Homeಅಂಕಣಗಳುಧರ್ಮಗಳನು ಮೀರಿದ ಈ ಮಾತೃತ್ವ

ಧರ್ಮಗಳನು ಮೀರಿದ ಈ ಮಾತೃತ್ವ

- Advertisement -
- Advertisement -

ಗೌರಿ ಲಂಕೇಶ್
20 ಆಗಸ್ಟ್, 2008 (`ಕಂಡಹಾಗೆ’ ಸಂಪಾದಕೀಯದಿಂದ) |

ನಾನು ಸಿನಿಕಳಲ್ಲ. ಆದ್ದರಿಂದ ನಮ್ಮ ದೇಶಕ್ಕೆ ಇನ್ನೂ ಭವಿಷ್ಯವಿದೆ ಇಲ್ಲಿ ಜಾತಿ, ಧರ್ಮ ದಂತಹ ಭೇದಗಳನ್ನು ಮೀರುವ ಜನರಿದ್ದಾರೆ. ಮಮತೆ ಮತ್ತು ಮಾನವೀಯತೆಗೆ ಇನ್ನೂ ಮೌಲ್ಯವಿದೆ ಎಂದು ಸಾರುವ ಒಂದು ನಿಜ ಕಥೆಯನ್ನು ಇಲ್ಲಿ ಹೇಳುತ್ತೇನೆ. ಈ ಕತೆಯ ಕೇಂದ್ರಬಿಂದು ವಿವೇಕ್ ಅಲಿಯಾಸ್ ಮುಜಾಫರ್ ಎಂಬ ಎಂಟು ವರ್ಷದ ಬಾಲಕ. ಮುಖ್ಯಪಾತ್ರಧಾರಿಗಳು ಆತನಿಗೆ ಜನ್ಮಕೊಟ್ಟ ಜಬುನ್ನೀಸಾ ಮತ್ತು ಸಲೀಂ ಎಂಬ ಮುಸ್ಲಿಂ ದಂಪತಿಗಳು ಹಾಗೂ ಆತನನ್ನು ಕಳೆದ ಆರು ವರ್ಷಗಳಿಂದ ಅಕ್ಕರೆಯಿಂದ ಸಾಕಿರುವ ವೀಣಾಪಟ್ನಿ ಎಂಬ ಹಿಂದೂ ತಾಯಿ.
ವಿವೇಕ್ ಅಲಿಯಾಸ್ ಮುಜಾಫರ್‍ನ ಕಥೆ ಪ್ರಾರಂಭವಾಗುವುದು 2002ರಿಂದ. ಅದು ಫೆಬ್ರವರಿ 28. ಹಿಂದಿನ ದಿನವೇ ಗೋದ್ರದಲ್ಲಿ ಸಬರಮತಿ ರೈಲಿನ ಹಲವು ಬೋಗಿಗಳಿಗೆ ಬೆಂಕಿ ಬಿದ್ದು 59 ಅಮಾಯಕರು ಆಹುತಿಯಾಗಿದ್ದರು. ಅದಕ್ಕೆ ಪ್ರತಿಯಾಗಿ ಅಮಾಯಕ ಮುಸಲ್ಮಾನರ ಮೇಲೆ ಹಿಂದುತ್ವವಾದಿಗಳ ದಾಳಿ ಶುರುವಾಗಿತ್ತು.
ಸಲೀಂ ತನ್ನ 2 ವರ್ಷದ ಮಗ ಮುಜಾಫರ್‍ನೊಂದಿಗೆ ಅಹಮದಾಬಾದಿನ ಗುಲ್ಬರ್ಗ್ ಸೊಸೈಟಿಗೆ ಹೋಗಿದ್ದರು. ಆಗ ಅಲ್ಲೇ ಇದ್ದ ಕಾಂಗ್ರೆಸ್‍ನ ಮಾಜಿ ಸಂಸದ ಇಶಾನ್ ಜಾಫ್ರಿಯವರ ಮನೆ ಮೇಲೆ ಹಿಂದೂತ್ವವಾದಿಗಳ ಗುಂಪೊಂದು ದಾಳಿ ಇಟ್ಟು, ಜಾಫ್ರಿ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದಿತ್ತಲ್ಲದೆ, ಅವರ ಮನೆಗೆ ಬೆಂಕಿ ಇಟ್ಟು ಅವತ್ತು ಅವರೊಂದಿಗಿದ್ದ ಎಷ್ಟೋ ಜನರನ್ನು ಕೊಂದು ಹಾಕಿತು. ಇಂತಹ ಅಮಾನುಷ ಗುಂಪಿನಿಂದ ತಪ್ಪಿಸಿಕೊಳ್ಳಲು ಸಲೀಂ ಓಡಿದರು. ಅವರು ವಾಪಸ್ಸು ಬಂದಾಗ, ಹಿಂದುತ್ವವಾದಿಗಳ ಗುಂಪು ಕೊಂದು ಹಾಕಿದ್ದ ಅವರ ಅಜ್ಜಿಯ ಹೆಣ ಇತ್ತೇ ಹೊರತು ಮಗ ಮುಜಾಫರ್‍ನ ಸುಳಿವಿರಲಿಲ್ಲ. ಸುಮಾರು ಎರಡು ತಿಂಗಳ ಕಾಲ ನಡೆದ ಮಾರಣ ಹೋಮದಲ್ಲಿ ಸುಮಾರು ಮೂರು ಸಾವಿರ ಮುಸಲ್ಮಾನರು ಸಾವನ್ನಪ್ಪಿದರೆ, 400ಕ್ಕೂ ಹೆಚ್ಚು ಜನ ಮತ್ತು ಮಕ್ಕಳು ನಾಪತ್ತೆಯಾದರು.
ಅವತ್ತಿನಿಂದ ಮುಜಾಫರ್‍ಗಾಗಿ ತುಂಬಾ ಹುಡುಕಾಡಿದರು, ಪೊಲೀಸರಿಗೆ ದೂರು ನೀಡಿದರು, ತಮ್ಮ ಮಗ ಎಲ್ಲೋ ಸುರಕ್ಷಿತವಾಗಿದ್ದಾನೆ, ಸಿಕ್ಕೇ ಸಿಗುತ್ತಾನೆ ಎಂಬ ಆಶೆಯಲ್ಲಿ ಬದುಕುತ್ತಿದ್ದರು.

veena patni and muzaffar

ಅವರಿಗೆ ಗೊತ್ತಿಲ್ಲದಿದ್ದು ಏನೆಂದರೆ ಪ್ರವೀಣ್ ಪಟ್ನಿ ಎಂಬ ಪೊಲೀಸ್ ಪೇದೆ ತನಗೆ ಸಿಕ್ಕ ಮುಜಾಫರ್‍ನನ್ನು ತನ್ನ ಸಂಬಂಧಿಕರಾದ ವಿಕ್ರಮ್ ಮತ್ತು ವೀಣಾ ಪಟ್ನಿ ಎಂಬ ದಂಪತಿಗಳಿಗೆ ನೀಡಿದ್ದ. ಪಟ್ನಿ ದಂಪತಿಗಳು ಮಕ್ಕಳಿಲ್ಲದವರಾಗಿರಲಿಲ್ಲ, ಹಣವಂತರೂ ಆಗಿರಲಿಲ್ಲ. ಅವರಿಬ್ಬರಿಗೆ ಬೆಳೆದು ನಿಂತಿದ್ದ 4 ಮಕ್ಕಳಿದ್ದರು. ವಿಕ್ರಂ ಕೂಲಿ ಕೆಲಸ ಮಾಡುತ್ತಿದ್ದರೆ, ವೀಣಾ ಮೀನು ಮಾರಿ ಹಣ ಸಂಪಾದಿಸುತ್ತಿದ್ದರು.
ನಾನು ಯಾರು, ಎಲ್ಲಿಂದ ಬಂದೆ ಎಂಬುದು ಗೊತ್ತಿರದ 2 ವರ್ಷದ ಬಾಲಕ ತಮ್ಮ ಸುಪರ್ದಿಗೆ ಬಂದ ನಂತರ ಆತನಿಗೆ ವಿವೇಕ್ ಎಂದು ಮರುನಾಮಕರಣ ಮಾಡಿದ ಪಟ್ನಿ ದಂಪತಿಗಳು ಅವನನ್ನು ಪ್ರೀತಿಯಿಂದಲೇ ಸಲಹಲಾರಂಭಿಸಿದರು. ಆತನಿಗೆ ಕೈತುತ್ತು ನೀಡುತ್ತಾ, ಕೈ ಹಿಡಿದು ನಡೆಸುತ್ತ, ಜೋಗುಳ ಹಾಡುತ್ತಾ, ಆತ ತನಗೆ ಹುಟ್ಟಿದ ಮಗು ಎಂಬಷ್ಟು ಅಕ್ಕರೆಯಿಂದ ವೀಣಾ ಬೆಳೆಸಿದರು.
ಇತ್ತ ತೀಸ್ತಾ ಸೆಟಲ್ವಾಡ್‍ರ ನೆರವಿನೊಂದಿಗೆ ಮಗನಿಗಾಗಿ ಹುಡುಕಾಟವನ್ನು ಸಲೀಂ, ಜಬುನ್ನೀಸಾ ಮುಂದುವರಿಸಿದ್ದರು. ಕೊನೆಗೂ ಮುಜಾಫರ್ ಎಲ್ಲಿದ್ದಾನೆ ಎಂದು ಪತ್ತೆ ಹೆಚ್ಚಿದ ಅವರು ಆತನನ್ನು ಹಿಂದಿರುಗಿಸುವಂತೆ ಕೇಳಿಕೊಂಡರು. ವಿವೇಕ್ ಅವರ ಮಗ ಎಂಬುದಕ್ಕೆ ಸಾಕ್ಷಿ ಏನೆಂದು ವೀಣಾ ಪ್ರಶ್ನಿಸಿದಾಗ ಸಲೀಂ ಮತ್ತು ವಿವೇಕ್ ಆಲಿಯಾಸ್ ಮುಜಾಫರ್ ಡಿಎನ್‍ಎ ಪರೀಕ್ಷಿಸಲಾಯಿತು. ಅದರಿಂದ ವಿವೇಕ್ ನಿಜವಾಗಲೂ ಸಲೀಂ ಮತ್ತು ಜಬುನ್ನೀಸ್ಸಾರ ಮಗ ಎಂದು ಸಾಬೀತಾಯಿತು.
ಆದರೆ ಆರು ವರ್ಷಗಳ ಕಾಲ ಆತನನ್ನು ತನ್ನ ಮಗನೆಂದು ಬೆಳೆಸಿದ್ದ ವೀಣಾ ಅವನನ್ನು ಹೆತ್ತವರಿಗೆ ಹಿಂದಿರುಗಿಸಲು ಒಪ್ಪಲಿಲ್ಲ. ಆಗ ಸಲೀಂ ಮತ್ತು ಜಬುನ್ನೀಸಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ದುರಂತಕ್ಕೆ ವಿವೇಕನಿಗೆ ತನಗೆ ಜನ್ಮ ನೀಡಿರುವವವರ ನೆನಪೇ ಇರಲಿಲ್ಲ ಮಾತ್ರವಲ್ಲ, ನ್ಯಾಯಾಧೀಶರ ಮುಂದೆ ತಾನು ವೀಣಾ ಅಮ್ಮನೊಂದಿಗೆ ಇರುತ್ತೇನೆ ಎಂದ. ಕಾನೂನಿನ ಪ್ರಕಾರ ಆತ ಹೆತ್ತವರಿಗೆ ಸೇರಬೇಕಿದ್ದರು ಆ ಬಾಲಕನ ಮನಸ್ಸನ್ನು ನೋಯಿಸಬಾರದು ಎಂದು ಅವನನ್ನು ವೀಣಾರೊಂದಿಗೆ ಬಿಡಲಾಯಿತು.
ಸಲೀಂ ಮತ್ತು ಜಬುನ್ನಿಸ್ಸಾರಿಗೆ ತಮ್ಮ ಮಗನ ಮೇಲೆ ವೀಣಾರವರಿಗೆ ಇರುವ ಪ್ರೀತಿ ಅರ್ಥವಾಗುತ್ತದೆ. ಹಾಗಂತ ಹೆತ್ತ ಕುಡಿಯನ್ನು ಮರೆತು ಸುಮ್ಮನಿರಲಾಗುವುದಿಲ್ಲ. ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸುವ ಸಲೀಂ “ವೀಣಾ ನನ್ನ ಮಗನ ದೊಡ್ಡಮ್ಮ ಆಗಿರಲಿ, ನನ್ನ ಹೆಂಡತಿಯೇ ಆತನಿಗೆ ಚಿಕ್ಕಮ್ಮನಾಗಿರಲಿ. ನಾನು ಅವರನ್ನು ಅತ್ತಿಗೆಯಂತೆ ನೋಡಿಕೊಳ್ಳುತ್ತೇನೆ. ಆದರೆ ನಮಗೆ ನಮ್ಮ ಮಗ ಬೇಕು” ಎನ್ನುತ್ತಾರೆ.
ಬರ್ಟೋಲ್ಡ್ ಬ್ರೆಕ್ಟ್ ರವರ ‘ಕಕೇಶಿಯನ್ ಚಾಕ್ ಸರ್ಕಲ್’ ಎಂಬ ನಾಟಕದಲ್ಲಿ ಹೆತ್ತ ತಾಯಿಯೇ ತನ್ನ ಮಗನನ್ನು ಎಳೆದಾಡಲು ಸಿದ್ಧರಿರುತ್ತಾಳೆ. ಆದರೆ ಆತನನ್ನು ಸಾಕಿ ಸಲುಹಿದ ದತ್ತು ತಾಯಿ ಅವರಿಗೆ ನೋವಾಗಕೂಡದೆಂದು ಅವನನ್ನು ತನ್ನತ್ತ ಎಳೆಯಲು ನಿರಾಕರಿಸುತ್ತಾಳೆ.
ಆದರೆ ಬೈಬಲ್‍ನಲ್ಲಿ ಬರುವ ‘ಜಡ್ಜ್‍ಮೆಂಟ್ ಆಫ್ ಸೋಲಮನ್’ ಪ್ರಸಂಗದಲ್ಲಿ ನ್ಯಾಯಾಧೀಶ ಸೊಲಮನ್ ಮಗುವನ್ನು ಕತ್ತರಿಸಿ ಇಬ್ಬರು ತಾಯಂದಿರಿಗೆ ಹಂಚಲು ತಯಾರಾದಾಗ, ಆತನನ್ನು ಹೆತ್ತ ತಾಯಿ “ತನ್ನ ಮಗುವನ್ನು ಕೊಲ್ಲಬೇಡಿ ಅವಳಿಗೆ ಕೊಡಿ” ಎಂದು ಕಣ್ಣೀರಿಡುತ್ತಾಳೆ.
ಅಂದರೆ ಹೆತ್ತ ತಾಯಿಯ ಪ್ರೀತಿ ದೊಡ್ಡದು, ಸಾಕಿ ಸಲುಹಿದ ತಾಯಿಯ ಮಮತೆ ಹೆಚ್ಚಿನದು ಎಂದು ತೀರ್ಮಾನಿಸುವುದು ಸುಲಭವಲ್ಲ. ಇವತ್ತು ಜಾತಿ, ಧರ್ಮ, ಅಂತಸ್ತು ಎಂದೆಲ್ಲ ಬಹಳಷ್ಟು ಜನ ಅಂಧರಾಗಿರುವಾಗ ಈ ಪುಟ್ಟ ಬಾಲಕ ಮತ್ತು ಆತನ ಇಬ್ಬರು ತಾಯಂದಿರು ಅವುಗಳನ್ನೆಲ್ಲ ಮೀರಿ ಮಾತೃತ್ವ, ಮಮತೆ ಮತ್ತು ಮಾನವೀಯತೆಯ ಪ್ರತಿಬಿಂಬಗಳಾಗಿದ್ದಾರೆ.
ಈಗಾಗಲೇ ಧರ್ಮದ ಹೆಸರಲ್ಲಿ ಸಾಕಷ್ಟು ದ್ವೇಷ ಮತ್ತು ರಕ್ತಪಾತವನ್ನು ಕಂಡಿರುವ ಗುಜರಾತ್ ಈ ಪ್ರಕರಣದಲ್ಲಾದರೂ ತನ್ನ ಅಂತರಾಳದಲ್ಲಿರುವ ಮನುಷ್ಯತ್ವವನ್ನು ಕಂಡುಕೊಳ್ಳುವಂತಾಗಲಿ.
ಹಾಗಾದರೆ ಎಷ್ಟು ಚೆನ್ನ ಅಲ್ಲವೇ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...