Homeಅಂಕಣಗಳುಅಸಮರ್ಥರ ಕೈಯ್ಯಲ್ಲಿ ಆರ್ಥಿಕ ವ್ಯವಸ್ಥೆ

ಅಸಮರ್ಥರ ಕೈಯ್ಯಲ್ಲಿ ಆರ್ಥಿಕ ವ್ಯವಸ್ಥೆ

- Advertisement -
- Advertisement -

ಅಸಮರ್ಥರ ಕೈಯಲ್ಲಿರುವ ಭಾರತದ ಆರ್ಥಿಕತೆ ಚಿಂತಾಜನಕಸ್ಥಿತಿಯಲ್ಲಿದೆ ಎಂದು ಮಾಜಿ ವಿತ್ತಮಂತ್ರಿ ಪಿ.ಚಿದಂಬರಂ ಕಾತರ ವ್ಯಕ್ತಪಡಿಸಿದ್ದಾರೆ. ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಜೆಎನ್‍ಯುನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆದರೆ ಆರ್ಥಿಕ ತೀರ್ಮಾನಗಳನ್ನು ತೆಗೆದುಕೊಳ್ಳುವವರು ಪ್ರಧಾನಿ ಮೋದಿ. ಭಾರತದ ಇಂದಿನ ಆರ್ಥಿಕತೆಯನ್ನು ನಿಭಾಯಿಸುವ ಸಾಮಥ್ರ್ಯ ವಿತ್ತಮಂತ್ರಿಗಿದ್ದರೂ, ಅವರನ್ನು ಕಡೆಗಣಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇಶದ ಆರ್ಥಿಕ ಬೆಳವಣಿಗೆ ಕುಂಟುತ್ತಾ ಸಾಗಿದೆ. ಯಾವಾಗ ಬೇಕಾದರೂ ಅದು ಮತ್ತಷ್ಟು ಬಿಗಡಾಯಿಸಬಹುದು ಎನ್ನುತ್ತಾರೆ ಪಿ.ಚಿದಂಬರಂ. ಮಾರುಕಟ್ಟೆಗೆ ಸೇರುವ ಜನ ಒಬ್ಬರಿಗೊಬ್ಬರು ಪರಿಚಯಸ್ಥರೇನಲ್ಲ. ನಂಬಿಕೆಯ ಮೇಲೆ ಅಲ್ಲಿಯ ವಹಿವಾಟು ನಡೆಯುತ್ತದೆ. ಆದರೆ ಅವರಲ್ಲಿ ಅಸ್ಥಿರತೆಯ ಭಯ ಉಂಟಾದರೆ ಮಾರುಕಟ್ಟೆಯಲ್ಲಿ ಏರುಪೇರು ಸಂಭವಿಸುತ್ತದೆ.

ಜಿಡಿಪಿ ಮೋದಿ ಆಳ್ವಿಕೆ ಆರಂಭವಾಗುವುದಕ್ಕೆ ಮೊದಲು 8 ಇದ್ದದ್ದು ಬರುಬರುತ್ತಾ 7.6, 6.6, 5.8, 5ಕ್ಕೆ ಇಳಿದು ಅದು ಈಗ 4.5ಕ್ಕೆ ಬಂದು ನಿಂತಿದೆ. ಇದರಿಂದ ಆಡಳಿತ ನಡೆಸುವವರಿಗೆ ತಲೆನೋವಾಗಿದೆ. ಆದರೆ ಅದನ್ನು ಅವರು ಪ್ರಕಟಪಡಿಸುವುದಿಲ್ಲ. ಮೋದಿಯವರ ತೀರ್ಮಾನವೇ ಅಂತ್ಯ ಎಂಬ ವಾತಾವರಣ ಸೃಷ್ಟಿಯಾಗಿದೆ. ಅದನ್ನು ಜಾರಿಗೆ ತರುವುದಷ್ಟೇ ಅರ್ಥಸಚಿವರ ಕೆಲಸ ಎಂಬುದು ಸತ್ಯ. ಈ ಪರಿಸ್ಥಿತಿಯಲ್ಲಿ ಆರ್ಥಿಕ ತಜ್ಞರಿಗೂ, ಸರ್ಕಾರಕ್ಕೂ ಘರ್ಷಣೆಗಳಾಗುತ್ತಿರುವುದು ನಮ್ಮ ನಿತ್ಯದ ನಿರಂತರ ಅನುಭವ.

