Homeಮುಖಪುಟನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿಗೆ ಪ್ರಶ್ನೆಗಳು ಮೊದಲೇ ಗೊತ್ತಿತ್ತಾ?

ಒಂಥರಾ ಪರೀಕ್ಷೆಗೂ ಮೊದಲೇ ಕ್ವೆಶನ್ ಪೇಪರ್ ಲೀಕ್! ಅದೂ ಟಫ್ ಕ್ವೆಶನ್ ಇರುವಂತಿಲ್ಲ

- Advertisement -
- Advertisement -

ಈ ವಿಡಿಯೋ ನೋಡಿ….
ಸಂದರ್ಶಕರಲ್ಲೊಬ್ಬರು ಕೇಳಿದ ಪ್ರಶ್ನೆ ಮೋದಿ ರೆಫರ್ ಮಾಡುತ್ತಿದ್ದ ಫೋಲ್ಡರಿನ ಒಂದು ಕಾಗದದ ಮೇಲ್ಭಾಗದಲ್ಲಿ ಯಥಾವತ್ತಾಗಿ ಪ್ರಿಂಟಾಗಿತ್ತು! ಅಂದರೆ, ಸಂದರ್ಶನಕ್ಕೂ ಮೊದಲೇ ಪ್ರಶ್ನೆಗಳು ಮೋದಿ ಬಳಿ ಇರುತ್ತವೆ. ಅದಕ್ಕೆ ಅವರು ಉತ್ತರ ರೆಡಿ ಮಾಡಿಕೊಂಡು ಬಂದಿರುತ್ತಾರೆ… ಒಂಥರಾ ಪರೀಕ್ಷೆಗೂ ಮೊದಲೇ ಕ್ವೆಶನ್ ಪೇಪರ್ ಲೀಕ್! ಅದೂ ಟಫ್ ಕ್ವೆಶನ್ ಇರುವಂತಿಲ್ಲ…. ಥೂ ಅಸಹ್ಯ…

ಫ್ಯಾಕ್ಟ್ ಚೆಕಿಂಗ್ ಸಂಸ್ಥೆ ಅಲ್ಟ್‍ನ್ಯೂಸ್‍ನ ಸಂಸ್ಥಾಪಕ ಪ್ರತೀಕ್ ಸಿನ್ಹಾರವರು, ನ್ಯೂ ನೇಷನ್ ಚಾನೆಲ್ ಮೋದಿಯೊಂದಿಗೆ ನಡೆಸಿದ ಸಂದರ್ಶನದ ವಿಡಿಯೋವನ್ನು ಸ್ಲೋ ಡೌನ್ ಮಾಡಿ, ಈ ವಿವರಗಳನ್ನು ತೆರೆದು ಇಟ್ಟಿದ್ದಾರೆ…
ಮೊದಲಿಗೆ , ಪ್ರತೀಕ್ ಸಿನ್ಹಾ ಈ ಕುರಿತಂತೆ ಮಾಡಿರುವ ಈ ಟ್ವೀಟ್‍ಗಳನ್ನು ಓದಿ:

ಪ್ರತೀಕ್ ಟ್ವೀಟ್: ‘ನಿರೂಪಕ (ಸಂದರ್ಶಕ) ದೀಪಕ್ ಚೌರಾಸಿಯಾ ಕೇಳುವ ಒಂದು ಪ್ರಶ್ನೆಯು, ಮೋದಿ ಉತ್ತರಿಸಲು ರೆಫರ್ ಮಾಡುತ್ತಿದ್ದ ಕಾಗದದ ಮೇಲ್ಭಾಗದಲ್ಲಿ ಅಕ್ಷರಶ: ಯಥಾವತ್ತಾಗಿ ಮುದ್ರಣವಾಗಿದೆ….’

