HomeUncategorizedಗರ್ಭಿಣಿಯ ಹೊಟ್ಟೆಗೆ ಲಾಠಿಯಿಂದ ಹೊಡೆದ ಗುಜರಾತ್ ಪೊಲೀಸರು: ಆರೋಪ

ಗರ್ಭಿಣಿಯ ಹೊಟ್ಟೆಗೆ ಲಾಠಿಯಿಂದ ಹೊಡೆದ ಗುಜರಾತ್ ಪೊಲೀಸರು: ಆರೋಪ

- Advertisement -
- Advertisement -

ಮೇ 8 ರಂದು ಗುಜರಾತಿನ ಅಹಮದಾಬಾದಿನಲ್ಲಿ ನಡೆದ ಹಿಂಸಾಚಾರದ ನಂತರ ತಾನು ಗರ್ಭಿಣಿ ಎಂದು ಹೇಳಿದರೂ ಗುಜರಾತ್ ಪೊಲೀಸರು ನನ್ನನ್ನು ದೂಡಿ ಹೊಟ್ಟೆಗೆ ಲಾಠಿಯಿಂದ ಹೊಡೆದಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಮೇ 8 ರಂದು ಗುಜರಾತ್ ಪೊಲೀಸರು ಅಹಮದಾಬಾದ್‌ನ ಶಹಪುರ್ ಪ್ರದೇಶದಲ್ಲಿ 29 ಜನರನ್ನು ಇದೇ ರೀತಿಯ ದೌರ್ಜನ್ಯ ನಡೆಸಿ ಬಂಧಿಸಿದ್ದಾರೆ. ಹಿಂಸಾಚಾರದಲ್ಲಿ ಗರ್ಭಿಣಿ ಮಹಿಳೆ, 62 ವರ್ಷದ ವ್ಯಕ್ತಿ ಮತ್ತು ವಿಕಲಾಂಗ ಮಗು ಗಾಯಗೊಂಡಿದ್ದಾರೆ ಎನ್ನಲಾಗಿದೆ.

“ಮೇ 8 ರಂದು ಸಂಜೆ 7 ಗಂಟೆಗೆ ಮನೆಯಲ್ಲಿ ಇಫ್ತಾರ್‌ಗೆ ಹಣ್ಣುಗಳನ್ನು ಕತ್ತರಿಸುತ್ತಿದ್ದಾಗ, ಮನೆಯೊಳಗೆ ಅಡ್ಡಾದಿಡ್ಡಿಯಾಗಿ ನುಗ್ಗಿದ ಕೆಲವು ಪೊಲೀಸರು, ನನ್ನ ಪತಿಯನ್ನು ಹೊರಗೆ ಎಳೆದುಕೊಂಡು ನಿರ್ದಯವಾಗಿ ಥಳಿಸಿದರು” ಎಂದು ಹಲ್ಲೆಗೊಳಗಾದ ಮಹಿಳೆ ಆರೋಪಿಸುತ್ತಾರೆ.

ಇ
ಇಫ್ಥಾರಿಗೆ ಸಜ್ಜುಗೊಳಿಸಿದ್ದ ವಸ್ತುಗಳು ಚಿಲ್ಲಾಪಿಲ್ಲಿಯಾಗಿರುವುದು

ತನ್ನ ಬಲಕೆನ್ನೆಯಲ್ಲಿರುವ ಬೆರಳಿನ ಗುರುತನ್ನು ತೋರಿಸುತ್ತಾ “ನನ್ನ ತಂದೆ ಮತ್ತು ಸಹೋದರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿರುವಾಗ ತಡೆಯಲು ಮನೆಯ ಹೊರಗೆ ಹೋದಾಗ ಪೊಲೀಸರು ನನ್ನ ಕಪಾಲಕ್ಕೆ ಹೊಡೆಯಲು ಶುರು ಮಾಡಿದರು, ಆಗ ನಾನು ಗರ್ಭಿಣಿ ಎಂದು ಹೇಳಿದ ಹೊರತಾಗಿಯೂ ನನ್ನನ್ನು ದೂಡಿ ನನ್ನ ಹೊಟ್ಟೆಗೆ ಲಾಠಿಯಿಂದ ಹೊಡೆದರು, ನಂತರ ನೆರೆಹೊರೆಯವರು ಬಂದು ಅವರನ್ನು ತಡೆದರು” ಎಂದು ಮಹಿಳೆ ಆರೋಪಿಸುತ್ತಾರೆ.

