Homeಮುಖಪುಟಜಾಗತಿಕ ಹಸಿವು ಸೂಚ್ಯಂಕ: ಪಾಕ್, ಬಾಂಗ್ಲಾ, ನೇಪಾಳಕ್ಕಿಂತ ಹಿಂದೆಯಿರುವ ಭಾರತ

ಜಾಗತಿಕ ಹಸಿವು ಸೂಚ್ಯಂಕ: ಪಾಕ್, ಬಾಂಗ್ಲಾ, ನೇಪಾಳಕ್ಕಿಂತ ಹಿಂದೆಯಿರುವ ಭಾರತ

116 ದೇಶಗಳ ಪಟ್ಟಿಯಲ್ಲಿ ಭಾರತ 101 ನೇ ಸ್ಥಾನದಲ್ಲಿದೆ

- Advertisement -

ಜಾಗತಿಕ ಹಸಿವು ಸೂಚ್ಯಂಕ (ಜಿಎಚ್‌ಐ)ದಲ್ಲಿ ಭಾರತವು ಕಳೆದ ವರ್ಷಕ್ಕಿಂತ ಈ ವರ್ಷ ಕುಸಿದಿದ್ದು, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳಕ್ಕಿಂತ ಕೆಳಗಿನ ಸ್ಥಾನಕ್ಕೆ ಕುಸಿದಿದೆ. 2020 ರಲ್ಲಿ ಭಾರತ 94 ನೇ ಸ್ಥಾನದಲ್ಲಿತ್ತು. ಆದರೆ 2021 ರಲ್ಲಿ 101 ನೇ ಸ್ಥಾನಕ್ಕೆ ದೇಶವು ಇಳಿದಿದೆ.

ಚೀನಾ, ಬ್ರೆಜಿಲ್ ಮತ್ತು ಕುವೈಟ್ ಸೇರಿದಂತೆ ಹದಿನೆಂಟು ದೇಶಗಳ ಜಾಗತಿಕ ಹಸಿವು ಸೂಚ್ಯಂಕದ ಸ್ಕೋರ್‌‌ ಐದಕ್ಕಿಂತ ಕಡಿಮೆ ಇದ್ದು, ಅಗ್ರ ಶ್ರೇಣಿಯಲ್ಲಿವೆ ಎಂದು ಹಸಿವು ಮತ್ತು ಅಪೌಷ್ಟಿಕತೆಯನ್ನು ಪತ್ತೆಹಚ್ಚುವ ಜಾಗತಿಕ ಹಸಿವು ಸೂಚ್ಯಂಕದ ವೆಬ್‌ಸೈಟ್ ಗುರುವಾರ ಹೇಳಿದೆ.

ಇದನ್ನೂ ಓದಿ: ಲಾಕ್‌ಡೌನ್‌: ಹಸಿವು, ಅಪಘಾತಗಳಿಂದ ಸಾವಿಗೀಡಾದವರ ಸಂಖ್ಯೆ 383!

ಐರಿಶ್ ನೆರವು ಸಂಸ್ಥೆಯಾದ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನ್ ಸಂಸ್ಥೆಯಾದ ವೆಲ್ಟ್ ಹಂಗರ್ ಹಿಲ್ಫೆ ಜಂಟಿಯಾಗಿ ತಯಾರಿಸಿದ ವರದಿಯು ಭಾರತದಲ್ಲಿ ಹಸಿವಿನ ಮಟ್ಟವನ್ನು “ಆತಂಕಕಾರಿ” ಎಂದು ಎಚ್ಚರಿಸಿದೆ. 2020 ರಲ್ಲಿ, 107 ದೇಶಗಳಲ್ಲಿ ಭಾರತವು 94 ನೇ ಸ್ಥಾನದಲ್ಲಿತ್ತು. ಈಗ 116 ದೇಶಗಳು ಪಟ್ಟಿಯಲ್ಲಿದ್ದು, ದೇಶವು 101 ನೇ ಸ್ಥಾನಕ್ಕೆ ಕುಸಿದಿದೆ.

ಭಾರತದಲ್ಲಿ ಕೊರೊನಾ ಮತ್ತು ಸಾಂಕ್ರಾಮಿಕ ಸಂಬಂಧಿತ ನಿರ್ಬಂಧಗಳಿಂದ ಜನರು ತೀವ್ರವಾಗಿ ತೊಂದರೆಗೀಡಾಗಿದ್ದಾರೆ. ವಿಶ್ವದಲ್ಲೇ ಅತಿಹೆಚ್ಚು ಪ್ರಮಾಣದಲ್ಲಿ ಎತ್ತರಕ್ಕೆ ಸಮನಾದ ತೂಕವನ್ನು ಹೊಂದಿರದ ಮಕ್ಕಳು ಭಾರತದಲ್ಲಿದ್ದಾರೆ. 2016-2020ರ ನಡುವೆ ಎತ್ತರಕ್ಕೆ ಸರಿಯಾದ ತೂಕ ಹೊಂದಿರದ ಮಕ್ಕಳ ಪ್ರಮಾಣ ಶೇಕಡಾ 17.3 ಇದ್ದು, 1998-2002ರ ನಡುವೆ ಈ ಪ್ರಮಾಣ ಶೇಕಡಾ 17.1 ಇತ್ತು ಎಂದು ಜಿಎಚ್‌ಐ ವರದಿ ಹೇಳಿದೆ.

ನೆರೆಯ ರಾಷ್ಟ್ರಗಳಾದ ನೇಪಾಳ (76), ಬಾಂಗ್ಲಾದೇಶ (76), ಮ್ಯಾನ್ಮಾರ್ (71) ಮತ್ತು ಪಾಕಿಸ್ತಾನ (92) ಕೂಡ ‘ಆತಂಕಕಾರಿ’ ಹಸಿವಿನ ಹಂತದಲ್ಲಿವೆ. ಆದರೆ ಈ ದೇಶಗಳು ತನ್ನ ನಾಗರಿಕರಿಗೆ ಆಹಾರ ನೀಡುವಲ್ಲಿ ಭಾರತಕ್ಕಿಂತ ಉತ್ತಮ ಸಾಧನೆ ಮಾಡಿದೆ.

ಇದನ್ನೂ ಓದಿ: ಎಲ್ಲರ ಹಸಿವು ನೀಗಿಸಲು ನಮ್ಮ ಮುಂದಿವೆ ಹಲವು ದೇಶಗಳ ಮಾದರಿಗಳು

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕರ್ನಾಟಕ ಕೊರೊನಾ: 24 ಗಂಟೆಯಲ್ಲಿ 67 ಸಾವಿರ ಡಿಸ್ಚಾರ್ಜ್, 38 ಸಾವಿರ ಹೊಸ ಪ್ರಕರಣ

0
ಕೊರೊನಾ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಪ್ರಕರಣಗಳು ದಿಢೀರ್‌ ಹೆಚ್ಚಾಗಿದ್ದವು. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಕೇಸಸ್ ಪತ್ತೆಯಾಗಿದ್ದವು. ಆದರೆ, ಕಳೆದ 24 ಗಂಟೆಯಲ್ಲಿ 67 ಸಾವಿರ ಕೊರೊನಾ ಸೋಂಕಿತರು ಚೇತರಿಕೆ ಕಂಡು, ಡಿಸ್ಚಾರ್ಜ್ ಆಗಿದ್ದಾರೆ....
Wordpress Social Share Plugin powered by Ultimatelysocial