ರಾಜ್ಯಕ್ಕೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯ ಕರಡು ಸಿದ್ಧಪಡಿಸಲು ಐದು ಸದಸ್ಯರ ಸಮಿತಿಯನ್ನುಗುಜರಾತ್ ಸರ್ಕಾರ ಮಂಗಳವಾರ ನೇಮಿಸಿದೆ ಎಂದು ANI ವರದಿ ಮಾಡಿದೆ. ಸಮಿತಿಯು 45 ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ. ಗುಜರಾತ್
ಭಾರತೀಯತೆ ನಮ್ಮ ಧರ್ಮ, ಸಂವಿಧಾನವು ನಮ್ಮ ‘ಪವಿತ್ರ ಗ್ರಂಥ’ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ನಾವು ಸಂವಿಧಾನದ 75 ವರ್ಷಗಳನ್ನು ಆಚರಿಸುತ್ತಿದ್ದೇವೆ. ಸಮಾನ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಏಕರೂಪ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ.” ಎಂದು ಅವರು ಹೇಳಿದ್ದಾರೆ. ಗುಜರಾತ್
ಸಮಿತಿಯು ಸಾಮಾನ್ಯ ವೈಯಕ್ತಿಕ ಸಂಹಿತೆಯನ್ನು ಜಾರಿಗೆ ತರುವ ಹಲವಾರು ಅಂಶಗಳನ್ನು ಪರಿಶೀಲಿಸುತ್ತದೆ ಮತ್ತು ಎಲ್ಲಾ ವಲಯಗಳ ವ್ಯಕ್ತಿಗಳಿಂದ ಪ್ರತಿಕ್ರಿಯೆಯನ್ನು ಸಂಗ್ರಹಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ರಂಜನಾ ದೇಸಾಯಿ ಈ ಸಮಿತಿಯ ನೇತೃತ್ವ ವಹಿಸಲಿದ್ದು, ಹಲವಾರು ಧಾರ್ಮಿಕ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ರಾಜ್ಯದ ಗೃಹ ಸಚಿವ ಹರ್ಷ ಸಂಘವಿ ಪಿಟಿಐಗೆ ತಿಳಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆ
ಜನವರಿ 27 ರಂದು ಉತ್ತರಾಖಂಡ ಸರ್ಕಾರವು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಿತ್ತು. ಉತ್ತರಾಖಂಡವು ಸ್ವಾತಂತ್ರ್ಯದ ನಂತರ ಏಕರೂಪ ನಾಗರಿಕ ಸಂಹಿತೆಯನ್ನಿ ಜಾರಿಗೆ ತಂದ ಮೊದಲ ರಾಜ್ಯವಾಗಿದೆ. 1867 ರಲ್ಲಿ ಪೋರ್ಚುಗೀಸರು ನಾಗರಿಕ ಸಂಹಿತೆಯನ್ನು ಅಂಗೀಕರಿಸಿದ್ದರು. ಅಂದಿನಿಂದ ಗೋವಾದಲ್ಲಿ ಸಾಮಾನ್ಯ ನಾಗರಿಕ ಸಂಹಿತೆ ಜಾರಿಯಲ್ಲಿದೆ.
ಈ ಸಂಹಿತೆಯು ಎಲ್ಲಾ ನಾಗರಿಕರಿಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರವನ್ನು ನಿಯಂತ್ರಿಸುವ ಕಾನೂನುಗಳ ಸಾಮಾನ್ಯ ಗುಂಪಾಗಿದೆ. ಪ್ರಸ್ತುತ ಎಲ್ಲಾ ಕಾರ್ಯಗಳು ವಿವಿಧ ಧಾರ್ಮಿಕ ಮತ್ತು ಬುಡಕಟ್ಟು ಗುಂಪುಗಳ ವೈಯಕ್ತಿಕ ವ್ಯವಹಾರಗಳು ಎಂದು ಪರಿಗಣಿಸಲಾಗಿದ್ದು, ಸಮುದಾಯಗಳ ನಿರ್ದಿಷ್ಟ ಧರ್ಮ ಗ್ರಂಥಗಳ ಕಾನೂನುಗಳನ್ನು ಆಧರಿಸಿ ನಡೆಯುತ್ತವೆ.
