Homeಅಂತರಾಷ್ಟ್ರೀಯ"ನಿಮ್ಮ ಬಂಕರ್‌ಗೆ ಹಿಂತಿರುಗಿ": ಟ್ರಂಪ್‌ಗೆ ಸಿಯಾಟಲ್ ಮೇಯರ್ ಖಡಕ್‌ ನುಡಿ

“ನಿಮ್ಮ ಬಂಕರ್‌ಗೆ ಹಿಂತಿರುಗಿ”: ಟ್ರಂಪ್‌ಗೆ ಸಿಯಾಟಲ್ ಮೇಯರ್ ಖಡಕ್‌ ನುಡಿ

- Advertisement -
- Advertisement -

ಪಶ್ಚಿಮ ಅಮೆರಿಕದ ಸಿಯಾಟಿಲ್‌‌ನ ಪೊಲೀಸ್ ಮುಕ್ತ ಸ್ವಾಯತ್ತ ವಲಯವನ್ನು ಪ್ರತಿಭಟನೆಯ ವಿಷಯದಲ್ಲಿ ಮಧ್ಯಪ್ರವೇಶಿಸುವುದಾಗಿ ಹೇಳಿದ ಟ್ರಂಪ್‌‌ಗೆ “ನಿಮ್ಮ ಬಂಕರ್‌ಗೆ ಹಿಂತಿರುಗಿ” ಎಂದು ಸಿಯಾಟಲ್‌ನ ಮೇಯರ್ ಜೆನ್ನಿ ಡರ್ಕನ್ ಎಚ್ಚರಿಕೆ ನೀಡಿದ್ದಾರೆ.

ಜಾರ್ಜ್ ಫ್ಲಾಯ್ಡ್ ಅವರ ಸಾವಿನಿಂದ ಉಂಟಾದ ವರ್ಣಭೇದ ನೀತಿ ಮತ್ತು ಪೋಲಿಸ್ ಕ್ರೌರ್ಯದ ವಿರುದ್ಧದ ಬೃಹತ್‌ ಪ್ರತಿಭಟನಾ ಪ್ರದರ್ಶನಗಳು ಅಧ್ಯಕ್ಷರ ನಿವಾಸವನ್ನು ತಲುಪಿದ್ದಾಗ ಟ್ರಂಪ್ ಅವರು ಶ್ವೇತಭವನದ ಸುರಕ್ಷಿತ ಪ್ರದೇಶ “ಬಂಕರ್‌”ನಲ್ಲಿ ಅಡಗಿ ಕೂತಿದ್ದರು ಎಂದು ಕಳೆದ ವಾರ ಮಾಧ್ಯಮಗಳು ವರದಿ ಮಾಡಿದ್ದವು.


ಇದನ್ನೂ ಓದಿ: ಪ್ರತಿಭಟನಾಕಾರರಿಗೆ ಹೆದರಿ ಶ್ವೇತಭವನದ ಬಂಕರ್ ನಲ್ಲಿ ಅಡಗಿದ ಡೊನಾಲ್ಡ್ ಟ್ರಂಪ್


ಸಿಯಾಟಲ್‌ನಲ್ಲಿ “ಕ್ಯಾಪಿಟಲ್ ಹಿಲ್ ಸ್ವಾಯತ್ತ ವಲಯ” ಅಥವಾ CHAZ ಎಂದು ಕರೆಯಲ್ಪಡುವ ನೆರೆಹೊರೆಯಲ್ಲಿ ಪ್ರತಿಭಟನೆಗಳನ್ನು ನಡೆಸಲು ಪ್ರತಿಭಟನಾಕಾರರು ಮತ್ತು ನಗರದ ಪೊಲೀಸ್ ಇಲಾಖೆ ಒಪ್ಪಿಕೊಂಡಿದೆ. ಇಂತಹ ಪ್ರದೇಶಕ್ಕೆ ಮಧ್ಯಪ್ರವೇಶಿಸುವುದಾಗಿ ಟ್ರಂಪ್‌ ಹೇಳಿದಾಗಿನಿಂದ ವಿವಾದ ಭುಗಿಲೆದ್ದಿದೆ.

