ನು ನಿಭಾಯಿಸಲು ಶಕ್ತವಾಗಿರುವುದಿಲ್ಲ.

ಇದನ್ನೂ ಓದಿ: ಶೇರು ಮಾರುಕಟ್ಟೆಯಲ್ಲಿ ಮತ್ತೊಂದು ಹಗರಣದ ಆರೋಪ; ಶೇರು ಇತಿಹಾಸದ ಕಣ್ಣೋಟ

ಆರ್ಥಿಕ ಹಿಂಜರಿತದ ಭಯ ಮತ್ತು ಏರುತ್ತಿರುವ ನಿರುದ್ಯೋಗದ ಹೊರತಾಗಿಯೂ, ಆಳುವವರು ರಾಜ್ಯಾದಾಯ ಧೋರಣೆಗಳನ್ನು ಅನುಸರಿಸಿ, ಸಾರ್ವಜನಿಕ ವೆಚ್ಚವನ್ನು ಏರಿಸಲು ತೆರಿಗೆ ಹೆಚ್ಚಳದಂತಹ ಕ್ರಮಗಳನ್ನು ಕೈಗೊಳ್ಳಲು ಇನ್ನೂ ಹಿಂಜರಿಯುತ್ತಿದ್ದಾರೆ. ಈ ಕಠಿಣವಾದ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಕೆಯೇ, ಆರ್ಥಿಕ ಹಿಂಜರಿತವನ್ನು ತಡೆಯಲು ಆರ್ಥಿಕತೆಗೆ ಬೇಕಾದಷ್ಟು ಬೆಂಬಲ ಸಿಗದಂತಹ ಮತ್ತು ದೀರ್ಘಕಾಲೀನ ರಾಚನಿಕ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿಗೆ ಕಾರಣವಾಗಿದೆ.

ಈಗಿನ ಯುಕೆ ಮತ್ತು ಯುಎಸ್‌ಎ ಸರಕಾರಗಳೆರಡೂ ತೆರಿಗೆ ದರವನ್ನು ಕೆಳಮಟ್ಟದಲ್ಲಿ ಉಳಿಸಲು ಮತ್ತು ಬಡ್ಡಿ ದರವನ್ನು ಏರಿಸುವ ಮೂಲಕ ಆರ್ಥಿಕತೆಯನ್ನು ನಿಯಂತ್ರಿಸಲು ಬದ್ಧವಾಗಿವೆ. ಇದು ಉಳಿತಾಯವನ್ನು ಪ್ರೋತ್ಸಾಹಿಸುವ, ಜೂಜುಕೋರ ಹೂಡಿಕೆಯನ್ನು ಕಡಿಮೆ ಮಾಡುವ ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿಡುವ ಉದ್ದೇಶ ಹೊಂದಿದೆ. ಆದರೆ, ಅದು ದೀರ್ಘಕಾಲೀನ ಆರ್ಥಿಕ ಸ್ಥಿರತೆಗೆ ಅಗತ್ಯವಾದ ಸಾರ್ವಜನಿಕ ಅವಶ್ಯಕತೆಗಳು ಮತ್ತು ಮೂಲಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಈ ಪ್ರಮುಖವಾದ ವಿಷಯಗಳನ್ನು ನಿಭಾಯಿಸಲು ಪ್ರಸ್ತುತ ಸರಕಾರಗಳ ವೈಫಲ್ಯವು, ತೀವ್ರಗಾಮಿಯಲ್ಲದ ಮಧ್ಯಮ ಪಂಥೀಯ ಮತದಾರರಲ್ಲಿ ಅಸಮಾಧಾನವನ್ನು ಹೆಚ್ಚಿಸಿ, ಬಲಪಂಥೀಯ ಗುಂಪುಗಳಲ್ಲಿ ನಿರ್ವಾತವನ್ನು ಒದಗಿಸುವುದರ ಮೂಲಕ ಅವು ರಾಜಕೀಯ ಚಿತ್ರಣದಲ್ಲಿ ಇನ್ನಷ್ಟು ಬಲವಾಗಿ ಬೇರೂರಲು ಅವಕಾಶ ಮಾಡಿಕೊಡುತ್ತದೆ.

