Homeಅಂಕಣಗಳುಗೌರಿ ಕಾರ್ನರ್: ಸೌಹಾರ್ದ ಗಿರಿಯಲ್ಲಿ ನಿಸರ್ಗದ ’ನೀಲಿಗ್ಯಾನ’

ಗೌರಿ ಕಾರ್ನರ್: ಸೌಹಾರ್ದ ಗಿರಿಯಲ್ಲಿ ನಿಸರ್ಗದ ’ನೀಲಿಗ್ಯಾನ’

ನೀಲಿಗಿರಿ ಬೆಟ್ಟಗಳಿಗೆ ಹೆಸರು ತಂದಿದ್ದು ಅಲ್ಲಿನ ನೀಲಗಿರಿ ಮರಗಳಲ್ಲ, ಬದಲಾಗಿ ತಮಿಳು ಮತ್ತು ಮಲಯಾಳಂನಲ್ಲಿ ’ನೀಲ ಕುರಿಂಜಿ’ ಎಂದೇ ಪ್ರಸಿದ್ಧವಾಗಿರುವ ಈ ಹೂಗಳು! ಹಿಂದೊಮ್ಮೆ ನೀಲಗಿರಿ ಶ್ರೇಣಿಯನ್ನೇ ಈ ಹೂಗಳು ನೀಲಿಮಯವಾಗಿಸುತ್ತಿದ್ದರಿಂದ ಅವುಗಳಿಗೆ ’ನೀಲಿ’ ಪದ ಅಂಟಿಕೊಂಡಿದ್ದು!

- Advertisement -
- Advertisement -

ಒಂದು ನಿಮಿಷ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ನಾನು ವಿವರಿಸಲಿರುವ ದೃಶ್ಯವನ್ನು ಕಲ್ಪಿಸಿಕೊಳ್ಳಿ….

ನೀವು ಒಂದು ಬೆಟ್ಟದ ಮೇಲಿದ್ದೀರಿ. ಅಲ್ಲಿನ ತಂಪು ವಾತಾವರಣ, ಕೈಗಳಿಗೆ ಎಟುಕದೆ ತೇಲಿಹೋಗುತ್ತಿರುವ ಮೋಡಗಳು, ನಿಮ್ಮ ಸುತ್ತ ಕಂಗೊಳಿಸುತ್ತಿರುವ ನೀಲಿ ಹೂಗಳು… ಹೌದು, ನೀವು ಕಣ್ಣು ಹಾಯಿಸಿದಷ್ಟೂ ದೂರ ಹರಡಿರುವ ಲಕ್ಷಾಂತರ ನೀಲಿ ಹೂಗಳು! ಎಲ್ಲಿ ನೋಡಿದರಲ್ಲಿ ಕಂಗೊಳಿಸುತ್ತಿರುವ ನೀಲಿ ಹೂಗಳು! ಹನ್ನೆರಡು ವರ್ಷಕ್ಕೊಮ್ಮೆ ಅರಳಿ ಕಂಗಳಿಗೆ ಆನಂದ ನೀಡುವ ನೀಲಿ ಹೂಗಳು!

ನಾನು ಈ ದೃಶ್ಯವನ್ನು ಕಲ್ಪಿಸಿಕೊಂಡು ಹೇಳುತ್ತಿಲ್ಲ; ಯಾವುದೋ ಪೇಂಟಿಂಗ್ ಅಥವಾ ಯೂರೋಪಿನಲ್ಲಿ ಕಂಡದ್ದನ್ನು ವಿವರಿಸುತ್ತಿಲ್ಲ. ಬದಲಾಗಿ ನಮ್ಮ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ನೋಡಿದ್ದನ್ನು ನಿಮಗೆ ಹೇಳುತ್ತಿದ್ದೇನೆ….

ಪ್ರತಿ ವರ್ಷ ಚಿಕ್ಕಮಗಳೂರಿನಲ್ಲಿ ಸಂಘ ಪರಿವಾರದವರು ಸೃಷ್ಟಿಸುವ ರಾದ್ಧಾಂತದ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಲು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ತಂಡದ ಸದಸ್ಯೆಯಾಗಿ ಹೋಗಿದ್ದಾಗ ಅಲ್ಲಿನ ಬಾಬಾಬುಡನ್ ಗಿರಿಯಲ್ಲಿ ಕಂಡ ಅದ್ಭುತ ದೃಶ್ಯದ ಬಗ್ಗೆ ಹೇಳಬೇಕೆನಿಸುತ್ತಿದೆ.