ಸಾಮಾನ್ಯ ವೈಯಕ್ತಿಕ ಕಾನೂನಿನ ಪರಿಚಯ ಮಾಡುವುದು ಬಹಳ ಹಿಂದಿನಿಂದಲೂ ಬಿಜೆಪಿಯ ಕಾರ್ಯಸೂಚಿಯಲ್ಲಿದ್ದು, ಪಕ್ಷ ಆಳದಲ್ಲಿರುವ ಹಲವಾರು ರಾಜ್ಯಗಳು ಅದನ್ನು ಅನುಷ್ಠಾನಗೊಳಿಸುವತ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಉತ್ತರಾಖಂಡದಲ್ಲಿ ಈ ನಿಯಮಗಳ ಅನುಷ್ಠಾನವು ಇತರ ಬಿಜೆಪಿ ಆಡಳಿತದ ರಾಜ್ಯಗಳು ಇದನ್ನು ಅನುಸರಿಸಲು ಒಂದು ಪೂರ್ವನಿದರ್ಶನವಾಲಿದೆ ಎಂದು ನಿರೀಕ್ಷಿಸಲಾಗಿದೆ.
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ ತನ್ನ ಅಭಿಯಾನದಲ್ಲಿ ಬಿಜೆಪಿ ಮುಖ್ಯವಾಗಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಗುರಿಯಾಗಿಸಿಕೊಂಡಿತ್ತು. ಈ ಅಭಿಯಾನದ ವೇಳೆ ಬಿಜೆಪಿಯು, ಮುಸ್ಲಿಂ ಪುರುಷರು ಬಹುಪತ್ನಿತ್ವವನ್ನು ಆಚರಿಸಲು, ಹೆಚ್ಚಿನ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು, ವಿಚ್ಛೇದನವನ್ನು ಪ್ರಾರಂಭಿಸಲು ಮತ್ತು ಜೀವನಾಂಶವನ್ನು ನಿರಾಕರಿಸಲು ಅನುವು ಮಾಡಿಕೊಡುವುದರಿಂದ ಮುಸ್ಲಿಂ ಮಹಿಳೆಯರ ವಿರುದ್ಧ ತಾರತಮ್ಯ ಆಗುತ್ತಿವೆ ಎಂದು ವಾದಿಸಿತ್ತು.
ಉತ್ತರಾಖಂಡದ ಬಿಜೆಪಿ ಸರ್ಕಾರ ಅನುಷ್ಠಾನ ಮಾಡಿರುವ ಕಾನೂನು, ಪ್ರಾಥಮಿಕವಾಗಿ ಹಿಂದೂ ವೈಯಕ್ತಿಕ ಕಾನೂನಾಗಿದ್ದು, ಅದು ಅಲ್ಪಸಂಖ್ಯಾತ ಸಮುದಾಯಗಳ ವೈಯಕ್ತಿಕ ಕಾನೂನು ಪದ್ಧತಿಗಳನ್ನು ಅಳಿಸಿಹಾಕಲು ಕಾರಣವಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ: ಗಾಝಾ ಕದನ ವಿರಾಮ ಮುಂದುವರಿಯುವ ಗ್ಯಾರಂಟಿಯಿಲ್ಲ : ನೆತನ್ಯಾಹು ಭೇಟಿಗೂ ಮುನ್ನ ಟ್ರಂಪ್ ಹೇಳಿಕೆ
ಗಾಝಾ ಕದನ ವಿರಾಮ ಮುಂದುವರಿಯುವ ಗ್ಯಾರಂಟಿಯಿಲ್ಲ : ನೆತನ್ಯಾಹು ಭೇಟಿಗೂ ಮುನ್ನ ಟ್ರಂಪ್ ಹೇಳಿಕೆ
ಇದನ್ನೂಓದಿ: ಛತ್ತೀಸ್‌ಗಢ| ಬಿಜಾಪುರ-ದಂತೇವಾಡ ಗಡಿ ಪ್ರದೇಶದಲ್ಲಿ ಐಇಡಿ ಸ್ಫೋಟ; ಮೂವರು ಯೋಧರಿಗೆ ಗಾಯ
ಛತ್ತೀಸ್‌ಗಢ| ಬಿಜಾಪುರ-ದಂತೇವಾಡ ಗಡಿ ಪ್ರದೇಶದಲ್ಲಿ ಐಇಡಿ ಸ್ಫೋಟ; ಮೂವರು ಯೋಧರಿಗೆ ಗಾಯ


