ರಾಜ್ಯಗಳಿಗೆ ಜಿಎಸ್ಟಿ ಪಾವತಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರವು ವಿಳಂಬ ಮಾಡುವುತ್ತಿರುವುದನ್ನು ಖಂಡಿಸಿ ಟಿಡಿಪಿ ಸೇರಿದಂತೆ ಇತರ ವಿರೋಧ ಪಕ್ಷಗಳ ಕೋಲಾಹಲವನ್ನು ಸೃಷ್ಟಿಸಿವೆ.
2017ರ ಜಿಎಸ್‌ಟಿ ನಿಯಮಾವಳಿ ಅನ್ವಯ ಈ ಮುಂಚೆ ರಾಜ್ಯಗಳು ಸಂಗ್ರಹಿಸುತ್ತಿದ್ದಷ್ಟು ತೆರಿಗೆ ಹಣ ಜಿಎಸ್‌ಟಿಯಿಂದ ಸಂಗ್ರಹವಾಗದಿದ್ದಲ್ಲಿ ಅದನ್ನು ಕೇಂದ್ರ ಸರ್ಕಾರವು ತುಂಬಿಕೊಡಬೇಕು. ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸಮರ್ಪಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಕೆಲ ರಾಜ್ಯಗಳು ದೂರಿವೆ.
ಇದೇ ವಿಚಾರ ಇಂದು ರಾಜ್ಯಸಭೆಯಲ್ಲಿ ಚರ್ಚೆಗೆ ಬಂದ ಕಾರಣ ಭಾರೀ ಗದ್ದಲ ಉಂಟಾಗಿದೆ. ಹಾಗಾಗಿ ರಾಜ್ಯಸಭಾ ಪ್ರಕ್ರಿಯೆಯನ್ನು ಮಧ್ಯಾಹ್ನ 12:00 ಗಂಟೆಗಳವರೆಗೆ ಮುಂದೂಡಲಾಗಿದೆ.
ಕೇಂದ್ರದಿಂದ ಬರಬೇಕಿದ್ದ ಜಿಎಸ್‌ಟಿ ಸಂಗ್ರಹಣೆಯ ರಾಜ್ಯದ ಪಾಲು ರೂ.5,600 ಕೋಟಿ ಹಣ ಬಂದಿಲ್ಲ, ಯಡಿಯೂರಪ್ಪನವರಿಗೆ ಆರ್ಥಿಕ ನಿರ್ವಹಣೆಯ ಜ್ಞಾನವಿಲ್ಲ. ಕುರ್ಚಿ ಮೇಲೆ ಕೂತು ಅಧಿಕಾರ ಉಳಿಸಿಕೊಳ್ಳಲು ಭಜನೆ ಮಾಡುವ ಬದಲು, ಕೇಂದ್ರದ ಬಳಿ ಗಟ್ಟಿ ಮಾತನಾಡಿದರೆ ಸರ್ಕಾರಿ ನೌಕರರಿಗೆ ಸಂಬಳವೂ ಸಿಗುತ್ತೆ, ನೆರೆ ಪರಿಹಾರದ ಹಣವೂ ಬರುತ್ತೆ ಎಂದು ಮೂರು ದಿನಗಳ ಹಿಂದೆ ತಾನೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದರು.