ಇನ್ನೊಬ್ಬ ಮಹಿಳೆಯ ತನ್ನ ಗಂಡನನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ತಮ್ಮ ಮನೆಗಳಿಗೆ ಅಡ್ಡಗಟ್ಟಿದಾಗ ತನ್ನ ಅಂಗವಿಕಲ ಮಗನನ್ನು ಸಹ ಮನೆಯಿಂದ ಹೊರಗೆ ಎಳೆದೊಯ್ಯಲಾಗಿದೆ ಎಂದು ಆರೋಪಿಸಿದ್ದಾರೆ.

ಆರೋಪ ನಿರಾಕರಿಸಿದ ಗುಜರಾತ್ ಪೊಲೀಸರು

ಗುಜರಾತ್ ಪೊಲೀಸರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ವಲಯ 2 ರ ಪೊಲೀಸ್ ಉಪ ಆಯುಕ್ತ ಧರ್ಮೇಂದ್ರ ಶರ್ಮಾ ಮಾತನಾಡಿ “ಪೊಲೀಸರು ಮಹಿಳೆಯರನ್ನು ಹಿಂಸಿದ್ದಾರೆ ಎಂಬ ಆರೋಪ ಸಂಪೂರ್ಣವಾಗಿ ಸುಳ್ಳು” ಎಂದು ಹೇಳಿದರು.

“ಆದರೆ, ಕೆಲವು ದುಷ್ಕರ್ಮಿಗಳು ಪಲಾಯನ ಮಾಡಲು ಪ್ರಯತ್ನಿಸಿದಾಗ, ನಾವು ಅವರನ್ನು ಬೆನ್ನಟ್ಟಿದೆವು. ಅವರಲ್ಲಿ ಕೆಲವರು ಮನೆಗಳಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದರು, ಆದ್ದರಿಂದ ನಾವು ಅವರನ್ನು ಹೊರಗೆ ಎಳೆದು ಬಂಧಿಸಬೇಕಾಯಿತು.” ಎಂದು ಶರ್ಮ ಹೇಳಿದ್ದಾರೆ.

ಕಲ್ಲು ತೂರಾಟ, ಅಶ್ರುವಾಯು ಸಿಡಿತ: ಹಿಂಸಾಚಾರ ಹೇಗೆ ಪ್ರಾರಂಭವಾಯಿತು

ನಗರದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಕಳೆದ ವಾರ ಎಲ್ಲಾ ತರಕಾರಿ ಮತ್ತು ಹಣ್ಣಿನ ಅಂಗಡಿಗಳನ್ನು ಮುಚ್ಚುವ ಹಾಗೂ ಹಾಲು ಮತ್ತು ಔಷಧಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿ ಲಾಕ್‌ಡೌನ್ ಅನ್ನು ಬಲಪಡಿಸಲಾಗಿತ್ತು.

ಕೋಮು ಸೂಕ್ಷ್ಮ ಪ್ರದೇಶವೆಂದು ಕರೆಯಲ್ಪಡುವ ಅಹಮದಾಬಾದ್‌ನ ಶಹಪುರವನ್ನು ಕೊರೊನಾ ಧಾರಕ ವಲಯವೆಂದು ಘೋಷಿಸಲಾಗಿದೆ.

