HomeUncategorizedಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

ಒಂದೇ ಚಾನೆಲ್, ಒಬ್ಬನೇ ಸಂದರ್ಶಕ. ಮೋದಿಗೆ ಕುಶಲ ಪ್ರಶ್ನೆ ರಾಹುಲ್‍ಗೆ ಕಠಿಣ ಪ್ರಶ್ನೆ. ವಿಡಿಯೋ ನೋಡಿ

- Advertisement -
- Advertisement -

ಚುನಾವಣಾ ನಿಮಿತ್ತ ನ್ಯೂಷ್ ನೇಷನ್ ಎಂಬ ಟಿವಿ ಚಾನೆಲ್ ಒಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿಯವರನ್ನು ಸಂದರ್ಶನ ನಡೆಸಿತ್ತು. ಚೌರಾಸಿಯ ಎಂಬ ಸಂದರ್ಶಕ ಇಬ್ಬರನ್ನು ಸಂದರ್ಶಿಸಿದ್ದರೂ, ರಾಹುಲ್ ಗಾಂಧಿಗೆ ರಾಬರ್ಟ್ ವಾದ್ರರ ಭ್ರಷ್ಟಾಚಾರ ಪ್ರಕರಣ, 1984ರ ಸಿಖ್ ಹತ್ಯಾಕಾಂಡದಂತಹ ಕಠಿಣ ಪ್ರಶ್ನೆಗಳನ್ನು ಕೇಳಿದರು. ಇದು ಸರಿಯಾದುದ್ದೆ. ಆದರೆ ಮೋದಿಯವರಿಗೆ ಮಾತ್ರ ಯಾವ ತಿಂಡಿ ಇಷ್ಟ, ಯಾವ ಬಟ್ಟೆ ಹಾಕ್ತಿರಿ? ರೋಟಿ ಮಾಡೋಕೆ ಬರುತ್ತಾ, ಕವನ ಬರಿತೀರಾ ಎಂಬಂಥ ಸಿಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ವಿಡಿಯೋ ನೋಡಿ, ಅವರು ಕೇಳಿದ ಪ್ರಶ್ನೆಗಳನ್ನು ತಿಳಿಯಲು ಕೆಳಗೆ ಓದಿ.

ವಿಡಿಯೋ ನೊಡಿ

ಸಂದರ್ಶಕ – ಮೋದಿಗೆ: ತಾವು ಏನು ಊಟ-ತಿಂಡಿ ಇಷ್ಟಪಡುತ್ತೀರಿ ಹಾಗೂ ದಿನಕ್ಕೆ ಎಷ್ಟು ಸಲ ಊಟ ಮಾಡುತ್ತೀರಿ?

ರಾಹುಲ್‍ಗೆ: ‘ನ್ಯಾಯ್’ ಯೋಜನೆಯ ಕುರಿತು ನ್ಯೂಸ್ ನೇಶನ್ ಸಂದರ್ಶನದಲ್ಲಿ ಮೋದಿಯವರನ್ನು ಕೇಳಲಾಯಿತು – ‘ರಾಹುಲ್‍ಜೀ ‘ನ್ಯಾಯ್’ ಯೋಜನೆ ಮುಂದಿಟ್ಟಿದ್ದಾರೆ; ಅದರ ಪ್ರಕಾರ ಬಡವರಿಗೆ ವರ್ಷಕ್ಕೆ 72 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ’ ಎಂದು ಕೇಳಿದ್ದಕ್ಕೆ ಮೋದಿಯವರು, “ನನ್ನ ಬಳಿ ಟ್ರಾಕ್ ರಿಕಾರ್ಡ್ ಇದೆ, ರಾಹುಲ್‍ಜೀ ಬಳಿ ಟೇಪ್ ರೆಕಾರ್ಡರ್ ಇದೆ” ಎಂದರು.

ಮೋದಿಗೆ: ತಾವು ಕ್ಯಾಲರಿ-ಕಾನ್ಶಸ್ ಆಗಿದೀರಾ – ದಿನಕ್ಕೆ ಇಷ್ಟು ಕ್ಯಾಲರಿ ತಿನ್ನಬೇಕು, ಈಗ ಇಷ್ಟು ಕ್ಯಾಲರಿ ತಿಂದುಬಿಟ್ಟಿದೀನಿ, ಸ್ವಲ್ಪ ತಿನ್ನಬೇಕು … ಇತ್ಯಾದಿ?

ರಾಹುಲ್‍ಗೆ: ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಅಥವಾ ಬಿಜೆಪಿಯ ಹೊರತಾಗಿ ಇನ್ಯಾವುದಾದರೂ ಪಕ್ಷ ಅಧಿಕಾರಕ್ಕೆ ಬಂದರೆ ರಫೇಲ್‍ನ ಕಂಟ್ರಾಕ್ಟನ್ನು ಮರು ಪರಿಶೀಲನೆ (ರೀ-ನೆಗೋಶಿಯೇಟ್) ನಡೆಸಲಾಗುವುದಾ?