ಕೃಷಿ ಬೆಳವಣಿಗೆ ದರ ಮೋದಿ ಅಧಿಕಾರಕ್ಕೆ ಬಂದಾಗ 6.3 ಇತ್ತು. 2017ರಲ್ಲಿ 5ಕ್ಕೆ 2018ರಲ್ಲಿ 2.9ಕ್ಕೆ ಇಳಿದ ಅದು 2019ರಲ್ಲಿ 2.1ಕ್ಕೆ ಬಂದು ನಿಂತಿದೆ. ಕೈಗಾರಿಕಾ ಬೆಳವಣಿಗೆ ಶೇ.4.6 ಇದ್ದದ್ದು ಈಗ 2.4ಕ್ಕೆ ಇಳಿದಿದೆ. ಮೋದಿ ಅಧಿಕಾರಕ್ಕೆ ಬಂದಮೇಲೆ ಯಾವ ವರ್ಷವೂ ಅದು ಮೇಲಕ್ಕೇರಿದ್ದಿಲ್ಲ. ಇಳಿಮುಖವಾಗುತ್ತಲೇ ಇದೆ. ಬೃಹತ್ ಕೈಗಾರಿಕೆಗಳು ಮೋದಿ ಅಧಿಕಾರಕ್ಕೆ ಬರುವ ಮುನ್ನ 4.8 ಇದ್ದದ್ದು 0.2ಕ್ಕೆ ಇಳಿದಿದ್ದರೆ ಅದೇ ಸಣ್ಣ ಕೈಗಾರಿಕೆಗಳು 0.9 ಇದ್ದದ್ದು ಈಗ 2.7 ಆಗಿದೆ. ಹೀಗಾಗಿ ಇದು ಮುನ್ನಡೆ ಸಾಧಿಸಿದೆ.
ನಿರುದ್ಯೋಗದ ಸಮಸ್ಯೆ ಉಲ್ಬಣಗೊಂಡಿದೆ. ಗೃಹಬಳಕೆಯ ಸಾಮಗ್ರಿಗಳ ಮಾರಾಟವೂ ಇಳಿಮುಖವಾಗಿದೆ. ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ.

ಈರುಳ್ಳಿ ವಿಚಾರವನ್ನೇ ತೆಗೆದುಕೊಳ್ಳೋಣ. ರೈತರು ಈರುಳ್ಳಿ ಹೆಚ್ಚಾಗಿ ಬೆಳೆದರು. ವರ್ತಕರು ಅದನ್ನು ಅಗ್ಗವಾಗಿ ಕೊಂಡು ದಾಸ್ತಾನು ಮಾಡಿಕೊಂಡರು. ಈರುಳ್ಳಿ ಮಾರುಕಟ್ಟೆಯಲ್ಲಿ ತುಂಬಾ ಇದೆ. ಇದನ್ನು ರಫ್ತು ಮಾಡದಿದ್ದರೆ ರೈತರು, ವರ್ತಕರು ನಾಶವಾಗಿ ಬಿಡುತ್ತಾರೆ. ಈರುಳ್ಳಿ ಕೊಳೆತುಹೋಗಿ ಕೂಡಲೇ ಅನುಮತಿಕೊಡಿ ಎಂದು ರಫ್ತುದಾರರು ಬೊಬ್ಬೆ ಹಾಕುತ್ತಾರೆ. ಅಧಿಕಾರಿಗಳಿಗೆ, ಮಂತ್ರಿಗೆ, ಶಾಸಕರಿಗೆ ಕಾಂಚಾಣ ಕೊಟ್ಟು ಸರಿಮಾಡಿಕೊಳ್ಳುತ್ತಾರೆ. ರೈತರಿಗೆ ನಾಮಹಾಕಿ ಈ ವರ್ತಕರು ಲಕ್ಷಾಂತರ ಸಂಪಾದಿಸುತ್ತಾರೆ.

ಈಗ ಈರುಳ್ಳಿ ಭಾರತದ ಮಾರುಕಟ್ಟೆಯಲ್ಲಿ ಇಲ್ಲವೇ ಇಲ್ಲ. ರಫ್ತುಮಾಡಿ ಮಿಕ್ಕ ಈರುಳ್ಳಿಯನ್ನು ಅವರು ಸ್ವಲ್ಪ ಸ್ವಲ್ಪವೇ ಮಾರುಕಟ್ಟೆಗೆ ಬಿಡುತ್ತಾರೆ. ಬೆಲೆ ಕೆಜಿಗೆ 100-200 ಆಯಿತು. ಅದರಿಂದ ಮಧ್ಯವರ್ತಿ ವರ್ತಕರಿಗೆ ಲಾಭ.