ಸುಮಾರು 1800 ಮೀಟರ್ ಎತ್ತರದಲ್ಲಿರುವ ಬಾಬಾಬುಡನ್ ದರ್ಗಾಗೆ ಹೋಗುತ್ತಿದ್ದಾಗ ನಮ್ಮೊಂದಿಗಿದ್ದ ಕಲ್ಕುಳಿ ವಿಠ್ಠಲ ಹೆಗ್ಡೆಯವರು ದೂರದ ಬೆಟ್ಟವೊಂದರಲ್ಲಿ ಅರಳಿದ್ದ ಈ ನೀಲಿ ಹೂಗಳ ಬಗ್ಗೆ ನಮ್ಮ ಗಮನ ಸೆಳೆದರು.

ಹನ್ನೆರಡು ವರ್ಷಕ್ಕೊಮ್ಮೆ ಅರಳುವ ಈ ನೀಲಿಗಳನ್ನು (ಅವುಗಳನ್ನು ’ಕುರಿಂಜಿ’ ಎಂದು ಕರೆಯುತ್ತಾರೆಂದು ಹೆಗ್ಡೆಯವರು ವಿವರಿಸಿದರು) ಮಾನವನೊಬ್ಬ ತನ್ನ ಜೀವಿತಾವಧಿಯಲ್ಲಿ ಮೂರು ಬಾರಿ ನೋಡಿ ಆನಂದಿಸಬಹುದಷ್ಟೇ. ಈ ’ನೀಲಿ ಕುರಿಂಜಿ’ ಬಗ್ಗೆ ಇಂಟರ್‌ನೆಟ್‌ನಲ್ಲಿ ಪಡೆದ ಮಾಹಿತಿಯನ್ನೂ ನೀಡುತ್ತಿದ್ದೇನೆ. ನಮ್ಮ ನಾಡಿನ ನಿಸರ್ಗದ ಈ ಅದ್ಭುತದ ಬಗ್ಗೆ ಪತ್ರಿಕೆಗಳು ಬರೆಯದೇ ಇರುವುದು (ಪ್ರಜಾವಾಣಿ ಹೊರತಾಗಿ) ಒಂದು ಅಚ್ಚರಿಯೇ ಸರಿ!

ಒಂದು ಅಂದಾಜಿನ ಪ್ರಕಾರ ಹಿಂದೊಮ್ಮೆ ಈ ಕುರಿಂಜಿ ಹೂಗಳು ಇಡೀ ಬಾಬಾಬುಡನ್‌ಗಿರಿಯನ್ನೇ ಹನ್ನೆರಡು ವರ್ಷಕ್ಕೊಮ್ಮೆ ಆವರಿಸುತ್ತಿದ್ದವಂತೆ. ಆದರೆ ಇವತ್ತು ಗಿರಿಯಲ್ಲಿ ಕಾಫಿ ಎಸ್ಟೇಟ್‌ಗಳು ತಲೆ ಎತ್ತಿರುವುದರಿಂದ, ಅಳಿದುಳಿದ ಜಾಗಗಳಲ್ಲಿ ಮಾತ್ರ ಇವತ್ತು ’ಕುರಿಂಜಿ’ ಕಾಣಿಸಿಕೊಂಡಿದೆ.

ಅಂದಹಾಗೆ, ಈ ಕುರಿಂಜಿ ಹೂಗಳು ಪಶ್ಚಿಮಘಟ್ಟದ ಶೋಲಾ ಕಾಡುಗಳಿಗೆ ವಿಶೇಷವಾಗಿರುವುದರಿಂದ ಅವು ಕೇರಳದಿಂದ ಕರ್ನಾಟಕದವರೆಗೂ ಹಬ್ಬಿವೆ. ಆದರೆ ವ್ಯತ್ಯಾಸ ಯಾವುದೆಂದರೆ ಇವುಗಳ ಬಗ್ಗೆ ನಮ್ಮ ಜನರಲ್ಲಿ ಅಜ್ಞಾನ, ಸರ್ಕಾರದ ನಿರ್ಲಕ್ಷ್ಯ ಹೆಚ್ಚಾಗಿದ್ದರೂ, ನೆರೆಯ ಕೇರಳದಲ್ಲಿ ಈ ಕುರಿಂಜಿಗಳು ಅರಳುವ ಪ್ರದೇಶಗಳನ್ನು ಕಾಪಾಡಬೇಕೆಂದು ಕೆಲವು ದಶಕಗಳಿಂದ ಪರಿಸರವಾದಿಗಳು ಹೋರಾಡುತ್ತಿದ್ದಾರೆ.