ಮೋದಿಗೆ: ತಾವು ಏನೇನು ಅಡಿಗೆ ತಯಾರಿಸುತ್ತೀರಿ?
ಮೋದಿ: ಎಲ್ಲವನ್ನೂ ತಯಾರಿಸ್ತೀನಿ …
ಸಂ: ರೊಟ್ಟಿಯನ್ನು ಕೂಡಾ …?
ಮೋ: ಓಹೋ, ಎಲ್ಲವನ್ನೂ ತಯಾರಿಸ್ತೀನಿ.

ಸಂ – ರಾಹುಲ್‍ಗೆ: ಒಂದುವೇಳೆ ಅದರಲ್ಲಿ ರಫೇಲ್‍ನ ಕಂಟ್ರಾಕ್ಟ್‍ನಲ್ಲಿ ತಪ್ಪಾಗಿದೆ ಎಂದಾದಲ್ಲಿ ‘ಅದನ್ನು ರದ್ದುಪಡಿಸಲಾಗುವುದು’ ಅಥವಾ ‘ರೀ-ನೆಗೋಶಿಯೇಟ್ ಮಾಡಲಾಗುವುದು’ ಎಂದು ತಾವೇಕೆ ಓಪನ್ನಾಗಿ ಹೇಳುವುದಿಲ್ಲ? ಯಾಕೆಂದರೆ ಈ ಡೀಲ್‍ನಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ನೀವು ತಿಳಿಯುತ್ತೀರಲ್ಲ…

ಮೋದಿಗೆ: ಕಳೆದ ಐದು ವರ್ಷಗಳಲ್ಲಿ ಎಂದಾದರೂ ನೀವು ಅಡಿಗೆಮನೆಗೆ ಹೋಗಲು ಸಾಧ್ಯವಾಗಿದೆಯಾ?
ರಾಹುಲ್‍ಗೆ: ಈ ವಿಚಾರ ಸುಪ್ರೀಂ ಕೋರ್ಟಿನಲ್ಲಿರುವಾಗ ತನಿಖೆ ಹೇಗೆ ನಡೆಯಲು ಸಾಧ್ಯ ಎಂಬ ಪ್ರಶ್ನೆ ಏಳುತ್ತದಲ್ಲವೆ?

ಮೋದಿಗೆ: ಪ್ರಧಾನ ಮಂತ್ರಿಗಳೆ, ಒಂದು ಬಹಳ ಮಹತ್ವಪೂರ್ಣ ವಿಚಾರ ಏನೆಂದರೆ, ನಿಮ್ಮ ವೇಷಭೂಷಣ ನಿಮಗೆ ಬಹಳ ಒಪ್ಪುತ್ತದೆ (ಸ್ಯೂಟ್ ಆಗುತ್ತದೆ).
ರಾಹುಲ್‍ಗೆ: ರಾಹುಲ್‍ಜೀ, ನಾವು ಪಂಜಾಬಿನಲ್ಲಿದೀವಿ. ಈಚೆಗಷ್ಟೇ ಒಂದು ವಿಚಾರ ಚರ್ಚೆಗೆ ಬಂದಿತ್ತು – 1984ರಲ್ಲಿ ನಡೆದಿದ್ದ ಸಿಖ್ ಗಲಭೆ(ರಯಟ್ಸ್)ಗಳಿಗೆ ಸಂಬಂಧಪಟ್ಟಂತೆ ಸ್ಯಾಮ್ ಪಿತ್ರೋದಾ ಅವರು “ಏನು ಆಗಿದೆಯೋ ಆಗಿದೆ” ಎಂದು ಹೇಳಿದ್ದರು …

ಮೋದಿಗೆ: ಅಂದರೆ ತಾವು ಫ್ಯಾಶನ್ ಬಗ್ಗೆ, ಬಟ್ಟೆಬರೆ ಬಗ್ಗೆಯೂ ಅಷ್ಟೊಂದು ಆಸಕ್ತಿ ಹೊಂದಿದೀರಾ? ಅದರ ಬಗ್ಗೆ ಏನಾದರೂ ಓದುತ್ತೀರಾ? ಯಾವ ಅಕೇಶನ್‍ಗೆ ಎಂತಹ ಉಡುಗೆ ತೊಡಬೇಕು ಎಂಬುದನ್ನು ಹೇಗೆ ನಿರ್ಧರಿಸುತ್ತೀರಿ?
ರಾಹುಲ್‍ಗೆ: … ಅವು ಸಂಘಟಿತವಾದ ಗಲಭೆಗಳಾಗಿದ್ದವು, ಅವುಗಳಿಗೆ ಕಾಂಗ್ರೆಸ್ ಪಕ್ಷವೇ ಜವಾಬ್ದಾರ ಎಂದು ಬಿಜೆಪಿಯ ಆರೋಪ…