ಕ್ರಾಂತಿಕಾರಿ ಎಡಪಂಥೀಯರು ಗವರ್ನರ್ ಜೇಇನ್ಸ್ಲೀ ಮತ್ತು ಸಿಯಾಟಲ್ ಮೇಯರ್ ಅವರನ್ನು ನಮ್ಮ ಮಹಾನ್ ದೇಶ ಹಿಂದೆಂದೂ ನೋಡಿರದ ಮಟ್ಟದಲ್ಲಿ ನಿಂದಿಸುತ್ತಿದ್ದಾರೆ. ಇದೀಗ ನಿಮ್ಮ ನಗರವನ್ನು ಹಿಂತಿಗೆದುಕೊಳ್ಳಿ. ನೀವು ಅದನ್ನು ಮಾಡದಿದ್ದರೆ, ನಾನು ಮಾಡುತ್ತೇನೆ. ಇದು ಆಟವಲ್ಲ. ಈ ಕೊಳಕು ಅರಾಜಕತಾವಾದಿಗಳನ್ನು ತಕ್ಷಣವೇ ನಿಲ್ಲಿಸಬೇಕು. ವೇಗವಾಗಿ ಸರಿಸಿ! ಎಂದು ಡೋನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದರು.

ಇದಕ್ಕೆ ಮೇಯರ್ ಜೆನ್ನಿ ಡರ್ಕನ್ ಉತ್ತರಿಸುತ್ತಾ, “ನಮ್ಮೆಲ್ಲರನ್ನೂ ಸುರಕ್ಷಿತರನ್ನಾಗಿ ಮಾಡಿ, ನಿಮ್ಮ ಬಂಕರ್‌ಗೆ ಹಿಂತಿರುಗಿ” ಎಂದು ಅಪಹಾಸ್ಯ ಮಾಡಿದ್ದಾರೆ. ಇನ್ನು ಸಿಯಾಟಲ್‌ ಗವರ್ನರ್‌ ಜೇಇನ್ಸ್ಲೀ ಸಹ ಟ್ರಂಪ್‌ಗೆ ತಿರುಗೇಟು ನೀಡಿದ್ದು, “ಆಡಳಿತದಲ್ಲಿ ಸಂಪೂರ್ಣವಾಗಿ ಅಸಮರ್ಥನಾದ ವ್ಯಕ್ತಿ ವಾಷಿಂಗ್ಟನ್‌ನಿಂದ ಹೊರತಾದ ರಾಜ್ಯದ ವ್ಯವಹಾರದಿಂದ ಹೊರಗುಳಿಯಬೇಕು. ಟ್ವೀಟ್‌ ಮಾಡುವುದನ್ನು ನಿಲ್ಲಿಸಿ” ಎಂದು ಇನ್ಸ್ಲೀ ಬರೆದಿದ್ದಾರೆ.

ಮೇ 25 ರಂದು ಮಿನ್ನಿಯಾಪೋಲಿಸ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲಲ್ಪಟ್ಟ ನಿರಾಯುಧ ಕಪ್ಪು ವ್ಯಕ್ತಿಯಾದ ಫ್ಲಾಯ್ಡ್ ಸಾವಿನ ನಂತರ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ.

ಸಿಯಾಟಲ್‌ನ ಸ್ವಾಯತ್ತ ವಲಯ ಸ್ಥಾಪನೆಯ ಹಿಂದೆ ಎಡಪಂಥೀಯ ಕಾರ್ಯಕರ್ತರು ಇದ್ದಾರೆ ಎಂಬ ವರದಿಗಳನ್ನು ಸಿಯಾಟಲ್‌ನ ಅಧಿಕಾರಿಗಳು ನಿರಾಕರಿಸಿದ್ದಾರೆ.

‘ನಗರವನ್ನು ಹಿಂದಕ್ಕೆ ತೆಗೆದುಕೊಳ್ಳಿ’ ಎಂದು ಟ್ವೀಟ್ ಮಾಡುವ ಟ್ರಂಪ್ ಮಾತಿನ ಅರ್ಥವೇನು ಎಂದು ಪ್ರತಿಭಟನಾಕಾರರೊಬ್ಬರು ಪ್ರಶ್ನಿಸಿದ್ದಾರೆ. “ಇದು ನಮ್ಮ ನಗರ. ನಾನು ಹುಟ್ಟಿ ಬೆಳೆದದ್ದು ಈ ಡ್ಯಾಮ್ ಸಿಟಿಯಲ್ಲಿ. ಇದನ್ನು ಜನರಿಗೆ, ಸಿಯಾಟಲ್‌ನಲ್ಲಿ ವಾಸಿಸುವ ಮತ್ತು ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ಜನರಿಗೆ ನೀಡೋಣ” ಎಂದು ಅವರು ತಿಳಿಸಿದ್ದಾರೆ.

ಆಫ್ರಿಕನ್-ಅಮೇರಿಕನ್ ಪ್ರತಿಭಟನಾಕಾರ ರಿಚ್ ಬ್ರೌನ್ “ಭಾನುವಾರ ಈ ಪ್ರದೇಶವನ್ನು ತೆರವುಗೊಳಿಸುವ ಪ್ರಯತ್ನದಲ್ಲಿ ಪೊಲೀಸರು ಅಶ್ರುವಾಯು ಮತ್ತು ಫ್ಲ್ಯಾಷ್ ಬ್ಯಾಂಗ್ ಗ್ರೆನೇಡ್‌ಗಳನ್ನು ಬಳಸಿದಾಗ ನಾನು ಬಹಳ ಹೆದರಿದ್ದೆ ಎಂದಿದ್ದಾನೆ. ಆದರೆ ಇಂದು ನನಗೆ ಬೆಂಬಲ ಮತ್ತು ಸ್ವಾಗತ ಸಿಕ್ಕಿದೆ. ಈಗ ನಾವು ಬೆದರಿಕೆ ಇಲ್ಲದೆ, ಭಯವಿಲ್ಲದೆ ಮಾತನಾಡಲು ಸಮರ್ಥರಾಗಿದ್ದೇವೆ. ಈ ಸಮಯವನ್ನಲ್ಲವೇ ನಾವು ಬಯಸುತ್ತಿದ್ದುದು?” ಎಂದಿದ್ದಾರೆ.

ಈ ಹಿಂದೆ ಇದೇ ರೀತಿ ಪ್ರತಿಭಟನೆಯ ವಿಷಯವಾಗಿ ಟ್ರಂಪ್‌ ಹೇಳಿಕೆ ನೀಡಿದ್ದಾಗ ಅಮೆರಿಕಾ ಪೊಲೀಸ್‌ ಅಧಿಕಾರಿಯೊಬ್ಬ ಅಧ್ಯಕ್ಷ ಟ್ರಂಪ್‌ಗೆ “ಬಾಯಿಮುಚ್ಚಿಕೊಂಡಿರಿ” ಎಂದು ತಾಕೀತು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.


ಮತ್ತಷ್ಟು ಸುದ್ದಿಗಳು

ನಮ್ಮ ಕೋವಿಡ್‌ ಪ್ಯಾಕೇಜ್‌ ನಿಮ್ಮ ಜಿಡಿಪಿಗಿಂತ ಡೊಡ್ಡದಿದೆ; ಪಾಕ್‌ ಸಹಾಯ ತಿರಸ್ಕರಿಸಿದ ಭಾರತ

ಟೆಲಿಕಾಂ ಕುರಿತ ನಮ್ಮ ತೀರ್ಪು ದುರುಪಯೋಗವಾಗುತ್ತಿದೆ : ಕೇಂದ್ರಕ್ಕೆ ಸುಪ್ರೀಂ ಚಾಟಿ

ತಮಾಷೆಗಾಗಿ ಕೆರೆಗೆ ಕಲ್ಲೆಸೆದ ವ್ಯಕ್ತಿ: ತುಂಬಿದ ಕೆರೆ ಖಾಲಿ ಮಾಡಿ ಪರಿತಪಿಸುತ್ತಿರುವ ಜನ!

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...