ಮೇ 8 ರಂದು ಇಲ್ಲಿ ಕೆಲವು ಮಹಿಳೆಯರು ತಮ್ಮ ರಂಜಾನ್ ಉಪವಾಸವನ್ನು ಮುರಿಯಲು ಹಾಲು ತರಲು ಹೊರಟಾಗ, ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ತಂಡ ಅವರನ್ನು ತಡೆದಿದೆ. ಅಲ್ಲಿ ಅಸಹ್ಯವಾದ ವಾಗ್ವಾದ ನಡೆದ  ಪರಿಣಾಮ ಕಲ್ಲು ತೂರಾಟ ನಡೆದದ್ದರಿಂದ ಆಶ್ರುವಾಯು ಸಿಡಿಸಲಾಗಿತ್ತು.

ವಲಯ 2 ರ ಉಪ ಪೊಲೀಸ್ ಆಯುಕ್ತ ಧರ್ಮೇಂದ್ರ ಶರ್ಮಾ ಹೇಳಿದಂತೆ “ಪೊಲೀಸರು ಲಾಕ್ಡೌನ್ ಅನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದರು ಆದರೆ ಕೆಲವರು ಬೀದಿಗಿಳಿದು ಸಾಮಾಜಿಕ ಅಂತರವನ್ನು ಕಾಪಾಡಿರಲಿಲ್ಲ. ಪೊಲೀಸರು ಅವರನ್ನು ಹೋಗಲು ಕೇಳಿಕೊಂಡರೂ ಅವರು ಕೇಳದ್ದರಿಂದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.

ಶರ್ಮಾ ಅವರು, “ಕೆಲವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಾಗ, ಇನ್ನೂ ಅನೇಕ ಜನರು ಬೀದಿಗಿಳಿದು ಅವರ ಬಂಧನವನ್ನು ವಿರೋಧಿಸಿದರು. ಒಂದು ಮನೆಯಿಂದ, ಕಲ್ಲು ತೂರಾಟ ನಡೆದ ಕಾರಣ ನಮ್ಮ ಪೊಲೀಸ್ ಅಧಿಕಾರಿಯೊಬ್ಬರು ಅದರಲ್ಲಿ ಗಾಯಗೊಂಡಿದ್ದಾರೆ. ಅದರ ನಂತರ ಪ್ರದೇಶದಾದ್ಯಂತ ಕಲ್ಲು ತೂರಾಟ ತೀವ್ರಗೊಂಡಿದೆ. ನಡುವೆ ಪೊಲೀಸರು ಸಿಕ್ಕಿಬಿದ್ದರು.” ಎಂದು ಹೇಳಿದ್ದಾರೆ.

ಐಪಿಸಿಯ ಸಾಂಕ್ರಾಮಿಕ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಕನಿಷ್ಠ 29 ಜನರನ್ನು ವಶಕ್ಕೆ ಪಡೆಯಲಾಗಿದೆ. ಸಬ್ ಇನ್ಸ್‌ಪೆಕ್ಟರ್ ಎಚ್‌ಬಿ ಚೌಧರಿ ಸಲ್ಲಿಸಿದ ಎಫ್‌ಐಆರ್‌ನಲ್ಲಿ 17 ಮಂದಿಯನ್ನು ಹೆಸರಿಸಲಾಗಿದೆ, ಕಲ್ಲು ತೂರಾಟದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಕೆ.ಅಮಿನ್ ಮತ್ತು ಇತರ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಶರ್ಮ ತಿಳಿಸಿದ್ದಾರೆ.

ಜನಸಮೂಹವನ್ನು ಚದುರಿಸಲು 40 ಅಶ್ರುವಾಯು ಸೆಲ್ಲುಗಳನ್ನು ಹಾರಿಸಲಾಯಿತು ಮತ್ತು ಒಂದು ರಬ್ಬರ್ ಗುಂಡು ಹಾರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಪೊಲೀಸರು ಕಲ್ಲೆಸೆಯುತ್ತಿರುವುದು ಹಾಗೂ ವಾಹನಗಳನ್ನು ಪುಡಿಗೈಯ್ಯುತ್ತಿರುವುದು ದಾಖಲು

