Homeಮುಖಪುಟಗುಜರಾತ್‌ ಗಲಭೆಗಳು ಸಂಘಟಿತವಲ್ಲ: ನರೇಂದ್ರ ಮೋದಿಗೆ ಕ್ಲೀನ್‌ ಚಿಟ್‌ ನೀಡಿದ ನಾನಾವತಿ ಮೆಹ್ತಾ ಆಯೋಗ

ಗುಜರಾತ್‌ ಗಲಭೆಗಳು ಸಂಘಟಿತವಲ್ಲ: ನರೇಂದ್ರ ಮೋದಿಗೆ ಕ್ಲೀನ್‌ ಚಿಟ್‌ ನೀಡಿದ ನಾನಾವತಿ ಮೆಹ್ತಾ ಆಯೋಗ

- Advertisement -
- Advertisement -

ಗುಜರಾತ್ ವಿಧಾನಸಭೆಯಲ್ಲಿ ಮಂಡಿಸಲಾದ ನಾನಾವತಿ-ಮೆಹ್ತಾ ಆಯೋಗದ ವರದಿಯಲ್ಲಿ, ಗೋಧ್ರಾ ರೈಲು ದುರಂತದ ನಂತರದ ಗಲಭೆಗಳು ಯೋಜಿತವಾಗಿ ಆಯೋಜಿಸಲಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ವರದಿಯು ನರೇಂದ್ರ ಮೋದಿ ನೇತೃತ್ವದ ಅಂದಿನ ಗುಜರಾತ್ ಸರ್ಕಾರಕ್ಕೆ  ಕ್ಲೀನ್ ಚಿಟ್ ನೀಡಿದೆ ಎಂದು ಎಎನ್‌ಐ ವರದಿ ಮಾಡಿದೆ.

ಗುಜರಾತಿನ ಗೃಹ ಮಂತ್ರಿ ಪ್ರದೀಪ್‌ ಸಿನ್ಹ ಜಡೇಜ ಇಂದು ಗುಜರಾತ್‌ನ ಅಸೆಂಬ್ಲಿಯಲ್ಲಿ ಈ ವಿಚಾರವನ್ನು ಚರ್ಚೆಗೆ ತಂದಿದ್ದಾರೆ.

ನಾನಾವತಿ ಮೆಹ್ತಾ ಆಯೋಗದ ಅಂತಿಮ ವರದಿಯ ಇಂದು ಚರ್ಚೆಗೆ ಬರಲಿದೆ. ಇದರ ಮೊದಲ ಭಾಗದ ವರದಿಯು ಕಳೆದ ವರ್ಷ ಬಿಡುಗಡೆಯಾಗಿತ್ತು. ಅದು ಸಬರಮತಿ ಎಕ್ಸ್‌ಪ್ರೆಸ್‌ ರೈಲಿನ ಎಸ್‌6 ಬೋಗಿಯನ್ನು ಸುಟ್ಟುಹಾಕಿದ್ದು ಯೋಜಿತ ಕ್ರಿಯೆಯಾಗಿತ್ತು ಎಂದು ತಿಳಿಸಿತ್ತು.

ಇಂದು ಬಿಡುಗಡೆಯಾಗಿರುವ ಪೂರ್ಣ ವರದಿಯಲ್ಲಿ ಆ ನಂತರ ನಡೆದ ಗುಜರಾತ್‌ ಗಲಭೆಗಳಲ್ಲಿ ಮೋದಿಯವರ ನೇತೃತ್ವದ ರಾಜ್ಯ ಸರ್ಕಾರದ ಪಾತ್ರವಿಲ್ಲ ಎಂದು ಹೇಳುವ ಮೂಲಕ ಮೋದಿಯವರಿಗೆ ಕ್ಲೀನ್‌ ಚಿಟ್‌ ನೀಡಿದೆ.

ಗಲಭೆಗಳು ನಡೆದಿದ್ದು ನಿಜ. ಕೆಲವೆಡೆ ಪೊಲೀಸರು ಗಲಭೆಗಳನ್ನು ನಿಯಂತ್ರಿಸಲು ವಿಫಲವಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...