ಇದೊಂದು ವಿಷವ್ಯೂಹ. ಈ ಬೆಲೆ ಏರಿಕೆಯನ್ನು ತಡೆಗಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ. ಬಡವರಿಗೆ ತಿಂಗಳಲ್ಲಿ 15 ದಿನ ಕೂಲಿ ಕೆಲಸ ಸಿಗುವುದೇ ದುರ್ಲಭವಾಗಿದೆ.

ತರಕಾರಿ, ದಿನಸಿ ಬೆಲೆಗಳು ಗಗನಕ್ಕೇರುತ್ತಿವೆ. ಅದನ್ನು ನಿಯಂತ್ರಣ ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ. ಸಗಟುಬೆಲೆ ಹಣದುಬ್ಬರ ಶೇ.1.92ರಷ್ಟು ಹೆಚ್ಚಿದೆ. ಈ ಎಲ್ಲಾ ಸಮಸ್ಯೆಗಳು ತಾನೇತಾನಾಗಿ ಸರಿಹೋಗುತ್ತದೆ ಎಂದು ಸರ್ಕಾರ ಭಾವಿಸಿದಂತಿದೆ. ಆರ್ಥಿಕ ಸಚಿವರು ಸಮಸ್ಯೆಯನ್ನು ಅವರ ಮುಂದಿಟ್ಟಾಗ ವಿತಂಡವಾದ ಮಾಡುತ್ತಾರೆ. ಮೋದಿ ಮೌನ ತಳೆಯುತ್ತಾರೆ. 500, 1000 ರೂಗಳ ನೋಟುರದ್ದತಿ, ದೋಷಪೂರಿತ ಜಿಎಸ್‍ಟಿ, ಹೆಚ್ಚುತ್ತಿರುವ ನಿಯಂತ್ರಣ, ಪ್ರಧಾನಿ ಕಚೇರಿಯ ಅಧಿಕಾರದ ಕೇಂದ್ರೀಕರಣ ವ್ಯವಸ್ಥೆ ಇವುಗಳಿಂದ ಉಂಟಾಗಿರುವ ಗಂಡಾಂತರದ ಬಗೆಗೆ ಆರ್ಥಿಕ ತಜ್ಞರು ಎಚ್ಚರಿಕೆಯ ಮಾತನ್ನಾಡಿದರೆ ಅದನ್ನು ನಿರ್ಲಕ್ಷಿಸುವ ಮನೋಭಾವ ಸರ್ಕಾರದ್ದು. ಇಂದಿನ ಜ್ವಲಂತ ಸಮಸ್ಯೆಗಳು ದೇಶದ ಆರ್ಥಿಕ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ ಎಂಬುದನ್ನು ಮೋದಿಯವರೂ, ಅರ್ಥಸಚಿವರು ಒಪ್ಪಿಕೊಳ್ಳುತ್ತಾರೆ. ಆದರೆ ಅವರು ಹೇಳುವುದು ಇಂದಿನ ಪರಿಸ್ಥಿತಿ ಹೀಗೆಯೇ ಮುಂದುವರೆಯುವುದಿಲ್ಲ. ವಿಶ್ವದ ಎಲ್ಲೆಡೆ ಈ ಸಮಸ್ಯೆ ಇದೆ. ಅಲ್ಲೆಲ್ಲ ಸರಿಹೋದರೆ ಇಲ್ಲಿಯೂ ಸರಿಹೋಗುತ್ತದೆ. ಅಚ್ಛೇದಿನ್ ಬಂದೇ ಬರುತ್ತದೆ ಎನ್ನುವುದು ಅವರ ವಾದ.

ಆರ್ಥಿಕ ತಜ್ಞರು, ಪ್ರಧಾನಿಗಳ ಆರ್ಥಿಕ ಸಲಹೆಗಾರರು ರಾಜೀನಾಮೆ ಕೊಟ್ಟುಹೋದರು. ಅವರು ನಿರ್ಗಮಿಸುವ ಮುನ್ನ ಹೇಳಿದ ಮಾತು: ಈ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ಕೆಲಸ ಸರ್ಜನ್ ಇಲ್ಲವೇ ಶಸ್ತ್ರಚಿಕಿತ್ಸೆ ಮಾಡಲು ಹೊರಟಂತಿದೆ. ಮುಗ್ಗಟ್ಟಿನಿಂದ ಬಳಲಿರುವ ಆರ್ಥಿಕ ವ್ಯವಸ್ಥೆಯು ಅಸಮರ್ಥರ ಹಿಡಿತದಲ್ಲಿ ನರಳುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...