ಕರ್ನಾಟಕಕ್ಕಿಂತಲೂ ತಮಿಳುನಾಡು ಮತ್ತು ಕೇರಳದಲ್ಲಿ ಟೀ ಮತ್ತು ಏಲಕ್ಕಿ ಎಸ್ಟೇಟ್‌ಗಳು ಹಾಗೂ ವಿದ್ಯುತ್ ಯೋಜನೆಗಳು ಈ ಕುರಿಂಜಿ ಬೆಳೆಯುವ ಪ್ರದೇಶಗಳನ್ನು ನಾಶ ಮಾಡಿವೆ. ಆದರೆ ಜಗತ್ತಿನ ಯಾವುದೇ ಭಾಗದಲ್ಲಿ ಅರಳದ ಈ ಹೂಗಳು ಭಾರತದ ಈ ಪ್ರದೇಶಗಳಲ್ಲಿ ಮಾತ್ರ, ಹೀಗೆ ಒಮ್ಮೆಲೆ ಅರಳುವುದರಿಂದ, ಅದನ್ನು ನೋಡಲೆಂದು ಪ್ರವಾಸಿಗರು ಬರುವುದರಿಂದ ಈಗ ಈ ಎರಡೂ ರಾಜ್ಯಗಳು ಎಚ್ಚೆತ್ತುಕೊಂಡು, ಕುರಿಂಜಿ ಹೂಗಳು ಅರಳುವ ಪ್ರದೇಶಗಳನ್ನು ಸುರಕ್ಷಿತ ತಾಣಗಳೆಂದು ಘೋಷಿಸಲು ಮುಂದಾಗಿವೆ.

ಇಲ್ಲೊಂದು ವಿಸ್ಮಯಕಾರಿ ವಿಷಯವನ್ನು ಹೇಳಲೇಬೇಕು. ನೀಲಿಗಿರಿ ಬೆಟ್ಟಗಳಿಗೆ ಹೆಸರು ತಂದಿದ್ದು ಅಲ್ಲಿನ ನೀಲಗಿರಿ ಮರಗಳಲ್ಲ, ಬದಲಾಗಿ ತಮಿಳು ಮತ್ತು ಮಲಯಾಳಂನಲ್ಲಿ ’ನೀಲ ಕುರಿಂಜಿ’ ಎಂದೇ ಪ್ರಸಿದ್ಧವಾಗಿರುವ ಈ ಹೂಗಳು! ಹಿಂದೊಮ್ಮೆ ನೀಲಗಿರಿ ಶ್ರೇಣಿಯನ್ನೇ ಈ ಹೂಗಳು ನೀಲಿಮಯವಾಗಿಸುತ್ತಿದ್ದರಿಂದ ಅವುಗಳಿಗೆ ’ನೀಲಿ’ ಪದ ಅಂಟಿಕೊಂಡಿದ್ದು! ಇವತ್ತು ಬಾಬಾಬುಡನ್‌ಗಿರಿಯಲ್ಲಿ ಹೇಗೆ ಈ ಕುರಿಂಜಿಗಳು ಅರಳಿದ್ದಾವೋ, ಹಾಗೆಯೇ ತಮಿಳುನಾಡಿನ ಕೊಡೈಕೆನಾಲ್ ಮತ್ತು ಕೇರಳದ ಮುನ್ನಾರ್‌ನಲ್ಲೂ ಕುರಿಂಜಿಗಳು ಅರಳಿ ಅವುಗಳನ್ನು ನೋಡಿ ಆನಂದಿಸಲು ಲಕ್ಷಾಂತರ ಪ್ರವಾಸಿಗಳು ಸೇರುತ್ತಿದ್ದಾರೆ. 1994ರಿಂದ ಈ ಹೂಗಳನ್ನು ನೋಡಲು ಕಾಯುತ್ತಿದ್ದ ಲಕ್ಷಾಂತರ ಜನ ಈಗ ಇವುಗಳನ್ನು ಕಂಡು ಆನಂದಿಸಲು ಬರುತ್ತಿರುವುದರಿಂದ ಅಲ್ಲಿನ ಹೋಟೆಲ್‌ಗಳು ಕಿಕ್ಕಿರಿದಿವೆ. ಅಷ್ಟೇ ಅಲ್ಲ, ಇದೇ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ’ಕುರಿಂಜಿ ಹಬ್ಬ’ವನ್ನು ಕೇರಳ ಸರ್ಕಾರ ಆಚರಿಸುತ್ತಿದೆ. ಆ ಎರಡೂ ರಾಜ್ಯಗಳ ಪರಿಸರವಾದಿಗಳ ಹೋರಾಟ ಮತ್ತು ಅಲ್ಲಿನ ಸರ್ಕಾರಗಳ ಒತ್ತಡದಿಂದಾಗಿಯೇ ಇದೇ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಕುರಿಂಜಿ ಹೂಗಳ ಒಂದು ಅಂಚೆ ಸ್ಟಾಂಪ್‌ಅನ್ನೂ ಬಿಡುಗಡೆಗೊಳಿಸಿತ್ತು.