ಮೋದಿಗೆ: ತಾವು ಜೇಬಿನಲ್ಲಿ ಪರ್ಸ್ ಇಟ್ಕೊಳ್ತೀರಾ?
ರಾಹುಲ್‍ಗೆ: … ಅವರು ಹೇಳಿದರು – ಗುಜರಾತಿನಲ್ಲಿ ಕಾಂಗ್ರೆಸ್ಸು ಜಿಎಸ್‍ಟಿಯನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣೆ ಎದುರಿಸಿತು, ಸೂರತ್‍ನಲ್ಲಿ ಅದರ ಬಗ್ಗೆ ಬಹಳ ಪ್ರಚಾರ ಕೂಡ ನಡೆಯಿತು. ಆದರೆ ಸೂರತ್‍ನ ಎಲ್ಲ ಸೀಟುಗಳನ್ನೂ ನಾವೇ ಗೆದ್ದೆವು … ಈಗ ಐದು ವರ್ಷಗಳ ಕೆಲಸಕಾರ್ಯಗಳ ಮೇಲೆ ಚುನಾವಣೆ ನಡೆಯುತ್ತಿದೆ – ಎಂದು.

ಇದಕ್ಕೆ ರಾಹುಲ್ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೆಂದರೆ, ಪ್ರಧಾನ ಮಂತ್ರಿಯ ಈ ಉತ್ತರ ಇತ್ತಲ್ಲ, ಅದೂ ಸಹ ಅವರಿಗೆ ಕೊಡಲಾಗಿದ್ದ ನೋಟ್‍ಶೀಟ್‍ನಲ್ಲಿತ್ತಾ? ಅವರ ಮುಂದೊಂದು ಕಾಗದ ಇಟ್ಟಿದ್ದಿರಲ್ಲ, ಅದರಲ್ಲಿ ಈ ಉತ್ತರವನ್ನೂ ಬರೆಯಲಾಗಿತ್ತಾ ಅಥವಾ ಬರೆದಿರಲಿಲ್ಲವಾ? ಎಂದು ಹೇಳಿದ್ದಲ್ಲದೇ ನೀವು ಬೇಕಾದರೆ ಇದನ್ನು ಎಡಿಟ್ ಮಾಡಿಕೊಳ್ಳಿ ಎಂದು ಹೇಳಿ ನಗೆ ಹುಟ್ಟಿಸಿದ್ದರು.

ಈ ರೀತಿಯಾಗಿ ಇಂದು ಮೀಡಿಯಾಗಳು ಸಂಪೂರ್ಣ ಮೋದಿಮಯವಾಗಿರುವುದು ಪ್ರಜಾತಂತ್ರದ ದೃಷ್ಟಿಯಿಂದ ಬಲು ಅಪಾಯಕಾರಿ. ಇದು ಮಾಧ್ಯಮಗಳ ದಿವಾಳಿತನ, ಮೋದಿಯವರಿಗೆ ಮಾಧ್ಯಮಗಳ ಮೇಲಿರುವ ಭಯವನ್ನು ಸಹ ತೋರಿಸುತ್ತದೆ. ಮೊದಲೇ ಇಂತಹದೇ ಪ್ರಶ್ನೆಗಳನ್ನು ಕೇಳಬೇಕು ಎಂದು ಸ್ಕ್ರಿಪ್ಟ್ ಪ್ರಶ್ನೆಗಳನ್ನು ಬರೆದುಕೊಟ್ಟು ಸಂದರ್ಶನ ನಡೆಸಬೇಕಾದ ದುರ್ಗತಿಗೆ ಇಂತಹ ಚಾನೆಲ್‍ಗಳು ಇಳಿದಿವೆ.
ಕೊನೆಯಲ್ಲಿ ಒಂದು ಮಾತು: ಮೋದಿಯ ಸಂದರ್ಶನಕ್ಕೆ ಜೊತೆಯಲ್ಲಿ ಒಬ್ಬ ‘ಮಾಡ್’ ಮಹಿಳೆಯನ್ನು ಕರೆದೊಯ್ದಿದ್ದ ಚೌರಾಸಿಯ, ರಾಹುಲ್ ಸಂದರ್ಶನಕ್ಕೆ ಜೊತೆಗೊಬ್ಬ ಪುರುಷನನ್ನು ಕರೆದುಕೊಂಡು ಹೋಗಿದ್ದರು. ಇಲ್ಲಿಯೂ ಅಸಮಾನತೆ ಮಾಡಿದ್ದಾರೆ ನೋಡಿ.

ಇದನ್ನು ಓದಿ: ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...