Homeಮುಖಪುಟಭಾರತದ 130 ಕೋಟಿ ಜನರು ಹಿಂದೂಗಳು ಎಂದ ಮೋಹನ್‌ ಭಾಗವತ್‌, ಅಲ್ಲ ಎಂದು ರಾಮದಾಸ್‌ ಅಠಾವಳೆ...

ಭಾರತದ 130 ಕೋಟಿ ಜನರು ಹಿಂದೂಗಳು ಎಂದ ಮೋಹನ್‌ ಭಾಗವತ್‌, ಅಲ್ಲ ಎಂದು ರಾಮದಾಸ್‌ ಅಠಾವಳೆ…

- Advertisement -
- Advertisement -

ಸಂಘವು ಭಾರತದ 130 ಕೋಟಿ ಜನರನ್ನು ಅವರ ಧರ್ಮ ಮತ್ತು ಸಂಸ್ಕೃತಿಯನ್ನು ಲೆಕ್ಕಿಸದೆ ಹಿಂದೂ ಸಮಾಜವೆಂದು ಪರಿಗಣಿಸುತ್ತದೆ ಎಂದಿರುವ ಮೋಹನ್‌ ಭಾಗವತ್‌ ಅವರ ಹೇಳಿಕೆಯನ್ನು ಬಿಜೆಪಿ ಮಿತ್ರಪಕ್ಷ ಆರ್‌ಪಿಐನ ರಾಮದಾಸ್‌ ಅಠಾವಳೆ ಖಂಡಿಸಿದ್ದಾರೆ.

“ಎಲ್ಲಾ ಭಾರತೀಯರು ಹಿಂದೂಗಳು ಎಂದು ಹೇಳುವುದು ಸರಿಯಲ್ಲ. ನಮ್ಮ ದೇಶದಲ್ಲಿ ಎಲ್ಲರೂ ಬೌದ್ಧರಾಗಿದ್ದ ಕಾಲವೊಂದಿತ್ತು. ಮೋಹನ್ ಭಾಗವತ್‌ರವರು ಎಲ್ಲರೂ ಭಾರತೀಯರು ಎಂದರೆ ಅದು ಒಳ್ಳೆಯದು. ನಮ್ಮ ದೇಶದಲ್ಲಿ ಬೌದ್ಧ, ಸಿಖ್, ಹಿಂದೂ, ಕ್ರಿಶ್ಚಿಯನ್, ಪಾರ್ಸಿ, ಜೈನ್, ಲಿಂಗಾಯತ ಮುಂತಾದ ನಂಬಿಕೆಗಳುಳ್ಳ ವಿವಿಧ ಸಮುದಾಯಗಳು ಇಲ್ಲಿ ವಾಸಿಸುತ್ತಿವೆ” ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವರರಾದ ರಾಮದಾಸ್ ಅಠಾವಳೆ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿಸಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಯ ಬಣಕ್ಕೆ ರಾಮದಾಸ್ ಅಠಾವಳೆ ಮುಖ್ಯಸ್ಥರಾಗಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೈದರಾಬಾದ್‌ನಲ್ಲಿ ನಡೆದ ಸಂಘಟನೆಯ ಸಭೆಯಲ್ಲಿ ಮಾತನಾಡುತ್ತಾ “ಭಾರತಾಂಬೆಯ ಮಗ, ಅವನು ಯಾವುದೇ ಭಾಷೆ ಮಾತನಾಡಲಿ, ಯಾವುದೇ ಪ್ರದೇಶದಿಂದ ಬಂದಿರಲಿ, ಯಾವುದೇ ರೀತಿಯ ಪೂಜೆಯನ್ನು ಅನುಸರಿಸಲಿ ಅಥವಾ ಯಾವುದೇ ಪೂಜೆಯನ್ನು ನಂಬದಿರಲಿ, ಆತ ಹಿಂದೂ ಆಗಿರುತ್ತಾನೆ… ಈ ನಿಟ್ಟಿನಲ್ಲಿ ಸಂಘದ ಪ್ರಕಾರ ಭಾರತದ ಎಲ್ಲಾ 130 ಕೋಟಿ ಜನರು ಹಿಂದೂ ಸಮಾಜದವರು” ಎಂದು ಅವರು ಹೇಳಿದ್ದರು.

ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ನ ಮುಖ್ಯಸ್ಥರ ಹೇಳಿಕೆಗಳನ್ನು ವಿರೋಧ ಪಕ್ಷಗಳಾದ ಬಿಎಸ್‌ಪಿಯ ಮಾಯಾವತಿ ಮತ್ತು ಎಐಎಂಐಎಂ ಮುಖ್ಯಸ್ಥ ಅಸ್ಸಾದುದ್ದೀನ್ ಒವೈಸಿ ಕೂಡ ಖಂಡಿಸಿದ್ದಾರೆ. “ಭಾರತವು ಕೇವಲ ಒಂದು ಧರ್ಮವನ್ನು ಹೊಂದಿರಬೇಕು ಎಂದು ಆರ್‌ಎಸ್ಎಸ್ ಬಯಸಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನವು ಅಸ್ತಿತ್ವದಲ್ಲಿರುವವರೆಗೂ ಅದು ಆಗುವುದಿಲ್ಲ. ಈ ಭರತ ಭೂಮಿ ಎಲ್ಲಾ ಧರ್ಮಗಳನ್ನು ನಂಬುತ್ತದೆ” ಎಂದು ಓವೈಸಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಆರೆಸ್ಸೆಸ್ಸಿನ ಚೀಫ್ ಗೆಸ್ಟ್ ಮೋಹನ್ ಭಗವತ್ ರವರು ದೇಶವನ್ನು ಮುನ್ನಡೆಸುವ ಕಾರ್ಯತಂತ್ರ ನರೇಂದ್ರ ಮೋದಿಯವರ ಅಥವಾ ಮೋಹನ್ ಭಗವತ್ ರವರ ದ ಜನಸಾಮಾನ್ಯರು ಅರ್ಥಮಾಡಿಕೊಳ್ಳುವುದೇ ಕಷ್ಟಕರವಾಗಿದೆ

    ಮೋದಿ ಪ್ರಧಾನಮಂತ್ರಿಯಾಗಲು ಪ್ರಣಾಳಿಕೆಗಳು ಹೇಳಿದ್ದೇ ಬೇರೆ
    ಮೇಕ್ ಇನ್ ಇಂಡಿಯಾ ಸ್ವಚ್ಛ ಭಾರತ ಭ್ರಷ್ಟಾಚಾರ ಮುಕ್ತ ಬ್ಲಾಕ್ ಮನಿ ಬೇನಾಮಿ ಆಸ್ತಿ ಮಾಡುವವರಿಗೆ ಕಠಿಣ ಕ್ರಮ ಉದ್ಯೋಗ ವ್ಯವಸ್ಥೆ ರೂಪಿಸುವುದಾಗಿ ಹೇಳಿ ಇದನ್ನೆಲ್ಲ ಸಂಪೂರ್ಣ ಮರೆತು

    ಮೋಹನ್ ಭಗವತರ ಕೈಗೊಂಬೆಯಾಗಿ ಹಿಂದುತ್ವವನ್ನು
    ಜನಸಾಮಾನ್ಯರ ಎಲ್ಲರ ಮೇಲೆ ನಿರಂತರವಾಗಿ ಹಿಂಸಾಚಾರ ಕೋಮುಗಲಭೆಗಳಿಗೆ ಕರೆ ಕೊಡುತ್ತಿರುವ ಕೆಲಸಗಳನ್ನು ಮಾಡುತ್ತಿದ್ದಾರೆ

    ವಲಸೆ ಬಂದಿರುವ ಆರ್ಯರ ಮಾತುಗಳ ಮುಂದೆ ಪ್ರಾಮಾಣಿಕ ನಿಂದಿಸಿರುವ ಮೋದಿಯನ್ನು ಜನಸಾಮಾನ್ಯರು ನಂಬಿ ಓಟು ಕೊಟ್ಟಿದ್ದ ತಪ್ಪಿಗೆ ಅನುಭವಿಸಲೇಬೇಕು ಆರೆಸಸ್ ಸನಾತನ ಸಂಸ್ಥೆಗೆ ಮಾರಾಟ ವಾಗಿದ್ದಾರೆ ಎಂದೆನಿಸುತ್ತದೆ
    ನರೇಂದ್ರ ಮೋದಿಯವರು

    ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಅಧಿಕಾರಿ ಮಾಡುತ್ತಿರುವವರು ಎಂದರೆ ತಪ್ಪಾಗಲಾರದು ಜೈ ಭೀಮ್

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...