ಘಟನೆ ನಡೆದ ಸ್ಥಳದಿಂದ ಅನೇಕ ವಿಡಿಯೊಗಳು ಹೊರಬಂದಿದ್ದು, ಇದು ಪೊಲೀಸರ ಕ್ರಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಒಂದು ಕ್ಲಿಪ್‌ನಲ್ಲಿ, ಪೊಲೀಸರು ಗುಂಪಿನ ಮೇಲೆ ವಸ್ತುವನ್ನು ಎಸೆಯುತ್ತಿರುವುದು ಕಂಡುಬರುತ್ತಿದೆ. ಪೊಲೀಸರು ಕಲ್ಲು ತೂರಾಟವನ್ನು ಸಹ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ, ಆದರೆ ಉಪ ಆಯುಕ್ತ ಧರ್ಮೇಂದ್ರ ಶರ್ಮಾ ಇದನ್ನು ನಿರಾಕರಿಸಿ “ಇದು ಸ್ಟನ್ ಗ್ರೆನೇಡ್ ಅಥವಾ ಶೆಲ್ ಆಗಿರಬಹುದು. ಇದು ತುಂಬಾ ಸ್ಪಷ್ಟವಾಗಿಲ್ಲ. ” ಎಂದು ಹೇಳಿದ್ದಾರೆ.

ಮನೆಯ ಕಿಟಕಿಯ ಗಾಜು ಹುಡಿಯಾಗಿರುವುದು

ಮತ್ತೊಂದು ವೀಡಿಯೊದಲ್ಲಿ ಪೊಲೀಸರು ವಸ್ತುಗಳನ್ನು ಎಸೆಯುವುದು, ಅಶ್ರುವಾಯು ಶೆಲ್ ಮಾಡುವುದು ಮತ್ತು ನಿಲ್ಲಿಸಿದ ಬೈಕುಗಳನ್ನು ತಮ್ಮ ಲಾಠಿಗಳಿಂದ ಒಡೆಯುವುದು ತೋರಿಸುತ್ತದೆ. ಅವರಲ್ಲಿ ಕೆಲವರು ಸಮವಸ್ತ್ರದಲ್ಲಿ ಇರಲಿಲ್ಲ. ಈ ವಿಡಿಯೋ ಕುರಿತು ಡಿಸಿಪಿ ಶರ್ಮಾ ಸ್ಪಷ್ಟೀಕರಣ ಇನ್ನೂ ನೀಡಲಿಲ್ಲ.

ಘಟನೆಯ ಮತ್ತೊಂದು ವಿಡಿಯೋದಲ್ಲಿ ಪೊಲೀಸರು ವ್ಯಕ್ತಿಯೊಬ್ಬರನ್ನು ರಸ್ತೆಯ ಮಧ್ಯದಲ್ಲಿ ನಿರ್ದಯವಾಗಿ ಥಳಿಸುತ್ತಿರುವುದು ಕಾಣಬಹುದಾಗಿದೆ.

ಈ ಮಧ್ಯೆ, ಗುಜರಾತ್ ಮುಸ್ಲಿಂ ನಾಗರಿಕ ವೇಧಿಕೆಗಳು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಕೃಪೆ: ದಿ ಕ್ವಿಂಟ್


ಓದಿ: ಮುಖ್ಯಮಂತ್ರಿ ಬದಲಾವಣೆಯ ಸುದ್ದಿ ಪ್ರಕಟಿಸಿದ ಸಂಪಾದಕನ ಮೇಲೆ ದೇಶದ್ರೋಹದ ಕೇಸು ದಾಖಲಿಸಿದ ಗುಜರಾತ್ ಪೊಲೀಸರು !


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿ ಮಾಡುತ್ತೇವೆ: ರಾಹುಲ್‌ ಗಾಂಧಿ

0
ಜಾತಿ ಗಣತಿ ನನ್ನ ಜೀವನದ ಪ್ರಮುಖ ಗುರಿಯಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಜಾತಿಗಣತಿಯನ್ನು ಮಾಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಂಪತ್ತು ಮರುಹಂಚಿಕೆ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ...