Homeಮುಖಪುಟಕೊರೊನಾ ಲಾಕ್‌ಡೌನ್: 6 ರಾಜ್ಯಗಳ 67 ಲಕ್ಷ ವಲಸೆ ಕಾರ್ಮಿಕರು ತವರಿಗೆ ಮರಳಿದ್ದಾರೆ

ಕೊರೊನಾ ಲಾಕ್‌ಡೌನ್: 6 ರಾಜ್ಯಗಳ 67 ಲಕ್ಷ ವಲಸೆ ಕಾರ್ಮಿಕರು ತವರಿಗೆ ಮರಳಿದ್ದಾರೆ

- Advertisement -
- Advertisement -

ಮಾರ್ಚ್‌ನಲ್ಲಿ ಕೊರೊನಾ ಲಾಕ್‌ಡೌನ್ ವಿಧಿಸಿದಾಗಿನಿಂದ ವಲಸೆ ಕಾರ್ಮಿಕರ ಕುರಿತು ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವಾಲಯ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯಂತೆ, ದೇಶದ ನಗರ ಕೇಂದ್ರಗಳಿಂದ ಆರು ರಾಜ್ಯಗಳ 116 ಜಿಲ್ಲೆಗಳಿಗೆ 67 ಲಕ್ಷ ವಲಸಿಗರು ವಾಪಾಸು ತಮ್ಮ ಮನೆಗಳಿಗೆ ಮರಳಿದ್ದಾರೆ.

ಈ ಪೈಕಿ ಸುಮಾರು 44 ಲಕ್ಷ ಅಥವಾ ಸುಮಾರು ಮೂರನೇ ಎರಡರಷ್ಟು ಜನರು 53 ಜಿಲ್ಲೆಗಳಿಗೆ ಮರಳಿದ್ದಾರೆ.

ಅತೀ ಹೆಚ್ಚು 23.6 ಲಕ್ಷ ವಲಸೆ ಕಾರ್ಮಿಕರು ಬಿಹಾರದ 32 ಜಿಲ್ಲೆಗಳಿಗೆ ಮರಳಿದ್ದು ಅದು ಅಗ್ರಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ 17.48 ಲಕ್ಷ ವಲಸೆ ಕಾರ್ಮಿಕರು 31 ಜಿಲ್ಲೆಗಳಿಗೆ ಹಿಂತಿರುಗಿದ್ದಾರೆ, ಇದು ಎರಡನೆ ಸ್ಥಾನದಲ್ಲಿದೆ.

ಈ ದತ್ತಾಂಶದಲ್ಲಿ ಪಶ್ಚಿಮ ಬಂಗಾಳ ಮತ್ತು ಚತ್ತಿಸ್ ಗಡ ಒಳಗೊಂಡಿಲ್ಲವಾದ್ದರಿಂದ, ಅಂತಿಮ ವರದಿಯ ಸಂಖ್ಯೆಗಳು ಇನ್ನೂ ಹೆಚ್ಚಾಗುವ ಸಾದ್ಯತೆಗಳಿವೆ. ಅಲ್ಲದೆ ಮುಂದಿನ 15 ದಿನಗಳಲ್ಲಿ ವಲಸಿಗರನ್ನು ತಮ್ಮ ರಾಜ್ಯಗಳಿಗೆ ಮರಳಲು ಅನುಕೂಲ ಮಾಡಿಕೊಡುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

 

53 ಜಿಲ್ಲೆಗಳಿಗೆ ತಲಾ ಒಂದು ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ಹಿಂತಿರುಗಿರುವುದು ದಾಖಲಾಗಿದೆ. 38 ಜಿಲ್ಲೆಗಳಲ್ಲಿ 50 ಸಾವಿರದಿಂದ 1 ಒಂದು ಲಕ್ಷದವರೆಗೆ ವಲಸಿಗರು ಹಿಂದಿರುಗಿದ್ದಯ ವರದಿಯಾಗಿದೆ.

ಅತೀ ಹೆಚ್ಚು ವಲಸಿಗರು ಹಿಂತಿರುಗಿದ 15 ಜಿಲ್ಲೆಗಳಲ್ಲಿ ಉತ್ತರ ಪ್ರದೇಶದ ಸಿದ್ದಾರ್ಥನಗರ ಜಿಲ್ಲೆ ಮೊದಲನೆ ಸ್ಥಾನದಲ್ಲಿದೆ. ಇಲ್ಲಿ 1.6 ಲಕ್ಷ ವಲಸೆ ಕಾರ್ಮಿಕರು ಹಿಂತಿರುಗಿದ್ದಾರೆ.

ಉಳಿದ ಜಿಲ್ಲೆಗಳೆಂದರೆ ಬಿಹಾರ್ ರಾಜ್ಯದ ಪೂರ್ವ ಚಂಪಾರನ್ (1.5 ಲಕ್ಷ), ಕತಿಹಾರ್ (1.4 ಲಕ್ಷ), ಮಧುಬಾನಿ (1.25 ಲಕ್ಷ), ಗಯಾ (1.2 ಲಕ್ಷ), ಪಶ್ಚಿಮ ಚಂಪಾರನ್ (1.2 ಲಕ್ಷ), ದರ್ಭಂಗಾ (1.03 ಲಕ್ಷ), ಅರಿಯಾ (1.01 ಲಕ್ಷ) ಮತ್ತು ಮುಜಾಫರ್ಪುರ ( 1.01 ಲಕ್ಷ).

ರಾಜಸ್ಥಾನ್ ರಾಜ್ಯದ ಪಾಲಿ (1.4 ಲಕ್ಷ), ಉದಯಪುರ (1.3 ಲಕ್ಷ) ಮತ್ತು ಜಲೋರ್ (1.1 ಲಕ್ಷ). ಒಡಿಸ್ಸಾದ ಗಂಜಾಂ (1.25 ಲಕ್ಷ); ಉತ್ತರ ಪ್ರದೇಶದ ಪ್ರಯಾಗರಾಜ್ (1.05 ಲಕ್ಷ); ಮತ್ತು ಮಧ್ಯ ಪ್ರದೇಶದ ಬಾಲಘಾಟ್ (1.03 ಲಕ್ಷ).


ಓದಿ: ಎಲ್ಲಾ ವಲಸೆ ಕಾರ್ಮಿಕರು ತಮ್ಮೂರು ತಲುಪಿದ್ದಾರೆಯೇ? ಎಷ್ಟು ಜನ ಉಳಿದುಕೊಂಡಿದ್ದಾರೆ? ಇಲ್ಲಿದೆ ಮಾಹಿತಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ಹಿಂದಿರುಗುವಾಗ ಆಯಾಸ ಮತ್ತು ಹಸಿವೆಯಿಂದ ಮೃತರಾದವರ ಸಂಖ್ಯಾಮಾಹಿತಿ ಇದ್ದರೆ ತಿಳಿಸಿ.?

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...