Homeಮುಖಪುಟದೆಹಲಿ: ಡ್ರಗ್ ಸ್ಮಗ್ಲರ್‌ ಬಂಧಿಸಲು ಹೋದ ಪೋಲೀಸರ ಮೇಲೆ ಗುಂಪು ದಾಳಿ

ದೆಹಲಿ: ಡ್ರಗ್ ಸ್ಮಗ್ಲರ್‌ ಬಂಧಿಸಲು ಹೋದ ಪೋಲೀಸರ ಮೇಲೆ ಗುಂಪು ದಾಳಿ

- Advertisement -
- Advertisement -

ಡ್ರಗ್‌ ದಂಧೆಕೋರನನ್ನು ಬಂಧಿಸಲು ಹೋದ ದೆಹಲಿ ಪೊಲೀಸರ ಮೇಲೆ ಗುಂಪೊಂದು ಕಲ್ಲು ತೂರಾಟ ಮಾಡಿರುವ ಘಟನೆ ರಾಷ್ಟ್ರದ ರಾಜಧಾನಿಯ ಇಂದ್ರಪುರಿ ಪ್ರದೇಶದಲ್ಲಿ ನಡೆದಿದೆ.

ಇಬ್ಬರು ವ್ಯಕ್ತಿಗಳಿಗೆ ಗುಂಡು ಬಿದ್ದಿದ್ದು, ನಾಲ್ವರು ಪೊಲೀಸರೂ ಗಾಯಗೊಂಡಿದ್ದಾರೆ. ವಾಂಟೆಡ್ ಡ್ರಗ್ ಸ್ಮಗ್ಲರ್ ಧರಂವೀರ್ ಅಲಿಯಾಸ್ ಪಲ್ಲಾನನ್ನು ಬಂಧಿಸಲು ನಾರ್ಕೋಟಿಕ್ಸ್ ತಂಡವು ಇಂದ್ರಪುರಿಗೆ ಹೋಗಿತ್ತು. ದಾಳಿ ವೇಳೆ ಪಲ್ಲಾ ಮನೆಯಲ್ಲಿ ಇರಲಿಲ್ಲ.

“ನಾರ್ಕೋಟಿಕ್ಸ್‌ ತಂಡವು ಪಲ್ಲಾ ಅವರ ಮನೆಯಿಂದ ಹೊರಬಂದ ತಕ್ಷಣ, ಧರ್ಮವೀರ್ ಅಲಿಯಾಸ್ ಪಲ್ಲಾ ಸುಮಾರು 50-60 ಜನರೊಂದಿಗೆ ಬಂದು ದೊಣ್ಣೆ ಮತ್ತು ಕಲ್ಲುಗಳೊಂದಿಗೆ ದಾಳಿ ನಡೆಸಿದನು. ಈ ದುಷ್ಕರ್ಮಿಗಳ ಗುಂಪು ಏಕಾಏಕಿ ಪೊಲೀಸ್ ತಂಡದ ಮೇಲೆ ದಾಳಿ ಮಾಡಿ ಕಲ್ಲು ತೂರಾಟ ನಡೆಸಿತು. ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಹೀಗಾಗಿ ಇಬ್ಬರು ಗಾಯಗೊಂಡಿದ್ದಾರೆ” ಎಂದು ದೆಹಲಿ ಪೊಲೀಸರ ಪತ್ರಿಕಾ ಪ್ರಕಟಣೆ ತಿಳಿಸಿದೆ.

“ಕಲ್ಲು ತೂರಾಟ ಮತ್ತು ಗುಂಡಿನ ದಾಳಿಯ ವೇಳೆ ಇನ್ಸ್‌ಪೆಕ್ಟರ್, ಎಎಸ್‌ಐ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು, ಧರಂವೀರ್ ಅಲಿಯಾಸ್ ಪಲ್ಲಾ ಪರಾರಿಯಾಗಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರನ್ನು ಅಮಿತ್ ಮತ್ತು ಸೊಹೈಬ್ ಎಂದು ಗುರುತಿಸಲಾಗಿದೆ. ವಿಚಾರಣೆ ನಡೆಸಿದಾಗ, ಅಮಿತ್ ಡ್ರಗ್ ಡೀಲರ್ ಧರಂವೀರ್ ಅಲಿಯಾಸ್ ಪಲ್ಲಾನ ಸಂಬಂಧಿ ಎಂದು ತಿಳಿದುಬಂದಿದೆ.

ಅಮಿತ್ ದೆಹಲಿಯ ರಘುಬೀರ್ ನಗರದ ನಿವಾಸಿಯಾಗಿದ್ದು, ಈ ಹಿಂದೆ ದರೋಡೆ, ಡಕಾಯಿತಿ ಮತ್ತು ಕೊಲೆ ಯತ್ನ ಸೇರಿದಂತೆ ಆರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಧರಂವೀರ್ ಅಲಿಯಾಸ್ ಪಲ್ಲಾನನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ.


ಇದನ್ನೂ ಓದಿರಿ: ತಮಿಳುನಾಡು ಪಟಾಕಿ ಘಟಕದಲ್ಲಿ ಸ್ಫೋಟ: 4 ಕಾರ್ಮಿಕರು ಸಾವು, 7 ಮಂದಿಗೆ ಗಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read