ತಮಿಳುನಾಡಿನ ಜನರಿಗೂ, ಈ ನೀಲ ಕುರಿಂಜಿ ಹೂಗಳಿಗೂ ಭಾವನಾತ್ಮಕವಾದ ಸಂಬಂಧವಿರುವುದಕ್ಕೆ ಕಾರಣವೂ ಇದೆ. ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಮುರುಗನ್ ದೇವನು ವಾಲಿ ಎಂಬ ದೇವತೆಯನ್ನು ಮದುವೆ ಆದಾಗ ಅವಳಿಗೆ ಈ ಕುರಿಂಜಿಗಳಿಂದ ಮಾಡಿದ್ದ ಹಾರವನ್ನು ಹಾಕಿದ್ದನಂತೆ. ಈ ಪುರಾಣ ಅಲ್ಲಿನ ಜನರ ಮೇಲೆ ಎಂಥ ಪ್ರಭಾವ ಬೀರಿದೆ ಎಂದರೆ, ಕುರಿಂಜಿ ಹೂಗಳು ಬಾಡಿ, ಅವುಗಳ ಬೀಜ ಎಲ್ಲೆಡೆ ಹರಡುವವರೆಗೂ ಜನ ಅವುಗಳನ್ನು ಮುಟ್ಟುವುದಿಲ್ಲ! ಅಷ್ಟೇ ಅಲ್ಲ, ಆ ಎರಡು ರಾಜ್ಯಗಳ ಹಲವು ಬುಡಕಟ್ಟು ಜನಾಂಗಗಳು ತಮ್ಮ ಜೀವಿತಾವಧಿಯನ್ನು ಲೆಕ್ಕ ಹಾಕುವುದೇ ಈ ಕುರಿಂಜಿಗಳು ಅರಳುವ ವರ್ಷದ ಆಧಾರದ ಮೇಲೆ!

ನಮ್ಮ ಪಶ್ಚಿಮಘಟ್ಟದ ಜೀವ ವೈವಿಧ್ಯತೆಯನ್ನು ಕಾಪಾಡಬೇಕಿದ್ದರೆ, ಆ ವೈವಿಧ್ಯತೆಯ ಅಂಗವಾಗಿರುವ ಕುರಿಂಜಿ ಹೂಗಳು ಹನ್ನೆರಡು ವರ್ಷಗಳ ನಂತರವೂ ಮತ್ತೆ ಕಾಣಿಸಿಕೊಳ್ಳಬೇಕೆಂದಿದ್ದರೆ, ನಮ್ಮ ರಾಜ್ಯದಲ್ಲೂ ಕುರಿಂಜಿ ಅರಳುವ ಪ್ರದೇಶಗಳನ್ನು ರಕ್ಷಿಸಬೇಕಿದೆ.

ಕೊನೆಯದಾಗಿ, ಈ ಹೂಗಳ ಅಂದವನ್ನು ಆನಂದಿಸಲು ಕೊಡೈಕೆನಾಲ್ ಮತ್ತು ಮುನ್ನಾರ್ ಸೂಕ್ತ ಪ್ರದೇಶಗಳು ಎಂಬ ಮಾತಿದೆಯಾದರೂ, ನಮ್ಮದೇ ಬಾಬಾಬುಡನ್ ಗಿರಿಯಲ್ಲಿ ಆನಂದಿಸುವುದು ಒಂದು ವಿಶೇಷ. ಅಂದಹಾಗೆ, ಈ ಹೂಗಳು ಇನ್ನು ಎರಡು ತಿಂಗಳು ಮಾತ್ರ ಇರುತ್ತವೆ. ಹಾಗಾಗಿ, ಗಿರಿಗಳನ್ನೇ ’ನೀಲಿ’ಯಾಗಿಸಿರುವ ಈ ಕುರಿಂಜಿಯ ಅದ್ಭುತ ನೋಡಬೇಕೆಂದಿದ್ದರೆ, ಈಗಲೇ ನೀವೂ ಹೋಗಿ ಬರುತ್ತೀರಾ…

(ಸೆಪ್ಟೆಂಬರ್ 27, 2006ರಂದು ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣದ ಆಯ್ದ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್: ಓರ್ವ ಜನಪರ ನ್ಯಾಯಮೂರ್ತಿಯವರನ್ನು ಕುರಿತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...