ಪ್ರತೀಕ್ ಟ್ವೀಟ್2: ಇಲ್ಲಿರುವ ಸಂದರ್ಶನದ ವಿಡಿಯೊ ( ಸ್ಲೋ ಡೌನ್ ಮಾಡಿದ್ದೇವೆ) ನೋಡಿ… ಮೋದಿ ಉತ್ತರಿಸುವ ಮೊದಲು ತಮ್ಮಲ್ಲಿರುವ ಫೈಲ್‍ನಲ್ಲಿನ ಕಾಗದವೊಂದನ್ನು ನೋಡುತ್ತಿರುವ ದೃಶ್ಯ…

ಈಗ ವಿಷಯಕ್ಕೆ ಬರೋಣ. ಪತ್ರಿಕಾಗೋಷ್ಠಿಯನ್ನೇ ನಡೆಸದ ಪ್ರಧಾನಿ ಎಂಬ ಕುಖ್ಯಾತಿಯ ಪ್ರಧಾನಿ ನರೇಂದ್ರ ಮೋದಿ, ಈ ಚುನಾವಣಾ ಸುಗ್ಗಿಯಲ್ಲಿ ಹಲವು ಆಯ್ದ ಮಾಧ್ಯಮ ಸಂಸ್ಥೆಗಳಿಗೆ ಸಂದರ್ಶನ ಕೊಡುತ್ತಲೇ ಇದ್ದಾರೆ. ಈ ಸಂದರ್ಶನಗಳ ಬಗ್ಗೆ ಇರುವ ಒಂದು ಸಾಮಾನ್ಯ ವಿಮರ್ಶೆ ಎಂದರೆ, ಸಂದರ್ಶಕರು ಯಾವುದೇ ‘ಟಫ್’ ಪ್ರಶ್ನೆ ಕೇಳುತ್ತಿಲ್ಲ ಎಂಬುದು…

ಈಗ ಇಲ್ಲಿ ತೋರಿಸುತ್ತಿರುವ ಒಂದು ವಿಡಿಯೋ ಕ್ಲಿಪ್ ಪ್ರಕಾರ, ನ್ಯೂಸ್ ನೇಷನ್ ಟಿವಿಗೆ ಕೊಟ್ಟ ಸಂದರ್ಶನದಲ್ಲಿ, ಇಲ್ಲಿ ಉಲ್ಲೇಖಿಸಿದ ನಿರ್ದಿಷ್ಟ ಪ್ರಶ್ನೆಯನ್ನು ಮೋದಿಗೆ ಸಂದರ್ಶನಕ್ಕೂ ಮೊದಲೇ ಕೊಡಲಾಗಿತ್ತು! ಅಲ್ಟ್‍ನ್ಯೂಸ್‍ನ ಪ್ರತೀಕ್ ಸಿನ್ಹಾ ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಮೋದಿಗೆ ಮೊದಲೇ ಪ್ರಶ್ನೆಗಳನ್ನು ಕಳಿಸಿ ಕೊಟ್ಟು ಸಂದರ್ಶನ ಮಾಡಲಾಗುತ್ತಿದೆ ಎಂಬುದರ ಎಳೆಯನ್ನು ನಮ್ಮ ಮುಂದೆ ಇಟ್ಟಿದ್ದಾರೆ.

ಸಂದರ್ಶನದಲ್ಲಿ ನಿರೂಪಕ ದೀಪಕ್ ಚೌರಾಸಿಯಾ, ‘ಇತ್ತೀಚಿನ ವರ್ಷಗಳಲ್ಲಿ ತಾವು ಯಾವುದಾದರೂ ಕವನ ಬರೆದಿದ್ದೀರಾ?’ ಎಂದು ಮೋದಿಗೆ ಪ್ರಶ್ನಿಸುತ್ತಾರೆ. ಮೋದಿ ತಮ್ಮ ಫೈಲ್‍ನಲ್ಲಿ ‘ತಮ್ಮ’ ಕವನದ ಪೇಜ್ ತೆಗೆದಾಗ, ಅದರ ಮೇಲ್ಭಾಗದಲ್ಲಿ ಚೌರಾಸಿಯಾ ಪ್ರಶ್ನೆ ಯಥಾವತ್ ಮುದ್ರಣವಾಗಿದ್ದನ್ನು ಈ ವಿಡಿಯೋ ತುಣುಕು ತೋರಿಸುತ್ತದೆ…