2022ರಲ್ಲಿ ಭಾಗಶಃ ಉಕ್ರೇನ್ ಬಿಕ್ಕಟ್ಟಿನ ಪರಿಣಾಮವಾಗಿ ಇಂಧನ ಬೆಲೆಗಳು ಏರಿದವು. ಇದು ಯುಕೆ ಮತ್ತು ಯುಎಸ್‌ಎಯ ಹೆಚ್ಚಿನ ಜನರ ಸಂಕಷ್ಟಗಳಿಗೆ ಇನ್ನಷ್ಟನ್ನು ಸೇರಿಸಿತು. ಆರ್ಥಿಕತೆಯ ನಿಯಂತ್ರಣಕ್ಕೆ ಕೈಗೊಂಡ ಪ್ರಯತ್ನಗಳ ಹೊರತಾಗಿಯೂ ಟ್ರಂಪ್ ಮತ್ತು ಜಾನ್ಸನ್ ಇಬ್ಬರೂ ಕೋವಿಡ್ ಪಿಡುಗಿಗೆ ಮೊದಲೇ ಆರ್ಥಿಕತೆಗೆ ಸಾಕಷ್ಟು ಹಾನಿ ಮಾಡಿಬಿಟ್ಟಿದ್ದರು. ಆಗಿನ ಸಮಸ್ಯೆಗಳು ಇನ್ನೂ ಮುಂದುವರಿದಿದ್ದು, ಪ್ರಸ್ತುತ ಸರಕಾರಗಳು ಅವುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಶಕ್ತವಾಗಿರುವಂತೆ ಕಾಣುವುದಿಲ್ಲ.

ಸಾರ್ವಜನಿಕ ಅಭಿಪ್ರಾಯಗಳನ್ನು ಮತ್ತು ಧೋರಣೆಗಳನ್ನು ರೂಪಿಸುವಲ್ಲಿ ಟೆಲಿವಿಷನ್ ಪ್ರಮುಖ ಪಾತ್ರ ವಹಿಸುತ್ತದೆ. ಟ್ರಂಪ್ ಹಾಗೂ ಜಾನ್ಸನ್ ಇಬ್ಬರೂ ಹಿಂದೆ ಈ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳಾಗಿದ್ದು, ತಮ್ಮ ವರ್ಚಸ್ಸನ್ನು ಬಳಸಿ ವ್ಯಾಪಕ ಜನಬೆಂಬಲ ಪಡೆಯಲು ಶಕ್ತರಾಗಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಬೈಡನ್ ಮತ್ತು ಸುನಕ್ ಇಬ್ಬರೂ ಅದೇ ಮಟ್ಟದ ಟಿವಿ ವರ್ಚಸ್ಸನ್ನು ಹೊಂದಿಲ್ಲ. ಪರಿಣಾಮವಾಗಿ ಆರ್ಥಿಕತೆಯ ಸುಧಾರಣೆಗೆ ಅವರು ಕೈಗೊಳ್ಳುತ್ತಿರುವ ಕ್ರಮಗಳನ್ನು- ಕೆಲವು ಸಲ ಅವರು ಯಶಸ್ವಿಯಾದಾಗಲೂ ಬೇಗನೇ ಮರೆತುಬಿಡಲಾಗುತ್ತದೆ.

ಪಿಡುಗಿನ ಸಮಯದಲ್ಲಿ ತಂತ್ರಜ್ಞಾನ ಕ್ಷೇತ್ರವು ಭಾರಿ ಪ್ರಗತಿಯನ್ನು ಕಂಡಿತ್ತು. ಆದರೆ, ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟ ಉಂಟಾಯಿತು. ಅವುಗಳ ಮಾಲಕರು ಭಾರೀ ಲಾಭ ಗಳಿಸಿದ ಹೊತ್ತಿನಲ್ಲೇ ಅವರ ನೌಕರರು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಳೆದುಕೊಂಡರು. ಇದು ಈಗಾಗಲೇ ಇರುವ ಕೋಪ ಮತ್ತು ಹತಾಶೆಗೆ ಇನ್ನಷ್ಟನ್ನು ಸೇರಿಸುತ್ತದೆ. ಅದು ರಾಜಕೀಯ ಚಿತ್ರಣದಲ್ಲಿ ತೀರಾ ಬಲಪಂಥೀಯ ಶಕ್ತಿಗಳು ಮರುಹುಟ್ಟು ಪಡೆಯುವುದಕ್ಕೆ ಕಾರಣವಾಗಬಹುದು.

ಭವಿಷ್ಯವು ಅನಿಶ್ಚಿತವಾಗಿದ್ದು, ಜಾಗತಿಕ ಆರ್ಥಿಕತೆಯು ಪಿಡುಗಿನ ಕಾಲದ ಹಿಂಜರಿತ ಮತ್ತು ಬಿಕ್ಕಟ್ಟಿನಿಂದ ಹೇಗೆ ಚೇತರಿಸಿಕೊಳ್ಳಬಹುದು ಎಂಬುದನ್ನು ಇನ್ನಷ್ಟೇ ನೋಡಬೇಕಾಗಿದೆ. ಯುಕೆ ಮತ್ತು ಯುಎಸ್‌ಎಯ ಪ್ರಸ್ತುತ ಸರಕಾರಗಳು ಆರ್ಥಿಕ ಬಿಕ್ಕಟ್ಟಿನ ಮೂಲ ಕಾರಣಗಳನ್ನು ನಿಭಾಯಿಸಲು ವಿಫಲವಾದರೆ, ಅಲ್ಲಿನ ಜನರಲ್ಲಿ ಉಂಟಾಗಿರುವ ಕೋಪ ಮತ್ತು ಹತಾಶೆಗಳು ತೀವ್ರ ಬಲಪಂಥೀಯರ ಪುನರುತ್ಥಾನಕ್ಕೆ ಕಾರಣವಾಗಬಹುದು. ಜಗತ್ತು ಇಂದು ಕವಲುಹಾದಿಯಲ್ಲಿದೆ; ಮುಂದಿನ ಕೆಲ ವರ್ಷಗಳಲ್ಲಿ ಈ ನಾಯಕರು ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ಕೆಲವು ಪೀಳಿಗೆಗಳ ಆರ್ಥಿಕ ಮತ್ತು ರಾಜಕೀಯ ಚಿತ್ರಣವನ್ನು ರೂಪಿಸಲಿವೆ.