ನಿರೂಪಕ ಇತ್ತೀಚೆಗೆ ಬರೆದ ಒಂದು ಕವಿತೆಯನ್ನು ವಾಚಿಸಿ ಎಂದಾಗ, ಮೋದಿ ತಮ್ಮ ಫೈಲ್ ಪಡೆದು ಕವಿತೆ (ಮುದ್ರಿತ) ಇರುವ ಪೇಜ್ ತೆಗೆಯುತ್ತಾರೆ… ಇಲ್ಲೇ ಇರುವುದು ರಹಸ್ಯ! ಆಪೇಜ್‍ನ ಮೇಲ್ಭಾಗದಲ್ಲಿ ನಿರೂಪಕ ಕೇಳಿದ ಪ್ರಶ್ನೆ ಡಿಟ್ಟೋ ಪ್ರಿಂಟ್ ಆಗಿದೆ!
ಈ ಸಂದರ್ಶನ ಈಗಾಗಲೇ ಸಾಕಷ್ಟು ತಮಾಷೆಗೆ ಒಳಗಾಗಿದೆ. ಬಾಲಾಕೋಟ್ ದಾಳಿಯ ದಿನದಂದು, ‘ಮೋಡಗಳಿರುವುದರಿಂದ ಪಾಕಿಸ್ತಾನದ ರೆಡಾರ್‍ಗಳಿಗೆ ನಮ್ಮ ವಿಮಾನಗಳನ್ನು ಗುರುತಿಸಲಾಗದು, ಇದೇ ಸುಸಂದರ್ಭ…ಬೇಗನೇ ದಾಳಿ ಆರಂಭಿಸಿ’ ಎಂದು ಸೇನೆಯ ಉನ್ನತ ಅಧಿಕಾರಿಗಳಿಗೆ ತಾನು ಹೇಳಿದ್ದೆ, ಅದರಿಂದ ಕಾರ್ಯಾಚರಣೆ ಶುರುವಾಗಿತು ಎಂದು ಮೋದಿ ಹೇಳಿದ್ದನ್ನು ಜಗತ್ತೇ ಜೋಕ್ ತರಹ ನೋಡುತ್ತಿದೆ.

ಡಿಜಿಟಲ್ ಕ್ಯಾಮೆರಾ, ಇಮೇಲ್ ಮತ್ತು ಪರ್ಸ್‍ಲೆಸ್ ಮೋದಿ

ಅದೇ ಸಂದರ್ಶನದಲ್ಲೇ ಮೋದಿಯವರು 1987-89 ರಲ್ಲೇ ಡಿಜಿಟಲ್ ಕ್ಯಾಮೆರದಲ್ಲಿ ಫೋಟೊ ತೆಗೆದು ದೆಹಲಿಗೆ ಮೇಲ್ ಮಾಡಿದ್ದೆ ಎಂದು ಬೂಸಿ ಬಿಟ್ಟಿದ್ದಾರೆ. ಆಗ ಡಿಜಿಟಲ್ ಕ್ಯಾಮೆರಾವಾಗಲಿ, ಇಮೇಲ್ ಆಗಲಿ ಇರಲಿಲ್ಲ, ಮೋದಿ ಇನ್ನೊಂದು ಸುಳ್ಳು ಹೇಳಿದ್ದಾರೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕ ಟ್ರೋಲ್ ಗೆ ಒಳಗಾಗಿದೆ.

1997-98 ಎನ್ನುವ ಬದಲು ಮೋದೀಜಿ 1987-88 ಎಂದು ಬಾಯ್ತಪ್ಪಿ ಹೇಳಿದ್ದಾರೇನೋ ಎಂದು ಅವರ ಭಕ್ತರು ಈಗ ಸಬೂಬು ಕೊಡ್ತಾ ಇದ್ದಾರೆ. ಅಲ್ರಿ, ರೆಡಿಮೇಡ್ ಪ್ರಶ್ನೆ, ರೆಡಿಮೇಡ್ ಉತ್ತರದಲ್ಲೂ ಈ ರೀತಿ ಬಾಯ್ತಪ್ಪಿ ಹೇಳ್ತಾರಾ? ಇದು ಇನ್ನಷ್ಟು ಮೂರ್ಖತನದ ಸ್ಯಾಂಪಲ್ಲು, ಅದಕ್ಕಿಂತ ಹೆಚ್ಚಾಗಿ ಸುಳ್ಳನ ಎಡವಟ್ಟು!

ಆಯ್ತು ಅದು ಸರಿ ಎಂದಿಟ್ಟುಕಳ್ಳೋಣ….ಅದೇ ಸಂದರ್ಶನದಲ್ಲಿ ಆ ಸಂದರ್ಭದಲ್ಲಿ ತಮಗೆ ಒಂದು ಪರ್ಸ್ ಖರೀದಿಸುವಷ್ಟೂ ಕಾಸು ಇರಲಿಲ್ಲ ಎಂದಿದ್ದಾರೆ. ಆದರೆ 1995ರ ಸುಮಾರಿಗೆ ಒಂದು ಡಿಜಿಟಲ್ ಕ್ಯಾಮೆರಾದ ದರ 5 ಸಾವಿರ ರೂ.ಗಿಂತ ಹೆಚ್ಚಿತ್ತು. 1995ರಲ್ಲಿ ವಿಎಸ್‍ಎನ್‍ಎಲ್‍ನಿಂದ ಒಂದು ಶೆಲ್ ಇಮೇಲ್ ಅಕೌಂಟ್ ಪಡೆಯಲು ವಾರ್ಷಿಕ 5 ಸಾವಿರ ರೂ ಮೇಲೆ ಹಣ ನೀಡಬೇಕಿತ್ತು…ಆಗ ಟಿಸಿಪಿ/ಐಪಿ ಅಥವಾ ಡಿಜಿಟಲ್ ಅಕೌಂಟಿಗೆ ವಾರ್ಷಿಕ 15 ಸಾವರಿದಷ್ಟು ಫೀಸ್ ತೆರಬೇಕಿತ್ತು… ವಿಎಸ್‍ಎನ್‍ಎಲ್‍ಗೂ ಮೊದಲು 1990ರ ದಶಕದ ಮಧ್ಯಭಾದಲ್ಲಿ ‘ಅಕ್ಸೆಸ್ ಮೇಲ್’ ಇಮೇಲ್ ಸೇವೆ ಕೊಡುತ್ತಿತ್ತಾದರೂ, ಅದು ಕೆಲವೇ ಬುಲೆಟಿನ್ ಬೋರ್ಡ್ ಸೇವೆಗಳನ್ನು ಒಳಗೊಂಡಿತ್ತು…
ಸಾರಾಂಶ: ಒಂದು ಸುಳ್ಳು, ಅದರ ಹಿಂದೊಂದು ಸುಳ್ಳು…. ಮೋದಿ ಸಮರ್ಥಿಸಿಕೊಳ್ಳಲು ಹೋದವರೇ ನಾಚಿಕೆ ಪಡಬೇಕಾದ ಸ್ಥಿತಿ!

ಅಂದರೆ, ತಮಗೆ ಬೇಕಾದ ಮಾಧ್ಯಮಗಳಿಗೆ ಸಂದರ್ಶನ ನೀಡುವ ಡೇರ್‍ಡೆವಿಲ್ ಮೋದಿ, ಮೊದಲೇ ಸಂದರ್ಶಕರಿಂದ ಪ್ರಶ್ನೆ ಪಡೆದಿರುತ್ತಾರೆ. ಅಲ್ಲಿ ಯಾವ ಕಠಿಣ ಪ್ರಶ್ನೆಗಳೂ ಇರುವುದಿಲ್ಲ. ಮೋದಿ ಬಯಸಿದ ಪ್ರಶ್ನೆಗಳೇ ಇರುತ್ತವೆ. ಅದಕ್ಕ ಮೋದಿ ಉತ್ತರಗಳನ್ನು ಸಿದ್ಧ ಮಾಡಿಕೊಡು ಬಂದಿರುತ್ತಾರೆ!

ಇದು ಪಕೋಡಾ ಪ್ರಧಾನಿ ಪೇಯ್ಡ್ ಮೀಡಿಯಾಕ್ಕೆ ಪೇಪ್ಪರಮೆಂಟು ತಿನ್ನಿಸುವ, ಪೇಯ್ಡ್ ಮೀಡಿಯಾ ವೀಕ್ಷಕರು/ಓದುಗರನ್ನು ವಂಚಿಸುವ ಪರಿ… ಕಳೆದ 5 ವರ್ಷಗಳಿಂದ ಇದೇ ನಡೆದಿದೆ ಅಲ್ಲವೇ?
ಪೂರ್ಣ ಸಂದರ್ಶನಕ್ಕಾಗಿ ಈ ಕೆಳಗಿನ ವಿಡಿಯೋ ನೋಡಿ:

(ಆಧಾರ: thescroll.in )

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...