ಯುಕೆ ಮತ್ತು ಯುಎಸ್‌ಎಯ ಆರ್ಥಿಕತೆಗಳೆರಡೂ ಕೂಡಾ 2023ರಲ್ಲಿ ಕವಲುಹಾದಿಯಲ್ಲಿದ್ದು, ಬಿಕ್ಕಟ್ಟಿಗೆ ಕಾರಣವಾಗಿರುವ ಮೂಲ ರಾಚನಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ನಿರ್ಣಾಯಕವಾಗಿರುತ್ತದೆ. ಹಣದುಬ್ಬರದ ನಿಯಂತ್ರಣ ಮತ್ತು ಆರ್ಥಿಕ ಹಿಂಜರಿತ ತಡೆಗೆ ಪ್ರಸ್ತುತ ಸರಕಾರಗಳು ಕೈಗೊಳ್ಳುತ್ತಿರುವ ಕ್ರಮಗಳ ಹೊರತಾಗಿಯೂ, ಆರ್ಥಿಕ ವ್ಯವಸ್ಥೆಯಲ್ಲಿ ಸಂಪತ್ತಿನ ಅಸಮಾನ ಹಂಚಿಕೆ ಮತ್ತು ಅನಿಯಂತ್ರಿತ ಹಣಕಾಸು ಕ್ಷೇತ್ರಗಳು ಪ್ರಮುಖ ಸಮಸ್ಯೆಗಳಾಗಿಯೇ ಉಳಿದಿವೆ. ಈ ಕ್ಷೇತ್ರದಲ್ಲಿ ನಿರ್ಣಾಯಕ ಕ್ರಮಗಳ ಕೊರತೆಯು- ತೆರಿಗೆಗಳ ಬಳಕೆ ಅಥವಾ ಸಾರ್ವಜನಿಕ ರಂಗದಲ್ಲಿ ಹೂಡಿಕೆಯ ಕುರಿತು ಆಳುವವರ ಮತ್ತು ಎಲೀಟ್‌ಗಳ ಹಿಂಜರಿಕೆಯನ್ನು ತೋರಿಸುತ್ತದೆ. ಈ ಮೂಲ ಸಮಸ್ಯೆಗಳನ್ನು ಪರಿಹರಿಸದ ಹೊರತು ದೀರ್ಘಕಾಲೀನ ಆರ್ಥಿಕ ಸ್ಥಿರತೆಯು ಅನಿಶ್ಚಿತವಾಗಿಯೇ ಉಳಿಯಲಿದ್ದು, ಗಂಭೀರ ಪರಿಣಾಮಗಳನ್ನು ಬೀರಲಿದೆ. ಭವಿಷ್ಯಕ್ಕಾಗಿ ಭದ್ರವಾದ ಬುನಾದಿಯ ಮೇಲೆ ಯುಕೆ ಮತ್ತು ಯುಎಸ್‌ಎಯ ಆರ್ಥಿಕತೆಗಳನ್ನು ಕಟ್ಟಲು ನಿರ್ಣಾಯಕವಾದ ಕ್ರಮಗಳನ್ನು ತೆಗೆದುಕೊಳ್ಳಲು ಅಲ್ಲಿನ ನಾಯಕತ್ವಕ್ಕೆ ಇದು ಸಕಾಲ. ಇದಕ್ಕಾಗಿ- ಸೂಕ್ತವಾದ ತೆರಿಗೆ ಧೋರಣೆಗಳ ಅನುಷ್ಠಾನ, ಸಾರ್ವಜನಿಕ ಸೇವೆಗಳಲ್ಲಿ ಹೂಡಿಕೆ, ಎಲ್ಲಾ ನಾಗರಿಕರಿಗೆ ಹೆಚ್ಚು ಸಮಾನವಾದ ಸುಸ್ಥಿರ ಆರ್ಥಿಕತೆ ಸಾಧ್ಯವಾಗುವಂಥ ದಿಟ್ಟ ಕ್ರಮಗಳನ್ನು ಕೈಗೊಳ್ಳಲು ಅಲ್ಲಿನ ನಾಯಕರ ಸಂಕಲ್ಪದ ಅಗತ್ಯವಿದೆ.

ಕಿಶೋರ್ ಗೋವಿಂದ
ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...